For Quick Alerts
ALLOW NOTIFICATIONS  
For Daily Alerts

ಬಾಯಿ ರುಚಿ ಹೆಚ್ಚಿಸುವ ವಿಧ ವಿಧದ ಹೂಕೋಸು ಖಾದ್ಯಗಳು

By Jaya subramanya
|

ನಾವು ಸೇವಿಸುವ ಆಹಾರ ಆರೋಗ್ಯರವಾಗಿರಬೇಕು ಮತ್ತು ನಮ್ಮ ದೇಹಕ್ಕೆ ಶಕ್ತಿಯನ್ನು ಉಂಟುಮಾಡುವಂತಿರಬೇಕು ಅದಕ್ಕಾಗಿಯೇ ನಾವು ತೆಗೆದುಕೊಳ್ಳುವ ಆಹಾರದಲ್ಲಿ ಹೆಚ್ಚುವರಿ ಪ್ರೋಟೀನ್ ವಿಟಮಿನ್ ಇರಬೇಕು ಅಂತೆಯೇ ರೋಗ ರುಜಿನಗಳಿಂದ ಅದು ನಮ್ಮನ್ನು ರಕ್ಷಿಸುವಂತಿರಬೇಕು ಎಂದು ಹೇಳುವುದು. ಅದಕ್ಕೆಂದೇ ಒಂದೇ ಬಗೆಯ ತರಕಾರಿಗಳನ್ನೇ ನಿತ್ಯವೂ ಬಳಸಲು ಆಗುವುದಿಲ್ಲ ಅಲ್ಲವೇ? ಉದಾಹರಣೆಗೆ

ಟೊಮೇಟೊ, ಈರುಳ್ಳಿ, ಆಲೂಗಡ್ಡೆ ಮೊದಲಾದ ತರಕಾರಿಗಳನ್ನು ನಿತ್ಯವೂ ಸೇವಿಸಲು ಅಷ್ಟೊಂದು ಸಮಂಜಸವಾಗಿರುವುದಿಲ್ಲ. ಆದರೆ ಒಂದೇ ತರಕಾರಿ ನಿಮ್ಮ ಎಲ್ಲಾ ವ್ಯಂಜನಗಳಿಗೂ ಪೂರಕವಾಗಿದೆ. ಹೌದು ಆ ತರಕಾರಿ ಹೂಕೋಸು ಆಗಿದೆ. ಈ ತರಕಾರಿಯನ್ನು ಬಳಸಿ ವಿಧವಿಧದ ಖಾದ್ಯಗಳನ್ನು ನಿಮಗೆ ತಯಾರಿಸಿಕೊಳ್ಳಬಹುದಾಗಿದೆ. ಇದನ್ನು ಬಳಸಿ ನೀವು ಯಾವುದೇ ಖಾದ್ಯಗಳನ್ನು ತಯಾರಿಸಿಕೊಳ್ಳುವ

ಮೊದಲು ಹೂಕೋಸನ್ನು ಉಪ್ಪು ಹಾಕಿದ ಬಿಸಿ ನೀರಿನಲ್ಲಿ 10 ನಿಮಿಷಗಳ ಕಾಲ ನೆನೆಸುವುದು ಉತ್ತಮ. ಇದರಿಂದ ಅದರಲ್ಲಿರುವ ರಾಸಾಯನಿಕ ವಸ್ತುಗಳು ಮತ್ತು ಹುಳುಗಳು ಸಾಯುವುದರ ಜೊತೆಗೆ ಅದರ ರುಚಿ ಕೂಡ ಇಮ್ಮಡಿಯಾಗುತ್ತದೆ. ಇಂದಿನ ಲೇಖನದಲ್ಲಿ ಹೂಕೋಸು ಬಳಸಿ ತಯಾರಿಸಬಹುದಾದ ಬೇರೆ ಬೇರೆ ಖಾದ್ಯಗಳತ್ತ ನಮ್ಮ ದೃಷ್ಟಿ ಹರಿಸೋಣ....

ಗೋಬಿ ಮಂಚೂರಿ

ಗೋಬಿ ಮಂಚೂರಿ

ಹುಳಿ ಉಪ್ಪು ಬೆರೆತ ಸ್ವಾದಮಯ ಗೋಬಿ ಮಂಚೂರಿಯನ್ನು ಸವಿಯಲು ಯಾರಿಗೆ ಇಷ್ಟವಿಲ್ಲ ಹೇಳಿ. ಚೀನಾ ಖಾದ್ಯವಾಗಿದ್ದರೂ ಇದನ್ನು ಮನೆಯಲ್ಲಿ ನಿಮಗೆ ಸರಳವಾಗಿ ತಯಾರಿಸಿಕೊಳ್ಳಬಹುದಾಗಿದೆ. ಗೋಬಿ ಮಂಚೂರಿಯನ್ನು ಮನೆಯಲ್ಲಿ ತಯಾರಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳುವ ವಿಧಾನ ಇಲ್ಲಿದೆ ನೋಡಿ ಮನೆಯಲ್ಲಿಯೆ ಆನಂದಿಸಿ ಗೋಬಿ ಮಂಚೂರಿ ರುಚಿ

ಗೋಬಿ ರೈಸ್

ಗೋಬಿ ರೈಸ್

ಹೂಕೋಸು ಬಳಸಿ ಸಿದ್ಧಪಡಿಸಬಹುದಾದ ಖಾದ್ಯವಾಗಿದೆ ಗೋಬಿ ರೈಸ್. ಬೆಳಗ್ಗಿನ ಉಪಹಾರ, ಮಧ್ಯಾಹ್ನದೂಟ ಮತ್ತು ರಾತ್ರಿಯೂಟಕ್ಕೂ ಗೋಬಿ ರೈಸ್ ಅನ್ನು ಸಿದ್ಧಪಡಿಸಿ ನಿಮಗೆ ಸೇವಿಸಬಹುದಾಗಿದೆ. ಬಾಯಿಯಲ್ಲಿ ನೀರೂರಿಸುವ ಹೂಕೋಸಿನ ರೈಸ್ ರೆಸಿಪಿ

ಗೋಬಿ ಪಕೋಡ

ಗೋಬಿ ಪಕೋಡ

ನಿಮ್ಮ ಸಂಜೆಯ ಟೀ ಸಮಯ ರಸಮಯವಾಗಿರಲು ಗೋಬಿ ಪಕೋರಾ ಹೇಳಿಮಾಡಿಸಿರುವಂಥದ್ದಾಗಿದೆ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ ನೋಡಿ ಮನ ಸೆಳೆಯುತ್ತಿದೆ ಗರಮಾಗರಂ ಗೋಬಿ ಪಕೋಡದ ಕಡೆ!

ಗೋಬಿ ಕರಿ

ಗೋಬಿ ಕರಿ

ನಿಮ್ಮ ಖಾದ್ಯಕ್ಕೆ ಮುಖ್ಯ ರೆಸಿಪಿಯಂತೆ ಗೋಬಿ ಕರ್ರಿಯನ್ನು ಸೇರಿಸಿಕೊಳ್ಳಬಹುದಾಗಿದೆ. ಬಿಸಿ ಬಿಸಿ ಚಪಾತಿ ಮತ್ತು ರೋಟಿಗೆ ಈ ಕರಿ ಹೆಚ್ಚು ರುಚಿಕರ ಎಂದೆನಿಸುತ್ತದೆ.ಅಸದಳ ರುಚಿ ನೀಡುವ ಗೋಬಿ ಬಟರ್ ಮಸಾಲ ಗ್ರೇವಿ

ಚಿಲ್ಲಿ ಗೋಬಿ ಡ್ರೈ ಫ್ರೈ

ಚಿಲ್ಲಿ ಗೋಬಿ ಡ್ರೈ ಫ್ರೈ

ಗೋಬಿಯೊಂದಿಗೆ ನೀವು ಸಿದ್ಧಪಡಿಸಿಕೊಳ್ಳಬಹುದಾದ ರುಚಿಮಯ ಖಾದ್ಯವಾಗಿದೆ ಚಿಲ್ಲಿ ಗೋಬಿ ಡ್ರೈ ಫ್ರೈ. ಹೆಚ್ಚಿನ ರೆಸ್ಟಾರೆಂಟ್‌ಗಳಲ್ಲಿ ಈ ಖಾದ್ಯವನ್ನು ಮುಖ್ಯ ಸ್ಟಾರ್ಟರ್ ಆಗಿ ಬಡಿಸುತ್ತಾರೆ. ಆದರೆ ಮನೆಯಲ್ಲೇ ಇದನ್ನು ನಿಮಗೆ ಸರಳವಾಗಿ ತಯಾರಿಸಿಕೊಂಡು ಸವಿಯಬಹುದಾಗಿದೆ. ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ನೋಡಿ ತಿಳಿದುಕೊಳ್ಳಿ. ಆಹಾ, ಚಿಲ್ಲಿ ಗೋಬಿ ಡ್ರೈ ರೆಸಿಪಿ-ಸ್ವರ್ಗಕ್ಕೆ ಮೂರೇ ಗೇಣು!

ಆಲೂ ಗೋಬಿ ಪುಲಾವ್

ಆಲೂ ಗೋಬಿ ಪುಲಾವ್

ಆಲೂಗಡ್ಡೆ ಮತ್ತು ಹೂಕೋಸು ಉತ್ತಮ ಕಾಂಬಿನೇಶನ್ ಎಂದೆನಿಸಿದೆ. ಖಾದ್ಯದ ಸವಿಯನ್ನು ಈ ಎರಡೂ ತರಕಾರಿಗಳು ಹೆಚ್ಚಿಸುತ್ತವೆ. ಹೂಕೋಸು ಮತ್ತು ಆಲೂಗಡ್ಡೆಯನ್ನು ಬಳಸಿ ನಿಮಗೆ ಅತ್ಯುತ್ತಮವಾಗಿರುವ ಖಾದ್ಯಗಳನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಕಾಲಿಫ್ಲವರ್ ಪಲಾವ್ ರೆಸಿಪಿ

English summary

Best Cauliflower Recipes To Try

If you want to have a variety of dishes just with one item, well there is no better option than using a cauliflower. The most tastiest dishes can be prepared easily at home by using this healthy vegetable, cauliflower. Most of the vegetarians love to have recipes that are prepared with cauliflower. So, today we shall share with you some of the easy and tasty cauliflower recipes. Do have a look.
X
Desktop Bottom Promotion