For Quick Alerts
ALLOW NOTIFICATIONS  
For Daily Alerts

ಈರುಳ್ಳಿ ಕುಲ್ಚಾ, ಬ್ರೆಡ್, ಹೈವೇ

By Shami
|
Onion Kulcha
ಬೆಳಗಿನ ಹೊತ್ತು, ಟ್ಯಾಕ್ಸಿ ಬರುವ ಹೊತ್ತಿಗೆ ಎರಡು ಕುಲ್ಚಾ ರೆಡಿಯಾದರೆ cool.

* ಅರ್ಮಾಡಾ, ರಿಚ್ಮಂಡ್ ಟೌನ್

ಬೇಕಾಗುವ ಪದಾರ್ಥಗಳು :

ಮೊದಲಿಗೆ ಎಂದಿನಂತೆ ಚಪಾತಿ ಹಿಟ್ಟನ್ನು ಕಲಸಿ ಇಟ್ಟುಕೊಳ್ಳಿ.

ದಪ್ಪ ಈರುಳ್ಳಿ ನಾಲಕ್ಕು
ನಾಲಗೆ ರುಚಿ ಮತ್ತು ಆರೋಗ್ಯಕ್ಕೆ ತಕ್ಕಷ್ಟು (ಜಾಸ್ತಿ)ಎಣ್ಣೆ
ಟೊಮ್ಯಾಟೋ ಸಾಸ್ 4 ಚಮಚ
ಚಿಲ್ಲಿ ಸಾಸ್ 2 ಚಮಚ
ಕೆಂಪು ಮೆಣಸಿನ ಪುಡಿ 2 ಚಮಚ
ಪುಡಿ ಉಪ್ಪು
ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ :

ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಈರುಳ್ಳಿ ತುರಿಯನ್ನು ಹಾಕಿ ಕೆಂಪಾಗುವವರೆಗೆ ಹುರಿಯಿರಿ. ಈರುಳ್ಳಿಯನ್ನು ಅಡ್ಡಾದಿಡ್ಡಿ ಹೆಚ್ಚಬಾರದು. ಎಳೆಎಳೆಯಾಗಿ ಬರುವಂತೆ, ಉದುರಿದ ಪುಕ್ಕಗಳಂತೆ ಇರಲಿ. ಆನಂತರ ಒಂದೊಂದಾಗಿ ಮೇಲೆ ಹೇಳಿದ ಇತರ ಸಾಮಗ್ರಿಗಳನ್ನು ಹಾಕುತ್ತಾ, ಕೈಯಾಡಿಸುತ್ತಾ ಬನ್ನಿ. ಬಾಣಲೆ ಕೆಳಗಿಳಿಯಲಿ.

ಯಾವಾಗಲೂ ಮಾಡುವ ಹಾಗೇನೇ ಚಪಾತಿಯನ್ನು ಮಾಡಬೇಕು. ಆದರೆ, ಚಪಾತಿ ಹಿಟ್ಟು ಹಂಚಿನ ಮೇಲೆ ಸ್ವಲ್ಪ ಒಣಗಿದ ನಂತರ ಎರಡೂ ಬದಿ ಚೆನ್ನಾಗಿ ಎಣ್ಣೆ ಸವರಬೇಕು. ಅದರ ಮೇಲೆ ಎರಡೆರಡು ಚಮಚ ಹುರಿದ ಈರುಳ್ಳಿಯನ್ನು ಅಗಲವಾಗಿ ಹರಡಬೇಕು. ಮತ್ತೆ ಎರಡು ಚಮಚ ಎಣ್ಣೆ ಸಿಂಪಡಿಸಿರಿ. ನಿಧಾನವಾಗಿ ಬೇಯಲಿ. ಕೆಲವರ ಮನೆಯಲ್ಲಿ ಚಪಾತಿ ಅಂಚಿನಲ್ಲಿ ಬೆಂದೇ ಇರುವುದಿಲ್ಲರೀ. ನೀವೂ ಗಮನಿಸಿಯೇ ಇರುತ್ತೀರಿ!

ಚಪಾತಿ ಹಿಟ್ಟಿಗೆ ಈರುಳ್ಳಿ ಅಂಟಿಕೊಳ್ಳುತ್ತಾ ಬೇಯೋಣವಾಗಲಿ. ಚೆನ್ನಾಗಿ ಬೆಂದ ನಂತರ ಹೋಟೆಲುಗಳಲ್ಲಿ ಮಸಾಲೆ ದೋಸೆ ಮಡಿಚುವ ಮಾದರಿಯಲ್ಲಿ ಎರಡು ಫೋಲ್ಡ್ ಮಡಿಚಿರಿ. ರೆಡಿ ಇದ್ದರೆ ಎಲೆಕೋಸಿನ ಚೂರುಗಳನ್ನು ಜತೆಗೆ ಸೇರಿಸಿಟ್ಟುಕೊಳ್ಳಿರಿ. ಆಮೇಲೆ, ಫುಢ್ ಪ್ಯಾಕ್ ಮಾಡುವ ಹಾಳೆಯಲ್ಲಿ ಇಟ್ಟು ಸುತ್ತಿ ಒಂದು ಪ್ಲಾಸ್ಟಿಕ್ ಕವರಿನಲ್ಲಿಟ್ಟುಕೊಂಡು ಹೊರಡಿ. ಈ ತಿಂಡಿಗೆ ಯಾವ ಹೆಸರನ್ನು ಬೇಕಾದರೂ ಇಡಬಹುದು. ಉದಾ : ಈರುಳ್ಳಿ ಕುಲ್ಚಾ ಎನ್ನಬಹುದು, ಆನಿಯನ್ ಇಂಡಿಯನ್ ಬ್ರೆಡ್ ಎನ್ನಬಹುದು, ಸಬ್ ವೇ, ಹೈವೇ ಎನ್ನಬಹುದು. (ನಿರೂಪಣೆ : ಮಾಲತಿ, ಬ್ರಿಗೇಡ್ ಟವರ್)

English summary

Onion Kulcha | Onion indian bread | Breakfast | Highway breakfast - ಈರುಳ್ಳಿ ಕುಲ್ಚಾ, ಬ್ರೆಡ್, ಹೈವೇ

Onion kulcha, onion indian bread, onion highway breakfast recipe, by armada. ಈರುಳ್ಳಿ ಕುಲ್ಚಾ, ಬ್ರೆಡ್, ಹೈವೇ.
X
Desktop Bottom Promotion