For Quick Alerts
ALLOW NOTIFICATIONS  
For Daily Alerts

ಹೂಕೋಸು ಎಂದಾಕ್ಷಣ ಮುಖ ಸಿಂಡರಿಸಬೇಡಿ ಪ್ಲೀಸ್!

By Hemanth
|

ಪ್ರಕೃತಿ ದತ್ತವಾಗಿ ಸಿಗುವಂತಹ ತರಕಾರಿ ಸೇವನೆಯಿಂದ ಕೃತಕವಾಗಿ ನಿರ್ಮಿಸುವ ಆಹಾರಕ್ಕಿಂತ ಹೆಚ್ಚಿನ ಪೋಷಕಾಂಶಗಳು ನಮ್ಮ ದೇಹಕ್ಕೆ ಲಭ್ಯವಾಗುತ್ತದೆ. ಪ್ರತಿ ದಿನವು ಏನಾದರೊಂದು ತರಕಾರಿ ಸೇವನೆಯಿಂದ ನಮ್ಮ ಆರೋಗ್ಯವು ವೃದ್ಧಿಸುವುದು ಮತ್ತು ಇದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಕೆಲವು ತರಕಾರಿಗಳು ನಮ್ಮ ಅಡುಗೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಕೆಲವನ್ನು ನಮಗೆ ಇಷ್ಟಬಂದಂತೆ ಸೇವಿಸುತ್ತೇವೆ. ಹೂಕೋಸು ಮತ್ತು ಹಸಿ ಬಟಾಣಿ ಬಾತ್

ಈರುಳ್ಳಿ, ಟೊಮೆಟೋವನ್ನು ನಾವು ದಿನನಿತ್ಯವೂ ಬಳಸಿದಂತೆ ಹೂಕೋಸನ್ನು ಕೂಡ ಬಳಸಿದರೆ ಇದರಿಂದ ಹಲವಾರು ರೀತಿಯ ಲಾಭಗಳಿವೆ. ಹೂಕೋಸು ತುಂಬಾ ರುಚಿಯಾಗಿರುವ ಕಾರಣದಿಂದ ಇದರಿಂದ ಹಲವಾರು ರೀತಿಯ ಪದಾರ್ಥಗಳನ್ನು ಮಾಡಬಹುದು. ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವ ಹೂಕೋಸಿನಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಸಮೃದ್ಧವಾಗಿದೆ. ಸಮೃದ್ಧ ಪೋಷಕಾಂಶಗಳ ಆಗರ ಹೂಕೋಸು

ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವುದರ ಜೊತೆಗೆ, ದೇಹವು ವಯಸ್ಸಾದಂತೆ ಕಾಣುವುದು ತಪ್ಪುತ್ತದೆ. ಇದರಲ್ಲಿ ವಿಟಮಿನ್ ಸಿ, ಸಿನ್ಮಿಕ್ ಆ್ಯಸಿಡ್, ಬೆಟಾ ಕ್ಯಾರೋಟಿನ್ ಮೊದಲಾದ ಪ್ರಮುಖ ಅಂಶಗಳಿವೆ. ಹೂಕೋಸಿನಲ್ಲಿರುವ ಸಲ್ಫೊರ್ಪನೆ ಎನ್ನುವ ಅಂಶವು ಕ್ಯಾನ್ಸರ್ ಕೋಶಗಳನ್ನು ತೆಗೆದು ಹಾಕುವುದು. ಬನ್ನಿ ನಿಯಮಿತವಾಗಿ ಹೂಕೋಸು ಸೇವನೆಯಿಂದ ಯಾವ ರೀತಿಯ ಲಾಭಗಳು ಆಗಲಿದೆ ಎನ್ನುವ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳುವ....

ವಿಟಮಿನ್‪ಗಳ ಆಗರ

ವಿಟಮಿನ್‪ಗಳ ಆಗರ

ಹೂಕೋಸಿನಲ್ಲಿ ವಿಟಮಿನ್ ಬಿ1, ಬಿ2, ಬಿ3, ಬಿ5, ಬಿ6 ಮತ್ತು ಬಿ9 ಇದೆ. ಇದರಲ್ಲಿ ವಿಟಮಿನ್ ಕೆ ಮತ್ತು ಒಮೆಗಾ 3 ಕೊಬ್ಬಿನ ಆ್ಯಸಿಡ್ ಇದೆ. ಇದರಲ್ಲಿ ಪೊಟಾಶಿಯಂ, ಪ್ರೋಟೀನ್, ವಿಟಮಿನ್ ಸಿ, ಮೆಗ್ನಿಶಿಯಂ ಮತ್ತು ಪ್ರೊಸ್ಪರಸ್ ಒಳಗೊಂಡಿದೆ.

 ಮೆದುಳಿನ ಆರೋಗ್ಯಕ್ಕೆ...

ಮೆದುಳಿನ ಆರೋಗ್ಯಕ್ಕೆ...

ಹೂಕೋಸು, choline ಹಾಗೂ ವಿಟಮಿನ್ B ಇವೆರಡರ ಅತ್ಯುತ್ತಮ ಆಗರವೇ ಆಗಿದ್ದು, ಇವೆರಡೂ ಕೂಡಾ ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತವೆ ಎ೦ದು ತಿಳಿದುಬ೦ದಿದೆ. ಹೂಕೋಸು ಮೆದುಳಿನ ಗ್ರಹಿಕೆಯ ಸಾಮರ್ಥ್ಯವನ್ನು ವೃದ್ಧಿಗೊಳಿಸುತ್ತದೆ ಎ೦ದು ಕ೦ಡುಬ೦ದಿದ್ದು, ಇದು ಸ್ಮರಣಶಕ್ತಿ ಹಾಗೂ ಕಲಿಕೆಯ ಸಾಮರ್ಥ್ಯಗಳು ಹೆಚ್ಚಳಗೊಳ್ಳಲು ಕಾರಣವಾಗುತ್ತದೆ.

ದೇಹದ ಕಲ್ಮಶವನ್ನು ಹೊರಹಾಕಲು

ದೇಹದ ಕಲ್ಮಶವನ್ನು ಹೊರಹಾಕಲು

ಹೂಕೋಸಿನಲ್ಲಿ ಥಿಯೊಕ್ಯನೇಟ್ಸ್ ಎನ್ನುವ ಅಂಶವಿದೆ. ಇದು ವಿಷಕಾರಿ ಅಂಶಗಳನ್ನು ಹೊರಹಾಕಲು ಯಕೃತ್‌ಗೆ ನೆರವಾಗುವುದು. ವಿಷಕಾರಿ ಅಂಶಗಳನ್ನು ಹೊರಹಾಕುವ ಪ್ರಮುಖ ತರಕಾರಿ ಇದಾಗಿದೆ.

ಸರ್ವ ವಿಧದ ಕ್ಯಾನ್ಸರ್‌ಗೆ ರಾಮಬಾಣ

ಸರ್ವ ವಿಧದ ಕ್ಯಾನ್ಸರ್‌ಗೆ ರಾಮಬಾಣ

ಕರುಳಿನ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ಜನನಾಂಗದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಮೂತ್ರಕೋಶದ ಕ್ಯಾನ್ಸ‌ರ್ ನ್ನು ತಡೆಯುತ್ತದೆ ಎಂದು ಕೆಲವೊಂದು ಸಂಶೋಧನೆಗಳಿಂದ ದೃಢಪಟ್ಟಿದೆ.

ನಾರಿನಾಂಶಗಳ ಆಗರ

ನಾರಿನಾಂಶಗಳ ಆಗರ

ಹೂಕೋಸಿನಲ್ಲಿ ನಾರಿನಾಂಶವು ಇರುವುದರಿಂದ ಅದು ಜೀರ್ಣಕ್ರಿಯೆಗೆ ಪ್ರಮುಖವಾಗಿ ನೆರವಾಗುವುದು. ಇದರಿಂದ ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆ ಉತ್ತಮವಾಗುವುದು.

ಆಗಾಧ ಪ್ರಮಾಣದಲ್ಲಿ ಉರಿಯೂತ ಶಮನಕಾರಿ ಗುಣ

ಆಗಾಧ ಪ್ರಮಾಣದಲ್ಲಿ ಉರಿಯೂತ ಶಮನಕಾರಿ ಗುಣ

ಇದರಲ್ಲಿ ಉರಿಯೂತ ಶಮನಕಾರಿ ಗುಣಗಳಿವೆ. ನಿಯಮಿತವಾಗಿ ಇದರ ಸೇವನೆ ಮಾಡಿದರೆ ಅರ್ಥಟೀಸ್, ಕರುಳಿನ ಉರಿಯೂತ ರೋಗ ಮತ್ತು ಮಧುಮೇಹವನ್ನು ತಡೆಯಬಹುದಾಗಿದೆ.

ಹೃದಯದ ಆರೋಗ್ಯಕ್ಕೆ ...

ಹೃದಯದ ಆರೋಗ್ಯಕ್ಕೆ ...

ಹೂಕೋಸು ಹೃದಯಕ್ಕೆ ಸಂಬಂಧಿಸಿದ ರೋಗಗಳನ್ನು ತಡೆಯುವುದು. ಇದು ರಕ್ತದ ಕೋಶಗಳ ಉರಿಯೂತವನ್ನು ತಡೆದು ಇದಕ್ಕೆ ಸಂಬಂಧಿಸಿದ ರೋಗಗಳನ್ನು ತಡೆಯುವುದು. ನಿಮ್ಮ ದೈನಂದಿನ ಆಹಾರದಲ್ಲಿ ಹೂಕೋಸನ್ನು ಸೇರಿಸಿ ಇದರಿಂದ ಆಗುವಂತಹ ಲಾಭಗಳನ್ನು ಪಡೆಯಿರಿ.

English summary

Reasons To Eat Cauliflower Daily

Cauliflower is one of those vegetables which must be eaten regularly. Yes, just like carrot, onion, tomato, beet root, chilli and cabbage, you must try to eat cauliflower at least once a week. Firstly, it is tasty. Many dishes can be prepared with cauliflower. Also, it is anti-inflammatory and contains loads of nutrients and antioxidants too. Let us discuss about them now...
Story first published: Friday, July 15, 2016, 19:56 [IST]
X
Desktop Bottom Promotion