For Quick Alerts
ALLOW NOTIFICATIONS  
For Daily Alerts

ಹಾಟ್ ಅಂಡ್ ಸೋರ್ ಪ್ಯೂರ್ ವೆಜ್ ಸೂಪ್

|

ಸೂಪ್ ತಯಾರಿಸುವುದರಲ್ಲಿ ಚೀನಾದವರು ಎತ್ತಿದ ಕೈ. ಚೈನೀಸ್ ರೆಸ್ಟೋರೆಂಟ್ ಗಳಿಗೆ ಹೋದರೆ ಅಲ್ಲಿಯ ಸೂಪ್ ನ ರುಚಿ ನಮ್ಮನ್ನು ಆ ರೆಸ್ಟೋರೆಂಟ್ ಗೆ ಆಗಾಗ ಭೇಟಿ ನೀಡುವಂತೆ ಮಾಡುತ್ತದೆ. ಅವರು ತಯಾರಿಸುವ ಅನೇಕ ರುಚಿಕರವಾದ ಸೂಪ್ ಗಳಲ್ಲಿ ಒಂದು ಹಾಟ್ ಅಂಡ್ ಸೋರ್ ಸೂಪ್. ನೋಡಲು ಜೇನಿನ ರೀತಿ ಕಾಣುವ ಈ ಸೂಪ್ ಖಾರವಾಗಿದ್ದು ಸವಿಯಲು ತುಂಬಾ ರುಚಿಯಾಗಿರುತ್ತದೆ. ಈ ಸೂಪ್ ನೆಗಡಿ ತಡೆಗಟ್ಟಲು ಮತ್ತು ಹಸಿವನ್ನು ನಿಯಂತ್ರಣದಲ್ಲಿಡುವಲ್ಲಿ ತುಂಬಾ ಸಹಕಾರಿಯಾಗಿದೆ. ಈ ರುಚಿಕರವಾದ ಸೂಪ್ ಅನ್ನು ನೀವು ಕೂಡ ತಯಾರಿಸಬಹುದಾಗಿದ್ದು ತಯಾರಿಸುವ ವಿಧಾನ ನೋಡಿ ಇಲ್ಲಿದೆ.

Hot And Sour Soup Recipe

ಬೇಕಾಗುವ ಸಾಮಾಗ್ರಿಗಳು:

* 2 ಚಮಚ ಹಸಿಮೆಣಸಿನ ಕಾಯಿ ಸಾಸ್
* ಒಂದೂವರೆ ಚಮಚ ಜೋಳದ ಹಿಟ್ಟು
* ಒಂದೂವರೆ ಚಮಚ ಸೋಯಾ ಸಾಸ್
* 2 ಚಮಚ ವಿನಿಗರ್
* 2 ಚಮಚದಷ್ಟು ಕತ್ತರಿಸಿದ ಕ್ಯಾಪ್ಸಿಕಂ (ದುಂಡು ಮೆಣಸು)
* ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ 2 ಚಮಚ
* 2 ಚಮಚ ಟೊಮೆಟೊ ಸಾಸ್
* 1/4 ಕಪ್ ಕತ್ತರಿಸಿದ ಎಲೆಕೋಸು (ಕ್ಯಾಬೇಜ್)
* 1/4 ಕಪ್ ಪನ್ನೀರ್ (ಕ್ಯೂಬ್ ರೀತಿ ಕತ್ತರಿಸಿ)
* 1 ಚಮಚ ಕರಿಮೆಣಸಿನ ಪುಡಿ
* ಒಂದೂವರೆ ಚಮಚ ತುರಿದ ಶುಂಠಿ
* ಅರ್ಧ ಚಮಚ ಸಕ್ಕರೆ
* 4 ಕಪ್ ನೀರು
* ಸ್ವಲ್ಪ ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ

1. ನಾಲ್ಕು ಕಪ್ ನೀರು, ಹಸಿಮೆಣಸಿನ ಕಾಯಿ ಸಾಸ್, ಸೋಯಾ ಸಾಸ್, ಸಕ್ಕರೆ, ಉಪ್ಪು, ಶುಂಠಿ, ಕರಿಮೆಣಸಿನ ಪುಡಿ ಇವುಗಳನ್ನು ಮಿಶ್ರ ಮಾಡಿ ಚೆನ್ನಾಗಿ ಕುದಿಸಬೇಕು.

2. ನಂತರ ಕತ್ತರಿಸಿದ ತರಕಾರಿಗಳನ್ನು ಸೂಪ್ ಗೆ ಸೇರಿಸಬೇಕು (ಪನ್ನಿರ್ ಈಗ ಹಾಕಬೇಡಿ).

3. ಸಾಧಾರಣ ಉರಿಯಲ್ಲಿ 2 ನಿಮಿಷ ಬಿಸಿಮಾಡಿ, ಈಗ ಜೋಳದ ಹಿಟ್ಟನ್ನು ಅರ್ಧ ಕಪ್ ನೀರಿನಲ್ಲಿ ಕಲೆಸಿ ಅದನ್ನು ಸೂಪ್ ಜೊತೆ ಮಿಶ್ರ ಮಾಡಿ. ಜೋಳದ ಹಿಟ್ಟು ಸೂಪ್ ಗೆ ಸೇರಿಸುವಾಗ ಸೂಪ್ ಅನ್ನು ಸೌಟ್ ನಿಂದ ತಿರುಗಿಸುತ್ತಾ ಇರಬೇಕು. ನಂತರ ಪುನಃ 2 ನಿಮಿಷಗಳ ಬಿಸಿ ಮಾಡಿ.

4. ಈಗ ಕತ್ತರಿಸದ ಪನ್ನೀರ್ ಮತ್ತು ವಿನಿಗರ್ ಹಾಕಿ ಉರಿಯಿಂದ ತೆಗೆಯಬೇಕು.

5. ಬಿಸಿಯಾದ ಸೂಪ್ ಗೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಮನೆಯವರಿಗೆ ಸವಿಯಲು ಕೊಡಿ. ಈ ಸೂಪ್ ನ ರುಚಿಗೆ ಅವರು ನಿಮ್ಮ ಕೈಚಳಕವನ್ನು ಕೊಂಡಾಡುವುದು ದಿಟ.

ಸಲಹೆ:

* ಈ ಸೂಪ್ ಮಾಡಿದ ಕೂಡಲೇ ಸವಿಯಲು ಕೊಡಿ. ತಾಜಾ ಸೂಪ್ ಕುಡಿಯಲು ತುಂಬಾ ರುಚಿಯಾಗಿರುತ್ತದೆ.

* ಈ ಸೂಪ್ ತಯಾರಿಸಿ ಇಟ್ಟುಕೊಳ್ಳಬಹುದು, ಆದರೆ ತರಕಾರಿ ಮತ್ತು ಪನ್ನೀರ್ ಅನ್ನು ಸರ್ವ್ ಮಾಡುವ ಮೊದಲು ಸೇರಿಸಿ ಬಿಸಿ ಮಾಡಿ ಕೊಡಿ.

* ಈ ಸೂಪ್ ಗೆ ಬೇಬಿ ಕೋರ್ನ್, ಬಟಾಣಿ ಬೇಕಾದರೆ ಹಾಕಿ ತಯಾರಿಸಬಹುದು.

English summary

Hot And Sour Soup Recipe | Variety Of Soup Recipe | ಹಾಟ್ ಅಂಡ್ ಸೋರ್ ಸೂಪ್ ರೆಸಿಪಿ | ಅನೇಕ ಬಗೆಯ ಸೂಪ್ ರೆಸಿಪಿ

Hot and Sour soup you can made of simple ingredients, this soup does not take a lot of your time, and is great for people suffering from cold.
X
Desktop Bottom Promotion