For Quick Alerts
ALLOW NOTIFICATIONS  
For Daily Alerts

ಈಸಿ ಹಲಸಿನ ಚಿಪ್ಸ್ ಸಂಜೆ ಟೀ ಜೊತೆಗಿರಲಿ

|
Jackfruit chips recipe
ಹಲಸಿನ ಚಿಪ್ಸ್ ಕೇರಳ ಮೂಲದ ಸಾಂಪ್ರದಾಯಿಕ ತಿಂಡಿ. ಸಂಜೆ ಟೀ ಅಥವಾ ಕಾಫಿ ಜೊತೆ ಹಲಸಿನ ಚಿಪ್ಸ್ ಮಾಡಿ ನೋಡಿ, ನಿಮಗೇ ಗೊತ್ತಿಲ್ಲದಂತೆ ನಿಮ್ಮ ಬಾಯಿ ಅದರ ರುಚಿಗೆ ಸೋತುಹೋಗುತ್ತೆ. ಹಲಸಿನ ಚಿಪ್ಸ್ ಮಾಡೋದಕ್ಕೂ ತುಂಬಾ ಸುಲಭ.

ಬೇಕಾಗುವ ಪದಾರ್ಥಗಳು:
* ಉದ್ದ ಮತ್ತು ತೆಳುವಾಗಿ ಕತ್ತರಿಸಿದ ಹಲಸಿನ ತೊಳೆ
* ಕೊಬ್ಬರಿ ಎಣ್ಣೆ ( ಬೇರೆ ಎಣ್ಣೆಯನ್ನೂ ಬಳಸಬಹುದು)
* ಅರಿಶಿನ
* ಉಪ್ಪು, ನೀರು

ಹಲಸಿನ ಚಿಪ್ಸ್ ಮಾಡೋದು ಹೀಗೆ:
ಒಂದು ಕಪ್ ನೀರಿಗೆ ಅರ್ಧ ಚಮಚ ಅರಿಶಿನ ಮತ್ತು 3 ಚಮಚ ಉಪ್ಪು ಬೆರೆಸಿ ಚೆನ್ನಾಗಿ ಕದಡಿ ಒಂದೆಡೆ ಇಟ್ಟುಕೊಳ್ಳಬೇಕು. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ ಕತ್ತರಿಸಿದ್ದ ಹಲಸಿನ ತೊಳೆಗಳನ್ನು ಕೆಂಪಗಾಗುವ ತನಕ ಕರಿಯಬೇಕು.

ಹಲಸಿನ ತೊಳೆಗಳನ್ನು ಕರಿದ ನಂತರ ಅದರ ಮೇಲೆ ಅರಿಶಿನ ಉಪ್ಪು ಬೆರೆಸಿದ ನೀರನ್ನು ಚುಮುಕಿಸಬೇಕು. ಕೊನೆಗೆ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ನೀರು ಚುಮುಕಿಸಿದ ಹಲಸಿನ ಚಿಪ್ಸನ್ನು ಎರಡು ನಿಮಿಷ ಫ್ರೈ ಮಾಡಿದರೆ ಹಲಸಿನ ಚಿಪ್ಸ್ ರೆಡಿಯಾಗಿರುತ್ತೆ. ಈ ಮಳೆಗಾಲದಲ್ಲಿ ಸಂಜೆ ಬಿಸಿ ಬಿಸಿ ಹಲಸಿನ ಚಿಪ್ಸ್ ತಿನ್ನುತ್ತಿದ್ದರೆ ಅದರ ರುಚಿ ದುಪ್ಪಟ್ಟು.

English summary

Chakkai Chips Recipe | Jackfruit Chips | ಹಲಸಿನ ಹಣ್ಣಿನ ಚಿಪ್ಸ್

Jackfruit chips, also called as Chakkai chips is a traditional snack of kerala. it is very easy to prepare also. And for this monsoon, it tastes good with evening coffee or tea. Lets check out the procedure to make chakkai chips.
Story first published: Saturday, September 10, 2011, 17:29 [IST]
X
Desktop Bottom Promotion