For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲೇ ಮಗುವಿನ ಮೆದುಳು ಚುರುಕಾಗಬೇಕೆ? ಈ ಸಲಹೆಗಳನ್ನು ಪಾಲಿಸಿ

|

ಗರ್ಭದಿಂದಲೇ ಆರಂಭವಾಗುವ ತಾಯಿ ಮಗುವಿನ ಸಂಬಂಧದಲ್ಲಿ ತಂದೆಗಿಂತಲೂ ತಾಯಿಯ ಪಾತ್ರವೇ ಅಪಾರ. ತಾಯಿ ಮಾತ್ರವೇ ಮಗು ತನ್ನ ಹೊಕ್ಕುಳ ಬಳ್ಳಿಯಲ್ಲಿರುವಾಗಿನಿಂದಲೇ ಮಗುವಿನ ಪ್ರತಿಯೊಂದು ಚಲನವಲನ, ಆಟಾಟೋಪಗಳು, ಮಗುವಿನ ಸಂದೇಶಗಳನ್ನು ಅನುಭವಿಸಲು, ಅರಿಯಲು ಸಾಧ್ಯ.

ತಾಯಿಯ ಪ್ರತಿಯೊಂದು ಕ್ರಿಯೆ, ಚಟುವಟಿಕೆಗಳು ಮಗುವಿನ ಚುರುಕುತನ, ಬುದ್ಧಿಮತ್ತೆಯ ಮೇಲೂ ಅಗಾಧ ಪ್ರಭಾವ ಬೀರುತ್ತದೆ. ಮಗು ಗರ್ಭದಲ್ಲಿರುವಾಗಿನಿಂದಲೇ ತಾಯಿ ಮಗುವಿಗೆ ಶಿಕ್ಷಣವನ್ನು ನೀಡಬಹುದು.

Pregnancy

ಹಾಗಿದ್ದರೆ ಮಗುವಿನ ಬುದ್ಧಿಮತ್ತೆ, ಚುರುಕುತನವನ್ನು ಹೆಚ್ಚಿಸಲು ತಾಯಿ ಗರ್ಭಾವಸ್ಥೆಯಲ್ಲಿಯೇ ಹೇಗೆಲ್ಲಾ ತಯಾರಿ ನೀಡಬಹುದು, ಇಲ್ಲಿದೆ ಕೆಲವು ಸಲಹೆಗಳು...

ದೇಹವನ್ನು ಸುಸ್ಥಿತಿಯಲ್ಲಿಡಿ

ದೇಹವನ್ನು ಸುಸ್ಥಿತಿಯಲ್ಲಿಡಿ

ಮಗು ಮಾಡಿಕೊಳ್ಳುವ ಮುನ್ನ ತಂದೆ-ತಾಯಿ ಇಬ್ಬರೂ ನಿಮ್ಮ ದೇಹ ಹಾಗೂ ಮಾನಸಿಕವಾಗಿ ಸುಸ್ಥಿತಿಯಲ್ಲಿಟ್ಟುಕೊಳ್ಳಿ. ಆರೋಗ್ಯಯುತ, ಪೌಷ್ಟಿಕ ಆಹಾರ, ವಿಟಮಿನ್ ಆಹಾರ ಅಥವಾ ಮಾತ್ರೆಗಳು, ಆರೋಗ್ಯಕರ ತೂಕ ಎಲ್ಲವುಗಳ ಮೇಲೆ ಗಮನವಹಿಸಿ.

ಯಾವ ಆಹಾರವನ್ನು ತಿನ್ನಬೇಕು

ಯಾವ ಆಹಾರವನ್ನು ತಿನ್ನಬೇಕು

ಗರ್ಭಿಣಿಯರು ನಿತ್ಯವೂ ತಮ್ಮ ಆಹಾರದ ಬಗ್ಗೆ ಸಾಕಷ್ಟು ಕಾಳಜಿ ವಹಿಸಲೇಬೇಕು. ಕೆಲವು ಆಹಾರವನ್ನು ಕಡ್ಡಾಯವಾಗಿ ತಿನ್ನಲೇಬೇಕು ಎಂದಿದ್ದರೆ, ಕೆಲವನ್ನು ತಿನ್ನಲೇಬಾರದು ಎಂಬುದನ್ನು ತಿಳಿದಿರಬೇಕು. ಪೌಷ್ಟಿಕ ಆಹಾರ ಮಗುವಿನ ಮೆದುಳು ಬೆಳವಣಿಗೆ ವೇಳೆ ಪರಿಣಾಮಕಾರಿ. ಹಣ್ಣು, ತರಕಾರಿ, ಮೊಳಕೆ ಕಾಳುಗಳು ಹೆಚ್ಚು ಸೇವಿಸಿ.

ಪೋಷಕ ವಿಟಮಿನ್ಸ್

ಪೋಷಕ ವಿಟಮಿನ್ಸ್

ಗರ್ಭಿಣಿಯ ದೇಹಕ್ಕೆ ನಿತ್ಯ ಅಗತ್ಯವಾದಷ್ಟು ಎಲ್ಲಾ ವಿಟಮಿನ್ ಗಳನ್ನು ಆಹಾರದ ಮೂಲಕವೇ ಸೇವಿಸುವುದು ಕಷ್ಟ. ಅದಕ್ಕಾಗಿಯೇ ಕೆಲವು ಮಾತ್ರೆಗಳು ಲಭ್ಯವಿದೆ. ವೈದ್ಯರ ಸಲಹೆ ಮೇರೆಗೆ ಈ ಮಾತ್ರೆಗಳನ್ನು ಸೇವಿಸಬಹುದು.

* ವಿಟಮಿನ್ ಬಿ12

* ವಿಟಮಿನ್ ಸಿ

* ವಿಟಮಿನ್ ಡಿ

* ಜಿಂಕ್

* ಕಬ್ಬಿಣಾಂಶ

* ಫೋಲಿಕ್ ಆಸಿಡ್

ಫೋಲಿಕ್ ಆಸಿಡ್

ಫೋಲಿಕ್ ಆಸಿಡ್

ಫೋಲಿಕ್ ಆಸಿಡ್ ಅನ್ನು ನೀವು ಗರ್ಭಿಣಿಯಾಗುವ ಮುನ್ನವೇ ಆರಂಭಿಸಬಹುದು. ಈ ಮಾತ್ರೆಯು ಮಗುವಿನ ಆರೋಗ್ಯ ಹಾಗೂ ಮೆದುಳಿನ ಮೇಲೆ ಸಾಕಷ್ಟು ಪ್ರಭಾವ ಬೀರಲಿದೆ. ಅಲ್ಲದೇ ಮಗುವಿಗೆ ತಂತಾನಿಕೆ, ಹುಟ್ಟು ಕಾಯಿಲೆ ಅಥವಾ ಅಂಗಾಂಗ ವೈಫಲ್ಯಗಳನ್ನು ಈ ಮಾತ್ರೆ ತಪ್ಪಿಸುತ್ತದೆ.

ಒಮೆಗಾ 3 ಕೊಬ್ಬಿನಾಮ್ಲಗಳು

ಒಮೆಗಾ 3 ಕೊಬ್ಬಿನಾಮ್ಲಗಳು

ಮಗುವಿನ ಮೆದುಳಿನಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಇದು ಸಹಕಾರಿ. ಮೀನಿನಲ್ಲಿ ಈ ಅಂಶ ಹೆಚ್ಚಾಗಿ ಇರುತ್ತದೆ. ಆದ್ದರಿಂದ ವಾರಕ್ಕೆ ಎರಡರಿಂದ ಮೂರು ಅಥವಾ ಮೀನಿನ ಅಂಶವುಳ್ಳ ಮಾತ್ರೆಗಳನ್ನು ಸೇವಿಸಿ.

ಇತರೆ ಮಾತ್ರೆಗಳಿಂದ ದೂರವಿರಿ

ಇತರೆ ಮಾತ್ರೆಗಳಿಂದ ದೂರವಿರಿ

ಸಾಮಾನ್ಯವಾಗಿ ಕೆಮ್ಮು, ನೆಗಡಿ, ಜ್ವರ ಬಂತೆಂದರೆ ನಾವೇ ಮನೆಗಳಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳುವ ಪರಿಪಾಠ ಎಲ್ಲರಲು ಇದೆ. ಆದರೆ ನೀವು ಗರ್ಭಿಣಿಯಾಗಿರುವ ವೇಳೆ ಇಂಥಹ ಪ್ರಯತ್ನನ್ನು ಮಾಡಲೇಬೇಡಿ, ಇದು ನೇರವಾಗಿ ಮಗುವಿನ ಮೇದುಳಿನ ಮೇಲೆ ಪರಿಣಾಮ ಬೀರಲಿದೆ. ವೈದ್ಯರ ಸಲಹೆ ಇಲ್ಲದೆ ಯಾವುದೇ ಮಾತ್ರೆಗಳನು ನಿಷಿದ್ಧ.

ಆರೋಗ್ಯಕರ ತೂಕ ಕಾಪಾಡಿ

ಆರೋಗ್ಯಕರ ತೂಕ ಕಾಪಾಡಿ

ನೀವು ಗರ್ಭಿಣಿಯಾಗಿರುವ ವೇಳೆ ಅಂದಾಜು 15-40 ಪೌಂಡ್ ತೂಕ ಏರಿಕೆಯಾಗುತ್ತದೆ, ಇದು ನಿಮ್ಮ ತೂಕದ ಮೇಲೆ ಸಹ ನಿರ್ಧರಿತವಾಗಿರುತ್ತದೆ. ಆದರೆ ಅತಿಯಾದ ಆಹಾರ ಸೇವನೆಯಿಂದ ಅತಿಯಾದ ತೂಕ ಹೆಚ್ಚಳ ನಿಮಗೂ ಹಾಗೂ ಮಗುವಿಗೂ ಅಪಾಯಕಾರಿ.

ವ್ಯಾಯಾಮ

ವ್ಯಾಯಾಮ

ವ್ಯಾಯಾಮ ಎಂದಿಗೂ ದೇಹ ಹಾಗೂ ಮನಸ್ಸಿಗೆ ಆರೋಗ್ಯಕರ. ಅದರಲ್ಲೂ ಗರ್ಭಿಣಿಯರು ವ್ಯಾಯಾಮ ಮಾಡುವುದರಿಂದ ನಿಮ್ಮ ಮಾನಸಿಕ ಸ್ಥಿತಿಗೆ ಶಕ್ತಿ ಸಿಕ್ಕಂತಾಗುತ್ತದೆ, ಮೆದುಳು ಕುಗ್ಗುವಿಕೆ ಹಾಗೂ ಅರಿವಿನ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರ ಪ್ರಯೋಜನಗಳು ಮಗುವಿನ ಮೆದುಳಿಗ ಸಕಾರಾತ್ಮಕವಾಗಿ ಪರಿಣಾಮ ಬೀರಲಿದೆ. ವಾರಕ್ಕೆ 3ರಿಂದ 5ದಿನ ಕೇವಲ 30 ನಿಮಿಷಗಳ ವ್ಯಾಯಾಮ ಕಡ್ಡಾಯವಾಗಿ ಗರ್ಭಿಣಿಗೆ ಅಗತ್ಯ.

ಒತ್ತಡ ಬೇಡ

ಒತ್ತಡ ಬೇಡ

ಒತ್ತಡ ಜೀವನದಲ್ಲೂ ಸಾಮಾನ್ಯವಾಗಿರುತ್ತದೆ. ಆದರೆ ನೀವು ಗರ್ಭಿಣಿಯಾಗಿರುವ ವೇಳೆ ಇದೇ ಒತ್ತಡ ನಿಮ್ಮನ್ನು ಬಾಧಿಸಿದರೆ ಮಗುವಿನ ಮೆದುಳಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹಲವು ಸಂಶೋಧನೆಗಳ ಪ್ರಕಾರ ಗರ್ಭಿಣಿಯರು ಒತ್ತಡ ಅನಿಭವಿಸಿದಲ್ಲಿ ಮಗುವಿಗೆ ಜನ್ಮಜಾತವಾಗಿ ಮೆದುಳಿನ ಅಸಮರ್ಪಕ ಕಾರ್ಯಗಳು ಆಗಬಹುದು. ಎಷ್ಟೇ ಒತ್ತಡ ಇದ್ದರೂ ಸಮಾಧಾನವಾಗಿರಿ, ವಿಶ್ರಾಂತಿ ಪಡೆಯಿರಿ. ಗರ್ಭಿಣಿಯಾಗಿರುವ ವೇಳೆ ಜೀವನದ ಮಹತ್ವದ ಬದಲಾವಣೆಗೆ ಅವಕಾಶ ನೀಡಬೇಡಿ.

 ಮಗುವಿನ ಜತೆ ಮಾತನಾಡಿ

ಮಗುವಿನ ಜತೆ ಮಾತನಾಡಿ

ನಿಮ್ಮ ಮಗುವಿನ ಬುದ್ದಿಮತ್ತೆಯ ಮೇಲೆ ಪರಿಣಾಮ ಬೀರಲು ನಿತ್ಯ ಮಗುವಿನ ಜತೆ ಮಾತನಾಡಿ. ಆರಂಭದಲ್ಲಿ ನಿಮಗಿದು ವಿಶೇಷ ಎನಿಸಬಹುದು ಆದರೆ, ಕೆಲೆವು ದಿನಗಳ ನಂತರ ಮಗು ಸಹ ತನ್ನ ಕ್ರಿಯೆಯ ಮೂಲಕ ಪ್ರತಿಕ್ರಿಯೆ ನೀಡುತ್ತದೆ, ಈ ಮೂಲಕ ಮಗು ಗರ್ಭದಲ್ಲೇ ತಾಯಿಯ ಧ್ವನಿಯನ್ನು, ಭಾಷೆಯನ್ನು ಅರ್ಥೈಸಲು ಆರಂಭಿಸುತ್ತದೆ. ಇದು ಅತ್ಯಂತ ಹಿತಕರವಾದ ಹಾಗೂ ವರ್ಣಿಸಲಸಾಧ್ಯವಾದ ಭಾವನೆ.

ಸಂಗೀತ ಕೇಳಿ

ಸಂಗೀತ ಕೇಳಿ

ನೀವು ಸಂಗೀತ ಆಲಿಸುವುದರಿಂದ ಮಗು ಗರ್ಭದಲ್ಲೇ ಹೊಸ ಶಬ್ದ, ಸಂಗೀತದ ಏರಿಳಿತ, ಧ್ವನಿಯನ್ನು ಆಸ್ವಾದಿಸಲು, ಆನಂದಿಸಲು ಆರಂಭಿಸುತ್ತದೆ. ಇದು ಸಹ ಮಗುವಿಗೆ ಶಾಂತ ವಾತಾವರಣವನ್ನು ಕಲ್ಪಿಸುತ್ತದೆ.

ಜೀವಾಣು ವಿಷದಿಂದ ದೂರವಿರಿ

ಜೀವಾಣು ವಿಷದಿಂದ ದೂರವಿರಿ

ಇದು ಯಾರಿಗೂ ಆರೋಗ್ಯಕರವಲ್ಲ. ಮಗು ದೈಹಿಕ ಹಾಗೂ ಮಾನಸಿಕವಾಗಿ ದುರ್ಬಲವಾಗಿ ಬೆಳೆಯಲು ಇದು ನೇರ ಕಾರಣವಾಗುತ್ತದೆ. ಸ್ವಚ್ಚಗೊಳಿಸುವ ಲಿಕ್ವಿಡ್ ಗಳ ಬಳಕೆ ಬೇಡ, ಮನೆಯ ಬಣ್ಣ ಸೀಸ ಮುಕ್ತವಾಗಿರಲಿ, ಸಂಚಾರ ದಟ್ಟಣೆಯಿಂದ ಆದಷ್ಟು ದೂರವಿರಿ, ಸುತ್ತಮುತ್ತ ವಿಷಕಾರಿ ಅನಿಲ ಹೊರಹಾಕುವ ಸ್ಥಳಗಳಿಂದ ಹೊರಬನ್ನಿ

ಧೂಮಪಾನ ಮತ್ತು ಮದ್ಯಪಾನ ಬೇಡವೇ ಬೇಡ

ಧೂಮಪಾನ ಮತ್ತು ಮದ್ಯಪಾನ ಬೇಡವೇ ಬೇಡ

ಗರ್ಭಿಣಿಯಾಗಿರುವ ವೇಳೆ ಧೂಮಪಾನ ಮತ್ತು ಮದದ್ಯಪಾನ ಬೇಡವೇ ಬೇಡ. ನಿಕೊಟಿನ್ ಅಂಶ ರಕ್ತನಾಳಗಳನ್ನು ನಿರ್ಬಂಧಿಸುತ್ತದೆ ಮತ್ತು ರಕ್ತಸಂಚಾರ ಗತಿಯನ್ನು ಕಡಿಮೆಮಾಡುತ್ತದೆ. ಮದ್ಯಪಾನ ಮಗುವಿನ ಮೆದುಳು ದುರ್ಬಲವಾಗಲು ಕಾರಣವಾಗುತ್ತದೆ.

English summary

Tips To Boost Your Baby Brian Development During Pregnancy

You already know that living a healthy lifestyle while you're expecting helps your baby grow big and strong, but did you know it can make her smarter too? In fact, simple choices that you make every day, from eating a leafy-green salad for lunch to hitting the treadmill for a workout, can help build her brain.
Story first published: Friday, August 30, 2019, 15:06 [IST]
X
Desktop Bottom Promotion