For Quick Alerts
ALLOW NOTIFICATIONS  
For Daily Alerts

World Down Syndrome Day: ಮಗು ಡೌನ್‌ ಸಿಂಡ್ರೋಮ್‌ನಿಂದ ಹುಟ್ಟಲು ಕಾರಣವೇನು?

|

ಮಗು ಡೌನ್‌ ಸಿಂಡ್ರೋಮ್‌ನಿಂದ(ವಿಶೇಷ ಚೇತನವಾಗಿ) ಹುಟ್ಟಲು ಕಾರಣವೇನೆಂದು ವೈದ್ಯರು ಹೇಳಿದರೂ ಹಾಗೇಕೆ ಹುಟ್ಟುತ್ತಾರೆ ಎಂಬುವುದು ಇನ್ನೂ ತಿಳಿದು ಬಂದಿಲ್ಲ. ಆದ್ದರಿಂದ ಮಗು ಡೌನ್‌ ಸಿಂಡ್ರೋಮ್‌ನಿಂದ ಹುಟ್ಟುವ ಸಾಧ್ಯತೆ ಇದೆಯೇ ಎಂದು ಹೇಳಲು ಸಾಧ್ಯವಾಗುವುದಿಲ್ಲ.

Down Syndrome In Babies

ಡೌನ್ ಸಿಂಡ್ರೋಮ್‌ನಿಂದ ಮಕ್ಕಳು ಹುಟ್ಟುವ ಸಮಸ್ಯೆ ವಿಶ್ವದ ಎಲ್ಲಾ ಕಡೆ ಕಂಡು ಬರುತ್ತದೆ. ವಿಶ್ವದಲ್ಲಿ ಹುಟ್ಟುವ ಮಕ್ಕಳಲ್ಲಿ ಶ. 3ರಿಂದ 4ರಷ್ಟು ಮಕ್ಕಳು ಡೌನ್‌ ಸಿಂಡ್ರೋಮ್‌ನಿಂದ ಹುಟ್ಟುತ್ತವೆ. ಗರ್ಭಿಣಿಯಾಗಿದ್ದಾಗ ಸ್ವಲ್ಪ ಅಥವಾ ಸಂಪೂರ್ಣ ಅಧಿಕ ಕ್ರೋಮೋಸೋಮ್ 21 ಸಮಸ್ಯೆಯಿಂದಾಗಿ ಮಗು ಡೌನ್‌ ಸಿಂಡ್ರೋಮ್‌ನಿಂದ ಹುಟ್ಟುತ್ತದೆ.

ವಯಸ್ಸು ಅಧಿಕವಾದರೆ ಡೌನ್ ಸಿಂಡ್ರೋಮ್ ಅಪಾಯ ಹೆಚ್ಚು

ವಯಸ್ಸು ಅಧಿಕವಾದರೆ ಡೌನ್ ಸಿಂಡ್ರೋಮ್ ಅಪಾಯ ಹೆಚ್ಚು

ಚಿಕ್ಕ ಪ್ರಾಯದಲ್ಲಿ ಗರ್ಭಿಣಿಯಾಗುವ ತಾಯಿಂದಿರ ಮಕ್ಕಳಲ್ಲಿಯೂ ಡೌನ್‌ ಸಿಂಡ್ರೋಮ್ ಕಂಡು ಬರುತ್ತದೆ ಆದರೆ ಈ ರೀತಿಯಾಗುವ ಸಾಧ್ಯತೆ ತುಂಬಾ ಕಡಿಮೆ. ಆದರೆ ವಯಸ್ಸು 40 ದಾಟಿದ ಮೇಲೆ ಗರ್ಭಿಣಿಯಾದರೆ ಮಕ್ಕಳು ಡೌನ್‌ ಸಿಂಡ್ರೋಮ್‌ನಿಂದ ಹುಟ್ಟುವ ಸಾಧ್ಯತೆ ಹೆಚ್ಚು.

ಗರ್ಭಿಣಿಯಾಗುವ ವಯಸ್ಸು 30 ದಾಟಿದ್ದರೆ

ಗರ್ಭಿಣಿಯಾಗುವ ವಯಸ್ಸು 30 ದಾಟಿದ್ದರೆ

25 ವಯಸ್ಸಿನ ಒಳಗೆ ಗರ್ಭಧಾರಣೆಯಾಗಿ ಹುಟ್ಟಿದವರ ಮಕ್ಕಳ ಅಂಕಿ ಅಂಶ ನೋಡಿದರೆ 1200:1 ಅಂದರೆ ಹುಟ್ಟಿದ 1200 ಮಕ್ಕಳಲ್ಲಿ 1 ಮಗುವಿನಲ್ಲಿ ಡೌನ್‌ ಸಿಂಡ್ರೋಮ್ ಲಕ್ಷಣ ಕಾಣಿಸಬಹುದು. ಅದೇ 35ರ ಬಳಿಕ ಗರ್ಭವತಿಯಾಗಿ ಜನಿಸಿದವರ ಮಕ್ಕಳಲ್ಲಿ 350 ಮಕ್ಕಳಲ್ಲಿ ಒಂದು ಮಗುವಿನಲ್ಲಿ ಡೌನ್ ಸಿಂಡ್ರೋಮ್ ಲಕ್ಷಣ ಕಾಣಿಸಬಹುದು, ಅದೇ ವಯಸ್ಸು 40 ದಾಟುತ್ತಿದ್ದಂತೆ ಹುಟ್ಟಿದ 100 ಮಕ್ಕಳಲ್ಲಿ ಒಂದು ಮಗುವಿನಲ್ಲಿ ಡೌನ್ ಸಿಂಡ್ರೋಮ್ ಲಕ್ಷಣ ಕಾಣಿಸುವುದು.

ವಯಸ್ಸಾ 30 ದಾಟಿದ ಮೇಲೆ ಗರ್ಭಿಣಿಯಾದರೆ ಈ ಅಪಾಯಗಳಿವೆ

ವಯಸ್ಸಾ 30 ದಾಟಿದ ಮೇಲೆ ಗರ್ಭಿಣಿಯಾದರೆ ಈ ಅಪಾಯಗಳಿವೆ

ವಯಸ್ಸು ಹೆಚ್ಚಾಗಿ ಗರ್ಭವತಿಯಾದರೆ ಮಕ್ಕಳು ಡೌನ್‌ ಸಿಂಡ್ರೋಮ್‌ನಿಂದ ಹುಟ್ಟುವ ಸಾಧ್ಯತೆ ಹೆಚ್ಚು. ಇನ್ನು ವಯಸ್ಸು 30 ದಾಟಿದ ಮೇಲೆ ಗರ್ಭವತಿಯಾದರೆ ತೊಂದರೆಗಳು ಉಂಟಾಗಬಹುದು:

  • ಗರ್ಭಪಾತ
  • ಅಂಗವೈಕಲ್ಯ
  • ಅವಳಿ ಮಕ್ಕಳ ಜನನ
  • ಅಧಿಕ ರಕ್ತದೊತ್ತಡ
  • ಗರ್ಭಾವಸ್ಥೆಯಲ್ಲಿ ಮಧುಮೇಹ
  • ಹೆರಿಗೆ ಸಮಯದಲ್ಲಿ ತೊಂದರೆ ಉಂಟಾಗುವುದು
  • ಮೊದಲ ತ್ರೈಮಾಸಿಕದಲ್ಲಿ ಮಾಡಿಸಬೇಕಾದ ಪರೀಕ್ಷೆ

    ಮೊದಲ ತ್ರೈಮಾಸಿಕದಲ್ಲಿ ಮಾಡಿಸಬೇಕಾದ ಪರೀಕ್ಷೆ

    ಅಮೆರಿಕಾದ Obstetrics and Gynecology ಕಾಲೇಜು ಗರ್ಭಿಣಿಯರು ವಂಶವಾಹಿಯಾದ ಸಮಸ್ಯೆಗಳ ಕುರಿತು ಪರೀಕ್ಷೆ ಮಾಡಿಸುವುದು ಒಳ್ಳೆಯದು. ಗರ್ಭಿಣಿಯರಿಗೆ 11ರಿಂದ 14 ವಾರಗಳು ತುಂಬುವಷ್ಟರಲ್ಲಿ ರಕ್ತ ಪರೀಕ್ಷೆ ಹಾಗೂ ಅಲ್ಟ್ರಾಸೌಂಡ್ (nuchal translucency ಅಂದರೆ ಭ್ರೂಣದ ಕುತ್ತಿಗೆ ಹಿಂಭಾಗದ ದಪ್ಪವನ್ನು ಪರೀಕ್ಷೆ ಮಾಡುವುದು).

    ಈ ಮೂಲಕ ಶೇ. 82ರಿಂದ 87 ಕೇಸ್‌ಗಳಲ್ಲಿ ಮಗುವಿಗೆ ಡೌನ್ ಸಿಂಡ್ರೋಮ್ ಇದೆಯೇ ಎಂದು ಪರೀಕ್ಷೆ ಮಾಡಿ ತಿಳಿಯಬಹುದು. ಇನ್ನು ಗರ್ಭಿಣಿಯ ವಯಸ್ಸು 35 ದಾಟಿದ್ದರೆ ವೈದ್ಯರು DNA ಪರೀಕ್ಷೆ ಮಾಡಿಸಲು ಸಲಹೆ ನೀಡುತ್ತಾರೆ. ಮೊದಲ ತ್ರೈಮಾಸಿಕದಲ್ಲಿ ಈ ಪರೀಕ್ಷೆ ಮಾಡಿಸಿದರೆ ಶೇ.99ರಷ್ಟು ತಿಳಿದು ಬರುತ್ತದೆ.

    ಎರಡನೇಯ ತ್ರೈಮಾಸಿಕದಲ್ಲಿ ಮಾಡಿಸಬೇಕಾದ ಪರೀಕ್ಷೆ

    ಎರಡನೇಯ ತ್ರೈಮಾಸಿಕದಲ್ಲಿ ಮಾಡಿಸಬೇಕಾದ ಪರೀಕ್ಷೆ

    ಇನ್ನು ಎರಡನೇಯ ತ್ರೈಮಾಸಿಕದಲ್ಲಿ ಮಲ್ಟಿಪಲ್ ಮಾರ್ಕರ್ ಸ್ಕ್ರೀನಿಂಗ್, ಸ್ಕ್ವಾಡ್‌ ಸ್ಕ್ರೀನಿಂಗ್‌ ಮಾಡಿಸಿದರೆ ಶೇ.80ರಷ್ಟು ತಿಳಿದು ಬರುತ್ತದೆ. ಒಂದು ವೇಳೆ ಸ್ಕ್ರೀನಿಂಗ್‌ನಲ್ಲಿ ಡೌನ್‌ ಸಿಂಡ್ರೋಮ್‌ ಲಕ್ಷಣ ಕಂಡು ಬಂದರೆ ಕ್ರೋನಿಕ್ ವಿಲ್ಲಸ್ ಸ್ಯಾಂಪ್ಲಿಂಗ್ (CVS) ಪರೀಕ್ಷೆ ಮಾಡಿಸಬಹುದು.

    ಮಕ್ಕಳು ಡೌನ್‌ ಸಿಂಡ್ರೋಮ್‌ನಿಂದ ಹುಟ್ಟುವುದನ್ನು ತಡೆಗಟ್ಟಲು ಗರ್ಭಿಣಿಯಾಗಿದ್ದಾಗ ಮಗು ಹಾಗೂ ತಾಯಿಯ ಆರೋಗ್ಯದ ಬಗ್ಗೆ ತುಂಬಾ ಗಮನ ನೀಡಬೇಕು. ಚೆನ್ನಾಗಿ ತಿನ್ನಬೇಕು, ಗರ್ಭಿಣಿಯಾಗಿದ್ದಾಗ ವಿಟಮಿನ್ಸ್ ತೆಗೆದುಕೊಳ್ಳಬೇಕು ಹಾಗೂ ವೈದ್ಯರ ಸಲಹೆಗಳನ್ನು ಪಾಲಿಸಬೇಕು.

English summary

What Is The Reasons For Down Syndrome In Babies

Here what are the reasons for down syndrome in babies and how maternal age factor affect pregnancy Read on.
X
Desktop Bottom Promotion