For Quick Alerts
ALLOW NOTIFICATIONS  
For Daily Alerts

ಗುಟ್ಟೊಂದು ಹೇಳುವೆ.. ಕಿವಿಕೊಟ್ಟು ಆಲಿಸಿ..

By Staff
|


ಈ ಬಾರಿ ನೀವು ಪಲಾವ್ ಮಾಡಬೇಕಾದರೆ ಹೀಗೆ ಮಾಡಿ. ಪಲಾವ್‌ಗೆ ಉಪಯೋಗಿಸುವ ಎಣ್ಣೆಯನ್ನು ಹಾಗೇ ಬಳಸದೆ ಅದನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಒಂದು ಚಮಚ ಸಕ್ಕರೆಯನ್ನು ಬೆರೆಸಿ. ಹೀಗೆ ಮಾಡುವುದರಿಂದ, ಪಲಾವ್‌ಗೆ ಒಳ್ಳೆಯ ಬಣ್ಣ ಹಾಗೂ ರುಚಿ ದಕ್ಕುತ್ತದೆ.

****

ಉಣ್ಣೆ ವಸ್ತ್ರಗಳ ಮೇಲೆ ಎಣ್ಣೆ ಕಲೆಯಾಗಿದ್ದರೆ ಸ್ವಲ್ಪ ಮೊಸರನ್ನು ಆ ಜಾಗಕ್ಕೆ ಹಾಕಿ, ಒಂದು ಕಾಲು ಗಂಟೆ ಬಿಟ್ಟು ಒಗೆದರೆ ಕಲೆಗಳು ಮಾಯವಾಗುತ್ತವೆ.

****

ಜೇನು ತುಪ್ಪವನ್ನು ಖರೀದಿಸುವಾಗ ಅದರ ಪರಿಶುದ್ಧತೆಯನ್ನು ಹೀಗೆ ಪರೀಕ್ಷಿಸಿ :

ಒಂದು ಗ್ಲಾಸಿನಲ್ಲಿ ನೀರು ತೆಗೆದುಕೊಂಡು ಅದರಲಿ ಎರಡು ಹನಿ ಜೇನನ್ನು ಹಾಕಿ. ಆ ತಕ್ಷಣ ನೀರಿನಲ್ಲಿ ಬೆರೆತು ಅದರ ಬಣ್ಣ ಬದಲಾದರೆ ಅದು ಪರಿಶುದ್ಧವಾದ ಜೇನುತುಪ್ಪವಲ್ಲ ಎಂದರ್ಥ. ಆ ಹನಿ ಗ್ಲಾಸಿನ ತಳಭಾಗಕ್ಕೆ ಹೋಗಿ ಕುಳಿತರೆ ಅದು ಶುದ್ಧವಾದ ಜೇನು ತುಪ್ಪವೆಂದು ತಿಳಿಯಬೇಕು.

****

ಕನ್ನಡಿ ಮೇಲಿನ ಪೈಂಟ್ ಕಲೆಗಳು ಹೋಗಬೇಕೆಂದರೆ ಬಿಸಿ ಮಾಡಿದ ವಿನೆಗರ್‌ನಲ್ಲಿ ಅದ್ದಿದ ಹತ್ತಿಯಲ್ಲಿ ಕನ್ನಡಿಯನ್ನು ಒರೆಸಿ. ಕನ್ನಡಿ ಫಳಫಳಾಂತ ಹೊಳೆಯುತ್ತದೆ.

*****

ಫ್ರಿಜ್‌ನಿಂದ ಆಹಾರ ಪದಾರ್ಥಗಳ ವಾಸನೆ ಬರುತ್ತಿದೆಯೇ? ಹೀಗೆ ಮಾಡಿ ನೋಡಿ! ಒಂದು ಸಣ್ಣ ಬಟ್ಟಲಿನಲ್ಲಿ ಒಂದು ಚಮಚ ಅಡುಗೆ ಸೋಡಾ ಹಾಕಿ ಫ್ರಿಜ್‌ನಲ್ಲಿಟ್ಟು ನೋಡಿ.

(ದಟ್ಸ್‌ಕನ್ನಡ ಪಾಕಶಾಲೆ)

(ಇಂಥ ಉಪಯುಕ್ತ ಸಲಹೆಗಳನ್ನು ದಟ್ಸ್ ಕನ್ನಡ ಸ್ವಾಗತಿಸುತ್ತದೆ. ಕಳುಹಿಸಬೇಕಾದ ವಿಳಾಸ : [email protected] )

Story first published: Wednesday, December 5, 2007, 15:38 [IST]
X
Desktop Bottom Promotion