For Quick Alerts
ALLOW NOTIFICATIONS  
For Daily Alerts

ಸೇಬು ಹಣ್ಣಿನ ಸಾರು ಮಾಡೋಣ ಬನ್ನಿ

By Prasad
|
Apple rasam recipe
ಸೇಬು ಹಣ್ಣಿನ ಜ್ಯೂಸ್ ಕುಡಿದಿರುವ ನಿಮಗೆ ಆಪಲ್ ಸಾರಿನ ರುಚಿ ಗೊತ್ತಿರಲಿಕ್ಕಿಲ್ಲ. ಒಮ್ಮೆ ಮಾಡಿ ನೋಡಿ; ಆಮೇಲೆ ಜ್ಯೂಸಿಗಿಂತ ಸಾರೇ ಒಳ್ಳೇದು ಅನಿಸದಿದ್ದರೆ ಕೇಳಿ. ಎ ಫಾರ್ ಆಪರ್ ಅಂತ ಮಕ್ಕಳಿಗೆ ಪಾಠ ಹೇಳಿಕೊಡುವ ಅಮ್ಮಂದಿರಿಗೆ ಸೇಬು ಹಣ್ಣಿನ ಸಾರು ಮಾಡುವ ವಿಧಾನವೂ ತಿಳಿದಿರಲಿ.

* ಸುರೇಖಾ, ಬೆಂಗಳೂರು

ಬೇಕಾದ ಸಾಮಗ್ರಿಗಳು : ಸೇಬು ಹಣ್ಣು 2 | ಹಸಿ ಮೆಣಸಿನಕಾಯಿ 4ರಿಂದ 6 | ಉಪ್ಪು | ಬೆಲ್ಲ(ಬೇಕಿದ್ದರೆ)

ಒಗ್ಗರಣೆಗೆ : ಸಾಸಿವೆ, ಅರಿಷಿಣ, ಕರಿಬೇವು, ಇಂಗು, ಜೀರಿಗೆ, ಬೆಳ್ಳುಳ್ಳಿ ಪುಡಿ (ನಿಮ್ಮಿಷ್ಟ)

ತಯಾರಿಸುವ ವಿಧಾನ

ಸೇಬು ಹಣ್ಣನ್ನು ಚೆನ್ನಾಗಿ ತೊಳೆದು ಎಂಟು ಹೋಳಗಳನ್ನು ಮಾಡಿ, ಬೀಜ ತೆಗೆದು ಸ್ವಚ್ಛ ಮಾಡಿ ಮುಳುಗುವಷ್ಟು ನೀರಿನಲ್ಲಿ ಬೇಯಿಸಿರಿ. ಅರೆ ಬೆಂದನಂತರ ಹೊರತೆಗೆದು ಸಿಪ್ಪೆತೆಗೆದು ಒಂದು ಲೀಟರ್ ನೀರಿನಲ್ಲಿ ಹಾಕಿ ಮತ್ತೆ ಬೇಯಿಸಿರಿ.

ಕುದಿ ಬರುತ್ತಿದ್ದಂತೆ ಉಪ್ಪು, ಹಣ್ಣು ಹುಳಿಯಿದ್ದರೆ ಸಿಹಿಗೆ ತಕ್ಕಷ್ಟು ಬೆಲ್ಲ ಹಾಕಿ ಒಂದು ಬಾರಿ ಸೌಟಿನಿಂದ ಕದಡಿ.

ಸ್ಟೌವಿನ ಇನ್ನೊಂದು ಬದಿಯಲ್ಲಿ ಒಂದು ಬಾಣಲೆಯಲ್ಲಿ ಎರಡು ಚಮಚದಷ್ಟು ಎಣ್ಣೆ ಹಾಕಿ ಬಿಸಿ ಬಂದ ನಂತರ ಸಾಸಿವೆ ಹಾಕಿ ಚಟಪಟ ಅನಿಸಿ ಅರಿಷಿಣ, ಕರಿಬೇವು, ಹಸಿ ಮೆಣಸಿನಕಾಯಿ, ಇಂಗು, ಜೀರಿಗೆ ಹಾಕಿ ಸ್ವಲ್ಪ ತಾಳಿಸಿದ ನಂತರ ಕುದಿಯುತ್ತಿರುವ ಸೇಬಿನ ಸಾರಿಗೆ ಹಾಕಿ ಮತ್ತು ಹತ್ತು ನಿಮಿಷ ಕುದಿಯಲು ಬಿಡಿ.

ಸೇಬು ಹಣ್ಣಿ ಸಾರನ್ನು ಬಿಸಿಬಿಸಿ ಅನ್ನದೊಡನೆ ಕಲಿಸಿ ತಿನ್ನಬಹುದು. ಇದನ್ನು ಸೂಪಿನಂತೆ ಕುಡಿಯಲೂಬಹುದು. ಒಮ್ಮೆ ಟ್ರೈಮಾಡಿ.

Story first published: Saturday, May 29, 2010, 12:37 [IST]
X
Desktop Bottom Promotion