For Quick Alerts
ALLOW NOTIFICATIONS  
For Daily Alerts

ಸಂಜೆಯ ಚಳಿಗೆ ಒಳ್ಳೆ ಜೊತೆ ಆಲೂ ಬಜ್ಜಿ

|

ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಚಕಾರವೆತ್ತದೆ ಇಷ್ಟಪಡುವ ತರಕಾರಿ ಆಲೂಗಡ್ಡೆ. ಈವತ್ತು ಸಂಜೆ ಇದರಿಂದಲೇ ಒಂದು ರುಚಿಕರವಾದ ತಿಂಡಿ ಮಾಡಿ ನಿಮ್ಮ ಮನೆಯವರೆಗೆ ಕಾಫಿ ಜೊತೆಗೆ ನೀಡಿದರೆ ಹೇಗೆ?

ಆಲೂಗಡ್ಡೆ ಬಜ್ಜಿ ಸಂಜೆಯ ಚಳಿಯಲ್ಲಿ ಕಾಫಿ ಜೊತೆಗೆ ಸವಿಯಲು ಸೂಪರ್. ಇದು ಮಾಡಲು ಸುಲಭ ಮತ್ತು ರುಚಿ ಕೂಡ ಎಲ್ಲರಿಗೂ ಇಷ್ಟವಾಗುತ್ತದೆ.

ಈರುಳ್ಳಿ ಬಜ್ಜಿಯ ಬಗ್ಗೆ ನೀವು ಕೇಳಿರಬೇಕಲ್ಲ. ಆಲೂ ಬಜ್ಜಿ ಅದರ ಸಹೋದರ ಅಥವ ಸಹೋದರಿ ಎಂದುಕೊಳ್ಳಬಹುದು.

Potato Bajjis For An Evening Treat

ಬೇಕಾಗುವ ಸಾಮಗ್ರಿಗಳು
1. ಆಲೂಗಡ್ಡೆ- 3 (ಸಣ್ಣಗೆ ಗುಂಡಗೆ ಕತ್ತರಿಸಿಕೊಳ್ಳಿ)
3.ಕಡಲೆ ಹಿಟ್ಟು- 1 1/2 ಕಪ್
4. ನೀರು- 1 ಕಪ್
5. ಅಚ್ಚಖಾರದ ಪುಡಿ- 1 ಟೀಚಮಚ
6. ಗರಂ ಮಸಾಲ ಪುಡಿ- 1/2 ಟೀಚಮಚ
7. ಇಂಗು- ಒಂದು ಚಿಟಿಕೆ
8. ಅಡುಗೆ ಸೋಡ- 2 ಚಿಟಿಕೆ
9. ಉಪ್ಪು- ರುಚಿಗೆ ತಕ್ಕಷ್ಟು
10. ಕರಿಯಲು ಎಣ್ಣೆ

ಮಾಡುವ ವಿಧಾನ
1. ಆಲೂಗಡ್ಡೆಯ ಸಿಪ್ಪೆ ತೆಗೆದು ನೀರಿನಲ್ಲಿ ಚೆನ್ನಾಗಿ ತೊಳೆದು ಉಪ್ಪು ನೀರಿನಲ್ಲಿ 15 ನಿಮಿಷ ನೆನೆಸಿಡಿ.

2. ಸಣ್ಣಗೆ ಗುಂಡಗೆ ಆಲೂಗಡ್ಡೆಯನ್ನು ಕತ್ತರಿಸಿಕೊಳ್ಳಿ.

3. ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಖಾರದ ಪುಡಿ, ಗರಂ ಮಸಾಲ, ಅಡುಗೆ ಸೋಡ, ಇಂಗು ಮತ್ತು ಉಪ್ಪನ್ನು ಹಾಕಿ ಹಿಟ್ಟನ್ನು ಗಂಟುಗಳು ಉಳಿಯದಂತೆ ಕಲಸಿಕೊಳ್ಳಿ.

4.ಬಾಣಲಿಯಲ್ಲಿ ಎಣ್ಣೆ ಹಾಕಿ ಕಾಯಿಸಿಕೊಳ್ಳಿ.

5. ಎಣ್ಣೆ ಕಾದ ನಂತರ ಒಂದೊಂದಾಗಿ ಕತ್ತರಿಸಿದ ಆಲೂಗಡ್ಡೆ ಹೋಳುಗಳನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಯೊಳಗೆ ನಿಧಾನವಾಗಿ ಹಾಕಿ.

6. ಆಲೂಗಡ್ಡೆ ಎರಡೂ ಕಡೆ ಕಂದು ಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ. ನಂತರ ಅದನ್ನು ತೆಗೆದು ತಟ್ಟೆಗೆ ಹಾಕಿ.
ಈ ಸಂಜೆಗೆ ನಿಮ್ಮ ಕಾಫಿ ಜೊತೆ ಸವಿಯಲು ಆಲೂ ಬಜ್ಜಿ ರೆಡಿ. ಇದರೊಂದಿಗೆ ಟೊಮೊಟೊ ಸಾಸ್ ಅಥವ ಚಿಲ್ಲಿ ಸಾಸ್ ಹಾಕಿಕೊಂಡು ರುಚಿ ನೋಡಿ.

English summary

Potato Bajjis For An Evening Treat

One of the most loved vegetables which every child and adult loves to eat at any part of the day is potatoes. It is one vegetable which no one can say no too either.
Story first published: Monday, December 2, 2013, 9:30 [IST]
X
Desktop Bottom Promotion