For Quick Alerts
ALLOW NOTIFICATIONS  
For Daily Alerts

ಕರಬೂಜ ಹಣ್ಣಿನ ಪಾನಕ

By * ಕುಮುದಾ ಶಂಕರ್, ಸೌದಿ ಅರೇಬಿಯಾ
|
Muskmelon fruit
ಬೇಸಿಗೆಯ ದಾಹ ತೀರಿಸಿಕೊಳ್ಳಲು ಕರಬೂಜ ಹಣ್ಣಿನ ಪಾನಕಕ್ಕಿಂತ ಬೇರೆಯ ಯಾವ ಪಾನಕವಿದೆ? ಕರಬೂಜ ಹಣ್ಣು ಈಗಾಗಲೆ ಮಾರುಕಟ್ಟೆಯಲ್ಲಿ ತನ್ನ ಸ್ಥಳ ಆಕ್ರಮಿಸಿಕೊಂಡಿರುತ್ತದೆ. ಕೆಜಿ ಲೆಕ್ಕದಲ್ಲಿ ಕೊಂಡರೆ ಸ್ವಲ್ಪ ತುಟ್ಟಿ ಅನ್ನಿಸಿದರೂ ಆರೋಗ್ಯದ ಮೇಲೆ ಮಾಡುವ ಪರಿಣಾಮ ಮಾತ್ರ ಅಗಾಧ.

ರಸ್ತೆಯಲ್ಲಿ ಕಂಡಕಂಡಲ್ಲಿ ಜ್ಯೂಸುಗಳನ್ನು ಕುಡಿಯುವ ಬದಲು ಕರಬೂಜ ಹಣ್ಣನ್ನು ಮನೆಗೇ ತಂದು ಶಿಸ್ತಾಗಿ ಪಾನಕ ಮಾಡಿ ಮನೆಮಂದಿಯೆಲ್ಲ ಸೇರಿ ಹೀರಿರಿ. ಆರೋಗ್ಯವೂ ದಿವಿನಾಗಿರುತ್ತದೆ ಮತ್ತು ಕರಬೂಜ ಹಣ್ಣಿ ಪಾನಕದ ರುಚಿಯ ಬಗ್ಗೆ ಹೇಳುವುದೇ ಬೇಕಾಗಿಲ್ಲ. ಕುಡಿದು ನೋಡಿ ನೀವೇ ತಿಳಿಯಿರಿ. ಅಂದ ಹಾಗೆ, ಕರಬೂಜ ಹಣ್ಣಿಗೆ ಉತ್ತರ ಕರ್ನಾಟಕದಲ್ಲಿ ಪುಟ್ಟಿ ಹಣ್ಣು ಅಂತ ಕರೆಯುತ್ತಾರೆ.

ಬೇಕಾಗುವ ಸಾಮಗ್ರಿಗಳು :

ಕರಬೂಜ ಹಣ್ಣು
ಬೆಲ್ಲ ರುಚಿಗೆ ತಕ್ಕಷ್ಟು
ಒಣಶುಂಠಿ - ಒಂದೆರಡು
ಕಾಳು ಮೆಣಸು-ಅರ್ಧ ಚಮಚ
ಚಿಟಿಕೆ ಉಪ್ಪು
ಏಲಕ್ಕಿ ಪುಡಿ ಸ್ವಲ್ಪ
ನೀರು

ತಯಾರಿಸುವ ವಿಧಾನ :

ಬೆಲ್ಲವನ್ನು ಕುಟ್ಟಿಕೊಂಡು ಪುಡಿ ಮಾಡಿಕೊಳ್ಳಿ. ಒಣಶುಂಠಿಯನ್ನು ಸಹ ಚಚ್ಚಿಕೊಳ್ಳಿ. ಕಾಳು ಮೆಣಸನ್ನು ಸ್ವಲ್ಪ ಸ್ವಲ್ಪ ತರಿಯಾಗಿ, ದಪ್ಪವಾಗಿ ಕುಟ್ಟಿ.

ಪಾತ್ರೆಗೆ ನೀರು ಹಾಕಿ, ಅದಕ್ಕೆ ಕುಟ್ಟಿದ ಎಲ್ಲಾ ಸಾಮಾನುಗಳನ್ನು ಹಾಕಿ ಚೆನ್ನಾಗಿ ಕೈನಲ್ಲಿಯೇ ಕಿವುಚಿ. ಸಣ್ಣಗೆ ಹೆಚ್ಚಿದ ಕರಬೂಜ ಹಣ್ಣನ್ನು ಸಹ ಸೇರಿಸಿ. ಅದನ್ನು ಹಾಗೆಯೇ ನುಣ್ಣಗಾಗುವಂತೆ ಕೈನಲ್ಲಿಯೇ ಹಿಸುಕಿ. ಬೆಲ್ಲ ಕರಗಿದ ನಂತರ ಏಲಕ್ಕಿ ಪುಡಿ ಮತ್ತು ಉಪ್ಪು ಹಾಕಿ ಬೆರೆಸಿ. ಇದನ್ನು ತಣ್ಣಗೂ /ಆಗೇಯೇ ಸೇವಿಸಬಹುದು.

ಪಾನಕದಲ್ಲಿ ಹಣ್ಣಿನ ತೀರ ಚಿಕ್ಕದಾದ ತುಣುಕುಗಳು ಇರುತ್ತವೆ. ಅದು ಪಾನಕ ಕುಡಿಯುವಾಗ ಸಿಗುತ್ತದೆ. ಹಣ್ಣನ್ನು ಜೊತೆಯಲ್ಲಿ ತಿಂದರೆ ಅದು ಇನ್ನೂ ಚೆನ್ನಾಗಿರುತ್ತದೆ. [ಕೃಪೆ : ಅಡಿಗೆ ಮನೆ]

English summary

Muskmelon juice for summer | Karabuj fruit juice | ಕರಬೂಜ ಹಣ್ಣಿನ ಪಾನಕ | ಕರಬೂಜ ಜ್ಯೂಸ್

Muskmelon juice for summer. Recipe by Kumuda Shankar.
Story first published: Tuesday, March 8, 2011, 18:38 [IST]
X
Desktop Bottom Promotion