For Quick Alerts
ALLOW NOTIFICATIONS  
For Daily Alerts

"ಸುನಂದಿನಿ"- ಸ್ಪೆಷಲ್ ಎಳನೀರಿನ ಶರಬತ್ತು

By Soma Raj Pillai
|

"ಸುನಂದಿನಿ" ಶರಬತ್ತು ಟೇಸ್ಟ್ ಮಾಡಿದ್ದೀರಾ? ತಾಜಾ ಎಳನೀರಿಗೆ ಕೆಲವೊಂದು ಕೆಲವೊಂದು ಹರ್ಬ್ಸ್ ಹಾಕಿ ತಯಾರಿಸುವ ಈ ಪಾನೀಯವನ್ನು ಬಾಯಾರಿಕೆಯಾದಾಗಕುಡಿದರೆ ಅಮೃತದ ರುಚಿ ನಮಗೆ ಗೊತ್ತಿಲ್ಲದಿದ್ದರೂ, ಅಮೃತ ಅಂದರೆ ಬಹುಶಃ ಇಷ್ಟು ರುಚಿಯಾಗಿರಬಹುದು ಅನ್ನುವಷ್ಟು ರುಚಿಕರವಾಗಿದೆ.

ಯಾವ ತಂಪು ಪಾನೀಯಗಳೂ ಈ ಪಾನೀಯದ ರುಚಿಗೆ ಸರಿಸಾಟಿಯಲ್ಲ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಾಗ್ರಿಗಳು
ಎಳನೀರು 2
ಕೊತ್ತಂಬರಿ ಸೊಪ್ಪು 1 ಚಮಚ
ಪುದೀನಾ ಎಲೆ 2 ಚಮಚ
ನಿಂಬೆ ಗಿಡದ ಎಲೆ 1-2(ಕತ್ತರಿಸಿದ್ದು)
ಹಸಿ ಮೆಣಸಿನಕಾಯಿ 2
ನಿಂಬೆರಸ 2 ಚಮಚ
ಜೀರಿಗೆ 1 ಚಮಚ
ಕೊತ್ತಂಬರಿ ಬೀಜ ಅರ್ಧ ಚಮಚ
ಕರಿ ಮೆಣಸು1/4 ಚಮಚ
ಚಿಟಿಕೆಯಷ್ಟು ಇಂಗು
ಬೆಲ್ಲದ ತುರಿ(ರುಚಿಗೆ ತಕ್ಕ)
ಕಲ್ಲುಪ್ಪು(ರುಚಿಗೆ ತಕ್ಕ)

ತಯಾರಿಸುವ ವಿಧಾನ:

* ಕರಿ ಮೆಣಸು , ಕೊತ್ತಂಬರಿ ಬೀಜ, ಇಂಗು ಇವುಗಳನ್ನು ಹಾಕಿ ರೋಸ್ಟ್ ಮಾಡಿ, ಪುಡಿ ಮಾಡಿ.

* ನಂತರ ಎಳನೀರು ಮತ್ತು ನಿಂಬೆ ರಸ ಬಿಟ್ಟು ಉಳಿದ ಸಾಮಾಗ್ರಿಗಳನ್ನು ಹಾಕಿ ಪೇಸ್ಟ್ ಮಾಡಿ.

* ಈಗ ಎಳನೀರನ್ನು ಪಾತ್ರೆಗೆ ಹಾಕಿ, ಅದಕ್ಕೆ ಮಸಾಲೆ ಪುಡಿ ಮತ್ತು ರುಬ್ಬಿದ ಪೇಸ್ಟ್ ಹಾಕಿ ನಿಂಬೆ ಹಣ್ಣಿನ ರಸ ಹಿಂಡಿ ಮಿಕ್ಸ್ ಮಾಡಿ, ಮಣ್ಣಿನ ಪಾತ್ರೆಯಲ್ಲಿ 2-3 ಗಂಟೆಗಳ ಕಾಲ ಇಟ್ಟರೆ ಕುಡಿಯಲು ಆಹ್ಲಾದಕರ "ಸುನಂದಿನಿ" ರೆಡಿ.

English summary

"SUNANDINI"- Tender Coconut Water 'SHERBAT'

"Sunandini" is prepared with tender coconut water, infused with herbs and spices; is a thirst quenching refreshing drink, enriched with natural goodness. In a sun beam afternoon, freshly prepared "Sunandini" is a 'humble choice' over artificial and aerated drinks.
X
Desktop Bottom Promotion