For Quick Alerts
ALLOW NOTIFICATIONS  
For Daily Alerts

ಸುರುಪ್ ಸುರುಪ್ ಚೈನೀಸ್ ಕ್ರಿಸ್ಪಿ ನೂಡಲ್ಸ್

By Prasad
|
Chinese noodles recipe
ಸಂಜೆ ಹೊತ್ತಿನಲ್ಲಿ ಫೀಫಾ ಫುಟ್ಬಾಲ್ ಪಂದ್ಯಗಳನ್ನೋ, ಕನ್ನಡದ ಮೆಗಾ ಧಾರಾವಾಹಿಗಳನ್ನೋ ನೋಡುತ್ತಾ ಸುರುಪ್ ಸುರುಪ್ ಅಂತ ಚೈನೀಸ್ ನೂಡಲ್ಸ್ ಹೊಟ್ಟೆಗಿಳಿಸುತ್ತಿದ್ದರೆ ಏನು ಮಜಾ ಗೊತ್ತಾ? ಇದರ ತಯಾರಿಯೇ ಸ್ವಲ್ಪ ತ್ರಾಸದಾಯಕ. ಆದರೆ, ಸ್ವಲ್ಪ ಕಷ್ಟಪಟ್ಟರೆ ತಾನೆ ರುಚಿರುಚಿಯಾಗಿ ತಿನಿಸು ತಯಾರಿಸುವುದು ಸಾಧ್ಯ?

ಬೇಕಾಗುವ ಪದಾರ್ಥಗಳು

ನೂಡಲ್ಸ್ ವೆಜ್ - 200 ಗ್ರಾಂ
ಬಟಾಣಿ - 50 ಗ್ರಾಂ
ಹೂಕೋಸು - 100 ಗ್ರಾಂ
ಹುರುಳಿಕಾಯಿ - 50 ಗ್ರಾಂ
ಸೋಯಾ ಸಾಸ್ - ಒಂದು ಟೀ ಚಮಚ
ಚಿಲ್ಲಿ ಸಾಸ್ - ಒಂದು ಟೀ ಚಮಚ
ಉಪ್ಪು - ಒಂದು ಟೀ ಚಮಚ
ಟೊಮಾಟೊ ಪುರಿ - ನಾಲ್ಕು ಟೇಬಲ್ ಚಮಚ
ಮೆಣಸಿನ ಪುಡಿ - ಕಾಲು ಟೇಬಲ್ ಚಮಚ
ಬೆಳ್ಳುಳ್ಳಿ ಪೇಸ್ಟ್ - ಕಾಲು ಟೇಬಲ್ ಚಮಚ
ಶುಂಠಿ - ಒಂದು ಟೀ ಚಮಚ
ಎಣ್ಣೆ - ನಾಲ್ಕು ಟೇಬಲ್ ಚಮಚ
ಕಾರ್ನ್ ಫ್ಲೋರ್ - ಒಂದು ಟೇಬಲ್ ಚಮಚ
ನೀರು - ಕಾಲು ಬಟ್ಟಲು

ಮಾಡುವ ವಿಧಾನ

* ನೀರಿನಲ್ಲಿ ನೂಡಲ್ಸ್ ನನ್ನು ಕುದಿಸಿ ಸೋಸಿಟ್ಟುಕೊಳ್ಳಿ.
* ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ನೂಡಲ್ಸ್ ಗಳನ್ನು ತಿಳಿ ಹೊಂಬಣ್ಣ ಬರುವವರೆಗೂ ಹುರಿದು ತೆಗೆದಿಡಿ.
* ಬಟಾಣಿ ಕಾಳುಗಳನ್ನು ಆರು ತಾಸುಗಳ ಕಾಲ ನೆನೆಯಿಟ್ಟು, ನಂತರ ತರಕಾರಿಗಳನ್ನು ನೀರಿನಲ್ಲಿ ಅರೆಬೇಯಿಸಿ.
* ಪೋಕ್ ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಚಿಲ್ಲಿ ಸಾಸ್, ಸೋಯಾ ಸಾಸ್, ಮೆಣಸಿನಪುಡಿ ಮತ್ತು ಅರೆಬೆಂದ ತರಕಾರಿಗಳನ್ನು ಹಾಕಿ ಕೆಲ ನಿಮಿಷಗಳ ಬೇಯಿಸಿ.
* ಒಂದು ಪಾತ್ರೆಯಲ್ಲಿ ಕಾರ್ನ್ ಫ್ಲೋರ್ ಹಾಕಿ ಅದಕ್ಕೆ ಸ್ವಲ್ಪ ನೀರು ಬೆರೆಸಿ ಗಂಟಿಲ್ಲದಂತೆ ಕಲಸಿ ಮೇಲಿನ ಮಿಶ್ರಣಕ್ಕೆ ಹಾಕಿ ಕೆಲ ನಿಮಿಷಗಳ ಕಾಲ ಕುದಿಸಿ ಗ್ರೇವಿ ತಯಾರಿಸಿ.
* ಈ ಗ್ರೇವಿಗೆ ಕರೆದಿಟ್ಟ ನೂಡಲ್ಸ್ ಗಳನ್ನು ಹಾಕಿ.
* ಬಿಸಿಬಿಸಿಯಾಗಿ ಚೈನೀಸ್ ನೂಡಲ್ಸ್ ಬಡಿಸಿ. ಜೊತೆಗೆ ಟೊಮೆಟೊ ಸಾಸ್ ಇದ್ದರೆ ರುಚಿ ಮಸ್ತ್ ಮಸ್ತ್.

Story first published: Tuesday, June 22, 2010, 15:55 [IST]
X
Desktop Bottom Promotion