For Quick Alerts
ALLOW NOTIFICATIONS  
For Daily Alerts

ವಾವ್ ವಾವ್ ಸೇಬು-ಬಾಳೆ ಹಣ್ಣಿನ ಹಲ್ವ

By Prasad
|
Banana-apple halwa
ಹೆಚ್ಚಿನ ತಯಾರಿ ಇಲ್ಲದೆ ಕಡಿಮೆ ಸಮಯದಲ್ಲಿ ತಯಾರಿಸಬಹುದಾಗ ಸ್ವಾದಿಷ್ಟಕರ ಸಿಹಿ ತಿನಿಸು ಸೇಬು-ಬಾಳೆ ಹಣ್ಣಿನ ಹಲ್ವ. ಮಾಡಿ ತಿಂತೀರಲ್ವಾ?

* ಗಾಯತ್ರಿ ಶೇಷಾಚಲ

ಬೇಕಾದ ಸಾಮಾಗ್ರಿಗಳು:

ಬಾಳೆಹಣ್ಣು 6 (ನೇಂದ್ರ ಬಾಳೆಹಣ್ಣು ಇದ್ದರೆ ಒಳ್ಳೆಯದು)
ಸೇಬು ಹಣ್ಣು 2 ಅಥವಾ 3
ಹಾಲು 1 ಲೋಟ
ಸಕ್ಕರೆ 1 ಲೋಟ
ತುಪ್ಪ 1 ಲೋಟ
ಏಲಕ್ಕಿ ಪುಡಿ 1 ಚಮಚ
ಗೋಡಂಬಿ-ರುಚಿಗೆ ತಕ್ಕಷ್ಟು (ಸ್ವಲ್ಪ)

ಮಾಡುವ ವಿಧಾನ:

* ಮೊದಲಿಗೆ ಗೋಡಂಬಿ ಚೂರುಗಳನ್ನು ತುಪ್ಪದಲ್ಲಿ ಕೆಂಪಗೆ ಹುರಿದುಕೊಂಡು ಇಡಿ.

* ಬಾಳೆ ಹಣ್ಣು ಮತ್ತು ಸೇಬಿನ ಹಣ್ಣನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ. ಅದನ್ನು ಕಡಾಯಿಯಲ್ಲಿ ಹಾಕಿ. ಅದಕ್ಕೆ ಹಾಲನ್ನು ಬೆರೆಸಿ ಸಣ್ಣ ಉರಿಬೆಂಕಿಯಲ್ಲಿ (ಗ್ಯಾಸ್‌ನಲ್ಲಿ ಸಿಮ್‌) ಇಡಿ.

* ಸುಮಾರು 7-8 ನಿಮಿಷದ ಬಳಿಕ ಅದಕ್ಕೆ ಸಕ್ಕರೆ ಮತ್ತು ತುಪ್ಪ ಹಾಕಿ. ಸೌಟಿನಲ್ಲಿ ಮಗುಚುತ್ತಾ ಇರಿ. ಗಟ್ಟಿಯಾಗುತ್ತಾ ಬಂದಂತೆ ನಿಧಾನಕ್ಕೆ ಕಡಾಯಿಯ ಹಲ್ವದ ಮಿಶ್ರಣ ಅಡಿ ಬಿಡಲಾರಂಭಿಸುತ್ತದೆ.

* ನಂತರ ಏಲಕ್ಕಿ ಹುಡಿ(ಪುಡಿ) ಮತ್ತು ಹುರಿದಿಟ್ಟ ಗೋಡಂಬಿ ಚೂರುಗಳನ್ನು ಬೆರೆಸಿ ಕೆಳಗಿಳಿಸಿ. ಬಿಸಿ ಆರಿದ ಬಳಿಕ ತಿನ್ನಿ. ನೇಂದ್ರ ಬಾಳೆ ಹಣ್ಣು ಹಾಕಿದರೆ ರುಚಿ ಹೆಚ್ಚು.

X
Desktop Bottom Promotion