For Quick Alerts
ALLOW NOTIFICATIONS  
For Daily Alerts

ಬೆಳಗಿನ ಉಪಹಾರಕ್ಕಾಗಿ ರುಚಿ ರುಚಿಯಾದ ರಾಗಿ ದೋಸೆ

|

ನಿಮ್ಮ ಪ್ರತಿ ದಿನದ ಆಹಾರದಲ್ಲಿ ಹೆಚ್ಚು ಬಳಸಬಹುದಾದ ಆರೋಗ್ಯಕರ ಧಾನ್ಯವಾಗಿದೆ ರಾಗಿ. ನಿಮ್ಮ ತೂಕ ಇಳಿಕೆಯ ಯೋಜನೆಗೆ ಇದು ಹೆಚ್ಚು ಸಹಕಾರಿಯಾಗಿದ್ದು ಏರುತ್ತಿರುವ ತೂಕವನ್ನು ನಿಯಂತ್ರಿಸಲು ಹರಸಾಹಸ ಪಡುವವರು ಇದನ್ನು ಯಾವುದೇ ಭಯವಿಲ್ಲದೆ ಬಳಸಬಹುದು.

ರಾಗಿಯು ಕಡಿಮೆ ಪ್ರಮಾಣದ ಕ್ಯಾಲೋರಿಯನ್ನು ಹೊಂದಿದ್ದು ನಿಮಗೆ ಶಕ್ತಿಯನ್ನು ನೀಡಲು ಇದು ಸಹಕಾರಿಯಾಗಿದೆ ಅಲ್ಲದೆ ನಮ್ಮಲ್ಲಿ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಕೂಡ ರಾಗಿ ಪ್ರಮುಖ ಪಾತ್ರವಹಿಸುತ್ತದೆ.

Delicious Ragi Dosa Recipe For Breakfast

ರಾಗಿಯಿಂದ ತಯಾರು ಮಾಡಬಹುದಾದ ಹಲವಾರು ಖಾದ್ಯಗಳು ನಿಮ್ಮ ನಾಲಗೆಯ ರುಚಿಯನ್ನು ತಣಿಸಿ ಹೊಟ್ಟೆಗೆ ಸುಗ್ರಾಸ ಭೋಜನವನ್ನು ಉಣಬಡಿಸಲಿದೆ. ನೀವು ಜಿಮ್‌ಗೆ ಹೋಗುವವರಾಗಿದ್ದಲ್ಲಿ ಇದರಿಂದ ತಯಾರು ಮಾಡಿದ ಎರಡು ದೋಸೆಯನ್ನು ಸೇವಿಸಿ ನಿಮ್ಮ ಜಿಮ್ ಪ್ರಾಕ್ಟೀಸ್‌ ಅನ್ನು ನಿಮಗೆ ಮಾಡಬಹುದು. ಇದು ಕೊಡುವ ಶಕ್ತಿ ಅಷ್ಟು ಚೇತನಾಮಯವಾಗಿದೆ.

ಬೇಸಿಗೆಯಲ್ಲಿ ನಿಮ್ಮನ್ನು ಹೈಡ್ರೇಟ್‌ನ್ನಾಗಿರಿಸುವ ಶಕ್ತಿ ರಾಗಿಗಿದ್ದು ನಿತ್ಯವೂ ಯಾವುದೇ ಭಯವಿಲ್ಲದೆ ರಾಗಿಯಿಂದ ಮಾಡಿದ ತಿಂಡಿಯನ್ನು ನಿಮಗೆ ಸೇವಿಸಬಹುದು. ಇಂದಿನ ಲೇಖನದಲ್ಲಿ ನಾವು ಅತಿ ವಿಶಿಷ್ಟವಾದ ಟೇಸ್ಟೀ ರಾಗಿ ದೋಸೆಯ ತಯಾರಿ ವಿಧಾನವನ್ನು ನಾವಿಲ್ಲಿ ನೀಡಿದ್ದು ಇದನ್ನು ನೀವು ಸೇವಿಸಬಹುದು. ಹಾಗಿದ್ದರೆ ಬ್ರೇಕ್‌ಫಾಸ್ಟ್‌ಗಾಗಿ ರಾಗಿ ದೋಸೆಯನ್ನು ನೀವು ಮಾಡುವ ಪ್ರಯತ್ನದಲ್ಲಿದ್ದರೆ ಇದನ್ನು ಮಾಡಬಹುದು.

ರಾಗಿ ದೋಸೆಯ ತಯಾರಿ ವಿಧಾನವನ್ನು ನಾವಿಲ್ಲಿ ನೀಡಿದ್ದು ಇದನ್ನು ಟ್ರೈ ಮಾಡಿ.

ಪ್ರಮಾಣ: 4
ಸಿದ್ಧತಾ ಸಮಯ: 15 ನಿಮಿಷ
ಅಡುಗೆಗೆ ಬೇಕಾದ ಸಮಯ: 25 ನಿಮಿಷ

ಸಾಮಾಗ್ರಿಗಳು:
*ರಾಗಿ ಹುಡಿ - 1 ಕಪ್
*ಉದ್ದಿನ ಬೇಳೆ ಅಥವಾ ಇಡೀ ಉದ್ದು - 1/4 ಕಪ್
*ಮೆಂತೆ - 1/2 ಸ್ಪೂನ್ (ಆಯ್ಕೆ)
*ಉಪ್ಪು ರುಚಿಗೆ ತಕ್ಕಷ್ಟು
*ಅಡುಗೆ ಸೋಡಾ ಸ್ವಲ್ಪ (ಆಯ್ಕೆಯದ್ದು)
*ಎಣ್ಣೆ- ಸ್ವಲ್ಪ

ಮಾಡುವ ವಿಧಾನ:
1. ಮೊದಲಿಗೆ ಉದ್ದಿನ ಬೇಳೆ ಮತ್ತು ಮೆಂತೆಯನ್ನು ತೊಳೆದಿಟ್ಟುಕೊಳ್ಳಿ. ಇದನ್ನು 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
2. ತದನಂತರ ಉದ್ದು ಮತ್ತು ಮೆಂತೆಯನ್ನು ನುಣ್ಣಗೆ ರುಬ್ಬಿಕೊಳ್ಳಿ ಇದನ್ನು ಪಾತ್ರೆಗೆ ವರ್ಗಾಯಿಸಿಕೊಳ್ಳಿ.
3. ಇದಕ್ಕೆ ರಾಗಿ ಹುಡಿಯನ್ನು ಸೇರಿಸಿ. ಸ್ವಲ್ಪ ನೀರು ಹಾಕಿಕೊಂಡು ಹಿಟ್ಟನ್ನು ದೋಸೆ ಹಿಟ್ಟಿನ ಹದಕ್ಕೆ ಬೆರೆಸಿಕೊಳ್ಳಿ.
4. ನಂತರ ಈ ಹಿಟ್ಟನ್ನು ಹುಳಿ ಬರಿಸುವುದಕ್ಕಾಗಿ 8-10 ಗಂಟೆಗಳ ಕಾಲ ಮುಚ್ಚಿಡಿ, ಹಿಟ್ಟು ಹುದುಗು ಬರುವುದು ಗೊತ್ತಾಗುತ್ತದೆ.
5. ಹಿಟ್ಟಿಗೆ ಸ್ವಲ್ಪ ಸೋಡಾ ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಹಿಟ್ಟು ತುಂಬಾ ದಪ್ಪವಾಗಿದ್ದರೆ, ಸ್ವಲ್ಪ ನೀರು ಸೇರಿಸಿ. ನಿಮ್ಮ ರಾಗಿ ಹಿಟ್ಟು ಈಗ ಸಿದ್ಧವಾಗಿದೆ. ಇಡ್ಲಿ ಹಿಟ್ಟಿಗಿಂತ ಸ್ವಲ್ಪ ತೆಳುವಾಗಿ ನಿಮ್ಮ ರಾಗಿ ಹಿಟ್ಟು ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
6. ಇನ್ನು ತವಾ ಬಿಸಿ ಮಾಡಿ
7. ಸ್ವಲ್ಪ ಎಣ್ಣೆಯನ್ನು ತವಾಗೆ ಹಾಕಿ.
8. ಬಿಸಿಯಾದ ತವಾದ ಮೇಲೆ ಒಂದು ಸ್ಪೂನ್‌ನಷ್ಟು ಹಿಟ್ಟನ್ನು ತೆಗೆದುಕೊಂಡು ಹುಯ್ಯಿರಿ. ಪೂರ್ತಿಯಾಗಿ ತವಾದ ಉದ್ದಕ್ಕೂ ಹಿಟ್ಟನ್ನು ಹರಡಿಸಿ.
9. ಸ್ವಲ್ಪ ಎಣ್ಣೆ ಹಾಕಿ ದೋಸೆಯನ್ನು ಎರಡೂ ಬದಿ ಕಾಯಿಸಿ.

ದೋಸೆ ಎರಡೂ ಬದಿ ಪೂರ್ತಿಯಾಗಿ ಬೆಂದ ನಂತರ ಕಾವಲಿಯಿಂದ ತಟ್ಟೆಗೆ ವರ್ಗಾಯಿಸಿ. ಟೊಮೇಟೊ ಚಟ್ನಿಯೊಂದಿಗೆ ದೋಸೆಯನ್ನು ಸೇವಿಸುವುದು ನಿಮ್ಮ ಟೇಸ್ಟ್ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ.

X
Desktop Bottom Promotion