For Quick Alerts
ALLOW NOTIFICATIONS  
For Daily Alerts

ಸೇಬು ಸೂಪ್ ಕುಡಿಯಿರಿ, ಸೇಬಿನಂತಾಗಿರಿ

By Super
|
Apple
ಉತ್ತಮ ಆರೋಗ್ಯಕ್ಕೆ ಹಣ್ಣು ಹಂಪಲುಗಳು ಮತ್ತು ಹಸಿ ತರಕಾರಿಗಳನ್ನು ಸೇವಿಸಬೇಕು ಎಂದು ವೈದ್ಯರ ಸಲಹೆ ಸೂಚನೆಗಳನ್ನು ನೀಡುತ್ತಾರೆ. ತಾಜಾ ಹಣ್ಣುಹಂಪಲುಗಳನ್ನು ತಿನ್ನುವುದರಿಂದ ದೇಹದ ಆರೋಗ್ಯ ಆಹ್ಲಾದಕರವಾಗಿತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿ ಹೊಂದಿರುವ ಹಣ್ಣುಗಳು ಮನುಷ್ಯನ ದೇಹದೊಳಗೆ ರೋಗ ಬರದಂತೆ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಅದರಲ್ಲಿ ಮುಖ್ಯವಾಗಿ ಹಣ್ಣುಗಳ ಮಹಾರಾಣಿ ಎಂದೇ ಖ್ಯಾತಿಗೊಂಡಿರುವ ಸೇಬು ಹಣ್ಣು ಮನುಷ್ಯನ ಆರೋಗ್ಯಕ್ಕೆ ದಿವ್ಯೌಷಧ. ನಿತ್ಯ ಒಂದು ಸೇಬು ಹಣ್ಣು ತಿನ್ನಿ, ವೈದ್ಯರು ಅಥವಾ ಆಸ್ಪತ್ರೆಯಿಂದ ದೂರವಿರಿ('An Apple A Day Keeps The Doctor Away') ಎಂಬ ನಾಣ್ನುಡಿಯೇ ಇದೆ. ಇಂದಿನ ಮಾರುಕಟ್ಟೆಯವಲ್ಲಿ ಸೇಬಿನ ಬೆಲೆ ಗಗನ ಕಂಡಿದ್ದರೂ ಅದನ್ನು ಉಪಯೋಗಿಸುವವರ ಸಂಖ್ಯೆ ಕಡಿಮೆಯೇನಿಲ್ಲ. ಕೆಜಿಗೆ 150 ಆದರೂ ಕೂಡಾ ಉತ್ತಮ ಸೇಬಿಗೆ ಜನ ಮುಗಿಬಿದ್ದು ಕೊಳ್ಳುತ್ತಾರೆ. ಉತ್ತಮ ಆರೋಗ್ಯಕ್ಕೆ ರಾಮಬಾಣವಾಗಿರುವ ಸೇಬಿನ ಸೂಪ್ ಕೂಡ ಕೂಡಾ ಅಷ್ಟೇ ಜನಜನಿತವಾಗಿದೆ.

ಸೇಬಿನ ಸೂಪ್ ಗೆ ಬೇಕಾದ ಪದಾರ್ಥಗಳು

* 16 ಸೇಬಿನ ಹೋಳುಗಳು
* 5 ಕಪ್ ನೀರು
* ಅರ್ಧ ಲಿಂಬೆ ಹಣ್ಣಿನ ಸಿಪ್ಪೆ
* 1 ಫೀಸ್ ಲವಂಗಚಕ್ಕೆ
* ಸ್ವಲ್ಪ ಮ್ಯಾಪಲ್ ರಸ
* ಒಂದು ಚಮಚ ಅರೋರೂಟ್
* 1 ಚಮಚ ಲಿಂಬೆ ಹಣ್ಣಿನ ರಸ
* ಅರ್ಧ ಕಪ್ ದ್ರಾಕ್ಷಿರಸ
* ಅರ್ಧ ಕಪ್ ಚಮಚ ಹುಳಿ

ಮಾಡುವ ವಿಧಾನ

* ಬಾಣಲೆಯಲ್ಲಿ ತುಂಡರಿಸಿದ ಸೇಬಿನ ಹೋಳುಗಳು, ನಿಂಬೆ ಸಿಪ್ಪೆ, ಲವಂಗಚಕ್ಕೆ, ಮ್ಯಾಪಲ್ ರಸ ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಸಣ್ಣ ಉರಿಯಲ್ಲಿ ಕುದಿಸಿರಿ.
* ಸುಮಾರು 20 ನಿಮಿಷ ಕುದಿಸಿದ ನಂತರ ಸೇಬು ಹೋಳುಗಳು ಮೆತ್ತಗಾದ ನಂತರ ಹಾಕಿದ್ದ ಲವಂಗಚಕ್ಕೆಯನ್ನು ಹೊರಕ್ಕೆ ತೆಗೆಯಬೇಕು.
* ಬಾಣಲೆಯಲ್ಲಿರುವ ಮಿಶ್ರಣವನ್ನು ಅರೋರೂಟ್ ಜೊತೆ ಚೆನ್ನಾಗಿ ಬೆರಸಬೇಕು.
* ಮಿಶ್ರಣ ಮತ್ತು ಅರೋರೂಟ್ ಸೂಪ್ ಗಟ್ಟಿಯಾಗುತ್ತದೆ. ಆನಂತರ ಮಿಶ್ರಣವನ್ನು ಲಿಂಬೆ ಹಣ್ಣಿನ ರಸ ಮತ್ತು ದ್ರಾಕ್ಷಿರಸದೊಂದಿಗೆ ಚೆನ್ನಾಗಿ ಕಲಸಬೇಕು.
* ನಂತರ ಮಿಶ್ರಣವನ್ನು ಮೊದಲು ಕಾಯಿಸಿದ ಪಾತ್ರೆಯಲ್ಲಿ ಹಾಕಿ ಸ್ವಲ್ಪ ಸಮಯ ಕುದಿಸಬೇಕು ಹಾಗೂ ಅದು ತಣ್ಣಗಾಗುವವರೆಗೂ ಬಿಡಬೇಕು.
* ಬಾಣಲೆಯಲ್ಲಿರುವ ಮಿಶ್ರಣವನ್ನು ಹೊರಕ್ಕೆ ತೆಗೆದು ಬೇರೊಂದು ಪಾತ್ರೆಗೆ ಹಾಕಿಕೊಳ್ಳಬೇಕು. ಆಮೇಲೆ ಅದಕ್ಕೆ ಅರ್ಧ ಚಮಚ ಹುಳಿ ಬಿಡಬೇಕು. ಇದೀಗ ನಿಮ್ಮ ನೆಚ್ಚಿನ ಸೇಬು ಸೂಪ್ ರೆಡಿಯಾಗುತ್ತದೆ.

X
Desktop Bottom Promotion