For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆ ವೇಳೆ ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಸೇವನೆ: ಪ್ರಯೋಜನಗಳು, ಅಪಾಯ ಮತ್ತು ತಿನ್ನುವ ವಿಧಾನ

|

ಜೀವನದೊಳಗಡೆ ಮತ್ತೊಂದು ಜೀವವನ್ನು ಬೆಳೆಸುವುದು ಅದೊಂದು ಅದ್ಭುತ ಅನುಭವ. ಅದನ್ನು ಮಹಿಳೆಯರಿಗೆ ಮಾತ್ರ ಅನುಭವಿಸಲು ಸಾಧ್ಯ. ಗರ್ಭಧಾರಣೆಯ ಆರಂಭದಲ್ಲಿ ಸ್ವಲ್ಪ ಮಟ್ಟಿಗೆ ಕೆಲವು ಅನಾರೋಗ್ಯ ಕಾಣಿಸಿಕೊಂಡರೂ ಇದರ ಬಳಿಕ ಸಾಮಾನ್ಯವಾಗುತ್ತಾ ಹೋಗುವುದು. ಈ ವೇಳೆ ಮಗುವಿನೊಂದಿಗೆ ಮಾತನಾಡುವುದು, ಕನಸುಗಳನ್ನು ಕಟ್ಟಿಕೊಳ್ಳುವುದು ಇತ್ಯಾದಿ ಇದ್ದೇ ಇರುತ್ತದೆ.

ಅದರಲ್ಲೂ ಗರ್ಭಧಾರಣೆ ಸಮಯದಲ್ಲಿ ತಿನ್ನಬೇಕೆನ್ನುವ ಬಯಕೆಯು ಹೆಚ್ಚಾಗುತ್ತಲೇ ಇರುವುದು. ಗರ್ಭದೊಳಗೆ ಇರುವಂತಹ ಪುಟ್ಟ ಶಿಶು ಕೂಡ ಇದಕ್ಕೆ ಕಾರಣವೆಂದು ಹೇಳಬಹುದು. ಆದರೆ ಸಿಕ್ಕಿದೆಲ್ಲವನ್ನು ತಿನ್ನುವ ಬದಲು ಆರೋಗ್ಯಕಾರಿ ಆಹಾರ ಶೈಲಿ ಪಾಲಿಸಿಕೊಂಡು ಹೋದರೆ ಆಗ ಖಂಡಿತವಾಗಿಯೂ ಮಗುವಿನ ಆರೋಗ್ಯವು ಚೆನ್ನಾಗಿ ಇರುವುದು. ಹೆಚ್ಚು ಪೋಷಕಾಂಶಗಳು ಇರುವ ಆಹಾರ ಸೇವಿಸಿದರೆ ಮಗು ಹಾಗೂ ತಾಯಿಯ ಆರೋಗ್ಯವು ಚೆನ್ನಾಗಿ ಇರುವುದು.

Dry Fruits

ಗರ್ಭಧಾರಣೆ ವೇಳೆ ಮುಖ್ಯವಾಗಿ ಮಹಿಳೆಯರು ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳನ್ನು ಸೇವಿಸಬೇಕು. ಇದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಅಂಜೂರ, ಸೇಬು, ಅಕ್ರೋಡ, ಬಾದಾಮಿ, ಒಣದ್ರಾಕ್ಷಿ, ಪಿಸ್ತಾ ಇತ್ಯಾದಿಗಳು ಗರ್ಭಿಣಿಯರಿಗೆ ಒಳ್ಳೆಯದು. ಇಂತಹ ಬೀಜಗಳು ಹಾಗೂ ಹಣ್ಣುಗಳಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶ, ಆಂಟಿಆಕ್ಸಿಡೆಂಟ್, ವಿಟಮಿನ್ ಗಳು ಮತ್ತು ಖನಿಜಾಂಶಗಳಾದ ಕ್ಯಾಲ್ಸಿಯಂ, ಮೆಗ್ನಿಶಿಯಂ, ಕಬ್ಬಿನಾಂಶ ಇತ್ಯಾದಿಗಳನ್ನು ಹೊಂದಿದೆ.

ಮಾರುಕಟ್ಟೆಯಲ್ಲಿ ಸಿಗುವಂತಹ ತಾಜಾ ಹಣ್ಣುಗಳನ್ನು ಸೇವಿಸಿದರೆ ಅದು ಕೂಡ ಆರೋಗ್ಯಕ್ಕೆ ಒಳ್ಳೆಯದು. ಆದರೆ ತಾಜಾ ಹಣ್ಣುಗಳಲ್ಲಿ ಸಿಗುವಷ್ಟೇ ಪೋಷಕಾಂಶಗಳು ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳಲ್ಲಿ ಕೂಡ ಲಭ್ಯವಿದೆ. ಗರ್ಭಧಾರಣೆ ವೇಳೆ ಇದನ್ನು ಸೇವಿಸಿದರೆ ಅದು ತಾಯಿ ಹಾಗೂ ಮಗುವಿಗೆ ಬೇಕಾಗಿರುವ ಪೋಷಕಾಂಶಗಳನ್ನು ಒದಗಿಸುವುದು. ಗರ್ಭಾವಸ್ಥೆಯಲ್ಲೇ ಮಗುವಿನ ಮೆದುಳು ಚುರುಕಾಗಬೇಕೆ? ಈ ಸಲಹೆಗಳನ್ನು ಪಾಲಿಸಿ

1. ಮಲಬದ್ಧತೆ ನಿವಾರಿಸುವುದು

1. ಮಲಬದ್ಧತೆ ನಿವಾರಿಸುವುದು

ಗರ್ಭಧಾರಣೆ ಸಂದರ್ಭದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಅದು ಮಲಬದ್ಧತೆ. ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳನ್ನು ಸೇವಿಸಿದರೆ ಅದರಲ್ಲಿ ಇರುವಂತಹ ನಾರಿನಾಂಶವು ಮಲಬದ್ಧತೆ ನಿವಾರಣೆ ಮಾಡುವುದು. ಗರ್ಭಧಾರಣೆ ಸಂದರ್ಭದಲ್ಲಿ ಹಾರ್ಮೋನ್ ಅಸಮತೋಲನ ಉಂಟಾಗುವ ಕಾರಣದಿಂದಾಗಿ ಇದು ಮಲಬದ್ಧತೆಗೆ ಕಾರಣವಾಗುವುದು. ಒಣ ಹಣ್ಣುಗಳಲ್ಲಿ ಪಾಲಿಫೆನಾಲ್ ಎನ್ನುವ ಆಂಟಿಆಕ್ಸಿಡೆಂಟ್ ಕೂಡ ಸಮೃದ್ಧವಾಗಿದೆ.

2. ರಕ್ತ ಹೆಚ್ಚಿಸುವುದು

2. ರಕ್ತ ಹೆಚ್ಚಿಸುವುದು

ಗರ್ಭಿಣಿಯರ ಬಳಿ ಇಂಥಾ ವಿಷಯಗಳನ್ನು ಚರ್ಚಿಸದಿರಿ

3. ರಕ್ತದೊತ್ತಡ ನಿಯಂತ್ರಿಸುವುದು

3. ರಕ್ತದೊತ್ತಡ ನಿಯಂತ್ರಿಸುವುದು

ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳಲ್ಲಿ ಪೊಟಾಶಿಯಂ ಎನ್ನುವ ಖನಿಜಾಂಶವಿದೆ ಮತ್ತು ಇದು ರಕ್ತದ ಮಟ್ಟ ನಿಯಂತ್ರಣದಲ್ಲಿ ಇಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ಸ್ನಾಯುಗಳ ನಿಯಂತ್ರಣ ವೃದ್ಧಿಸುವುದು. ಗರ್ಭಧಾರಣೆ ವೇಳೆ ಅಧಿಕ ರಕ್ತದೊತ್ತಡವಿದ್ದರೆ ಆಗ ಹೃದಯ ಮತ್ತು ಕಿಡ್ನಿಗೆ ಒತ್ತಡ ಬೀರಬಹುದು. ಇದರಿಂದ ಹೃದಯ ಮತ್ತು ಕಿಡ್ನಿಯ ಕಾಯಿಲೆಗಳು ಹಾಗೂ ಹೃದಯಾಘಾತದ ಸಮಸ್ಯೆ ಬರಬಹುದು.

4. ಮಗುವಿನ ಹಲ್ಲು ಮತ್ತು ಮೂಳೆಗಳ ಬೆಳವಣಿಗೆಗೆ

4. ಮಗುವಿನ ಹಲ್ಲು ಮತ್ತು ಮೂಳೆಗಳ ಬೆಳವಣಿಗೆಗೆ

ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳಲ್ಲಿ ಉನ್ನತ ಮಟ್ಟದ ವಿಟಮಿನ್ ಎ, ಕೊಬ್ಬು ಹೀರಿಕೊಳ್ಳುವ ವಿಟಮಿನ್ ಗಳು ಇವೆ. ಇದು ಮಗುವಿನ ಹಲ್ಲು ಮತ್ತು ಮೂಳೆಗಳ ಬೆಳವಣಿಗೆಗೆ ಅಗತ್ಯ. ಪ್ರತಿರೋಧಕ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಇದು ನೆರವಾಗುವುದು. ಭ್ರೂಣದ ಬೆಳವಣಿಗೆಗೆ ಇದು ನೆರವಾಗುವುದು.

5. ಮೂಳೆ ಬಲಪಡಿಸುವುದು

5. ಮೂಳೆ ಬಲಪಡಿಸುವುದು

ಗರ್ಭಧಾರಣೆ ವೇಳೆ ದೇಹಕ್ಕೆ ಕ್ಯಾಲ್ಸಿಯಂ ಅತೀ ಅಗತ್ಯವಾಗಿ ಬೇಕು. ಇದರಿಂದ ದೇಹದ ಭಾರ ಸಹಿಸಿಕೊಳ್ಳಲು ಮೂಳೆಗಳು ಬಲವಾಗುವುದು. ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳು ಅದ್ಭುತವಾದ ಕ್ಯಾಲ್ಸಿಯಂ ಹೊಂದಿದೆ. ಗರ್ಭಧಾರಣೆ ವೇಳೆ ಹಲ್ಲುಗಳು ಮತ್ತು ಮೂಳೆಗಳು ಆರೋಗ್ಯವಾಗಿ ಇರಲು ಕ್ಯಾಲ್ಸಿಯಂ ಅಗತ್ಯವಾಗಿದೆ. ಇದರಿಂದ ಮೂಳೆಗಳು ಮತ್ತು ಹಲ್ಲುಗಳು ಬಲವಾಗಿ ಬೆಳೆಯುವುದು.

ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳನ್ನು ಸೇವಿಸುವುದರಿಂದ ಸಿಗುವ ಇತರ ಲಾಭಗಳು

ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳನ್ನು ಸೇವಿಸುವುದರಿಂದ ಸಿಗುವ ಇತರ ಲಾಭಗಳು

• ಖರ್ಜೂರ ಮತ್ತು ಒಣದ್ರಾಕ್ಷಿಯು ಗರ್ಭದ ಸ್ನಾಯುಗಳನ್ನು ಬಲಗೊಳಿಸುವುದು ಮತ್ತು ಹೆರಿಗೆ ತುಂಬಾ ಸರಳವಾಗಿ ಆಗುವಂತೆ ಮಾಡುವುದು. ಹೆರಿಗೆ ಬಳಿಕ ರಕ್ತಸ್ರಾವ ಆಗುವುದನ್ನು ಇದು ತಡೆಯುವುದು.

• ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳನ್ನು ಗರ್ಭಧಾರಣೆ ವೇಳೆ ಸೇವಿಸಿದರೆ ಆಗ ಅಸ್ತಮಾ ಮತ್ತು ಉಬ್ಬಸದ ಸಮಸ್ಯೆ ಕಡಿಮೆ ಮಾಡಬಹುದು.

• ಅಕ್ರೋಡ (ವಾಲ್ ನಟ್ಸ್), ಗೋಡಂಬಿ ಮತ್ತು ಬಾದಾಮಿಯಲ್ಲಿ ಉನ್ನತ ಮಟ್ಟದ ಒಮೆಗಾ 3 ಕೊಬ್ಬಿನಾಮ್ಲಗಳು ಇವೆ ಮತ್ತು ಇದು ಅಕಾಲಿಕ ಹೆರಿಗೆ ಸಮಸ್ಯೆ ನಿವಾರಣೆ ಮಾಡುವುದು. ಇದರೊಂದಿಗೆ ಮಗುವಿನ ತೂಕ ಹೆಚ್ಚಿಸುವುದು ಮತ್ತು ಪ್ರಿಕ್ಲಾಂಪ್ಸಿಯಾ ಅಪಾಯ ಕಡಿಮೆ ಮಾಡುವುದು.

ಗರ್ಭಧಾರಣೆ ವೇಳೆ ಸೇವಿಸಬಹುದಾದ ಕೆಲವು ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳು

ಗರ್ಭಧಾರಣೆ ವೇಳೆ ಸೇವಿಸಬಹುದಾದ ಕೆಲವು ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳು

ವಾಲ್ ನಟ್ಸ್(ಅಕ್ರೋಡ), ಗೋಡಂಬಿ, ಹಝೆಲ್ ನಟ್ಸ್, ಪಿಸ್ತಾ, ಬಾದಾಮಿ, ಒಣ ಅಂಜೂರ, ಒಣದ್ರಾಕ್ಷಿ, ಒಣ ಸೇಬು, ಖರ್ಜೂರ, ಒಣ ಬಾಳೆಹಣ್ಣು ಮತ್ತು ನೆಲಗಡಲೆ.

ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳ ಸೇವನೆಯಿಂದ ಆಗುವ ಅಡ್ಡಪರಿಣಾಮಗಳು

ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳ ಸೇವನೆಯಿಂದ ಆಗುವ ಅಡ್ಡಪರಿಣಾಮಗಳು

ಎದೆ ಹಾಲು ಹೆಚ್ಚಿಸಲು ಇಲ್ಲಿದೆ ನೋಡಿ ಆರು ನೈಸರ್ಗಿಕ ಮನೆಮದ್ದುಗಳು

ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳನ್ನು ಸೇವಿಸುವ ವೇಳೆ ತೆಗೆದುಕೊಳ್ಳಬೇಕಾದ ಕ್ರಮಗಳು

ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳನ್ನು ಸೇವಿಸುವ ವೇಳೆ ತೆಗೆದುಕೊಳ್ಳಬೇಕಾದ ಕ್ರಮಗಳು

* ಸಂಸ್ಕರಿತ ಮತ್ತು ಕೃತಕ ಸಕ್ಕರೆ ಹಾಕಿರುವ ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳನ್ನು ಕಡೆಗಣಿಸಿ. ಸಂಸ್ಕರಿತ ಡ್ರೈ ಫ್ರೂಟ್ಸ್ ಗಳ ಬದಲು ನೀವು ಬಿಸಿಲಿನಲ್ಲಿ ಒಣಹಾಕಿದ ಹಣ್ಣುಗಳನ್ನು ಸೇವಿಸಿ.

* ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳನ್ನು ಗಾಳಿಯಾಡದ ಡಬ್ಬದಲ್ಲಿ ಮುಚ್ಚಳ ಮುಚ್ಚಿಡಿ.

* ಹಣ್ಣುಗಳು ಕೊಳೆತಿದೆಯಾ ಮತ್ತು ವಾಸನೆ ಬರುತ್ತಿದೆಯಾ ಎಂದು ತಿನ್ನುವ ಮೊದಲು ತಿಳಿಯಿರಿ.

* ಬಣ್ಣ ಕಳೆದುಕೊಂಡಿರುವ ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳನ್ನು ಸೇವಿಸಬೇಡಿ.

ಗರ್ಭಧಾರಣೆ ಸಂದರ್ಭದಲ್ಲಿ ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳನ್ನು ಯಾವ ರೀತಿ ಸೇವಿಸಬೇಕು?

ಗರ್ಭಧಾರಣೆ ಸಂದರ್ಭದಲ್ಲಿ ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳನ್ನು ಯಾವ ರೀತಿ ಸೇವಿಸಬೇಕು?

* ಹಸಿಯಾಗಿಯೇ ಇದನ್ನು ತಿನ್ನಬಹುದು.

* ಉಪ್ಪಿಟ್ಟು, ಅವಲಕ್ಕಿ ಇತ್ಯಾದಿಗಳಿಗೆ ಇದನ್ನು ಬೆರೆಸಿಕೊಂಡು ತಿನ್ನಿ.

* ಸಲಾಡ್, ಕಸ್ಟರ್ಡ್ ಮತ್ತು ಸ್ಯಾಂಡ್ ವಿಚ್ ಗೆ ಹಾಕಿ ತಿನ್ನಬಹುದು.

* ತಿನ್ನುವ ಬಯಕೆ ಬಂದ ವೇಳೆ ಒಣ ಹಣ್ಣುಗಳು ಹಾಗೂ ಬೀಜಗಳ ಮಿಶ್ರಣವನ್ನು ಮಾಡಿಕೊಂಡು ತಿನ್ನಿ.

* ಮಿಲ್ಕ್ ಶೇಕ್ ಮತ್ತು ಸ್ಮೂಥಿಯಲ್ಲಿ ಇದನ್ನು ಬಳಸಬಹುದು.

ದಿನದಲ್ಲಿ ಎಷ್ಟು ಡ್ರೈ ಫ್ರೂಟ್ಸ್ ಮತ್ತು ನಟ್ಸ್ಗಳನ್ನು ಸೇವಿಸಬಹುದು?

ದಿನದಲ್ಲಿ ಎಷ್ಟು ಡ್ರೈ ಫ್ರೂಟ್ಸ್ ಮತ್ತು ನಟ್ಸ್ಗಳನ್ನು ಸೇವಿಸಬಹುದು?

ಡ್ರೈ ಫ್ರೂಟ್ಸ್ ಮತ್ತು ನಟ್ಸ್ಗಳಲ್ಲಿ ಅತ್ಯಧಿಕ ಮಟ್ಟದ ಕ್ಯಾಲರಿ ಇದೆ ಮತ್ತು ಇದನ್ನು ಒಂದು ಹಿಡಿಯಷ್ಟು ಸೇವಿಸಬೇಕು. ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳನ್ನು ಪಡೆಯಲು ಎಲ್ಲಾ ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳ ಮಿಶ್ರಣ ಮಾಡಿಕೊಂಡು ಸೇವಿಸಿ. ಕೇವಲ ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಸೇವಿಸಿದರೆ ಅದರಿಂದ ನೆರವಾಗದು. ತಾಜಾ ಹಣ್ಣುಗಳನ್ನು ಪ್ರತಿನಿತ್ಯವು ಸೇವಿಸಿದರೆ ಆಗ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳು ಲಭ್ಯವಾಗುವುದು.

ಸೂಚನೆ: ನೀವು ಯಾವುದೇ ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

English summary

Dry Fruits and Nuts During Pregnancy: Benefits, Risks and How to Eat

During pregnancy, food cravings are inevitable, whatever the type of food it is. And during this period, making healthy choices are important. So, why not include something healthy like dry fruits and nuts into your diet to ensure that both you and the baby remain healthy.
X
Desktop Bottom Promotion