Just In
Don't Miss
- Sports
ಐಎಸ್ಎಲ್: ನಾರ್ಥ್ಈಸ್ಟ್ ಯುನೈಟೆಡ್ಗೆ ಸೋತು ತಲೆಬಾಗಿದ ಬಾಗನ್
- News
18 ವರ್ಷದ ಬಳಿಕ ಪಾಕಿಸ್ತಾನ ಜೈಲಿನಿಂದ ಬಿಡುಗಡೆಯಾಗಿ ಭಾರತಕ್ಕೆ ಮರಳಿದ ಮಹಿಳೆ
- Movies
ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ವಿಶೇಷ ಅಭಿಮಾನಿಯ ಆಸೆ ಈಡೇರಿಸಿದ ಪುನೀತ್ ರಾಜ್ ಕುಮಾರ್
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಧುಮೇಹಿ ರೋಗಿಗಳಿಗೆ-ಹೂಕೋಸಿನ ಬಿರಿಯಾನಿ!
ಮಧುಮೇಹಿಗಳು ಯಾವುದೇ ಆಹಾರವನ್ನು ಸೇವಿಸಬೇಕಿದ್ದರೆ ಹಲವಾರು ಸಲ ಯೋಚನೆ ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಯಾವ ಆಹಾರದಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆಯಾ ಎನ್ನುವ ಭೀತಿ ಪ್ರತಿಯೊಬ್ಬ ಮಧುಮೇಹಿಗಳನ್ನು ಕಾಡುತ್ತಾ ಇರುತ್ತದೆ. ಆದರೆ ಆರೋಗ್ಯ ತಜ್ಞರ ಪ್ರಕಾರ ಮಧುಮೇಹಿಗಳ ಆಹಾರ ಕ್ರಮವು ಹೆಚ್ಚು ಕ್ಲಿಷ್ಟವಾಗಿಲ್ಲ.
ಸಾಮಾನ್ಯ ವ್ಯಕ್ತಿಗೆ ಬೇಕಾಗುವಂತಹ ಪೋಷಕಾಂಶಗಳುಳ್ಳ ಆಹಾರಗಳು ಮಧುಮೇಹಿಗಳಿಗೂ ಬೇಕಾಗುತ್ತದೆ. ಆದರೆ ಮಧುಮೇಹಿಗಳು ಕಾರ್ಬ್ರೋಹೈಡ್ರೇಟ್ ಅನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಮಧುಮೇಹಿಗಳೇ ನಿಮಗೋಸ್ಕರನೇ ಈ ವಿಶೇಷ ಉಪಹಾರಗಳು! ಮಧುಮೇಹಿಗಳೇ ನಿಮಗೋಸ್ಕರನೇ ಈ ವಿಶೇಷ ಉಪಹಾರಗಳು! ಮಧುಮೇಹಿಗಳೇ ನಿಮಗೋಸ್ಕರನೇ ಈ ವಿಶೇಷ ಉಪಹಾರಗಳು!
ಇಡೀ ಧಾನ್ಯದ ಕಾರ್ಬ್ರೋಹೈಡ್ರೆಟ್‌ಗಳು ಪಿಷ್ಠದ ಕಾರ್ಬ್ರೋಹೈಡ್ರೆಟ್‌ಗಿಂತ ಒಳ್ಳೆಯದು. ಇದರಲ್ಲಿ ನಾರಿನಾಂಶವು ಹೆಚ್ಚಾಗಿದೆ ಮತ್ತು ನಿಧಾನವಾಗಿ ಜೀರ್ಣವಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಮಧುಮೇಹಿಗಳಿಗೆ ಹೂಕೋಸು ಕೇಳಿಮಾಡಿದಂತಹ ಆಹಾರವಾಗಿದೆ.
ಇದರಲ್ಲಿ ಪೋಷಕಾಂಶಗಳು ಅಧಿಕವಾಗಿದೆ. ಕ್ಯಾಲರಿ ಹಾಗೂ ಕಾರ್ಬ್ರೋಹೈಡ್ರೆಟ್ ಕಡಿಮೆ ಇದೆ. ನಾರಿನಾಂಶವು ಸಮೃದ್ಧವಾಗಿರುವ ಕಾರಣ ಇದನ್ನು ಮಧುಮೇಹಿ ಸ್ನೇಹಿ ಎನ್ನಲಾಗುತ್ತದೆ. ಹೂಕೋಸಿನ ಬಿರಿಯಾನಿಯು ಮಧುಮೇಹಿಗಳಿಗೆ ಒಳ್ಳೆಯದು. ಇದನ್ನು ಹೇಗೆ ಮಾಡಿಕೊಳ್ಳುವುದು ಎಂಬುದನ್ನು ಮುಂದೆ ಓದಿ... ಬಾಯಿ ರುಚಿ ಹೆಚ್ಚಿಸುವ ವಿಧ ವಿಧದ ಹೂಕೋಸು ಖಾದ್ಯಗಳು
ಬೇಕಾಗುವ ಸಾಮಗ್ರಿಗಳು
*ಒಂದು ಮಧ್ಯಮ ಗಾತ್ರದ ಹೂಕೋಸು
*3 ಚಮಚ ಎಣ್ಣೆ(ಆಲಿವ್ ತೈಲ ಒಳ್ಳೆಯ ಫಲಿತಾಂಶ ನೀಡುವುದು)
*½ ದಾಲ್ಚಿನಿ ಚಕ್ಕೆ
*3 ಏಲಕ್ಕಿ
*2-3 ಲವಂಗ
*ಒಂದು ಮಧ್ಯಮ ಗಾತ್ರದ ಈರುಳ್ಳಿ(ದೊಡ್ಡದಾಗಿ ಸ್ಲೈಸ್ ಮಾಡಿಕೊಳ್ಳಿ)
*½ ಚಮಚ ಅರಿಶಿನ
*½ ಚಮಚ ಮೆಣಸಿನ ಹುಡಿ
*1 ಮಧ್ಯಮ ಗಾತ್ರದ ಟೊಮೆಟೋ(ತುಂಡು ಮಾಡಿರುವುದು)
*ರುಚಿಗೆ ತಕ್ಕಷ್ಟು ಉಪ್ಪು
*2 ಚಮಚ ಬಾದಾಮಿ
*ಸ್ವಲ್ಪ ಕೊತ್ತಂಬರಿ ಸೊಪ್ಪು ಹೂಕೋಸು ಎಂದಾಕ್ಷಣ ಮುಖ ಸಿಂಡರಿಸಬೇಡಿ ಪ್ಲೀಸ್!
ವಿಧಾನ
1. ಹೂಕೋಸಿನ ತೊಟ್ಟನ್ನು ತೆಗೆದು ಬೇರೆ ಮಾಡಿ ಹೂವನ್ನು ತೆಗೆದು ಒಂದು ಪಾತ್ರೆಗೆ ಹಾಕಿಕೊಳ್ಳಿ. ಇದನ್ನು ತೊಳೆದು ಹೂವನ್ನು ದೊಡ್ಡ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ಅದನ್ನು ಹುಡಿ ಮಾಡಿಕೊಳ್ಳಿ. ಇದನ್ನು ಮಿಕ್ಸಿಗೆ ಹಾಕಿ ಒಂದೆರಡು ಸುತ್ತು ತಿರುಗಿಸಬಹುದು.
2.ಒಂದು ಸಣ್ಣ ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ದಾಲ್ಚಿನಿ, ಏಲಕ್ಕಿ ಹಾಗೂ ಲವಂಗ ಹಾಕಿ. ಕೆಲವು ನಿಮಿಷ ಬಿಟ್ಟು ದೊಡ್ಡ ತುಂಡು ಮಾಡಿದಂತಹ ಈರುಳ್ಳಿಯನ್ನು ಇದಕ್ಕೆ ಹಾಕಿಕೊಂಡು ಸುಮಾರು 7ರಿಂದ ಹತ್ತು ನಿಮಿಷ ಬೇಯಲು ಬಿಡಿ. ಈರುಳ್ಳಿ ಕೆಂಪು ಬಣ್ಣಕ್ಕೆ ತಿರುಗುವ ತನಕ ಬೇಯಿಸಿ.
3.ಈಗ ಮಿಕ್ಸಿಯಲ್ಲಿ ಹಾಕಿದ್ದ ಹೂಕೋಸನ್ನು ಹಾಕಿಕೊಂಡು ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಸರಿಯಾಗಿ ಮಿಶ್ರಣ ಮಾಡಿಕೊಳ್ಳುತ್ತಾ ಸುಮಾರು ಐದು ನಿಮಿಷ ಬೇಯಲು ಬಿಡಿ.
4.ಅರಿಶಿನ ಹುಡಿ ಮತ್ತು ಮೆಣಸಿನ ಹುಡಿ ಹಾಕಿಕೊಳ್ಳಿ. ಸರಿಯಾಗಿ ಮಿಶ್ರಣ ಮಾಡಿದ ಬಳಿಕ ಟೊಮೆಟೋವನ್ನು ಹಾಕಿಕೊಂಡು ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ.
5. 6 ರಿಂದ 7 ನಿಮಿಷ ಕಾಲ ಹದವಾದ ಇದನ್ನು ಬೇಯಿಸಿ, ಅಲ್ಲದೆ ತಳ ಹಿಡಿಯದಂತೆ ನೋಡಿಕೊಳ್ಳಿ. ಈಗ ಬಾದಾಮಿ ಹಾಕಿಕೊಂಡು ಅದಕ್ಕೆ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿದರೆ ಬಿರಿಯಾನಿ ರೆಡಿ.