For Quick Alerts
ALLOW NOTIFICATIONS  
For Daily Alerts

ರುಚಿಯಾದ ನಿಂಬೆ ರಸಂ ಕುಡಿಯಲು ತಯಾರಾಗಿ

|
Lemon Rasam Recipe
ರಸಂ ಮಳೆಗಾಲಕ್ಕೆ ಹೇಳಿ ಮಾಡಿಸಿದ್ದು. ಚಳಿಯಲ್ಲಿ ಅನ್ನದೊಂದಿಗೆ ಬಿಸಿ ರಸಂ ಕುಡಿಯುತ್ತಿದ್ದರೆ ಬಾಯಿ ಚಪ್ಪರಿಸುವಂತಾಗುತ್ತೆ. ರಸಂನಲ್ಲಿ ವಿಶೇಷವಾದ ಮತ್ತು ಗರ್ಭಿಣಿಯರಿಗೆ ಸೂಕ್ತವಾದ ನಿಂಬೆ ರಸಂ ಈ ದಿನದ ಸ್ಪೆಷಲ್. ನಿಂಬೆ ರಸಂ ಹೇಗೆ ಮಾಡುವುದು ಎಂದು ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು:
* 1 ಕಪ್ ತೊಗರಿಬೇಳೆ (ಸ್ವಲ್ಪ ಅರಿಶಿನ ಮತ್ತು ಒಂದು ಚಮಚ ಎಣ್ಣೆಹಾಕಿ ಚೆನ್ನಾಗಿ ಬೇಯಿಸಬೇಕು)
* 1 ಚಮಚ ಜೀರಿಗೆ ಮತ್ತು ಮೆಣಸಿನ ಪುಡಿ
* 4-5 ಕರಿಬೇವಿನ ಎಲೆ
* 2 ಹಸಿ ಮೆಣಸಿನ ಕಾಯಿ
* ಕೊತ್ತಂಬರಿ
* 1 ನಿಂಬೆಹಣ್ಣು (1/2 ಕಪ್ ನಿಂಬೆರಸ)
* 1/4 ಚಮಚ ಅರಿಶಿನ
* 2 1/2 ಕಪ್ ನೀರು
* ಸ್ವಲ್ಪ ಇಂಗು
* 1/4 ಕಪ್ ಸಾಸಿವೆ
* ಎಣ್ಣೆ, ಉಪ್ಪು, 1/2 ಕಪ್ ಸಕ್ಕರೆ

ನಿಂಬೆ ರಸಂ ತಯಾರಿಸುವ ವಿಧಾನ: ಬೇಯಿಸಿದ ಬೇಳೆಯನ್ನು ಚೆನ್ನಾಗಿ ಮಸೆದು ಒಂದೆಡೆ ಇಟ್ಟುಕೊಳ್ಳಬೇಕು. ಒಂದು ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಕರಿಬೇವು, ಇಂಗು, ಜೀರಿಗೆ ಮೆಣಸಿನ ಪುಡಿ, ಹಸಿಮೆಣಸಿನ ಕಾಯಿ ಮತ್ತು ಅರಿಶಿನ ಬೆರೆಸಿ ಚೆನ್ನಾಗಿ ಹುರಿದುಕೊಳ್ಳಬೇಕು. ಈಗ ಎರಡು ಕಪ್ ನೀರು ಬೆರೆಸಿ ಕುದಿಸಬೇಕು. ಇದಕ್ಕೆ ಮಸೆದಿದ್ದ ಬೇಳೆ ಬೆರೆಸಿ ಸ್ವಲ್ಪ ಸಕ್ಕರೆ, ರುಚಿಗೆ ತಕ್ಕಂತೆ ಉಪ್ಪು ಬೆರೆಸಿ ತಿರುಗಿಸಬೇಕು.

ಕೆಲವು ನಿಮಿಷದ ನಂತರ ಒಲೆಯನ್ನು ಆರಿಸಿ ಅದಕ್ಕೆ 1/2 ಕಪ್ ನಿಂಬೆರಸ ಬೆರೆಸಿ ಕದಡಿಸಬೇಕು. ಕೊನೆಗೆ ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ ಅದರ ಮೇಲೆ ಹಾಕಬೇಕು. ಈಗ ನಿಂಬೆ ರಸಂ ಸವಿಯೋದಕ್ಕೆ ರೆಡಿಯಾಗಿದೆ.

English summary

Lemon Rasam Recipe | Lemon Rasam good for Pregnant Women | ನಿಂಬೆ ರಸಂ ರೆಸಿಪಿ | ನಿಂಬೆ ರಸಂ ಗರ್ಭಿಣಿಯರಿಗೆ ಆರೋಗ್ಯಕರ

The hot rasam rice is very energizing, healthy, non spicy and very yummy to eat. Generally, pregnant women are advised to eat nutritious food so making lemon rasam with adding fresh spices will help women relax before and after the delivery phase. Take a look to know how to go about with the lemon rasam.
Story first published: Monday, September 12, 2011, 16:00 [IST]
X
Desktop Bottom Promotion