For Quick Alerts
ALLOW NOTIFICATIONS  
For Daily Alerts

ಬಾಯಲ್ಲಿ ನೀರೂರಿಸುತ್ತೆ ಮಾವಿನ ಕಾಯಿ ಅನ್ನ

|
Raw Mango Rice Recipe
ಟೊಮೆಟೊ ರೈಸ್, ಲೆಮನ್ ರೈಸ್ ಅಥವಾ ಚಿತ್ರಾನ್ನ ಸಾಮಾನ್ಯವಾಗಿ ಮಾಡ್ತಾ ಇರ್ತೀವೆ. ಆದರೆ ಮಾವಿನ ಕಾಯಿ ಅನ್ನ ಮಾವಿನ ಕಾಯಿ ಸಮಯದಲ್ಲಿ ಮಾತ್ರ ಮಾಡಲು ಸಾಧ್ಯ. ಈ ಅನ್ನ ತುಂಬಾ ರುಚಿಯಾಗಿರುತ್ತದೆ. ಇದನ್ನು ಸುಲಭದಲ್ಲಿಯೆ ತಯಾರಿಸಬಹುದಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು:

1.ಸ್ವಲ್ಪ ಗೋಡಂಬಿ
2. 1/2 ಕೆಜಿ ಬಾಸುಮತಿ ಅಕ್ಕಿ

ಮಸಾಲೆ ಸಾಮಾಗ್ರಿಗಳು:

* 1/4 ಚಮಚ ಅರಿಶಿಣ ಪುಡಿ
* ಸ್ವಲ್ಪ ಸಾಸಿವೆ
* ಕೆಂಪು ಮೆಣಸಿನ ಕಾಯಿ (ಖಾರಕ್ಕೆ ತಕ್ಕಷ್ಟು)
* 1 ಕಪ್ ಮಾವಿನ ಕಾಯಿ ತುರಿ (ಕಮ್ಮಿ ಹುಳಿಯಿರುವ ಮಾವಿನಕಾಯಿಯಾದರೆ ಒಂದೂವರೆ ಕಪ್)
* ತುರಿದ ತೆಂಗಿನ ಕಾಯಿ 1 ಕಪ್
* ಸ್ವಲ್ಪ ಇಂಗು

ಒಗ್ಗರಣೆಗೆ:
* 1 ಚಮಚ ಬೇಳೆ
* 1 ಕೆಂಪು ಮೆನಸಿನ ಕಾಯಿ
* ಸಾಸಿವೆ
* ಕರಿಬೇವಿನ ಎಲೆ
* ಎಣ್ಣೆ

ತಯಾರಿಸುವ ವಿಧಾನ:

1. ಬೆಂದ ಅನ್ನವನ್ನು ಬಿಸಿ ಆರಲು ಇಡಬೇಕು.

2.
ಈಗ ಮಸಾಲೆಗೆ ತೆಂಗಿನ ಕಾಯಿ ತುರಿ, ಇಂಗು, ಕೆಂಪು ಮೆಣಸಿನ ಕಾಯಿ, ಅರಿಶಿಣ ಪುಡಿ, ಸಾಸಿವೆ ಹಾಕಿ ಮಿಕ್ಸಿಯಲ್ಲಿ ಅರೆಯಬೇಕು. ಈಗ ತುರಿದ ಮಾವಿನ ಕಾಯಿ ಹಾಕಿ ಪೇಸ್ಟ್ ರೀತಿ ಮಾಡಬೇಕು.

3. ಈಗ ಸ್ವಲ್ಪ ದೊಡ್ಡ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಬೇಳೆ ಹಾಕಬೇಕು. ಸಾಸಿವೆ ಚಟಾಪಟಾ ಶಬ್ದ ಬರುವಾಗ ಗೋಡಂಬಿ ಮತ್ತು ಕರಿಬೇವಿನ ಎಲೆ ಹಾಕಬೇಕು. ಬೇಳೆ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ಸ್ವಲ್ಪ ತುರಿದ ಮಾವಿನ ಕಾಯಿ ಹಾಕಿ ಸೌಟ್‌ನಿಂದ ಆಡಿಸುತ್ತಾ 3-4 ನಿಮಿಷ ಬೇಯಿಸಬೇಕು.

4. ಈಗ ಅರೆದ ಮಾವಿನಕಾಯಿ ಮಿಶ್ರಣವನ್ನು ಹಾಕಿ ಬೇಯಿಸಬೇಕು. ಮಾವಿನ ಕಾಯಿಯ ಹಸಿ ವಾಸನೆ ಹೋಗುವವರೆಗೆ ಬೇಯಿಸಬೇಕು.

5. ಈಗ ತಣ್ಣಗಾದ ಅನ್ನಕ್ಕೆ ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ ಅದನ್ನು ಮಸಾಲೆಗೆ ಹಾಕಿ ಮಿಶ್ರ ಮಾಡಿದರೆ ಮಾವಿನಕಾಯಿ ಅನ್ನ ರೆಡಿ.
ಇದನ್ನು ಬೆಳಗಿನ ತಿಂಡಿಗೆ ಮಾಡಿ ತಿನ್ನಬಹುದಾಗಿದೆ.

English summary

Raw Mango Rice Recipe | Tasty Mango Breakfast Recipe | ಮಾವಿನ ಕಾಯಿ ಅನ್ನ ರೆಸಿಪಿ | ರುಚಿಕರವಾದ ಬ್ರೇಕ್ ಫಾಸ್ಟ್ ರೆಸಿಪಿ

Lemon rice, Tomato rice can prepare at any time. But Mango rice recipe only can prepare mango season. So Here is a recipe of raw mango rice. This One of the tasty and healthy food for breakfast.
Story first published: Monday, April 16, 2012, 13:10 [IST]
X
Desktop Bottom Promotion