For Quick Alerts
ALLOW NOTIFICATIONS  
For Daily Alerts

ಹೀರೆಕಾಯಿಯಿಂದ ತಯಾರಿಸಿದ ಡಿಫರೆಂಟ್ ದೋಸೆ

By Prasad
|
Ridge Gourd instant Dosa
ಜಾಸ್ತಿ ತಯಾರಿ ಇಲ್ಲದೆ, ಕಡಿಮೆ ಸಮಯದಲ್ಲಿ ಇನ್ ಸ್ಟಂಟ್ ಆಗಿ ತಯಾರಿಸಬಹುದಾದ ಮುಂಜಾನೆಯ ತಿಂಡಿ ಇಲ್ಲಿದೆ ನೋಡಿ. ಅದೇ ಹೀರೆಕಾಯಿ ದೋಸೆ. ತಿಂಡಿಗಳಲ್ಲಿ ಬದಲಾವಣೆ ಬಯಸುವವರಿಗೆ ಇದು ಹೇಳಿ ಮಾಡಿಸಿದ ತಿಂಡಿ. ಅಕ್ಕಿ ನೆನೆಸಿಟ್ಟು ಕಾಲಹರಣ ಮಾಡುವ ಅವಶ್ಯಕತೆಯಿಲ್ಲ, ರುಬ್ಬುವ ಜರೂರತ್ತೂ ಇಲ್ಲ. ರೆಡಿಮೇಡ್ ಪದಾರ್ಥಗಳನ್ನೇ ಮಿಕ್ಸ್ ಮಾಡಿ ಲಗುಬಗೆಯಿಂದ ತಯಾರಿಸಬಹುದಾದ ರುಚಿಕಟ್ಟಾದ ತಿನಿಸಿದು. ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು ಪಟ್ಟಿ : 1 ಹೀರೆಕಾಯಿ, 2ರಿಂದ 3 ಕಪ್ ಬೇಸನ್, 1 ಸ್ಪೂನ್ ಜೀರಿಗೆ, ಚಿಟಿಕೆಯಷ್ಟು ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಪುಡಿ, ಫ್ರೈ ಮಾಡಲು ಎಣ್ಣೆ

ತಯಾರಿಸುವ ವಿಧಾನ :

* ಹೀರೆಕಾಯಿಯನ್ನು ಚೆನ್ನಾಗಿ ತೊಳೆದು, ಸಿಪ್ಪೆ ಸುಲಿದು, ನಾಣ್ಯದಾಕಾರದಲ್ಲಿ ಸಣ್ಣಗೆ ಕತ್ತರಿಸಿಕೊಳ್ಳಿ. (ಸುಲಿದ ಹೀರೆಕಾಯಿ ಸಿಪ್ಪೆಯನ್ನು ಬಿಸಾಡಬೇಡಿ. ಚಟ್ನಿ ಮಾಡಲು ಬಳಸಬಹುದು.)

* ಹಿಟ್ಟಿನಲ್ಲಿ ನೀರು ಬೆರೆಸಿ ಕತ್ತರಿಸಿಟ್ಟುಕೊಂಡ ಹೀರೆಕಾಯಿ ಸೇರಿದಂತೆ ಉಳಿದೆಲ್ಲವನ್ನೂ ಅಳ್ಳಕಾಗದಂತೆ ಮಿಕ್ಸ್ ಮಾಡಿಕೊಳ್ಳಿ. ತೀರಾ ಗಟ್ಟಿಯೂ ಆಗಬಾಹದು. ಮಾಮೂಲಿ ದೋಸೆ ಮಾಡುವ ಹಿಟ್ಟಿನಂತಿರಲಿ.

* ಸ್ಟೌ ಮೇಲಿಟ್ಟ ದೋಸೆ ತವಾದ ಕಾದ ಕೂಡಲೆ, ಎಣ್ಣೆ ಸವರಿ ಹಿಟ್ಟುನ್ನು ದುಂಡಗಾಕಾರದಲ್ಲಿ ಹುಯ್ಯಿರಿ. ಬೇಕಿದ್ದರೆ ಸುತ್ತಲೂ ಚಮಚದಿಂದ ಎಣ್ಣೆ ಹಾಕಿರಿ.

* ದೋಸೆಯ ಎರಡೂ ಬದಿ ಚೆನ್ನಾಗಿ ಬೇಯಿಸಿ, ಬಿಸಿಬಿಸಿಯಾಗಿರುವಾಗಲೆ ಬೆಣ್ಣೆ ಮತ್ತು ಚಟ್ನಿಯೊಡನೆ ಹೊಟ್ಟೆಗಿಳಿಸಿ.

English summary

Ridge Gourd instant Dosa | Different breakfast ideas | South Indian cuisine | ಹೀರೆಕಾಯಿ ದೋಸೆ | ಬೆಳಗಿನ ತಿಂಡಿಗೆ ದೋಸೆ

Different breakfast ideas : Dosa need not always be made with rice batter, even gram flour can be the best dosa mix for a change. Ridge Gourd can be used as one of the dosa ingredients. Here is easy method to make Ridge Gourd instant Dosa for a breakfast.
Story first published: Friday, June 17, 2011, 11:52 [IST]
X
Desktop Bottom Promotion