For Quick Alerts
ALLOW NOTIFICATIONS  
For Daily Alerts

ಐದು ಅನಾರೋಗ್ಯಕಾರಿ ಉಪಹಾರಗಳು, ಲೀವ್ ಇಟ್

|
Unhealthy Food For Breakfast
ಇದು ಫಾಸ್ಟ್ ಲೈಫ್. ಸಾವಧಾನವಾಗಿ ಮುಂಜಾನೆಯ ತಿಂಡಿತಿನಿಸು ತಿನ್ನುವ ವ್ಯವಧಾನ ಯಾರಿಗೂ ಇರುವುದಿಲ್ಲ. ಇಂತಹ ಸಮಯದಲ್ಲಿ ಅನಾರೋಗ್ಯಕಾರಿ ಆಹಾರಗಳನ್ನು ಸೇವಿಸುವರೇ ಹೆಚ್ಚು. ಆರೋಗ್ಯಕಾರಿ ಆಹಾರದೊಂದಿಗೆ ದಿನವನ್ನು ಆರಂಭಿಸುವುದು ಅತ್ಯಂತ ಅಗತ್ಯ. ನೀವು ಮುಂಜಾನೆ ಅವಾಯ್ಡ್ ಮಾಡಲೇಬೇಕಾದ ಐದು ಅನಾರೋಗ್ಯಕಾರಿ ಆಹಾರಗಳು ಇಲ್ಲಿವೆ.

ಸ್ಯಾಂಡ್ವಿಚ್:
ಸಂಸ್ಕರಿಸಿದ ಬೆಣ್ಣೆ, ಸಲಾಡ್, ತರಕಾರಿಗಳು, ಮಾಂಸ, ಚೀಸ್ ಮತ್ತು ವಿವಿಧ ಬಗೆಯ ಸಾಸ್‌ಗಳಿಂದ ತಯಾರಿಸಲಾಗುತ್ತಿದೆ. ಇದರಲ್ಲಿ ಸೋಡಿಯಂ ಅಂಶ ಅಧಿಕವಾಗಿದೆ. ಫ್ಯಾಟ್ ಅಂಶ ಕೂಡ ಹೆಚ್ಚಿರುವುದರಿಂದ ಮುಂಜಾನೆಯ ಉಪಹಾರಕ್ಕೆ ಇದು ಒಳ್ಳೆಯದಲ್ಲ. ಮುಂಜಾನೆಯ ತಿಂಡಿಗೆ ಸ್ಯಾಂಡ್ವಿಚ್ ಮಾಡೋದು ಅನಿವಾರ್ಯವೆನಿಸಿದರೆ ಒಂದಿಷ್ಟು ಮುಂಜಾಗ್ರತೆ ವಹಿಸುವುದು ಒಳ್ಳೆಯದು. ಕಡಿಮೆ ಫ್ಯಾಟ್ ಇರುವ ಚೀಸ್ ಅಥವಾ ಬೆಣ್ಣೆ ಮತ್ತು ತಾಜಾ ತರಕಾರಿಗಳನ್ನು ಬಳಸಿ ಸ್ಯಾಂಡ್ವಿಚ್ ತಯಾರಿಸಿ.

ಧಾನ್ಯ ಕಾಳು ತಿಂಡಿ: ಅರ್ಜೆಂಟ್ ನಲ್ಲಿ ಉಪಹಾರ ತಯಾರಿಸಲು ಧಾನ್ಯಕಾಳುಗಳು ಸಹಕಾರಿ. ಆದರೆ ಧಾನ್ಯಗಳು ಅತ್ಯಧಿಕ ಪ್ರಮಾಣದ ಸಕ್ಕರೆ ಅಂಶಗಳನ್ನು ಹೊಂದಿರುತ್ತವೆ. ಇದು ದೇಹದ ತೂಕವನ್ನು ಹೆಚ್ಚಿಸುತ್ತದೆ. ಪರಿಷ್ಕರಿಸಿದ ಸಕ್ಕರೆಯು ಮೇದೋಜೀರಕ ಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ಇನ್ಶುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.

ಇನ್ಶುಲಿನ್ ಪ್ರಮಾಣದಲ್ಲಿ ಅಸ್ಥಿರತೆ ಉಂಟಾದರೆ ದಿನವಿಡಿ ಸುಸ್ತಾದಂತೆ ಭಾಸವಾಗುತ್ತದೆ ಮತ್ತು ಆಲಸ್ಯ ಹೆಚ್ಚಿಸುತ್ತದೆ. ಇನ್ಶುಲಿನ್ ಅಸಮತೋಲನದಿಂದ ನಿಮ್ಮ ಮೂಡ್ ಬದಲಾಗುವುದು ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ. ಮುಂಜಾನೆ ನೀವು ಸಿಹಿ ಸೆರಲಾಲ್ ಮಾಡುವಿರಾದರೆ ಬಾಳೆಹಣ್ಣು ಇತ್ಯಾದಿ ತಾಜಾ ಹಣ್ಣುಗಳನ್ನು ಮಿಕ್ಸ್ ಮಾಡಿ. ಇದರಿಂದ ಸಿಹಿಯಲ್ಲಿ ಬ್ಯಾಲೆನ್ಸ್ ಉಂಟಾಗುತ್ತದೆ.

ಕೇಕ್ ಅಥವಾ ಮುಫಿನ್ಸ್: ಮುಂಜಾನೆ ಕೇಕ್ ತಿನ್ನುವ ಅಭ್ಯಾಸವೂ ಒಳ್ಳೆಯದಲ್ಲ ಎಂದು ಆಹಾರ ಪಂಡಿತರು ಅಭಿಪ್ರಾಯಪಡುತ್ತಾರೆ. ನೀವು ಕೇಕನ್ನು ಹತ್ತಿರದಿಂದ ಗಮನಿಸಿದರೆ ಅದರಲ್ಲಿ ಸ್ವೀಟ್ ನೊಂದಿಗೆ ಸಕ್ಕರೆ, ಬೆಣ್ಣೆ ಇತ್ಯಾದಿಗಳನ್ನು ಢಾಳಾಗಿ ಬಳಸಿರುವುದನ್ನು ಗಮನಿಸಬಹುದು. ಮುಂಜಾನೆ ಕೇಕ್ ತಿನ್ನುವುದನ್ನು ಅವಾಯ್ಡ್ ಮಾಡಿರಿ.

ಹಣ್ಣಿನ ಜ್ಯೂಸ್: ಬ್ರೇಕ್ ಫಾಸ್ಟ್ ಟೇಬಲ್ ಮೇಲೆ ಹೆಚ್ಚಾಗಿ ಜ್ಯೂಸ್ ಬಳಸಲಾಗುತ್ತಿದೆ. ನಿಮಗೂ ಮುಂಜಾನೆ ಜ್ಯೂಸ್ ಕುಡಿಯುವುದು ಇಷ್ಟವಾಗಿರಬಹುದು. ಆದರೆ ಇದು ಕೂಡ ಅನಾರೋಗ್ಯಕಾರಿ ಎಂಬುದನ್ನು ಮರೆಯದಿರಿ. ಹಣ್ಣಿನ ರಸದಲ್ಲಿರುವ ಅಂಶಗಳು ರಕ್ತದಲ್ಲಿ ವಿಲೀನವಾಗುವುದರಿಂದ ಇನ್ಶುಲಿನ್ ಪ್ರಮಾಣ ಹೆಚ್ಚಾಗುತ್ತದೆ.

ಹಾಗಾದರೆ ಸಕ್ಕರೆ ಹಾಕದೇ ಜ್ಯೂಸ್ ಕುಡಿಯಬಹುದೇ ಎಂದು ನೀವು ಕೇಳಬಹುದು. ಖಾಲಿ ಹೊಟ್ಟೆಗೆ ಸುಗರ್ಲೆಸ್ ಜ್ಯೂಸ್ ಕುಡಿಯೋದು ಕೂಡ ಅನಾರೋಗ್ಯಕಾರಿ. ಮುಂಜಾನೆ ಜ್ಯೂಸ್ ಕುಡಿಯುವುದಕ್ಕಿಂತ ಕಟ್ ಮಾಡಿದ ಹಣ್ಣು ತಿನ್ನಬಹುದಂತೆ!

ವಡೆ: ನೀವು ದಿನನಿತ್ಯ ಬೆಳಗ್ಗೆ ಇಡ್ಲಿ ವಡೆ ತಿನ್ನುವಿರಾದರೆ ವಡೆಗೆ ಬಾಯ್ ಹೇಳುವುದು ಒಳ್ಳೆಯದು. ಯಾಕೆಂದರೆ ಇದರಲ್ಲೂ ಅತ್ಯಧಿಕ ಪ್ರಮಾಣದ ಸಕ್ಕರೆಯಂಶ, ಫ್ಯಾಟ್ ಇತ್ಯಾದಿ ಅಂಶಗಳಿರುತ್ತವಂತೆ!

ಅನಾರೋಗ್ಯಕಾರಿ ಬ್ರೇಕ್ ಫಾಸ್ಟ್ ಆರೋಗ್ಯವನ್ನು ಹಾಳುಗೆಡುವುತ್ತದೆ ಮತ್ತು ದೇಹದ ಶಕ್ತಿಯನ್ನು ಕುಂದಿಸುತ್ತದೆ. ಹೀಗಾಗಿ ಆರೋಗ್ಯಕಾರಿ ಆಹಾರಗಳೊಂದಿಗೆ ದಿನವನ್ನು ಆರಂಭಿಸಿ.

English summary

Unhealthy Food For Breakfast | Top 5 Unhealthy Food | ಉಪಹಾರಕ್ಕೆ ಐದು ಅನಾರೋಗ್ಯಕಾರಿ ಆಹಾರಗಳು

Breakfast is the first meal of the day. Having a healthy breakfast keeps you fit and active whole day. People in a haste have unhealthy breakfast which spoils their health. The biggest draw back of the day is unhealthy breakfast. Lets have a look at the unhealthy breakfast food to avoid.
Story first published: Saturday, July 16, 2011, 12:03 [IST]
X
Desktop Bottom Promotion