For Quick Alerts
ALLOW NOTIFICATIONS  
For Daily Alerts

ಎರಡು ಬಗೆಯ ಜೋಳದ ಸೂಪ್ ರೆಸಿಪಿ

|

ಬೇಸಿಗೆಯಲ್ಲಿ ತಣ್ಣನೆ ಪಾನೀಯಗಳನ್ನು ಕುಡಿಯಬೇಕೆಂದು ಅನಿಸಿದರೆ ಈ ಮಳೆಗಾಲದಲ್ಲಿ ಬೆಚ್ಚಗಿನ ಪಾನೀಯಗಳನ್ನು ಕುಡಿಯಬೇಕೆಂದು ಬಯಸುತ್ತೇವೆ. ಅದರಲ್ಲೂ ರುಚಿಕರವಾದ ಸೂಪ್ ಸಿಕ್ಕಿದರಂತೂ ತುಂಬಾನೆ ಖುಷಿಯಾಗುತ್ತದೆ. ಸೂಪ್ ಗಳಲ್ಲೂ ಅನೇಕ ಬಗೆಯ ಸೂಪ್ ಗಳನ್ನು ತಯಾರಿಸಬಹುದು. ಇವತ್ತು ನಾವು ಜೋಳದಿಂದ 3 ಬಗೆಯಲ್ಲಿ ಸೂಪ್ ಮಾಡುವ ವಿಧಾನ ತಿಳಿಯೋಣ.

Sweet Corn Soup Recipe

ಜೋಳದ ಸೂಪ್ 1:

ಬೇಕಾಗುವ ಸಾಮಗ್ರಿಗಳು:

ಜೋಳ - 1 ಕಪ್
ಸಣ್ಣಗೆ ಕತ್ತರಿಸಿದ ಬೀನ್ಸ್ ಅರ್ಧ ಕಪ್
ಸಣ್ಣಗೆ ಕತ್ತರಿಸಿದ ಕ್ಯಾರೆಟ್ ಅರ್ಧ ಕಪ್
ಸಕ್ಕರೆ - ಮುಕ್ಕಾಲು ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಕಾಳುಮೆಣಸಿನ ಪುಡಿ - ಸ್ವಲ್ಪ
ಜೋಳ ಹಿಟ್ಟು - 2 ಚಮಚ
ಟೊಮೆಟೊ ಸಾಸ್ - 1 ಚಮಚ
ಹಾಲು 2 ಚಮಚ

ಮಾಡುವ ವಿಧಾನ:

1. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು, ಅರ್ಧ ಕಪ್ ಜೋಳ, ಕತ್ತರಿಸಿದ ಬೀನ್ಸ್ ಮತ್ತು ಕತ್ತರಿಸಿದ ಕ್ಯಾರೆಟ್ ಹಾಕಿ ಉಪ್ಪು, ಸ್ವಲ್ಪ ಸಕ್ಕರೆ ಹಾಕಿ ಬೇಯಿಸಬೇಕು.

2. ಉಳಿದ ಜೋಳವನ್ನು ಮಿಕ್ಸಿಯಲ್ಲಿ ಹಾಕಿ ಅರೆದು ಪೇಸ್ಟ್ ರೀತಿ ಮಾಡಬೇಕು. ನಂತರ ರುಬ್ಬಿದ ಮಿಶ್ರಣವನ್ನು ಬೆಂದ ತರಕಾರಿಯೊಡನೆ ಸೇರಿಸಬೇಕು.

3. ಜೋಳದ ಹಿಟ್ಟಿಗೆ ಸ್ವಲ್ಪ ತಣ್ಣನೆಯ ನೀರು ಸೇರಿಸಿ ಮಿಶ್ರ ಮಾಡಿ, ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಿ ತಳ ಹಿಡಿಯದಂತೆ ಸೌಟ್ ನಿಂದ ಆಡಿಸುತ್ತಾ ಇರಬೇಕು. ಬೇಕಿದ್ದರೆ ಎರಡು ಚಮಚ ಹಾಲನ್ನೂ ಸೇರಿಸಿ.

4. ನಂತರ ರುಚಿಗೆ ತಕ್ಕಂತೆ ಉಪ್ಪು ಮತ್ತು ಸಕ್ಕರೆಯನ್ನು ಸೇರಿಸಬೇಕು. ಸ್ವಲ್ಪ ಟೊಮೆಟೊ ಸಾಸ್ ಸೇರಿಸಿ ಮಿಶ್ರ ಮಾಡಿ 2-3 ನಿಮಿಷ ಕುದಿಸಿ ನಂತರ ಉರಿಯಿಂದ ತೆಗೆಯಬೇಕು. ಖಾರಕ್ಕೆ ತಕ್ಕಂತೆ ಕಾಳುಮೆಣಸಿನ ಪುಡಿ ಸೇರಿಸಿ ಮಿಶ್ರ ಮಾಡಿ, ಬಿಸಿ ಬಿಸಿಯಾಗಿ ಕುಡಿಯಬೇಕು. ಈ ಸೂಪ್ ಗೆ ಉಪ್ಪು, ಖಾರ, ಸಿಹಿ ಎಲ್ಲವೂ ಹದವಾಗಿದ್ದರೆ ಮಾತ್ರ ಚೆಂದ.

ಜೋಳದ ಸೂಪ್ 2

ಬೇಕಾಗುವ ಸಾಮಾಗ್ರಿಗಳು
ಜೋಳ ಒಂದು ಕಪ್
ಕ್ಯಾರೆಟ್ 1
ಟೊಮೆಟೊ 1
ಈರುಳ್ಳಿ 1
ಬೆಳ್ಳುಳ್ಳಿ 4 ಎಸಳು
ಸ್ವಲ್ಪ ಚಕ್ಕೆ ಮತ್ತು ಲವಂಗ
ಹಾಲು

ತಯಾರಿಸುವ ವಿಧಾನ:

1. ಜೋಳ, ಕ್ಯಾರಟ್,ಟೊಮೆಟೊ ಇವುಗಳನ್ನು ಚೆನ್ನಾಗಿ ತೊಳೆದು ಸ್ವಲ್ಪ ನೀರು ಹಾಕಿ ಬೇಯಿಸಬೇಕು.
2. ನಂತರ ಚೆಕ್ಕೆ ಲವಂಗ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಂದು ಚಮಚ ಬೆಣ್ಣೆ ಹಾಕಿ ಹುರಿದುಕೊಳ್ಳಬೇಕು.
3. ನಂತರ ಬೇಯಿಸಿದ ತರಕಾರಿಗಳನ್ನು, ಹುರಿದ ಮಸಾಲೆಯೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದಕ್ಕೆ ಐದು ದೊಡ್ಡ ಚಮಚ ಹಾಲು, ಮತ್ತು ಸೂಪ್ ಗೆ ತಕ್ಕ ನೀರು ಹಾಕಿ ಕುದಿಸಬೇಕು.
4. ಬಿಸಿ ಬಿಸಿಯಾದ ಸೂಪ್ ಗೆ ಒಂದು ಚಮಚ ಬೆಣ್ಣೆ, ಕಾಳು ಮೆಣಸಿನ ಪುಡಿ, ಉಪ್ಪನ್ನು ಸೇರಿಸಿದರೆ ಆರೋಗ್ಯಕರ ಜೋಳದ ಸೂಪ್ ರೆಡಿ.

English summary

Sweet Corn Soup Recipe | Variety Of Soup Recipe | ಜೋಳದ ಸೂಪ್ ರೆಸಿಪಿ | ಅನೇಕ ಬಗೆಯ ಸೂಪ್ ರೆಸಿಪಿ

In this rainy season we would like to taste hot soup. Soup is easy to prepare and you can also prepare in variety of taste. Here there are 2 soup recipe, in which we used sweetcorn as a main ingredients to prepare this tasty soups. .
Story first published: Thursday, June 21, 2012, 8:38 [IST]
X
Desktop Bottom Promotion