For Quick Alerts
ALLOW NOTIFICATIONS  
For Daily Alerts

ಸೌತೇಕಾಯಿ ಹಸಿಗೊಜ್ಜು ರೆಡೀ

|
Cucumber delight
ಎಲೆಕ್ಟ್ರಿಕ್ ಕುಕ್ಕರ್ ನಲ್ಲಿ ಅಕ್ಕಿ ತೊಳೆದಿಟ್ಟು ಹದಿನೈದು ನಿಮಿಷಕ್ಕೆ ಅನ್ನ ಉಂಬೈಯುವುದರೊಳಗೆ ಒಂದು ದಿಢೀರ್ ಹಸಿಗೊಜ್ಜು ಮಾಡಿ ಊಟಕ್ಕೆ ತಟ್ಟೆ ಹಾಕೋಣ.

ಎರಡು ಎಳೆ ಸೌತೆಕಾಯಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಬದಿಗೆ ಇಟ್ಟುಕೊಳ್ಳಿ. ಈ ಕಡೆ ಅರ್ಧ ಲೋಟ ಹುರಿಗಡಲೆ, ಅರ್ಥ ಲೋಟ ತೆಂಗಿನ ತುರಿ, ಚೂರು ಅರಿಶಿನ, ಆರು ಒಣಮೆಣಸಿನಕಾಯಿ, ಚೂರು ಹುಣಿಸೆಹಣ್ಣು, ಚಿಟಿಕೆ ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸಿಗೆ ಹಾಕಿ. ನೀರು ಹಾಕಿಕೊಂಡು ನುಣ್ಣಗೆ ರುಬ್ಬರಿ. ರುಬ್ಬಿಕೊಂಡ ನೀರುಚಟ್ನಿಯನ್ನು ಹೆಚ್ಚಿದ ಸೌತೆಕಾಯಿ ಬಟ್ಟಲಿಗೆ ಹಾಕಿ, ಎಣ್ಣೆ, ಸಾಸಿವೆ ಒಗ್ಗರಣೆ ಹಾಕಿದರೆ ಹಸಿ ಗೊಜ್ಜು ರೆಡೀ!

ಮನೆಗೆ ಲೇಟಾಗಿ ವಾಪಸ್ಸು ಬಂದಾಗ, ಸೆಕೆಂಡ್ ಷೋ ಸಿನಿಮಾ ನೋಡಿ ಬಂದಾಗ, ಯಾರದ್ದೋ ಮನೆಗೆ ಊಟಕ್ಕೆ ಅಂತ ಹೋಗಿ ಸರಿಹೋಗದೆ ಅವೇಳೆಯಲ್ಲಿ ಸಪ್ಪಗೆ ಮುಖಹಾಕಿಕೊಂಡು ಮನೆಗೆ ಬಂದಾಗ, ನಾಲಗೆ ಕೆಟ್ಟಾಗ ಇಂಥ ಗೊಜ್ಜು ನಿಮ್ಮ ನೆರವಿಗೆ ಧಾವಿಸುತ್ತದೆ.

Story first published: Wednesday, October 21, 2009, 12:11 [IST]
X
Desktop Bottom Promotion