Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಹೆಸರು ಬೇಳೆ ಕ್ಯಾರೆಟ್ ಕೋಸಂಬರಿ

ಯುಗಾದಿಗೆ ಮುಖ್ಯವಾಗಿ ಬೇವು ಬೆಲ್ಲ ತಯಾರಿಸಲಾಗುವುದು. ನಂತರ ಹಬ್ಬದ ಅಡುಗೆಯಲ್ಲಿ ಕೊಸಂಬರಿ, ಹೋಳಿಗೆ, ಪಚಡಿ, ಒಬ್ಬಟ್ಟು ಹೀಗೆ ಹತ್ತಾರು ಬಗೆಯ ಅಡುಗೆಯನ್ನು ತಯಾರಿಸಲಾಗುವುದು.
ಯುಗಾದಿಯಲ್ಲಿ ಅಮ್ಮಂದಿರುವ ಮಾಡುವ ರುಚಿಕರವಾದ ಅಡುಗೆಯನ್ನು ತಿಂದು ಗೊತ್ತಿರುತ್ತದೆ ವಿನಾಃ ತಯಾರಿಸಿ ಗೊತ್ತಿರುವುದಿಲ್ಲ. ಅದರಲ್ಲೂ ಹೊಸದಾಗಿ ಮದುವೆಯಾದವರಿಗೆ ಇದೊಂದು ಸವಾಲು, ಅತ್ತೆ ಮನೆಯಲ್ಲಿ ಹಬ್ಬದ ಅಡುಗೆ ತಯಾರಿಸುವುದು ಹೇಗೆ ಎಂಬ ಚಿಂತೆ.
ಚಿಂತೆ ಬೇಡ ರಿಲ್ಯಾಕ್ಸ್ ಆಗಿ ಏಕೆಂದರೆ ಕನ್ನಡ ಬೋಲ್ಡ್ ಸ್ಕೈ ನಿಮಗಾಗಿ ಯುಗಾದಿ ರೆಸಿಪಿಗಳನ್ನು ನೀಡುತ್ತಿದೆ. ಆದ್ದರಿಂದ ಯಾವುದೆ ಮುಜುಗರವಿಲ್ಲದೆ ಈ ಅಡುಗೆ ಮಾಡಿ ನೋಡಿ. ಮನೆಯವರು ನಿಮ್ಮ ಕೈ ನೈಪುಣ್ಯಕ್ಕೆ ಕ್ಲೀನ್ ಬೋಲ್ಡ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮೊದಲಿಗೆ ಹೆಸರುಬೇಳೆ ಕ್ಯಾರೆಟ್ ಕೋಸಂಬರಿ ಮಾಡುವ ವಿಧಾನ ತಿಳಿಯೋಣ:
ಬೇಕಾಗುವ ಸಾಮಾಗ್ರಿಗಳು:
* 2 ಕ್ಯಾರೆಟ್ (ತುರಿದ ಕ್ಯಾರೆಟ್)
* 1/4 ಕಪ್ ಹೆಸರು ಬೇಳೆ ( 3 ಗಂಟೆ ಮುಂಚಿತವಾಗಿ ನೀರಿನಲ್ಲಿ ನೆನೆ ಹಾಕಿರಬೇಕು)
* ಸ್ವಲ್ಪ ತುರಿದ ತೆಂಗಿನಕಾಯಿ
* ಸ್ವಲ್ಪ ಕೊತ್ತಂಬರಿ ಸೊಪ್ಪು (ಕತ್ತರಿಸಿದ್ದು)
* ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ:
* 2 ಚಮಚ ಎಣ್ಣೆ
* 1 ಚಮಚ ಸಾಸಿವೆ
* ಚಿಟಿಕೆಯಷ್ಟು ಇಂಗು
* 2-3 ಕತ್ತರಿಸಿದ ಹಸಿಮೆಣಸಿನ ಕಾಯಿ
ತಯಾರಿಸುವ ವಿಧಾನ:
1. ನೀರಿನಲ್ಲಿ ನೆನೆಹಾಕಿದ ಹೆಸರುಬೇಳೆಯನ್ನು ಅದರ ನೆನೆ ಹಾಕಿದ ವಾಸನೆ ಹೋಗುವವರೆಗೆ ಚೆನ್ನಾಗಿ ತೊಳೆಯಬೇಕು.
2. ಅದಕ್ಕೆ ತುರಿದ ಕ್ಯಾರೆಟ್ ಮತ್ತು ಕೊಬ್ಬರಿಯನ್ನು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಬೇಕು.
3. ಈಗ ಬಾಣಲೆಯನ್ನು ಬಿಸಿ ಮಾಡಿ ಸಾಸಿವೆ ಹಾಕಿ ಅದು ಚಟಾಪಟಾ ಶಬ್ದ ಬರುವಾಗ ಹಸಿಮೆಣಸಿನ ಕಾಯಿ ಮತ್ತು ಚಿಟಿಕೆಯಷ್ಟು ಇಂಗು ಸೇರಿಸಿ 1-2 ನಿಮಿಷ ಬಿಸಿ ಮಾಡಿ ಅದನ್ನು ಕೋಸಂಬರಿ ಮಿಶ್ರಣದ ಜೊತೆ ಸೇರಿಸಿ, ಕೊತ್ತಂಬರಿ ಸೊಪ್ಪು ಹಾಕಿದರೆ ಯುಗಾದಿಯ ಸ್ಪೆಷಲ್ ಹೆಸರು ಬೇಳೆ ಕ್ಯಾರೆಟ್ ಕೋಸಂಬರಿ ರೆಡಿ.



Click it and Unblock the Notifications
