For Quick Alerts
ALLOW NOTIFICATIONS  
For Daily Alerts

ಈರಲಗೆರೆ ಬದನೆಕಾಯಿ ಗೊಜ್ಜು

By * ನಿರ್ಮಲ, ಮೈಸೂರು
|
ಶಾಮ್ ಅವರೆ, ನೀವು ಬರೆದ ಜೀರಿಗೆ ಸಾರು ನಾವು ಮಾಡಿದೆವು. ಚೆನ್ನಾಗಿತ್ತು. ಪ್ರತಿನಿತ್ಯ ಮಾಡುವ ಅಡುಗೆಗಳಲ್ಲೇ ಅಲ್ಪಸ್ವಲ್ಪ ಬದಲಾವಣೆ ಮಾಡಿ ತಯಾರಿಸಿದರೆ ಬೇರೆಬೇರೆ ರುಚಿ ಹೊರಹೊಮ್ಮುತ್ತದೆ. ಥ್ಯಾಂಕ್ಸ್.

ತಾವು ಮಾಡಿದ ಜೀರಿಗೆ ಸಾರಿಗೆ ಬಳಸಿದ ಪದಾರ್ಥಗಳ ಜತೆಗೆ ಇನ್ನು ಕೆಲವನ್ನು ಸೇರಿಸಿ ಮಾಡಬಹುದಾದ ಅಡುಗೆಗೆ ನಾವು ರಸವಾಂಗಿ ಎಂದು ಕರೆಯುತ್ತೇವೆ. ನೀವು ಇದನ್ನು ಪ್ರಯತ್ನಿಸಿ.

ಬೇಕಾದ ಸಾಮಗ್ರಿಗಳಲ್ಲಿ ತಾವು ತಿಳಿಸಿದ ಹಾಗೆ, ಅರ್ಧ ಚಮಚ ಉದ್ದಿನಬೇಳೆ | ಅರ್ಧ ಚಮಚ ಕೊತ್ತಂಬರಿ ಬೀಜ | ಒಂದು ಚಮಚ ಜೀರಿಗೆ | ಐದಾರು ಒಣಮೆಣಸಿನಕಾಯಿ | ಒಂದು ಚಮಚ ಸನ್ ಗೋಲ್ಡ್ ಅಡುಗೆ ಎಣ್ಣೆ | ಇವಿಷ್ಟಲ್ಲದೆ ಒಂದು ಚೂರು ಚಕ್ಕೆ ಇರಲಿ.

ಇವಿಷ್ಟನ್ನೂ ತವದಲ್ಲಿ ಘಂ ಎಂದು ಪರಿಮಳ ಬರುವವರೆಗೆ ಹುರಿದುಕೊಂಡು ಸ್ವಲ್ಪ ಹಸಿ ತೆಂಗಿನತುರಿ ಸ್ವಲ್ಪ ಒಣ ಕೊಬ್ಬರಿ ತುರಿ ಬೆರೆಸಿ ಮಿಕ್ಸಿಗೆ ಹಾಕಿ, ಚೂರು ನೀರು ಬೆರೆಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿರಿ.

ನಮ್ಮ ಕಡೆ ಸಿಗುವ ಈರಲಗೆರೆ ಬದನೆಕಾಯಿ (ಮೈಸೂರು ಬದನೆಕಾಯಿ) ಮತ್ತು ಚವಳಿಕಾಯಿ(ಗೋರಿ ಕಾಯಿ) ಯನ್ನು ಸಣ್ಣಗೆ ಹೆಚ್ಚಿ ಚೂರು ಒಗ್ಗರಣೆಯಲ್ಲಿ ಹೆಚ್ಚು ಹೊತ್ತು ಬೇಯಿಸಬೇಕು. ನೀರು ಬೆರೆಸದೆ ಎಣ್ಣೆ ಒಗ್ಗರಣೆಯಲ್ಲಿ ಮಾತ್ರ ಬೇಯುವಂತೆ ಮಾಡಿರಿ. ಚೆನ್ನಾಗಿ ಬೆಂದ ನಂತ ರುಬ್ಬಿಕೊಂಡ ಪದಾರ್ಥವನ್ನು ಹಾಕಿ ಚೆನ್ನಾಗಿ ಬೇಯಿಸಿರಿ. ಇದಕ್ಕೆ ಉಪ್ಪು, ಹುಣಿಸೆಹಣ್ಣು ಅಥವಾ ಟೊಮೆಟೋ ಮತ್ತು ಸಕ್ಕರೆ ಅಥವಾ ಬೆಲ್ಲ ಹಾಕಿ.

ಇದನ್ನು ಚಪಾತಿ ಜತೆಗೆ ತಿನ್ನುವುದಕ್ಕೆ ಅಥವಾ ಅನ್ನಕ್ಕೆ ಕಲಸುವುದಕ್ಕೆ ಬಳಸಬಹುದು. ನಾನು ಹೇಳಿದ ಎರಡು ತರಕಾರಿ ಗಳು ಬಿಟ್ಟು ಬೇರೇ ಯಾವ ತರಕಾರಿಗಳೂ ರಸವಾಂಗಿಗೆ ಸೂಟ್ ಆಗುವುದಿಲ್ಲ. ಹ್ಯಾಪಿ ಕುಕ್ಕಿಂಗ್ ಅಂಡ್ ಪ್ಯಾಪಿ ಡೈನಿಂಗ್!

English summary

Rasavangi | Vegetarian Recipe | Nirmala Mysore | Karnataka Food Specialities - ಈರಲಗೆರೆ ಬದನೆಕಾಯಿ ಗೊಜ್ಜು

Rasavangi vegetarian dish recipe by Nirmala Mysore. ಈರಲಗೆರೆ ಬದನೆಕಾಯಿ ಗೊಜ್ಜು.
X
Desktop Bottom Promotion