Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾತಿನ ಹೋಳಿ.. ಮನದ ಸಂಭ್ರಮ.. ಇದು ಬಣ್ಣಗಳ ಕೇಳಿ! ರೊಮ್ಯಾಂಟಿಕ್ ಶುಭಾಶಯಗಳು ಇಲ್ಲಿವೆ
ಹ್ಯಾಪಿ ಹೋಳಿ 2026..! ನಿಮ್ಮ ಬಂಧು-ಮಿತ್ರರಿಗೆ ಕಳುಹಿಸಲು ಇಲ್ಲಿವೆ ಬೆಸ್ಟ್ ಶುಭಾಶಯಗಳು ಮತ್ತು ವಾಟ್ಸಾಪ್ ಸ್ಟೇಟಸ್‌ಗಳು! ಹೌದು, ಹೋಳಿ ಕೇವಲ ಬಣ್ಣಗಳ ಹಬ್ಬವಲ್ಲ. ಇದು ಐತಿಹಾಸಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಾಮುಖ್ಯತೆಯನ್ನು ಹೊಂದಿರುವ ಸಂಭ್ರಮದ ಸಂಕೇತ. ಅಹಂಕಾರಿಯಾಗಿದ್ದ ಹಿರಣ್ಯಕಶಿಪುವಿನ ತಂಗಿ ಹೋಲಿಕೆ ಬೆಂಕಿಯಲ್ಲಿ ದಹನವಾದ ದಿನ ಮತ್ತು ವಿಷ್ಣು ಭಕ್ತ ಪ್ರಹ್ಲಾದ ಸುಕ್ಷೇಮವಾಗಿ ಹೊರಬಂದ ದಿನದ ಸವಿನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಇದು "ಕೆಟ್ಟದ್ದರ ಮೇಲೆ ಒಳ್ಳೆಯದರ ಜಯ" ಎಂಬ ಸಂದೇಶವನ್ನು ಜಗತ್ತಿಗೆ ಸಾರುತ್ತದೆ. ಹೋಳಿ ಹಬ್ಬವು (Happy Holi 2026) ರಾಧಾ-ಕೃಷ್ಣರ ಪವಿತ್ರ ಪ್ರೇಮದ ಸಂಕೇತವೂ ಹೌದು. ವಿಶೇಷವಾಗಿ ಬೃಂದಾವನದಲ್ಲಿ ಈ ಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಚಳಿಗಾಲ ಮುಗಿದು, ಗಿಡಮರಗಳು ಹೊಸ ಚಿಗುರು ಪಡೆಯುವ ವಸಂತ ಋತುವಿನ ಆಗಮನವನ್ನು ಈ ಹಬ್ಬವು ಸ್ವಾಗತಿಸುತ್ತದೆ. ಪ್ರಕೃತಿಯು ಹಸಿರು ಮತ್ತು ಹೂವುಗಳ ಬಣ್ಣಗಳಿಂದ ಕಂಗೊಳಿಸುವ ಈ ಸಮಯದಲ್ಲಿ ಮನುಷ್ಯರು ಕೂಡ ಬಣ್ಣಗಳಲ್ಲಿ ಮಿಂದೇಳುತ್ತಾರೆ.

ಈ ವರ್ಷ ಮಾರ್ಚ್ 4 ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಿಮ್ಮ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ಕಳುಹಿಸಲು ಆಕರ್ಷಕ ಶುಭಾಶಯಗಳು (Happy Holi 2026 Wishes) ಇಲ್ಲಿವೆ.
ಹೃದಯ ಸ್ಪರ್ಶಿ ಹೋಳಿ ಶುಭಾಶಯಗಳು
• ಈ ಹೋಳಿ ಹಬ್ಬವು ನಿಮ್ಮ ಜೀವನದಲ್ಲಿ ಸಂತೋಷ, ಆರೋಗ್ಯ ಮತ್ತು ಆನಂದವೆಂಬ ಬಣ್ಣಗಳನ್ನು ತುಂಬಲಿ ಎಂದು ಆಶಿಸುತ್ತೇನೆ. ಹ್ಯಾಪಿ ಹೋಳಿ.
• ನಿಮ್ಮ ಎಲ್ಲಾ ಕಷ್ಟಗಳು 'ಹೋಲಿಕಾ ದಹನ'ದಲ್ಲಿ ಸುಟ್ಟು ಹೋಗಲಿ, ಸುಖ-ಸಂತೋಷಗಳು ನಿಮ್ಮ ಮನೆಯಲ್ಲಿ ಚಿಗುರಲಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಹೋಳಿ ಹಬ್ಬದ ಶುಭಾಶಯಗಳು.
• ಬಣ್ಣಗಳ ಹಬ್ಬವು ತಂದಿರುವ ಈ ಹೊಸ ಉತ್ಸಾಹವು ನಿಮ್ಮ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರಲಿ. ಹ್ಯಾಪಿ ಹೋಳಿ 2026.
• ದ್ವೇಷವನ್ನು ಮರೆತು ಪ್ರೀತಿಯನ್ನು ಹಂಚುವ ಈ ಸುಂದರ ಹಬ್ಬವನ್ನು ಆನಂದದಿಂದ ಆಚರಿಸಿ.
• ನಿಮ್ಮ ಮನಸ್ಸು ಮತ್ತು ನಿಮ್ಮ ಜೀವನವು ಯಾವಾಗಲೂ ಹೋಳಿ ಬಣ್ಣಗಳಂತೆ ಪ್ರಕಾಶಮಾನವಾಗಿರಲಿ.
• ವಸಂತ ಋತುವಿನ ಆಗಮನದೊಂದಿಗೆ ನಿಮ್ಮ ಜೀವನದಲ್ಲಿ ಹೊಸ ವಸಂತವು ಅರಳಲಿ. ಹೋಳಿ ಹಬ್ಬದ ಶುಭಾಶಯಗಳು.
• ದೇವರ ಆಶೀರ್ವಾದವು ಇಂದ್ರಧನುಸ್ಸಿನ 7 ಬಣ್ಣಗಳಂತೆ ನಿಮ್ಮ ಜೀವನವನ್ನು ಸುಂದರವಾಗಿ ಮಾರ್ಪಡಿಸಲಿ.
• ಪ್ರತಿ ಬಣ್ಣವು ನಿಮಗೊಂದು ಹೊಸ ಆಶೆ ಮತ್ತು ಯಶಸ್ಸನ್ನು ನೀಡಲಿ. ಹ್ಯಾಪಿ ಕಲರ್‌ಫುಲ್ ಹೋಳಿ.
• ಸುರಕ್ಷಿತವಾದ ಬಣ್ಣಗಳೊಂದಿಗೆ ಹಬ್ಬ ಆಚರಿಸಿ, ಕುಟುಂಬದೊಂದಿಗೆ ಸಂತೋಷವನ್ನು ಹಂಚಿಕೊಳ್ಳಿ. ಸೇಫ್ ಅಂಡ್ ಹ್ಯಾಪಿ ಹೋಳಿ.
ವಾಟ್ಸಾಪ್ ಸ್ಟೇಟಸ್‌ಗಳು
• ನನ್ನ ಜೀವನವನ್ನು ರಂಗು ರಂಗಾಗಿಸಿದ ಪ್ರತಿಯೊಬ್ಬರಿಗೂ ಹ್ಯಾಪಿ ಹೋಳಿ.
• ಮಾತಿನ ಹೋಳಿ.. ಮನದ ಸಂಭ್ರಮ.. ಇದು ಬಣ್ಣಗಳ ಕೇಳಿ. ಹ್ಯಾಪಿ ಹೋಳಿ 2026.
• ಮನಸ್ಸುಗಳ ನಡುವಿನ ಅಂತರವನ್ನು ಅಳಿಸಿ ಹಾಕುವ ಹಬ್ಬವೇ ಹೋಳಿ.
• ಮುಖಕ್ಕೆ ಬಣ್ಣಗಳು.. ಮನಸ್ಸಿಗೆ ಸಂತೋಷ.. ಸದಾ ನಗುತಿರಿ. ಹ್ಯಾಪಿ ಹೋಳಿ.
• ಸ್ನೇಹಕ್ಕೆ ಬಣ್ಣ ಹಚ್ಚುವ ದಿನ ಇದು. ಲವ್ ಯು ಫ್ರೆಂಡ್ಸ್.
• ಜಗಳ ಮರೆಯೋಣ.. ಬಣ್ಣ ಎರಚೋಣ.. ಒಂದಾಗಿ ನಲಿಯೋಣ.
• ಲೈಫ್ ಈಸ್ ಬ್ಯೂಟಿಫುಲ್.. ಎಂಜಾಯ್ ದಿ ಕಲರ್ಸ್ ಆಫ್ ಹೋಳಿ.
ಹೋಳಿ ಕೋಟ್ಸ್
• ಬಣ್ಣಗಳು ಕೇವಲ ಚರ್ಮಕ್ಕೆ ಮಾತ್ರವಲ್ಲ, ಮನಸ್ಸಿಗೂ ಅಂಟಿಕೊಳ್ಳಬೇಕು. ಆಗಲೇ ಅದು ನಿಜವಾದ ಸಂತೋಷ.
• ಪ್ರಹ್ಲಾದನ ಭಕ್ತಿ ಮತ್ತು ರಾಧಾ-ಕೃಷ್ಣರ ಪ್ರೇಮವನ್ನು ನೆನಪಿಸುವ ಶ್ರೇಷ್ಠ ಹಬ್ಬ ಹೋಳಿ.
• ಮನಸ್ಸಿನ ಕತ್ತಲೆಯನ್ನು ದೂರ ಮಾಡಿ, ಹೊಸ ಆಶಾದೀಪಗಳನ್ನು ತುಂಬುವ ಹಬ್ಬವಿದು.
• ಒಂದು ಬಣ್ಣ ಇನ್ನೊಂದು ಬಣ್ಣದೊಂದಿಗೆ ಸೇರಿದಾಗ ಮಾತ್ರ ಅಂದ; ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನೊಂದಿಗೆ ಸೇರಿದಾಗ ಮಾತ್ರ ಆನಂದ.
ರೊಮ್ಯಾಂಟಿಕ್ ಶುಭಾಶಯಗಳು
• ನನ್ನ ಜೀವನಕ್ಕೆ ಬಂದು ಸುಂದರ ಬಣ್ಣಗಳನ್ನು ತುಂಬಿದ ನಿನಗೆ ಹ್ಯಾಪಿ ಹೋಳಿ.
• ನಿನ್ನ ಕಿರುನಗುವೇ ನನ್ನ ಜೀವನದ ಅಸಲಿ ಬಣ್ಣ. ಮೈ ಲವ್, ಹ್ಯಾಪಿ ಹೋಳಿ.
• ನೀನು ನನ್ನ ಪಕ್ಕದಲ್ಲಿದ್ದರೆ ನನಗೆ ಪ್ರತಿದಿನವೂ ಹೋಳಿಯೇ.
• ನೀನು ಬಂದ ನಂತರವೇ ನನ್ನ 'ಬ್ಲಾಕ್ ಅಂಡ್ ವೈಟ್' ಜೀವನ 'ಕಲರ್‌ಫುಲ್' ಆಗಿದ್ದು. ಹ್ಯಾಪಿ ಹೋಳಿ 2026.



Click it and Unblock the Notifications