For Quick Alerts
ALLOW NOTIFICATIONS  
For Daily Alerts

ಹೊಸರುಚಿ : ಅವಲಕ್ಕಿ ಬಿಸಿಬೇಳೆ ಭಾತ್

By * ಗಾಯತ್ರಿ ಶೇಷಾಚಲ, ಬೆಂಗಳೂರು
|

ಬೇಕಾಗುವ ಸಾಮಾನುಗಳು :-

ಗಟ್ಟಿ ಅವಲಕ್ಕಿ -250 ಗ್ರಾಂ
ಹೆಸರುಬೇಳೆ -250 ಗ್ರಾಂ
ಚಿಕ್ಕ ನಿಂಬೆ ಗಾತ್ರದ ಹುಣಸೆಹಣ್ಣು
ರುಚಿಗೆ ತಕ್ಕ ಉಪ್ಪು
ತರಕಾರಿಗಳು
ಸ್ವಲ್ಪ ಬೀನ್ಸ್‌
ಕ್ಯಾರೆಟ್‌ -(3-4)
ಹಸಿ ಬಟಾಣಿ ಕಾಳು - 1- ಲೋಟ
ಆಲೂಗೆಡ್ಡೆ - 2
ಹೆಚ್ಚಿದ ಕ್ಯಾಬೇಜ್‌ - 1- ಲೋಟ
ದಪ್ಪ ವೆುಣಸಿನಕಾಯಿ - 2(ಕ್ಯಾಪ್ಸಿಕಾಂ)
ಕರಿಬೆವಿನ ಎಲೆ -(8-10)

ಮಸಾಲೆಗೆ ಬೇಕಾಗುವ ಸಾಮಾಗ್ರಿಗಳು:-

ಕಡ್ಲೆ ಬೇಳೆ - 1-ಚಮಚ
ಉದ್ದಿನ ಬೇಳೆ - 1/2 ಚಮಚ
ಧಾನ್ಯದ ಪುಡಿ -3 ಚಿಕ್ಕ ಚಮಚ
ಖಾರದ ಪುಡಿ - 2 ಚಿಕ್ಕ ಚಮಚ
ಜೀರಿಗೆ+ಮೆಂತೆ -1 ಚಿಕ್ಕ ಚಮಚ
ಸ್ವಲ್ಪ ಕೊಬ್ಬರಿ + ಇಂಗು -1ಚಮಚ

ಎಲ್ಲಾ ಮಸಾಲೆ ಸಾಮಾಗ್ರಿಗಳನ್ನು ಹುರಿದು ಪುಡಿ ಮಾಡಿ ಇಟ್ಟು ಕೊಳ್ಳಬೇಕು . ತರಕಾರಿಗಳನ್ನು ಹೆಚ್ಚಿ ಇಟ್ಟು ಕೊಳ್ಳ ಬೇಕು. ದಪ್ಪ ವೆುಣಸಿನಕಾಯಿ ಹೊರತು ಪಡಿಸಿ ಮಿಕ್ಕ ತರಕಾರಿಗಳನ್ನು ಬೇಯಿಸಿಟ್ಟು ಕೊಳ್ಳಬೇಕು.

ಮಾಡುವ ವಿಧಾನ :-

ಅವಲಕ್ಕಿಯನ್ನು ಹತ್ತು ನಿಮಿಷ ನೆನೆಸಿಡಿ.

ಬಳಿಕ ಕುಕ್ಕರ್‌ನಲ್ಲಿ (3-4) ಲೋಟ ನೀರು ಹಾಕಿ ಹೆಸರುಬೇಳೆಯನ್ನು 1-ವಿಷಿಲ್‌ನಷ್ಟು ಬೇಯಿಸಿ ಆಮೇಲೆ ಅದಕ್ಕೆ ನೆನೆದಿರುವ ಅವಲಕ್ಕಿ ಮತ್ತು ತರಕಾರಿಗಳನ್ನು ಹಾಕಿ 5- ನಿಮಿಷ ಸಿಮ್‌ನಲ್ಲಿ ಇಡಿ (ಸಣ್ಣ ಗೆ ಬೆಂಕಿಯಿರಲಿ)

ಎಲ್ಲ ಪದಾರ್ಥಗಳು ಚೆನ್ನಾಗಿ ಬೆಂದ ನಂತರ, ಮಸಾಲೆ ಪುಡಿ ಮತ್ತು ಹುಳಿ ಹಿಂಡಿ ಹಾಕಿ .ಆಮೇಲೆ ರುಚಿಗೆ ತಕ್ಕ ಉಪ್ಪು ಹಾಕಿ . ನೀರು ಸ್ವಲ್ಪ ಜಾಸ್ತಿ ಹಾಕಿ , ಬಿಸಿಬೇಳೆ ಬಾತು ಸ್ವಲ್ಪ ನೀರಾಗಿದ್ದರೆ ಒಳ್ಳೆಯದು(ತೆಳ್ಳಗಿದ್ದರೆ).

ಆರಿದ ನಂತರ ಗಟ್ಟಿಯಾಗುತ್ತದೆ. ಆಮೇಲೆ ಕೆಳಗಿಳಿಸಿಕೊಳ್ಳಿ.

ಬಾಣಲೆಯಲ್ಲಿ ಒಂದು ಸೌಟು ಕಡ್ಲೆ ಕಾಯಿ ಎಣ್ಣೆಗೆ ಸಾಸಿವೆ ಹಾಕಿ ಚಟಪಟ ಗುಟ್ಟಿದ ಮೇಲೆ ,ಹೆಚ್ಚಿದ ದಪ್ಪ ಮೆಣಸಿನಕಾಯಿ , ಕರಿ ಬೇವಿನಎಲೆಗಳನ್ನು ಹಾಕಿ 3-4 ನಿಮಿಷ ಹುರಿದು ಅದನ್ನು ಬಿಸಿ ಬೇಳೆ ಬಾತಿಗೆ ಹಾಕಿ.

ಬಿಸಿಬಿಸಿ ಇರುವಾಗಲೇ ತುಪ್ಪ ಹಾಕಿ ತಿಂದರೆ ರುಚಿಯಾಗಿರುತ್ತದೆ.ನೆಚ್ಚಿ ಕೊಳ್ಳಲು ಸೌತೆಕಾಯಿ ಪಚ್ಚೋಡಿ ಮಾಡಿಕೊಳ್ಳಿ. ಇದು ನಾಲ್ಕೈದು ಜನರಿಗೆ ಸಾಕಾಗುತ್ತದೆ. ಬೇಕಾದರೆ ಹಪ್ಪಳ ಕರಿದು ಜೊತೆಯಲ್ಲಿ ತಿನ್ನಬಹುದು. ವಾರದ ಕೊನೆಯಲ್ಲಿ ಮಾಡಿ ನೋಡಿ, ಆಹ್ಹಾಹ್ಹಾ ಎಷ್ಟೊಂದು ರುಚಿಕರ...

English summary

Avalakki bisibele bhat | Delicious recipe | ಅವಲಕ್ಕಿ ಬಿಸಿಬೇಳೆ ಭಾತ್

Karnataka kitchen : Delicious Avalakki bisibele bhat recipe for all occasions.
Story first published: Tuesday, March 27, 2012, 12:48 [IST]
X
Desktop Bottom Promotion