Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
March 04 Horoscope: ಆರ್ಥಿಕ ಲಾಭದ ಕಾರಣದಿಂದ ನೆಮ್ಮದಿ ಇದೆ!
ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 04 (March 04 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಅನುಕೂಲಕರ ದಿನವಾಗುತ್ತಿದೆ. ನೀವು ಅಂದುಕೊಂಡಿದ್ದ ಕೆಲಸವು ನೆರವೇರಲಿದೆ. ಶುಭಕಾರ್ಯ ಸಂಬಂಧಿತ ವಿಚಾರದಲ್ಲಿ ಪ್ರಯಾಣಗಳ ಮಾಡುವಿರಿ. ನಿಮ್ಮ ಹಣಕಾಸಿನ ವಿಚಾರದಲ್ಲಿ ಶುಭವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ವೃಷಭ ರಾಶಿ
ವೃಷಭ ರಾಶಿ ಜನರಲ್ಲಿ ಈ ವಾರವು ಬಹಳ ಅದೃಷ್ಟಕರ. ನಿಮ್ಮ ಹಣಕಾಸಿನ ವಿಚಾರವಾಗಿ ಯಾರಿಂದಾದರು ಸಲಹೆ ಪಡೆಯುವುದು ಬಹಳ ಉತ್ತಮ. ಮನೆಯ ವಸ್ತುವೊಂದಕ್ಕೆ ಹಣ ಹಾಕುವಿರಿ. ಶುಭ ಕಾರ್ಯ ಸಂಬಂಧಿತ ವಿಚಾರದಲ್ಲಿ ಚರ್ಚೆಗಳು ಇರಲಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಈ ವಾರವು ಅದೃಷ್ಟ ಬದಲಾಯಿಸಲಿದೆ. ನಿರುದ್ಯೋಗಗಳಾದರೆ ಅನಿರೀಕ್ಷಿತ ಮೂಲದಿಂದ ಹಣ ಪಡೆಯಬಹುದು. ಗೃಹಿಣಿಯರು ಈ ದಿನ ಹಣ ಕಳೆಯಲು ಮುಂದಾಗಬಹುದು. ವ್ಯಾಪಾರಿಗಳು ಇಂದು ಬುದ್ದಿವಂತಿಕೆಯಿಂದ ವ್ಯವಹಾರದಲ್ಲಿ ಮುಂದುವರೆಯಿರಿ.
ಕರ್ಕ ರಾಶಿ
ಕರ್ಕ ರಾಶಿಯ ಜನರು ಈ ದಿನ ಪ್ರಗತಿಯ ಸೂಚನೆ ನಡೆಯಬಹುದು. ಬಹು ದಿನದಿಂದ ಸಿಲುಕಿದ ಹಣ ನಿಮ್ಮ ಕೈ ಸೇರುವ ಸಮಯವಿದು. ಪ್ರೇಮಿಗಳು ಇಂದು ಶುಭ ಸುದ್ದಿಯ ಕೇಳಬಹುದು. ದಾಂಪತ್ಯ ವಿಚಾರದಲ್ಲಿ ಈ ಹಿಂದೆ ಅನುಭವಿಸಿದ್ದ ಸಮಸ್ಯೆಯೊಂದು ನಿವಾರಿಸಿಕೊಳ್ಳುವ ಅವಕಾಶ ಪಡೆಯಲಿದ್ದೀರಿ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಈ ದಿನವು ಬಹಳ ಅನುಕೂಲವಿದೆ. ಆಪ್ತರ ಸಹಕಾರದಿಂದ ನಿಮಗೆ ಉತ್ತಮ ದಿನವಾಗಲಿದೆ, ಅದ್ರಲ್ಲೂ ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಉತ್ತಮ ಅವಕಾಶ ಸಿಗಬಹುದು. ಪಂಚೇಂದ್ರಿಯ ಸಂಬಂಧಿತ ವಿಚಾರದಲ್ಲಿ ಚಿಂತೆ ಇರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಈ ದಿನವು ಬಹಳ ನೆಮ್ಮದಿ ತರುವ ದಿನ. ನಿಮ್ಮ ಹೊಸ ಜವಾಬ್ದಾರಿಯೊಂದರಲ್ಲಿ ಯಶಸ್ಸು ಸಿಗಲಿದೆ. ಹೀಗಾಗಿ ನಿಮಗೆ ನೆಮ್ಮದಿ ಸಿಗಲಿದೆ. ಆಪ್ತರ ಆಹ್ವಾನದ ಮೇರೆಗೆ ಪ್ರಯಾಣ ಮಾಡಬಹುದು. ವಾಹನ ವಿಚಾರದಲ್ಲಿ ಎಚ್ಚರವಿರಲಿ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಈ ದಿನವು ಅನುಕೂಲಕರ. ದೇವಾಲಯ ಭೇಟಿ, ಪ್ರಭಾವಿಗಳ ಭೇಟಿಗೆ ಇಂದು ಮುಂದಾಗಬಹುದು. ದಿನದ ಅಂತ್ಯದಲ್ಲಿ ನೀವು ಪ್ರಯಾಣಿಸುತ್ತೀರಿ. ದಾಂಪತ್ಯ ವಿಚಾರದಲ್ಲಿ ನಿಮಗೆ ನೆಮ್ಮದಿ ಸಿಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಲ್ಲಿ ಈ ದಿನವು ಸಮಸ್ಯೆಗಳ ತರಬಹುದು. ನಿಮ್ಮ ಕೆಲಸಗಳಿಗೆ ಬಾಹ್ಯ ಅಡ್ಡಿಗಳಿವೆ. ಪ್ರಯಾಣಗಳಿಂದ ನಿಮಗೆ ಲಾಭವಾಗುವ ಬದಲಾಗಿ ಖರ್ಚುಗಳು ಹೆಚ್ಚಾಗುತ್ತವೆ. ಮೂಳೆ ಸಂಬಂಧಿತ ವಿಚಾರದಲ್ಲಿ ಸೂಕ್ತ ಚಿಕಿತ್ಸೆಗೆ ಮುಂದಾಗುವುದು ಉತ್ತಮ.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಮಿಶ್ರಫಲದ ದಿನ. ನಿಮ್ಮ ನಿತ್ಯದ ಕೆಲಸದಲ್ಲಿ ಹಣಕಾಸಿನ ಅಡ್ಡಿಗಳಿವೆ. ಯಾರೊಂದಿಗಾದರು ವ್ಯವಹಾರ ವಿಚಾರದಲ್ಲಿ ನಿಮಗೆ ಶುಭ ಸಮಯವಿದೆ. ದೂರ ಸಂಬಂಧಿಗಳ ಭೇಟಿ ಸಂಭವವಿದೆ.
ಮಕರ ರಾಶಿ
ಮಕರ ರಾಶಿಯ ಜನರಿಗೆ ಈ ದಿನವು ಬಹಳ ಮಿಶ್ರಫಲ ತರಲಿದೆ. ದಿನದ ಆರಂಭದಲ್ಲಿ ಚಿಂತೆಗಳಿದ್ದರೂ ಅಂತ್ಯದ ಸಮಯದಲ್ಲಿ ನೆಮ್ಮದಿ ನೋಡುವಿರಿ. ಹಣಕಾಸು ವಿಚಾರದಲ್ಲಿ ಆಪ್ತರಿಂದ ಸಹಾಯ ಪಡೆಯುತ್ತೀರಿ. ನಿಮಗೆ ಬೇಕಿದ್ದ ವಸ್ತುವೊಂದನ್ನು ಖರೀದಿಸಲು ಇಂದು ಸೂಕ್ತ ದಿನ.
ಕುಂಭ ರಾಶಿ
ಕುಂಭ ರಾಶಿಯ ಜನರಲ್ಲಿ ಈ ದಿನವು ಅನುಕೂಲಕರ. ವಿವಾಹ ಸಂಬಂಧಿತ ವಿಚಾರವೊಂದು ಸಂತಸಕ್ಕೆ ಕಾರಣವಾಗಲಿದೆ. ಪ್ರಯಾಣಗಳ ಮಾಡುವಿರಿ. ವ್ಯಾಪಾರದಲ್ಲಿನ ಮಂದಿಗೆ ಈ ದಿನವು ಅನುಕೂಲಕ್ಕೆ ಕಾರಣವಾಗಲಿದೆ. ಪ್ರಗತಿಯ ಸಾಧ್ಯತೆ ಇದೆ.
ಮೀನ ರಾಶಿ
ಮೀನ ರಾಶಿ ಜನರಲ್ಲಿ ಈ ದಿನ ಸಾಮಾನ್ಯವಾಗಿರಲಿದೆ. ದೇವಾಲಯ ಪ್ರಯಾಣ ವಿಚಾರದಲ್ಲಿ ನೀವು ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ಬ್ಯಾಂಕಿಂಗ್ ವಿಚಾರದಲ್ಲಿ ನಿಮಗೆ ಮತ್ತೆ ಓಡಾಟಗಳಿವೆ. ಆಸ್ತಿ ಕುರಿತಾಗಿ ನಿಮ್ಮಲ್ಲಿದ್ದ ಚಿಂತೆಯೊಂದು ದೂರಾಗಲಿದೆ.



Click it and Unblock the Notifications