For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಈ ಸೋಂಕುಗಳ ಬಗ್ಗೆ ಎಚ್ಚರವಾಗಿರಿ!

|

ಗರ್ಭಿಣಿ ಸ್ತ್ರೀಯರು, ಸಾಮಾನ್ಯ ಸಮಯಕ್ಕಿಂತಲೂ ಗರ್ಭಾವಸ್ಥೆಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಅತೀ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ಯಾಕೆಂದರೆ ಗರ್ಭಾವಸ್ಥೆಯಲ್ಲಿ ನೀವು ಮಾಡುವ ಯಾವುದೇ ನಿರ್ಲಕ್ಷ ಅಥವಾ ತಪ್ಪು ನಿಮ್ಮ ಮಗುವಿಗೆ ಹಸ್ತಾಂತರಗೊಳ್ಳಬಹುದು. ಮಗು ಹೊಟ್ಟೆಯೊಳಗೆ ಇರುವಾಗ ಮಾತ್ರವಲ್ಲದೇ ಅದು ಹುಟ್ಟಿದ ನಂತರವೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬಹುದು. ಹಾಗಾಗಿ ಗರ್ಭಿಣಿಯಾಗಿರುವಾಗ ನೀವು ಎಷ್ಟು ಕಾಳಜಿ ವಹಿಸಿದರೂ ಅದು ಕಡಿಮೆಯೇ!

Be Aware Of This Common Viral Infections During Pregnancy

ಮಗುವನ್ನು ಹಡೆಯುವುದು ಮತ್ತು ಅವನ ಅಥವಾ ಅವಳನ್ನು ತಾಯಿಯಾಗಿ ನೋಡಿಕೊಳ್ಳುವುದು ಮಹಿಳೆಯ ಜೀವನದಲ್ಲಿ ಅತ್ಯಂತ ಅಮೂಲ್ಯವಾದ ಮತ್ತು ಸಂಭ್ರಮದ ಅನುಭವವಾಗಿದೆ.

ಗರ್ಭಾವಸ್ಥೆಯಲ್ಲಿ, ತಾಯಿಯು ಸೇವಿಸುವ ಯಾವುದೇ ಪದಾರ್ಥಗಳು ಹೆರಿಗೆಯ ನಂತರವೂ ಮಗುವಿನ ಮೇಲೆ ಪರಿಣಾಮ ಬೀರುತ್ತದೆ! ಅಂತೆಯೇ, ಮಹಿಳೆ ಗರ್ಭಾವಸ್ಥೆಯಲ್ಲಿ ಕೆಲವು ವೈರಲ್ ಸೋಂಕು ಅಥವಾ ಕಾಯಿಲೆಗಳನ್ನು ಹೊಂದಿದ್ದರೆ, ಮಗುವು ಸೋಂಕಿನಿಂದ ರಕ್ಷಿಸಲ್ಪಟ್ಟಿದ್ದರೂ ಸಹ ಕೆಲವು ಸಂಬಂಧಿತ ಸಮಸ್ಯೆಗಳಿಂದ ಮುಂದೆ ಬಳಲುವ ಸಾಧ್ಯತೆಗಳೂ ಇರುತ್ತವೆ. ಹಾಗಾದರೆ ಇಂತಹ ಸೋಂಕುಗಳನ್ನು ತರಬಲ್ಲ ವೈರಸ್ ಗಳು ಯಾವವು ಮತ್ತು ಅವುಗಳಿಂದ ಹೇಗೆ ದೂರವಿರಬೇಕು ಎಂಬ್ದ್ ಬಗ್ಗೆ ಮಾಹಿತಿ ಕೊಡ್ತಿವಿ ಓದಿ.

ಗರ್ಭಾವಸ್ಥೆಯಲ್ಲಿ ವೈರಲ್ ಸೋಂಕುಗಳು

ಗರ್ಭಾವಸ್ಥೆಯಲ್ಲಿ ವೈರಲ್ ಸೋಂಕುಗಳು

ಮಾನವ ಬೆಳೆದಂತೆ, ಅನೇಕ ಸೋಂಕುಗಳನ್ನು ಎದುರಿಸುವ ರೋಗ ನಿರೋಧಕ ಶಕ್ತಿಯನ್ನು ಪಡೆಯುತ್ತಾನೆ. ಇತ್ತೀಚಿನ ದಿನಗಳಲ್ಲಿ, ಸ್ತ್ರೀರೋಗತಜ್ಞರು ಗರ್ಭಿಣಿ ಮಹಿಳೆಯರಿಗೆ ಸಾಮಾನ್ಯ ಸೋಂಕುಗಳಿಂದ ದೂರವುಳಿಯಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಕಡೆಗೆ ಕಾಳಜಿ ವಹಿಸಲು ಸೂಚಿಸುತ್ತಾರೆ, ಆದ್ದರಿಂದ ಗರ್ಭಾವಸ್ಥೆಯಲ್ಲಿ ಸೋಂಕಿನ ಸಾಧ್ಯತೆಗಳು ಮತ್ತಷ್ಟು ಕಡಿಮೆಯಾಗುತ್ತವೆ.

ಹೆಚ್ಚಿನ ಸೋಂಕುಗಳು ಮಗುವಿಗೆ ಹಾದುಹೋಗುವುದಿಲ್ಲ; ಆದಾಗ್ಯೂ, ಜನನದ ಸಮಯದಲ್ಲಿ ಅಥವಾ ಜರಾಯುವಿನ ಮೂಲಕ ಹರಡುವ ಸಾಧ್ಯತೆಗಳಿವೆ.

ಇದು ಸಂಭವಿಸಿದಲ್ಲಿ ಅದು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ ಮತ್ತು ಅವಧಿಪೂರ್ವ ಪ್ರಸವ ಬೇನೆಯಂತಹ ತೊಂದರೆಗಳಿಗೆ ಕಾರಣವಾಗಬಹುದು.

ಗರ್ಭಿಣಿ ಮಹಿಳೆಯರ ಮೇಲೆ ಪರಿಣಾಮ ಬೀರುವ ಕೆಲವು ವೈರಲ್ ಸೋಂಕುಗಳ ಪಟ್ಟಿ:

1. ಸಿಡುಬು (ಚಿಕನ್ಪಾಕ್ಸ್)

1. ಸಿಡುಬು (ಚಿಕನ್ಪಾಕ್ಸ್)

ಸಿಡುಬು ಎನ್ನುವುದು ಒಂದು ವೈರಸ್ ಸೋಂಕು. ಇದು ವೈರಿಸೆಲ್ಲಾ-ಜೋಸ್ಟರ್ ಎಂಬ ವೈರಸ್ ನಿಂದ ಉಂಟಾಗುತ್ತದೆ.

ಗರ್ಭಿಣಿ ಮಹಿಳೆಯು ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ ಸಿಡುಬು ಸೋಂಕಿಗೆ ಒಳಗಾದಾಗ, ವೈರಸ್, ಜರಾಯುವನ್ನು ದಾಟಬಹುದು ಮತ್ತು ಇದರಿಂದ ಮಗುವಿಗೆ ಸೋಂಕು ತಗಲುವ ಅಪಾಯವಿದೆ.

ಇದು ಮಗುವಿನ ಜನ್ಮ ದೋಷಗಳಾದ ಮೆದುಳಿನ ಸೆರೆಬ್ರಲ್ ಕಾರ್ಟೆಕ್ಸ್, ಕಾಲಿನ ವಿರೂಪಗಳು, ಹೈಡ್ರೋನೆಫ್ರೋಸಿಸ್ ಎಂದು ಕರೆಯಲ್ಪಡುವ ಮೂತ್ರಪಿಂಡದ ಸಮಸ್ಯೆ, ರೆಟಿನಾದಲ್ಲಿನ ಅಸಹಜತೆಗಳು ಮತ್ತು ಇನ್ನೂ ಹೆಚ್ಚಿನವುಗಳಿಗೆ ಕಾರಣವಾಗಬಹುದು.

ಹೆರಿಗೆಯ ಸಮಯದಲ್ಲಿ ಮಗುವಿಗೆ ಸಿಡುಬು ಬಂದರೆ, ಅದು ಕೇಂದ್ರ ನರಮಂಡಲದಲ್ಲಿ ಅಸಹಜತೆಯನ್ನು ಉಂಟುಮಾಡುವ ಸಾಧ್ಯತೆಗಳಿರುತ್ತವೆ.

2. ಎಂಟರೊವೈರಸ್ ಸೋಂಕುಗಳು

2. ಎಂಟರೊವೈರಸ್ ಸೋಂಕುಗಳು

ಈ ಸೋಂಕುಗಳು, ಹೆಪಟೈಟಿಸ್, ಪೋಲಿಯೊವೈರಸ್, ಕಾಕ್ಸ್ಸಾಕಿವೈರಸ್ ದಂತಹ ವೈರಸ್ ಉಪಗುಂಪುಗಳನ್ನು ಸೂಚಿಸುತ್ತವೆ, ಇದರಲ್ಲಿ ಹೆಪಟೈಟಿಸ್ ವೈರಸ್ ಹೆಚ್ಚು ಸಾಮಾನ್ಯವಾಗಿದೆ.

ಈ ವೈರಸ್ಗಳು ಚರ್ಮ, ಶ್ವಾಸಕೋಶ, ಕೇಂದ್ರ ನರಮಂಡಲಕ್ಕೆ ಸೋಂಕು ತಗುಲಿಸಬಹುದು ಮತ್ತು ತಾಯಿ ಮತ್ತು ಭ್ರೂಣ ಎರಡಕ್ಕೂ ಮಾರಕವೆಂದು ಸಾಬೀತಾಗಿದೆ.

ಹೆಪಟೈಟಿಸ್ ಎ ಮತ್ತು ಬಿ ಎರಡೂ ಸಾಮಾನ್ಯ ವೈರಲ್ ಸೋಂಕುಗಳು, ಅವುಗಳನ್ನು ಮೊದಲ ಹಂತಗಳಲ್ಲಿಯೇ ಚಿಕಿತ್ಸೆ ನೀಡದಿದ್ದರೆ ಅಪಾಯಕಾರಿ.

3. ಹೆಪಟೈಟಿಸ್ ಎ ಸೋಂಕು

3. ಹೆಪಟೈಟಿಸ್ ಎ ಸೋಂಕು

ಹೆಪಟೈಟಿಸ್ ಬಿ ಗೆ ಹೋಲಿಸಿದರೆ, ಹೆಪಟೈಟಿಸ್ ಎ ಮಂದವಾದ ವೈರಸ್ ಮತ್ತು ಕಲುಷಿತ ಮಲವಿಸರ್ಜನೆ ಅಥವಾ ಮಲದಿಂದ ಮಾನವ ದೇಹಕ್ಕೆ ಹರಡುತ್ತದೆ.

ಗರ್ಭಾವಸ್ಥೆಯಲ್ಲಿ ಈ ವೈರಲ್ ಸೋಂಕಿನ ಸಾಮಾನ್ಯ ಲಕ್ಷಣಗಳು ಆಯಾಸ, ಕಾಮಾಲೆ, ಹಸಿವಿನ ಕೊರತೆ, ಹೊಟ್ಟೆ ನೋವು, ಜ್ವರ, ಅತಿಸಾರ ಮತ್ತು ವಾಕರಿಕೆ.

ಆದಾಗ್ಯೂ ಹೆಪಟೈಟಿಸ್ ಎ ಅನ್ನು ಕಂಡುಹಿಡಿಯುವುದು ತುಂಬಾ ಕಷ್ಟ, ಏಕೆಂದರೆ ಈ ರೋಗಲಕ್ಷಣಗಳು ಬಹುತೇಕ ಎಲ್ಲಾ ವೈರಲ್ ಕಾಯಿಲೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.

ಎರಡನೆಯದಾಗಿ, ಕೆಲವು ರೋಗಿಗಳು ಹೆಪಟೈಟಿಸ್ ಎ ಸೋಂಕಿಗೆ ಒಳಗಾಗಿದ್ದರೂ ಸಹ ಈ ರೋಗಲಕ್ಷಣಗಳಿಂದ ಬಳಲುವುದಿಲ್ಲ.

ಒಂದು ಸಮಾಧಾನದ ವಿಷಯ ಏನೆಂದರೆ, ಈ ಸೋಂಕು ತಾಯಿ ಮತ್ತು ಮಗುವಿನ ಮೇಲೆ ಯಾವುದೇ ದೀರ್ಘಕಾಲೀನ ಅಡ್ಡಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಹೆಪಟೈಟಿಸ್ ಎ ಲಸಿಕೆಯೊಂದಿಗೆ ತಾಯಿಗೆ ರೋಗನಿರೋಧಕ ಚುಚ್ಚುಮದ್ದು ನೀಡುವ ಮೂಲಕ ಈ ಸೋಂಕನ್ನು ತಡೆಗಟ್ಟಲು ಸಾಧ್ಯ.

4. ಹೆಪಟೈಟಿಸ್ ಬಿ ವೈರಲ್ ಸೋಂಕು

4. ಹೆಪಟೈಟಿಸ್ ಬಿ ವೈರಲ್ ಸೋಂಕು

ಇದು ತುಂಬಾ ಗಂಭೀರವಾದ ವೈರಲ್ ಸೋಂಕು ಮತ್ತು ಯಕೃತ್ತಿನ ಕೆಲಸದ ಮೇಲೆ ಇದು ತುಂಬಾ ಪರಿಣಾಮ ಬೀರುತ್ತದೆ.

ಇದರ ರೋಗಲಕ್ಷಣಗಳು ಹೆಪಟೈಟಿಸ್ ಎ ಯಲ್ಲಿರುವಂತೆಯೇ ಇರುತ್ತವೆ; ಆದಾಗ್ಯೂ, ಹೆಪಟೈಟಿಸ್ ಬಿ ಯಲ್ಲಿ ಅವು ಹೆಚ್ಚು ತೀವ್ರವಾಗಿರುತ್ತವೆ.

ಇದಕ್ಕೆ ಕೂಡಲೇ ಚಿಕಿತ್ಸೆಯನ್ನು ಒದಗಿಸಲೇ ಬೇಕು, ಇಲ್ಲವಾದಲ್ಲಿ ಯಕೃತ್ತಿನ ಕ್ಯಾನ್ಸರ್, ಪಿತ್ತಜನಕಾಂಗದ ಸಮಸ್ಯೆ, ಪಿತ್ತಜನಕಾಂಗದ ವೈಫಲ್ಯ ಮತ್ತು ಮರಣವ್ಯ್ ಸೇರಿದಂತೆ ತಾಯಿಯಲ್ಲಿ ದೀರ್ಘಕಾಲೀನ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಹಾಗಾಗಿ ಈ ಸೋಂಕು ತಗಿಲಿದರೆ ಅತ್ಯಂತ ಎಚ್ಚರಿಕೆಯಿಂದಿರಬೇಕು ಜೊತೆಗೆ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು.

5. ಸೈಟೊಮೆಗಾಲೊವೈರಸ್

5. ಸೈಟೊಮೆಗಾಲೊವೈರಸ್

ಸೈಟೊಮೆಗಾಲೊವೈರಸ್ ಅಥವಾ ಸಿ ಎಂ ಡಬ್ಲ್ಯು ಇದು ಅಷ್ಟು ಹಾನಿಕರವಲ್ಲದ ಸೋಂಕು. ಈ ಹರ್ಪಿಸ್ ವೈರಸ್ ಸಾಮಾನ್ಯವಾಗಿ ನವಜಾತ ಮತ್ತು ಚಿಕ್ಕ ಮಕ್ಕಳಿಗೆ ಸೋಂಕು ತರುತ್ತದೆ.

ಇದರಿಂದ ನರ್ಸರಿಗಳು ಮತ್ತು ಡೇ ಕೇರ್ ಕೇಂದ್ರಗಳಲ್ಲಿ ಕೆಲಸ ಮಾಡುವ ಗರ್ಭಿಣಿ ಮಹಿಳೆಯರಿಗೆ ಹೆಚ್ಚಿನ ಅಪಾಯವಿದೆ. ಆದ್ದರಿಂದ, ಅವರು ಅಧಿಕ ಸ್ವಚ್ಛತೆಯನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿ ಬಾರಿ ಮೂತ್ರ ಅಥವಾ ಜೊಲ್ಲು (ಎಂಜಲು) ತಗುಲಿದಾಗ ಸೋಂಕುನಿವಾರಕದಿಂದ ಕೈ ತೊಳೆಯಬೇಕು.

ಇದು ಸುಮಾರು 0.5% -1.5 ಶೇಕಡಾ ಜನನಗಳ ಮೇಲೆ ಪರಿಣಾಮ ಬೀರುವ ಸಾಮಾನ್ಯ ವೈರಸ್ ಆಗಿದೆ. ಈ ಸಿ ಎಂ ಡಬ್ಲ್ಯೂನ ಜನ್ಮಜಾತ ಸೋಂಕಿನಿಂದಾಗಿ ಸುಮಾರು 40% ತಾಯಿಯರಿಗೆ ಸೋಂಕುಗಳು ಉಂಟಾಗುತ್ತವೆ ಎಂದು ಸಂಶೋಧನೆಹಳು ಸೂಚಿಸುತ್ತವೆ.

ಇಷ್ಟೇ ಅಲ್ಲ, ಇನ್ನೂ ಅನೇಕ ವೈರಲ್ ಸೋಂಕುಗಳು ಗರ್ಭಿಣಿ ಮಹಿಳೆಯರ ಮೇಲೆ ಪರಿಣಾಮ ಬೀರುತ್ತವೆ! ನಿಮ್ಮ ಗರ್ಭಾವಸ್ಥೆಯಲ್ಲಿ ಸೋಂಕಿನ ಮೂಲಗಳನ್ನು ತಪ್ಪಿಸುವುದು ಅಥವಾ ಅದರಿಂದ ದುರ ಉಳಿಯುವುದು ನಿಜಕ್ಕೂ ಕಷ್ಟಕರ. ಆದರೆ ಹೆಚ್ಚು ಹೆಚ್ಚು ರೋಗನಿರೋಧಕ ಶಕ್ತಿಯನ್ನು ಪಡೆಯುವ ಮೂಲಕ ಮತ್ತು ಉತ್ತಮ ಸ್ವಚ್ಛತೆಯನ್ನು ಅಭ್ಯಾಸ ಮಾಡಿಕೊಳ್ಳುವ ಮೂಲಕ ನೀವು ಸೋಂಕನ್ನು ಹೊಂದುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು.

ಮೇಲೆ ತಿಳಿಸಲಾದ ಯಾವುದೇ ರೋಗಲಕ್ಷಣದ ಆರಂಭಿಕ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ, ತಕ್ಷಣವೇ ವೈದ್ಯಕೀಯ ಸಹಾಯವನ್ನು ಪಡೆಯಲು ನಾವು ನಿಮಗೆ ಸೂಚಿಸುತ್ತೇವೆ. ಇದು ನಿಮ್ಮ ಹಾಗೂ ನಿಮ್ಮ ಮಗುವಿನ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಗತ್ಯ ಮತ್ತು ಅನಿವಾರ್ಯ.

English summary

Common Viral Infections During Pregnancy

Here we are discussing about Be Aware Of This Common Viral Infections During Pregnancy. Delivering a baby and taking care of him or her as a mother is one of the most precious experiences in the life of a woman. Read more.
X
Desktop Bottom Promotion