Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಯುಗಾದಿ ಹಬ್ಬಕ್ಕೆ ವಿಶೇಷ ಬೇವು-ಬೆಲ್ಲ ಪಾನೀಯ

ನೀವು ಬೇವ ಬೆಲ್ಲ ಸವಿದಿರಬಹುದು. ಆದರೆ, ಬೇವಿನ ರಸ ಮತ್ತು ಬೆಲ್ಲದಿಂದ ತಯಾರಿಸುವ ಪಾನೀಯ ಸವಿದಿರಲಿಕ್ಕಿಲ್ಲ. ಇಲ್ಲಿದೆ ನೋಡಿ ಬೇವು-ಬೆಲ್ಲದ ಪಾನೀಯ.
ಬೇಕಾಗುವ ಸಾಮಗ್ರಿಗಳು:
* 1 ಕಪ್ ಹುರಿಗಡಲೆ (ಸಣ್ಣಗೆ ಪುಡಿ ಮಾಡಿದ್ದು)
* ನೀರು
* ಹುಣಸೆ ಹಣ್ಣಿನ ರಸ 1/4 ಕಪ್
* ತುರಿದ ಮಾವಿನ ಕಾಯಿ 1/4 ಕಪ್
* ತುರಿದ ಕೊಬ್ಬರಿ 2 ಚಮಚ
* ಬೆಲ್ಲ 1/2 ಕಪ್ (ಪುಡಿ ಮಾಡಿದ್ದು)
* ಕಲ್ಲು ಸಕ್ಕರೆ (ಸ್ವಲ್ಪ)
* ಕರ್ಜೂರ, ಉತ್ತುತ್ತೆ 2-3
* ಚಿಟಿಕೆಯಷ್ಟು ಉಪ್ಪು
* ನಿಂಬೆ ರಸ 2 ಚಮಚ
* ಏಲಕ್ಕಿ 1-2 (ಪುಡಿ ಮಾಡಿದ್ದು)
* ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ಟಾ ಎಲ್ಲಾ ಸೇರಿ 1/2 ಕಪ್
ಮಾಡುವ ವಿಧಾನ:
1. ಮೊದಲಿಗೆ ದ್ರಾಕ್ಷಿ, ಕರ್ಜೂರ, ಉತ್ತುತ್ತೆ ಎಲ್ಲಾ ಸಣ್ಣ -ಸಣ್ಣ ಚೂರುಗಳಾಗಿ ಮಾಡಿಕೊಳ್ಳಿ.
2. ಗೋಡಂಬಿ, ಬಾದಾಮಿ, ಪಿಸ್ಟಾ, ಗಸೆಗಸೆ, ಕಲ್ಲು ಸಕ್ಕರೆ, ಕೊಬ್ಬರಿ ಈ ಎಲ್ಲಾ ವಸ್ತುಗಳನ್ನು ಸ್ವಲ್ಪ ದಪ್ಪಗೆ ಕುಟ್ಟಿ ಪುಡಿ ಮಾಡಿಕೊಳ್ಳಬೇಕು.
3. ಈಗ ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಪುಡಿ ಮಾಡಿದ ಹುರಿಗಡಲೆ ಹಿಟ್ಟು, ಹುಣಸೆ ಹಣ್ಣಿನ ರಸ, ತುರಿದ ಮಾವಿನ ಕಾಯಿ, ಬೆಲ್ಲದ ಪುಡಿ, ಸಣ್ಣ ಚೂರಿನ ಹಾಗೆ.
ಕುಟ್ಟಿ ಪುಡಿ ಮಾಡಿದ ಒಣ ಹಣ್ಣುಗಳು, ಏಲಕ್ಕಿ ಪುಡಿ, ನಿಂಬೆ ರಸ, ಉಪ್ಪು ಹಾಕಿ ಕೈಯಿಂದ ಚೆನ್ನಾಗಿ ಕಲೆಸಿ. ಕೊನೆಗೆ ಬೇವಿನ ಕುಡಿ ಹಾಗೂ ಹೂ ಅನ್ನು ಕೈಯಲ್ಲಿ ಮುರಿದು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
ಈಗ ಕಟ್ಟಾ-ಮೀಠಾ ಬೇವು ಕುಡಿಯಲು ರೆಡಿ.
ಈ ಬೇವು ಬೆಲ್ಲ ಪಾನೀಯವನ್ನು ಬೇಯಿಸಿದ ಶಾವಿಗೆ ಮೇಲೆ ಹಾಕಿಕೊಂಡು ಕೂಡ ಸವಿಯಬಹುದು.



Click it and Unblock the Notifications
