For Quick Alerts
ALLOW NOTIFICATIONS  
For Daily Alerts

ಹುಚ್ಚೆಳ್ಳು ಅಥವಾ ಗುರೆಳ್ಳು ಅಂದ್ರೇನು, ಎಲ್ಲಿಸಿಕ್ಕತ್ತೆ?

By Super
|
Huchchellu or Gurellu
ಉತ್ತರ ಕರ್ನಾಟಕದ ಅಡುಗೆಗಳಲ್ಲಿ ಹುಚ್ಚೆಳ್ಳು ಪುಡಿ ಬಳಸುವುದು ವಾಡಿಕೆ. ಈ ಎಳ್ಳಿನಿಂದ ಚಟ್ನಿಪುಡಿ ಮಾಡುವುದೂ ಉಂಟು. ನಮ್ಮ ಓದುಗರೇನಕರಿಗೆ ಈ ಎಳ್ಳಿನ ವಿಚಾರ ಹೊಸದು. ಹೆಸರುಬೇಳೆ ಮತ್ತು ಮೆಂತೆ ಪಲ್ಯ ಲೇಖನದಲ್ಲಿ ಅನೇಕರು ಹುಚ್ಚೆಳ್ಳು ಅಂದ್ರೇನು ಅಂತ ವಿಚಾರಿಸಿದ್ದರು. ವಿವರಣೆ ಕೇಳಿದ ಅನೇಕರ ಪ್ರಯೋಜನಕ್ಕಾಗಿ ಎಳ್ಳಿನ ಬಗೆಗೆ ಕಿರು ಮಾಹಿತಿ ಇಲ್ಲಿದೆ- ಸಂಪಾದಕ.

* ಸುನಂದ ಅರುಣ್ ಕುಮಾರ್ ಗೋಸಿ

ಹುಚ್ಚೆಳ್ಳು ಸಾಮಾನ್ಯವಾಗಿ ಉತ್ತರ ಕರ್ನಾಟಕದಲ್ಲಿ ಬೆಳೆಯುವ ಆಹಾರ. ನೋಡುವುದಕ್ಕೆ ಕಪ್ಪಗೆ (ಎಳ್ಳು) ತರಹ ಇರುತ್ತದೆ. ಹುಚ್ಚೆಳ್ಳನ್ನು, ಉತ್ತರ ಕರ್ನಾಟಕದಲ್ಲಿ (ಗುರೆಳ್ಳು) ಅಂತ ಕರೆಯುತ್ತಾರೆ (*Niger seed*). ಇದನ್ನು ಹಗುರವಾಗಿ ಹುರಿದು ಪುಡಿ ಮಾಡಿ ಇಟ್ಟುಕೊಳ್ಳಬೇಕು. ಬದನೆಕಾಯಿ ಎಣ್ಣೆಗಾಯ್ ಪಲ್ಯಕ್ಕೆ ಇದನ್ನು ಹಾಕಿರುತ್ತಾರೆ. ನಮ್ಮ ರಾಜ್ಯದ ದಿನಸಿ ಅಂಗಡಿಗಳಲ್ಲಿ ಸಿಗುತ್ತದೆ, ವಿಚಾರಿಸಿರಿ.

"ಪ್ರಾಯ ಪ್ರಾಯ ಪ್ರಾಯ" ಕನ್ನಡ ಚಿತ್ರದಲ್ಲಿ ಹುಚ್ಚೆಳ್ಳಿನ ಉಲ್ಲೇಖವಿದೆ. ತೈಯಾ ಥಕ್ಕ ತೈಯ ತೈಯಾ ಥಕ್ಕ, ಕಾಲೇಜಿಗೆ ಬಂದನಯ್ಯ ಹಳ್ಳಿಮುಕ್ಕ... ಹಾಡು ನೆನಪಿದ್ದರೆ ಒಮ್ಮೆ ಗುನುಗಿಕೊಳ್ಳಿ. "ರಾಗಿ ರೊಟ್ಟಿ ಹುಚ್ಚೆಳ್ ಚಟ್ನಿ ತಂದಿವ್ನಿ ನನ್ ಮಗನೆ, ಮೂಗಿನ ಮಟ್ಟ ಜಡಿದು ಮಲಗೋ ನನ್ ಮಗನೇ.."

ಗುರೆಳ್ಳಿನಿಂದ ತಯಾರಿಸಿದ ಚಟ್ನಿಪುಡಿ ಕಟಕು ಜೋಳದ ರೊಟ್ಟಿ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಗುರೆಳ್ಳು ಚಟ್ನಿಪುಡಿಗೆ ಸ್ವಲ್ಪ ಹಸಿಎಣ್ಣೆ ಅಥವಾ ಮೊಸರು ಬೆರೆಸಿ ಜೋಳ ಅಥವಾ ರಾಗಿ ರೊಟ್ಟಿಯೊಡನೆ ತಿನ್ನಬಹುದು. ಹುಚ್ಚೆಳ್ಳು ಅಥವಾ ಗುರೆಳ್ಳು ಚಟ್ನಿಪುಡಿ ತಯಾರಿಸಿ ಒಮ್ಮೆ ರುಚಿ ನೋಡಿ.

ಹುಚ್ಚೆಳ್ಳುಪುಡಿ ಬಗೆಗೆ ಹೆಚ್ಚಿನ ಮಾಹಿತಿಗೆ ಈ ಲಿಂಕ್ ನೋಡಿ.

X
Desktop Bottom Promotion