For Quick Alerts
ALLOW NOTIFICATIONS  
For Daily Alerts

ಭರಭರನೆ ಮಾಡಿ ತೆಂಗಿನಕಾಯಿ ಬರ್ಫಿ

By Staff
|
coconut burfi
ಕೆಲಬಾರಿಯಲ್ಲ ಅನೇಕ ಬಾರಿ ಇದ್ದಕ್ಕಿದ್ದಂತೆ ನೆಂಟರಿಷ್ಟರು ಮನೆಗೆ ಹೇಳದೆ ಕೇಳದೆ ಬಂದುಬಿಡುತ್ತಾರೆ. ಆಗ ಏನು ಮಾಡುವುದು ಬಿಡುವುದು ಎಂಬ ಯೋಚನೆಯಲ್ಲಿ ತಲೆಯೇ ಓಡುವುದಿಲ್ಲ. ಇಷ್ಟವಾದ ನೆಂಟರಿಷ್ಟರು ಬಂದಾಗ ಏನು ಮಾಡುವುದು? ಯೋಚನೆ ಮಾಡಬೇಡಿ. ಅಡುಗೆಮನೆಯಲ್ಲಿನ ಮೂಲೆಯತ್ತ ಕಣ್ಣು ಹಾಯಿಸಿದರೆ ತೆಂಗಿನಕಾಯಿ ಜುಟ್ಟನ್ನು ಬಿಟ್ಟುಕೊಂಡು ಅಲ್ಲೇ ಬಿದ್ದಿರುತ್ತದೆ. ಅದರ ತಲೆಯೊಡೆದು ಸರಸರನೆ ತುರಿದುಕೊಂಡು ತೆಂಗಿನಕಾಯಿ ಬರ್ಫಿ ಮಾಡಿ ನೆಂಟರ ಮುಂದೆ ಹಿಡಿಯಿರಿ, ಅವರು ಮತ್ತೊಮ್ಮೆ ಇದೇ ನೆವ ಮಾಡಿಕೊಂಡು ಮನೆಗೆ ಬರದಿದ್ದರೆ ಕೇಳಿ.

ಬೇಕಾಗುವ ಸಾಮಾನು :

ತೆಂಗಿನಕಾಯಿ ತುರಿ- 3 ಕಪ್‌
ಸಕ್ಕರೆ - 3 ಕಪ್‌
ಮೈದಾಹಿಟ್ಟು - 1 ಹಿಡಿ
ಗೋಡಂಬಿ, ಏಲಕ್ಕಿಪುಡಿ, ಸ್ವಲ್ಪ ತುಪ್ಪ , ಬೇಕಿದ್ದರೆ ಕೇಸರಿ ಬಣ್ಣ .

ಮಾಡುವ ವಿಧಾನ :

ಸಕ್ಕರೆ ಮುಳುಗುವಷ್ಟು ನೀರು ಹಾಕಿ ಪಾಕಕ್ಕಿಡಿ. ಸಕ್ಕರೆ ಪಾಕ ಸರಿಯಾಗಿದೆಯಾ ಅಂತ ಗಮನಿಸುತ್ತಿರಿ. ಪಾಕ ಹದಕ್ಕೆ ಬರುತ್ತಲೇ ತೆಂಗಿನ ಕಾಯಿ ತುರಿ ಸೇರಿಸಿ. ಈ ಮಿಶ್ರಣ ಗಟ್ಟಿಯಾಗುತ್ತಾ ಬರುವಾಗ ಮೈದಾಹಿಟ್ಟು ಹಾಕಿ. ತುಪ್ಪವನ್ನು ಹಾಕುತ್ತಾ ಚೆನ್ನಾಗಿ ಮಗುಚಿರಿ. ಪಾಕ ಗಟ್ಟಿಯಾಗುತ್ತಾ ತಳ ಬಿಡುತ್ತಾ ಬರುವಾಗ ಏಲಕ್ಕಿ ಪುಡಿ, ಗೋಡಂಬಿ ಹಾಕಿ. ಬಣ್ಣ ಬೇಕಿದ್ದರೆ ಕೇಸರಿ ಬೆರೆಸಿ. ಆನಂತ ತುಪ್ಪ ಸವರಿದ ತಟ್ಟೆಗೆ ಪಾಕ ಸುರಿಯಿರಿ. ಪಾಕ ಸ್ವಲ್ಪ ತಣ್ಣಗಾದ ನಂತರ ಅಗತ್ಯಕ್ಕೆ ತಕ್ಕಂತೆ ತುಂಡು ಮಾಡಿಕೊಳ್ಳಬಹುದು.

Story first published: Friday, June 5, 2009, 19:11 [IST]
X
Desktop Bottom Promotion