For Quick Alerts
ALLOW NOTIFICATIONS  
For Daily Alerts

ಹುಳಿ ಹುಳಿ ಹುಣಸೆಹಣ್ಣಿನ ಭಾತ್

By * ಕುಮಾರಿಕನ್ಯಾ
|
Tamarind
ಮೈಯಲ್ಲಿನ ಕೊಬ್ಬು ಕರಗಿಸುವ, ಹೃದಯವನ್ನು ಚಟುವಟಿಕೆಯನ್ನು ಹೆಚ್ಚಿಸುವ ಹುಣಸೆಹಣ್ಣು ಬಲೆ ಆರೋಗ್ಯಕರ ಆಹಾರ. ಹುಳಿಹುಳಿ ಸಾರು, ಗೊಜ್ಜು, ಚಟ್ನಿಪುಡಿ, ಸಾಸುಗಳಲ್ಲಿ ಹೆಚ್ಚಾಗಿ ಬಳಸಲಾಗುವ ಹುಣಸೆಹಣ್ಣನ್ನು ಅನ್ನದ ಜೊತೆಯೂ ಒಮ್ಮೆ ಬಳಸಿ. ಬಾಯಲ್ಲಿ ನೀರೂರಿಸುವ ಹುಣಸೆಹಣ್ಣಿನ ಭಾತ್ ರುಚಿಯ ಮೋಡಿಯನ್ನೊಮ್ಮೆ ಸವಿದು ನೋಡಿ.

ಬೇಕಾಗುವ ಪದಾರ್ಥಗಳು

ಬಾಸುಮತಿ ಅಕ್ಕಿ 2 ಕಪ್
ಹುಣಸೆಹಣ್ಣು 200 ಗ್ರಾಂ
ಅಚ್ಚ ಖಾರದಪುಡಿ 4 ಚಮಚ
ಒಣ ಮೆಣಸಿನಕಾಯಿ 6
ಬೆಲ್ಲ ನಿಂಬೆಹಣ್ಣು ಗಾತ್ರದಷ್ಟು
ಕಡಲೆಬೀಜ 3 ಚಮಚ
ಕರಿಬೇವು, ಸಾಸಿವೆ, ಉಪ್ಪು, ಎಣ್ಣೆ

ತಯಾರಿಸುವ ವಿಧಾನ

ಇದನ್ನು ತಯಾರಿಸುವಾಗ ಪೂರ್ತಿ ಬಾಸುಮತಿ ಅಕ್ಕಿ ಬೇಕಿಲ್ಲದಿದ್ದರೆ, ದಿನಬಳಸುವ ಸೋನಾ ಮಸೂರಿ ಅಕ್ಕಿ ತೆಗೆದುಕೊಂಡು ಸಣ್ಣ ಹಿಡಿಯಷ್ಟು ಬಾಸುಮತಿ ಅಕ್ಕಿಯನ್ನು ಅದಕ್ಕೆ ಬೆರೆಸಬಹುದು.

ಮೊದಲಿಗೆ ಅಕ್ಕಿಯನ್ನು ಸುಮಾರು ಅರ್ಧಗಂಟೆ ಕಾಲ ನೀರಿನಲ್ಲಿ ನೆನೆಯಿಡಿ. ಹುಣಸೆಹಣ್ಣಿನಲ್ಲಿನ ಕಸಕಡ್ಡಿಗಳನ್ನು ತೆಗೆದು ಸ್ವಚ್ಛ ಮಾಡಿ ಅದನ್ನೂ ನೀರಿನಲ್ಲಿ ನೆನೆಯಿಡಿ.

ಒಂದು ಬಾಣಲೆಗೆ ನಾಲ್ಕು ಚಮಚ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಚಟಪಟ ಅನ್ನಿಸಿ, ಅದಕ್ಕೆ ಒಣಮೆಣಸಿನಕಾಯಿ ಮತ್ತು ಕಡಲೆ ಬೀಜ ಹಾಕಿ ಚೆನ್ನಾಗಿ ತಾಳಿಸಿರಿ. ಒಗ್ಗರಣೆ ಹಾಕುವ ಕಾರ್ಯಕ್ಕೆ ಅಕ್ಕಿ ನೆನೆಸಿಟ್ಟು ಅರ್ಧ ಗಂಟೆ ನಂತರವೇ ಕೈಹಾಕಿದರೆ ಒಳಿತು. ಅಷ್ಟೊತ್ತಿಗೆ ಅಕ್ಕಿಯೂ ನೆಂದಿರುತ್ತದೆ ಮತ್ತು ಹುಣಸೆಹಣ್ಣಿನ ರಸವನ್ನೂ ತೆಗೆದಿಟ್ಟುಕೊಂಡಿರಬಹುದು.

ಒಗ್ಗರಣೆಗೆ ತುಂಡು ಬೆಲ್ಲ, ಅಚ್ಚ ಖಾರದಪುಡಿ, ಹುಣಸೆರಸ ಎಲ್ಲ ಹಾಕಿ ಕಾಲು ಲೋಟ ನೀರು ಹಾಕಿ ಕುದಿಸಿರಿ. ಕುದಿಬಂದ ನಂತರ ಅದಕ್ಕೆ ನೆನೆಯಿಟ್ಟ ಅಕ್ಕಿಯನ್ನು ಹಾಕಿ ಬೇಯಿಸಿ. ಇವೆಲ್ಲವನ್ನು ಕುಕ್ಕಿರಿಗೆ ಸುರಿದುಕೊಂಡು ನಾಲ್ಕೈದು ವಿಷಲ್ ಹೊಡೆಸಿದ ನಂತರ ಇಳಿಸಿದರೆ ಉತ್ತಮ. ಬೇಕಿದ್ದರೆ ಅಕ್ಕಿಯನ್ನು ಬೇಯಿಸುವಾಗಲೇ ಉಪ್ಪು ಹಾಕಬಹುದು, ಇಲ್ಲದಿದ್ದರೆ ನಂತರವೂ ಬೇಕಷ್ಟು ಉಪ್ಪು ಹಚ್ಚಿಕೊಂಡು ತಿನ್ನಬಹುದು.

Story first published: Tuesday, August 17, 2010, 11:22 [IST]
X
Desktop Bottom Promotion