For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆ ವೇಳೆ ಎಷ್ಟು ತೂಕ ಹೆಚ್ಚಾದರೆ ಒಳ್ಳೆಯದು?

|

ಗರ್ಭಧಾರಣೆಯ ಸಂದರ್ಭದಲ್ಲಿ ಮಹಿಳೆಯರ ದೇಹ ತೂಕ ಹೆಚ್ಚಳವಾಗುವುದು ಸಹಜ. ಗರ್ಭದಲ್ಲಿ ಮತ್ತೊಂದು ಜೀವವು ಬೆಳೆಯುತ್ತಿರುವ ಕಾರಣದಿಂದಾಗಿ ಗರ್ಭಧಾರಣೆಯ ಆರಂಭದಿಂದ ಹಿಡಿದು ಕೊನೆಯ ತನಕ ದೇಹದ ತೂಕ ನಿಯಮಿತವಾಗಿ ಹೆಚ್ಚುತ್ತಾ ಹೋಗುವುದು. ಇದರ ಬಗ್ಗೆ ಕೆಲವರಲ್ಲಿ ಚಿಂತೆ ಮೂಡುವುದು. ಆದರೆ ದೇಹದ ತೂಕ ಹೆಚ್ಚಳವಾದರೆ ಖಂಡಿತವಾಗಿಯೂ ಚಿಂತೆ ಮಾಡಬೇಕಾಗಿಲ್ಲ.

During Pregnancy How Much Weight Should Gain

ಆದರೆ ಗರ್ಭಧಾರಣೆಗೆ ಮೊದಲು ನೀವು ತುಂಬಾ ಕೃಶ ಶರೀರ ಹೊಂದಿದ್ದರೆ ಆಗ ಖಂಡಿತವಾಗಿಯೂ ನೀವು ಸ್ವಲ್ಪ ತೂಕ ಹೆಚ್ಚಳ ಮಾಡಿಕೊಳ್ಳಬೇಕು. ಇದು ಅನಿವಾರ್ಯ ಕೂಡ. ಆದರೆ ಗರ್ಭಧಾರಣೆ ಸಂದರ್ಭದಲ್ಲಿ ಉಂಟಾದ ದೇಹದ ತೂಕವು ಹೆರಿಗೆ ಬಳಿಕ ಕಡಿಮೆ ಆಗುವುದು. ಆದರೆ ಕೆಲವರಲ್ಲಿ ಇದು ಹಾಗೆ ಉಳಿಯುವ ಸಾಧ್ಯತೆಯು ಇದೆ. ಇಂತಹ ಸಂದರ್ಭದಲ್ಲಿ ನೀವು ಇದಕ್ಕೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಆದರೆ ಗರ್ಭಧಾರಣೆಯಿಂದ ದೇಹದ ತೂಕವು ಅತಿಯಾದರೆ ಅದರಿಂದ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಉಂಟಾಗುವುದು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ಇಂತಹ ಮಹಿಳೆಯರು ತಮ್ಮ ತೂಕದ ಬಗ್ಗೆ ನಿಗಾ ಇಡುವುದು ಅಗತ್ಯವಾಗಿದೆ. ವೈದ್ಯರು ಕೂಡ ಈ ಬಗ್ಗೆ ಸೂಚಿಸಬಹುದು. ದೇಹದ ತೂಕವು ಅತಿಯಾದರೆ ಅದರಿಂದ ಮಧುಮೇಹ, ಅಧಿಕ ರಕ್ತದೊತ್ತಡ ಇತ್ಯಾದಿ ಸಮಸ್ಯೆಗಳು ಬರಬಹುದು.

ಗರ್ಭಧಾರಣೆ ವೇಳೆ ಆರೋಗ್ಯಕಾರಿ ತೂಕ ಕಾಪಾಡಿಕೊಳ್ಳಲು ನಾವು ನಿಮಗೆ ಇಲ್ಲಿ ಕೆಲವೊಂದು ವಿಧಾನಗಳನ್ನು ತಿಳಿಸಿಕೊಡಲಿದ್ದೇವೆ.

ಬಿಎಂಐ ತಿಳಿಯುವುದು

ಬಿಎಂಐ ತಿಳಿಯುವುದು

ಗರ್ಭಧಾರಣೆ ವೇಳೆ ಮಹಿಳೆಯರು 11ರಿಂದ 16 ಕೆಜಿ ತನಕ ದೇಹದ ತೂಕ ಹೆಚ್ಚಿಸಿಕೊಳ್ಳಬಹುದು ಎಂದು ಹೇಳಲಾಗಿದೆ. ಆದರೆ ಇದು ಮಹಿಳೆಯರ ಬಾಡಿ ಮಾಸ್ ಇಂಡೆಕ್ಸ್ ಅಥವಾ ಬಿಎಂಐಯನ್ನು ನಿರ್ಧರಿಸಿರುವುದು. ಬಿಎಂಐ ಸಾಮಾನ್ಯವಾಗಿರುವ ಮಹಿಳೆಯರು ಇಷ್ಟು ತೂಕ ಹೆಚ್ಚಿಸಬಹುದು. ಬಿಎಂಐಯನ್ನು ತೂಕ ಮತ್ತು ಎತ್ತರದಿಂದ ನಿಗದಿ ಮಾಡಲಾಗುತ್ತದೆ. ಹೀಗಾಗಿ ನೀವು ಮೊದಲು ಬಿಎಂಐ ತಿಳಿಯಿರಿ.

ಎಷ್ಟು ತೂಕ ಹೆಚ್ಚಿಸಬೇಕು ಮತ್ತು ಯಾವಾಗ

ಎಷ್ಟು ತೂಕ ಹೆಚ್ಚಿಸಬೇಕು ಮತ್ತು ಯಾವಾಗ

ತೂಕ ಹೆಚ್ಚಿಸಿಕೊಳ್ಳಲು ವಿವಿಧ ರೀತಿಯ ಅಂಶಗಳು ಒಳಗೊಂಡಿದೆ. ಇದರಲ್ಲಿ ಮುಖ್ಯವಾಗಿ ನಿಮ್ಮ ಚಯಾಪಚಯ, ದೈಹಿಕ ಚಟುವಟಿಕೆ ಮತ್ತು ಅನುವಂಶೀಯತೆಯು ಒಳಗೊಂಡಿದೆ. ಹೀಗಾಗಿ ನೀವು ಗರ್ಭಧಾರಣೆ ವೇಳೆ ವೈದ್ಯರನ್ನು ಭೇಟಿಯಾಗುತ್ತಲಿರಬೇಕು. ಗರ್ಭಿಣಿಯರು ತೂಕ ಹೆಚ್ಚಿಸಿಕೊಳ್ಳುವುದು ಬಿಎಂಐ ಆಧರಿಸಿಕೊಂಡಿದ್ದರೂ ಇದು ವಿವಿಧ ತ್ರೈಮಾಸಿಕವನ್ನು ಅವಲಂಬಿಸಿದೆ.

ಮೊದಲ ತ್ರೈಮಾಸಿಕದಲ್ಲಿ ಭ್ರೂಣವು ಸಣ್ಣದಾಗಿರುವುದು ಮತ್ತು ಈ ವೇಳೆ ನೀವು ಒಂದುವರೆಯಿಂದ ಎರಡು ಕೆಜಿ ತೂಕ ಹೆಚ್ಚಿಸಬಹುದು. ಮಾರ್ನಿಂಗ್ ಸಿಕ್ನೆಸ್ ಸಮಸ್ಯೆ ಕಾಡುತ್ತಲಿದ್ದರೆ ಆಗ ನೀವು ತೂಕ ಹೆಚ್ಚಳ ಮಾಡಿಕೊಳ್ಳಬೇಕು. ಇದರ ಬಳಿಕ ಹಸಿವು ಹೆಚ್ಚಾಗುವುದು ಮತ್ತು ಎರಡನೇ ತ್ರೈಮಾಸಿಕದಲ್ಲಿ ನೀವು ಈ ತೂಕ ಹೆಚ್ಚಿಸಿಕೊಳ್ಳುವಿರಿ.

ಎರಡನೇ ತ್ರೈಮಾಸಿಕದಲ್ಲಿ ಶಿಶು ಬೆಳೆಯಲು ಆರಂಭವಾಗುವುದು. ಹೀಗಾಗಿ ನಿಮ್ಮ ತೂಕವು ಹೆಚ್ಚಳವಾಗುವುದು ಮತ್ತು ಸುಮಾರು ಆರುವರೆ ಕೆಜಿಯಷ್ಟು ತೂಕ ಹೆಚ್ಚಾಗಬಹುದು.

ಮೂರನೇ ತ್ರೈಮಾಸಿಕದಲ್ಲಿ ಶಿಶುವಿನ ಬೆಳವಣಿಗೆಯು ವೇಗ ಪಡೆಯುವ ಕಾರಣದಿಂದಾಗಿ ತೂಕವು ಹೆಚ್ಚಳವಾಗುವುದು. ಇಲ್ಲಿ ನೀವು 4.5 ಕೆಜಿ ತೂಕ ಹೆಚ್ಚಳ ಮಾಡಬಹುದು. ಕೆಲವು ಮಹಿಳೆಯರಲ್ಲಿ ತೂಕವು ಸ್ಥಿರವಾಗಿ ಇರುವುದು ಅಥವಾ 9ನೇ ತಿಂಗಳಲ್ಲಿ ಇದು ಸ್ವಲ್ಪ ಇಳಿಕೆ ಆಗುವುದು.

ಶಿಶುವಿಗೆ ಸರಿಯಾದ ಪೋಷಕಾಂಶಗಳು ಹಾಗೂ ಕ್ಯಾಲರಿ ಬೆಳವಣಿಗೆಗೆ ಬೇಕಾಗಿರುವ ಕಾರಣದಿಂದಾಗಿ ನೀವು ನಿಗದಿತ ಪ್ರಮಾಣದಲ್ಲಿ ತೂಕ ಹೆಚ್ಚಳ ಮಾಡಿಕೊಳ್ಳಬೇಕು. ನಿಮ್ಮ ಬಿಎಂಐಗೆ ಅನುಗುಣವಾಗಿ ತ್ರೈಮಾಸಿಕದಲ್ಲಿ ತೂಕ ಹೆಚ್ಚಳ ಮಾಡಿಕೊಳ್ಳಬಹುದು.

ಅವಳಿ ಮಕ್ಕಳಿದ್ದರೆ

ಅವಳಿ ಮಕ್ಕಳಿದ್ದರೆ

ಅವಳಿ ಮಕ್ಕಳಿದ್ದರೆ ಆಗ ಸಾಮಾನ್ಯವಾಗಿ 15ರಿಂದ 24 ಕೆಜಿ ತನಕ ತೂಕ ಹೆಚ್ಚಳ ಮಾಡಬೇಕು. ತೂಕ ಹೆಚ್ಚಳವಿರುವಂತಹ ಮಹಿಳೆಯರು 14ರಿಂದ 22 ಕೆಜಿ ಮತ್ತು ಬೊಜ್ಜು ದೇಹವನ್ನು ಹೊಂದಿರುವ ಮಹಿಳೆಯರು 12-21 ಕೆಜಿ ತನಕ ದೇಹದ ತೂಕ ಹೆಚ್ಚಳ ಮಾಡಿಕೊಳ್ಳುವರು.

ಆದರೆ ಇದೆಲ್ಲವನ್ನು ಪಾಲಿಸಿಕೊಂಡು ಹೋಗುವುದು ತುಂಬಾ ಕಷ್ಟ. ಯಾಕೆಂದರೆ ಕೆಲವು ವಾರಗಳ ಬಳಿಕ ನಿಮಗೆ ಬಯಕೆಯು ಹೆಚ್ಚಾಗುತ್ತದೆ ಮತ್ತು ಅದರಿಂದ ದೇಹದ ತೂಕವು ಏರುವುದು. ಕೆಲವೊಂದು ಸಲ ಅತಿಯಾಗಿ ತಿನ್ನಬಹುದು. ಆದರೆ ನೀವು ತೂಕದ ಅಳತೆ ಇಟ್ಟುಕೊಂಡು ನಿಮ್ಮ ಆಹಾರ ಕ್ರಮದ ಮೇಲೆ ಒತ್ತಡ ಹಾಕಿಕೊಳ್ಳಬೇಡಿ.

ತೂಕ ಎಲ್ಲಿ ಹೋಗುವುದು

ತೂಕ ಎಲ್ಲಿ ಹೋಗುವುದು

ಗರ್ಭಧಾರಣೆ ವೇಳೆ ತೂಕ ಹೆಚ್ಚಳವಾದರೆ ಅದು ಕೇವಲ ಹೊಟ್ಟೆಯಲ್ಲೇ ಇರುವುದು ಎಂದು ಭಾವಿಸಲಾಗುತ್ತದೆ. ಆದರೆ ಇದು ಸಂಪೂರ್ಣ ದೇಹದಲ್ಲಿ ಹಂಚಿ ಹೋಗಿರುವುದು.

13 ಕೆಜಿ ತೂಕ ಹೆಚ್ಚಿಸಿಕೊಂಡರೆ ಆಗ ಅದರಲ್ಲಿ

3.40 ಕೆಜಿ ಮಗುವಿಗೆ

ಜರಾಯು: 700 ಗ್ರಾಂ

ಆಮ್ನಿಯೋಟಿಕ್ ದ್ರವ 900 ಗ್ರಾಂ

ಗರ್ಭಕೋಶ ಉಬ್ಬಿರುವುದು 900 ಗ್ರಾಂ

ಗರ್ಭಧಾರಣೆ ಸ್ತನಗಳ ಅಂಗಾಂಶಗಳು 900 ಗ್ರಾಂ

ಗರ್ಭಧಾರಣೆ ರಕ್ತದ ಮಟ್ಟ 1.8 ಕೆ.ಜಿ

ತಾಯಿಯ ಅಂಗಾಂಶಗಳು 1.8 ಕೆಜಿ

ತಾಯಿಯ ಕೊಬ್ಬಿನ ಸಂಗ್ರಹ 3 ಕೆಜಿ

ಮಗು ಆರೋಗ್ಯಕರವಾಗಿ ಇರಬೇಕಾದರೆ ಆಗ ಈ ಎಲ್ಲಾ ಭಾಗಗಳಲ್ಲಿ ತೂಕ ಹೆಚ್ಚಳವಾಗುವುದು ಅಗತ್ಯವಾಗಿದೆ. ಇದರಿಂದ ನೀವು ಹರಿಗೆಗೆ ತಯಾರಾಗಬಹುದು ಮತ್ತು ಮಗುವಿನ ಆರೋಗ್ಯವು ಚೆನ್ನಾಗಿರುವುದು.

ತೂಕ ಮಾಡಿಕೊಳ್ಳುವುದು

ತೂಕ ಮಾಡಿಕೊಳ್ಳುವುದು

ತೂಕ ಹೆಚ್ಚಳದ ಬಗ್ಗೆ ನೀವು ಹೆಚ್ಚು ಗಮನಹರಿಸಬೇಕು ಮತ್ತು ಇದನ್ನು ನೀವು ಆಗಾಗ ತೂಕ ನೋಡಿಕೊಂಡರೆ ಒಳ್ಳೆಯದು. ಅದು ಹೇಗೆ ಎಂದು ತಿಳಿಯಿರಿ.

ದಿನದ ಒಂದೇ ಸಮಯದಲ್ಲಿ

ಒಂದೇ ಬಟ್ಟೆ ಧರಿಸಿಕೊಂಡು

ಒಂದೇ ಅಳತೆ ಯಂತ್ರದಲ್ಲಿ ತೂಕ ನೋಡಿ

ವಾರದಲ್ಲಿ ಒಂದು ಸಲ (ದಿನದಿಂದ ದಿನಕ್ಕೆ ಕೆಲವೊಂದು ಬದಲಾವಣೆ ಆಗುವುದು. ಇದರಿಂದ ಭೀತಿಗೊಳ್ಳುತ್ತಿದ್ದರೆ ನೀವು ತಿಂಗಳಿಗೆ ಎರಡು ಸಲ ಬದಲಾವಣೆ ಮಾಡಿಕೊಂಡರೂ ಒಳ್ಳೆಯದು.)

ತಿಂಗಳಿಗೆ ಒಂದು ಸಲ ನೀವು ತೂಕ ಪರೀಕ್ಷೆ ಮಾಡಿಸಿಕೊಂಡರೂ ಒಳ್ಳೆಯದು. ಆದರೆ ನೀವು ಗಮನಿಸಬೇಕಾದ ಅಂಶವೆಂದರೆ ತಿಂಗಳಿಗೆ ಐದು ಕೆಜಿಯಷ್ಟು ತೂಕ ಹೆಚ್ಚಳವಾಗಬೇಕು ಎಂದು ತಿಳಿಯಿರಿ. ಇದರಿಂದ ನಿಮ್ಮ ಗರ್ಭಧಾರಣೆಯು ಸರಿಯಾದ ಹಾದಿಯಲ್ಲಿ ಇರುವುದು.

English summary

Weight Gain During Pregnancy: How Much Is Normal

Here we are discussing about During Pregnancy How Much Weight Should Gain. If weight and gain have always been unspeakable words to you, added pounds are about to be a plus: You're pregnant, and that means you're supposed to gain weight. Read more.
X
Desktop Bottom Promotion