For Quick Alerts
ALLOW NOTIFICATIONS  
For Daily Alerts

ಚೈನೀಸ್ ಫ್ರೈಡ್ ರೈಸ್ ಮನೆಯಲ್ಲೇ ಮಾಡಿ

By Super
|

ಈ ಚಳಿಗಾಲದಲ್ಲಿ ಬಿಸಿ ಬಿಸಿ ಫ್ರೈಡ್ ರೈಸ್ ತಿನ್ನಬೇಕೆನ್ನುವ ಹಂಬಲ ಆಗೋದು ಸಹಜ. ಆದರೆ ಹಾಗೆಂದು ಯಾವಾಗಲೂ ಹೊರಗೆ ತಿನ್ನುವ ರೂಢಿಯಿಟ್ಟುಕೊಂಡರೆ ಆರೋಗ್ಯಕ್ಕೆ ಹಾನಿಯಂತೂ ಗ್ಯಾರಂಟಿ. ಆರೋಗ್ಯವೂ ಕೆಡದಂತೆ, ರುಚಿಕರವಾಗಿಯೂ ಚೈನೀಸ್ ಮಾದರಿಯ ಫ್ರೈಡ್ ರೈಸ್ ಮಾಡುವುದು ಸಾಧ್ಯವಿದೆ. ಅದೂ ಕೂಡ ಸುಲಭ ರೀತಿ. ಅದು ಹೇಗೆಂದು ಮುಂದೆ ತಿಳಿದುಕೊಳ್ಳಿ.

ಚೈನೀಸ್ ಫ್ರೈಡ್ ರೈಸ್ ಗೆ ಬೇಕಾಗುವ ಸಾಮಗ್ರಿ:
* 3 ಕಪ್ ಅಕ್ಕಿ, ಎಣ್ಣೆ, 100 ಗ್ರಾಂ ಬೀನ್ಸ್, 2 ಕ್ಯಾರೆಟ್, 1 ಈರುಳ್ಳಿ, 100 ಗ್ರಾಂ ಎಲೆಕೋಸು, 2 ಸಾಂಬಾರ್ ಈರುಳ್ಳಿ (ಈರುಳ್ಳಿ ಹೂವು), 2-3 ಉದ್ದುದ್ದ ಕತ್ತರಿಸಿದ ಮೆಣಸಿನಕಾಯಿ, 1 ಚಮಚ ಶುಂಠಿ ಪೇಸ್ಟ್, 1 ಚಮಚ ಬೆಳ್ಳುಳ್ಳಿ ಪೇಸ್ಟ್, 2 ಚಮಚ ಸೋಯಾ ಸಾಸ್, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು ಚೈನೀಸ್ ಆಹಾರಗಳಲ್ಲಿ ಅಡಗಿದೆ 7 ಸೂಪರ್ ಅಂಶಗಳು!

ಚೈನೀಸ್ ಫ್ರೈಯ್ಡ್ ರೈಸ್ ಮಾಡುವ ಬಗೆ:
ಸ್ಟೆಪ್ 1: ಅಕ್ಕಿಯನ್ನು ತೊಳೆದು 10-15 ನಿಮಿಷ ನೆನೆಯಲು ಬಿಟ್ಟು ನಂತರ ನೀರು ಬಸಿದು ಒಣಗಲು ಬಿಡಬೇಕು.

Chinese Fried Rice Recipe

ಸ್ಟೆಪ್ 2: ಪಾತ್ರೆಯೊಂದರಲ್ಲಿ ನೀರನ್ನು ಕುದಿಸಿ ಅದಕ್ಕೆ ಅಕ್ಕಿ ಮತ್ತು ಸ್ವಲ್ಪ ಉಪ್ಪು ಹಾಕಿ ಅನ್ನ ಮಾಡಬೇಕು. ಅನ್ನ ಉದುರಾಗಿರುವಂತೆ ಬೇಯಿಸಬೇಕು.

ಸ್ಟೆಪ್ 3: ಗಂಜಿ ಬಸಿದ ನಂತರ ಮತ್ತೆ ಅದಕ್ಕೆ ತಣ್ಣಗಿನ ನೀರು ಸೇರಿಸಿ ಮತ್ತೆ ಬಸಿದು ಒಣಗಲು ಬಿಡಬೇಕು. ಈ 10 ಚೈನೀಸ್ ಫುಡ್ಸ್ ನಿಜವಾದ ಚೈನೀಸ್ ಫುಡ್ಸ್ ಅಲ್ಲ!

ಸ್ಟೆಪ್ 4: ಈಗ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಕತ್ತರಿಸಿಟ್ಟುಕೊಂಡ ಎಲ್ಲಾ ತರಕಾರಿಗಳನ್ನು ಹುರಿದುಕೊಳ್ಳಬೇಕು. ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಬೆರೆಸಿ 5 ನಿಮಿಷದ ನಂತರ ರುಚಿಗೆ ತಕ್ಕಷ್ಟು ಮೆಣಸು ಮತ್ತು ಉಪ್ಪನ್ನು ಬೆರೆಸಬೇಕು. (ತರಕಾರಿಗಳು ಅರ್ಧ ಬೆಂದರೆ ಸಾಕು)

ಸ್ಟೆಪ್ 5: ಈಗ ಅನ್ನ ಮತ್ತು ತರಕಾರಿ ಮಿಶ್ರಣವನ್ನು ಬೆರೆಸಿ ಅದಕ್ಕೆ ಸೋಯಾ ಸಾಸ್ ಹಾಕಬೇಕು. 2-3 ನಿಮಿಷ ಹುರಿದ ನಂತರ ಬಿಸಿ ಬಿಸಿಯಾದ ಚೈನೀಸ್ ಫ್ರೈಡ್ ರೈಸನ್ನು ಎಲ್ಲರಿಗೂ ಹಾಕಿ ಕೊಡಬಹುದು.

English summary

Chinese Fried Rice Recipe | Chinese Snacks | ಚೈನೀಸ್ ಫ್ರೈಡ್ ರೈಸ್ ರೆಸಿಪಿ | ಚೈನೀಸ್ ತಿಂಡಿ

Are you a fried rice fan? Just take a look to know how to make delicious chinese fried rice recipe. The recipe is too simple and can be prepared in very less time. So know how to prepare the most flexible Chinese dish.
X
Desktop Bottom Promotion