For Quick Alerts
ALLOW NOTIFICATIONS  
For Daily Alerts

ಈ ಯುಗಾದಿಗೆ ಅವಲಕ್ಕಿ ಪಾಯಸ

|
Aval Payasa Recipe
ಹಬ್ಬದಲ್ಲಿ ಪಾಯಸವಿಲ್ಲ ಅಂದರೆ ಹೇಗೆ ಅಲ್ವಾ? ಯುಗಾದಿಗೆ ಬೇವು-ಬೆಲ್ಲ, ಒಬ್ಬಟ್ಟು, ಯುಗಾದಿ ಪಚಡಿ, ಕೋಸಂಬರಿ ವಿಶೇಷವಾದರೂ ಇವುಗಳ ಜೊತೆ ಪಾಯಸವಿದ್ದರನೆ ಸಂಪೂರ್ಣ ಹಬ್ಬದ ಅಡುಗೆಯಾಗುವುದು. ಯುಗಾದಿಗೆ ಎಲ್ಲರಿಗೂ ಶುಭ ಕೋರುತ್ತಾ, ಅವಲಕ್ಕಿ ಪಾಯಸ ಮಾಡುವ ವಿಧಾನ ತಿಳಿಯೋಣ:

ಬೇಕಾಗುವ ಸಾಮಾಗ್ರಿಗಳು:
* ಒಂದು ಲೀಟರ್ ಹಾಲು
* 1/2 ಕಪ್ ಅವಲಕ್ಕಿ
* ಸಕ್ಕರೆ
* 1/2 ಚಮಚ ಏಲಕ್ಕಿ
* ಸ್ವಲ್ಪ ತುಪ್ಪ, ಬಾದಾಮಿ, ಪಿಸ್ಟಾ
* ಸ್ವಲ್ಪ ಒಣ ದ್ರಾಕ್ಷಿ
* ಬಾದಾಮಿ

ತಯಾರಿಸುವ ವಿಧಾನ:

1. ಅವಲಕ್ಕಿಯನ್ನು ಚೆನ್ನಾಗಿ ತೊಳೆದು, ನೀರು ಸೋಸಿ 10 ನಿಮಿಷ ತೆಗೆದು ಇಡಬೇಕು.

2. ಸ್ವಲ್ಪ ದೊಡ್ಡ ಪಾತ್ರೆಯಲ್ಲಿ ಹಾಲನ್ನು ಕುದಿಸಬೇಕು. ಕಡಿಮೆ ಉರಿಯಲ್ಲಿ ಬಿಸಿ ಮಾಡಿದರೆ ಒಳ್ಳೆಯದು.

3. ಹಾಲನ್ನು ಮಂದವಾಗುವವರೆಗೆ ಕುದಿಸಿ, ನಂತರ ಉರಿಯನ್ನು ಕಮ್ಮಿ ಮಾಡಿ ಅದಕ್ಕೆ ಅವಲಕ್ಕಿ ಹಾಕಿ ಸೌಟ್ ನಿಂದ ಚೆನ್ನಾಗಿ ಆಡಿಸುತ್ತಾ ಇರಬೇಕು, ಈಗ ಸಕ್ಕರೆ, ಏಲಕ್ಕಿಯನ್ನು ಹಾಕಿ ಮಿಶ್ರ ಮಾಡಬೇಕು.

4. ಈ ಮಿಶ್ರಣವನ್ನು 3-4 ನಿಮಿಷ ಕುದಿಸಿ, ಉರಿಯನ್ನು ಆರಿಸಬೇಕು.

5. ಈಗ ಬಾಣಲೆಯನ್ನು ಬಿಸಿ ಮಾಡಿ ಸ್ವಲ್ಪ ತುಪ್ಪ ಹಾಕಿ, ಗೋಡಂಬಿ, ದ್ರಾಕ್ಷಿ, ಪಿಸ್ಟಾ, ಬಾದಾಮಿಯನ್ನು ತುಪ್ಪದಲ್ಲಿ ಹುರಿದು ಪಾಯಸಕ್ಕೆ ಹಾಕಿದರೆ ರುಚಿಕರವಾದ ಅವಲಕ್ಕಿ ಪಾಯಸ ರೆಡಿ.

English summary

Aval Payasa Recipe | Ugadi Special Recipe | ಅವಲಕ್ಕಿ ಪಾಯಸ ರೆಸಿಪಿ | ಯುಗಾದಿಗೆ ಸ್ಪೆಷಲ್ ರೆಸಿಪಿ

In this Ugadi you can make payasam with rice, sevai or aval (beaten rice). Take a look at the aval payasam recipe.
Story first published: Thursday, March 22, 2012, 17:23 [IST]
X
Desktop Bottom Promotion