For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಈ ಕಾರಣಕ್ಕೆ ಎಳನೀರು ಸೇವಿಸಲೇಬೇಕು

|

ಗರ್ಭಾವಸ್ಥೆ ಎನ್ನುವುದು ಗರ್ಭಿಣಿ ಮಹಿಳೆಯರಿಗೆ ತುಂಬಾ ಸೂಕ್ಷ್ಮವಾದ ಸಮಯ. ಎಲ್ಲಾ ವಿಚಾರದಲ್ಲೂ ಮಹಿಳೆಯರು ಈ ಸಮಯದಲ್ಲಿ ತುಂಬಾ ಜಾಗರೂಕತೆ ವಹಿಸಬೇಕು. ಏಕೆಂದರೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅದು ಹುಟ್ಟುವ ಮಗುವಿನ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಮಗುವಿನ ಸಮಗ್ರ ಬೆಳವಣಿಗೆಯನ್ನು ಸರಿಯಾಗಿ ನಿರ್ವಹಣೆ ಮಾಡುವಂತಹ ಉನ್ನತ ಜವಾಬ್ದಾರಿ ಗರ್ಭಿಣಿ ತಾಯಿಯ ಮೇಲಿರುತ್ತದೆ. ತಾನು ಇದುವರೆಗೂ ಸೇವಿಸಿಕೊಂಡು ಬಂದಿದ್ದ ಕೆಲವೊಂದು ಆಹಾರ ಪದ್ಧತಿಗಳನ್ನು ಬಿಡಬೇಕಾಗಿ ಬರುತ್ತದೆ ಮತ್ತು ಹೊಸದನ್ನು ತಮ್ಮ ಆಹಾರ ಪದ್ಧತಿಗಳಲ್ಲಿ ಸೇರಿಸಿಕೊಳ್ಳಬೇಕಾಗಿ ಕೂಡ ಬರುತ್ತದೆ.

Benefits Of Drinking Coconut Water In Pregnancy

ಎಳನೀರಿನ ಸೇವನೆ ಇದರಲ್ಲೊಂದು. ಮಹಿಳೆ ತಾನು ಗರ್ಭಾವಸ್ಥೆಗೆ ತಲುಪುವ ಮುಂಚೆ ಕಾಫಿ, ಟೀ, ಕೂಲ್ ಡ್ರಿಂಕ್ಸ್ ನಂತಹ ಪಾನೀಯಗಳನ್ನು ಅಭ್ಯಾಸ ಮಾಡಿಕೊಂಡು ಬಂದಿರುವುದರಿಂದ ಎಳನೀರಿನ ಸೇವನೆಯ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರುವುದಿಲ್ಲ. ಆದರೆ ಗರ್ಭಾವಸ್ಥೆಗೆ ತಲುಪಿದ ನಂತರ ಎಳನೀರಿನ ಸೇವನೆ ಕಡ್ಡಾಯ ಎಂಬ ಮನಸ್ಥಿತಿಗೆ ಬರಬೇಕಾಗಬಹುದು. ಎಳನೀರು ಒಂದು ನೈಸರ್ಗಿಕ ಪಾನೀಯವಾಗಿದ್ದರೂ ಸಹ ಸೇವನೆಯಲ್ಲಿ ಮಿತಿ ಕಾಪಾಡಿಕೊಂಡರೆ ಮಹಿಳೆಯು ತನ್ನ ಆರೋಗ್ಯಕರ ಗರ್ಭಾವಸ್ಥೆಯ ದಿನಗಳನ್ನು ಅತ್ಯಂತ ಆನಂದವಾಗಿ ಕಳೆಯಬಹುದು.

ಗರ್ಭಿಣಿ ಮಹಿಳೆಯರು ಎಳನೀರು ಕುಡಿಯಬಹುದೇ ಮತ್ತು ಎಳನೀರಿನ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

 1 ಎಳನೀರು ನೈಸರ್ಗಿಕವಾದ ಡೈಯುರೆಟಿಕ್

1 ಎಳನೀರು ನೈಸರ್ಗಿಕವಾದ ಡೈಯುರೆಟಿಕ್

ಎಳನೀರಿನಲ್ಲಿ ಪೊಟ್ಯಾಶಿಯಂ, ಮೆಗ್ನೀಷಿಯಂ ಮತ್ತು ಇನ್ನಿತರ ಖನಿಜಾಂಶಗಳು ಸಾಕಷ್ಟಿವೆ. ಇವು ಮನುಷ್ಯನ ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದು ಹಾಕಲು ಪ್ರಯತ್ನ ಪಡುತ್ತವೆ. ಹಾಗಾಗಿ ಎಳನೀರನ್ನು ಸೇವನೆ ಮಾಡಿದ ಯಾರಿಗೇ ಆದರೂ ಮೂತ್ರ ವಿಸರ್ಜನೆಯ ಭಾವ ಕಾಡುತ್ತದೆ. ಗರ್ಭಿಣಿಯರಿಗೆ ಸಹ ಇದೇ ಅನುಭವ ಉಂಟಾಗುವುದರಿಂದ ತಮ್ಮ ಮೂತ್ರನಾಳದ ಹಲವಾರು ತ್ಯಾಜ್ಯಗಳನ್ನು ಸುಲಭವಾಗಿ ಹೊರ ಹಾಕಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಸಹಾಯಕ ಎನಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ಮೂತ್ರ ಪಿಂಡಗಳಲ್ಲಿ ಸೋಂಕುಗಳು ಮತ್ತು ಕಲ್ಲುಗಳು ಉಂಟಾಗದಂತೆ ನೋಡಿಕೊಳ್ಳುವ ಹೊಣೆ ಎಳನೀರಿಗೆ ಸೇರಿದೆ.

ಇತ್ತೀಚಿನ ಒಂದು ಸಂಶೋಧನೆಯಲ್ಲಿ ಮೂತ್ರನಾಳದ ಸೋಂಕಿನಿಂದ ಬಹಳಷ್ಟು ಮಹಿಳೆಯರು ತಮ್ಮ ಗರ್ಭಾವಸ್ಥೆಯ ಸಮಯದಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕೆಲವು ಮಹಿಳೆಯರು ಅವಧಿಗೆ ಮುನ್ನ ಹೆರಿಗೆ ನೋವಿಗೆ ಒಳಗೊಂಡಂತಹ ಪ್ರಕರಣಗಳು ಸಾಕಷ್ಟು ಕಂಡುಬಂದಿವೆ. ಹಾಗಾಗಿ ಸ್ತ್ರೀರೋಗ ತಜ್ಞರ ಪ್ರಕಾರ ಮಹಿಳೆಯರಿಗೆ ಎಳನೀರು ತುಂಬಾ ಸುರಕ್ಷಿತ ಅಷ್ಟೇ ಆರೋಗ್ಯಕರ. ಆದರೆ ಎಳನೀರಿನ ಸೇವನೆಯಲ್ಲಿ ಮಿತಿ ಇರಬೇಕು ಅಷ್ಟೇ.

2 ಅಗತ್ಯವಾದ ಎಲೆಕ್ಟ್ರೋಲೈಟ್ ಗಳು ಸಿಗುತ್ತವೆ

2 ಅಗತ್ಯವಾದ ಎಲೆಕ್ಟ್ರೋಲೈಟ್ ಗಳು ಸಿಗುತ್ತವೆ

ಗರ್ಭಿಣಿಯರ ದೇಹಕ್ಕೆ ಗರ್ಭಾವಸ್ಥೆಯ ಸಮಯದಲ್ಲಿ ಎಲೆಕ್ಟ್ರೋಲೈಟ್ ಗಳ ಅಗತ್ಯತೆ ಇರುತ್ತದೆ ಎಂದು ಹೇಳುತ್ತಾರೆ. ಏಕೆಂದರೆ ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಎಲ್ಲ ಮಹಿಳೆಯರು ಬೆಳಗಿನ ಸಮಯದಲ್ಲಿ ವಾಕರಿಕೆ, ವಾಂತಿ ಮತ್ತು ಭೇದಿಯಂತಹ ಆರೋಗ್ಯದ ಅಸ್ವಸ್ಥತೆಗಳನ್ನು ಅನುಭವಿಸಿ ತಮ್ಮ ದೇಹವನ್ನು ನಿರ್ಜಲೀಕರಣಗೊಳಿಸಿಕೊಳ್ಳುತ್ತಾರೆ. ಈ ಸಮಯದಲ್ಲಿ ನೈಸರ್ಗಿಕವಾಗಿ ತಮ್ಮ ದೇಹದಲ್ಲಿ ಮೊದಲೇ ಇದ್ದ ಎಲೆಕ್ಟ್ರೋಲೈಟ್ ಗಳ ಪ್ರಮಾಣ ಗಣನೀಯವಾಗಿ ತಗ್ಗಿ ಹೋಗುತ್ತದೆ.

ಇದು ಬೇರೆ ಬಗೆಯ ಆರೋಗ್ಯ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನ ಮಹಿಳೆಯರಿಗೆ ತುಂಬಾ ಮುಖ್ಯ. ಖನಿಜಾಂಶಗಳು, ಸೋಡಿಯಂ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಫಾಸ್ಪರಸ್ ಗರ್ಭಿಣಿಯರ ದೇಹಕ್ಕೆ ಶಕ್ತಿ ಮತ್ತು ಸದೃಢತೆಯನ್ನು ನೀಡಿ ಇಡೀ ದಿನ ಚೈತನ್ಯದಿಂದ ಕೂಡಿರುವಂತೆ ಮಾಡುತ್ತವೆ. ಅಷ್ಟೇ ಅಲ್ಲದೆ ದೇಹದಲ್ಲಿ ಮಾಂಸಖಂಡಗಳ ಕಾರ್ಯ ನಿರ್ವಹಣೆಗೆ ಮತ್ತು ಮೆದುಳಿನಿಂದ ಇತರ ದೇಹದ ಭಾಗಗಳಿಗೆ ತಲುಪಲು ಪ್ರಯತ್ನಿಸುವ ಸೂಚನೆಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತವೆ. ಗರ್ಭಿಣಿಯರು ದೇಹದ ಪಿ ಹೆಚ್ ಮಟ್ಟ ಮತ್ತು ರಕ್ತದ ಒತ್ತಡದ ನಿರ್ವಹಣೆಯನ್ನು ಎಲೆಕ್ಟ್ರೋಲೈಟ್ ಗಳು ಮಾಡುತ್ತವೆ ಎಂದರೆ ಅವುಗಳ ಮೌಲ್ಯ ಅರ್ಥವಾಗುತ್ತದೆ.

3 ಎದೆಯುರಿ ಮತ್ತು ಮಲಬದ್ಧತೆಯಿಂದ ಪರಿಹಾರ

3 ಎದೆಯುರಿ ಮತ್ತು ಮಲಬದ್ಧತೆಯಿಂದ ಪರಿಹಾರ

ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ತಮ್ಮ ದೇಹದಲ್ಲಿ ಸಾಕಷ್ಟು ಹಾರ್ಮೋನುಗಳು ಬದಲಾವಣೆ ಕಾಣುತ್ತವೆ. ಇದರಿಂದ ಮಹಿಳೆಯರಿಗೆ ಎದೆಯುರಿ, ಮಲಬದ್ಧತೆ ಮತ್ತು ಅಜೀರ್ಣತೆ ಸಾಮಾನ್ಯ ಸಮಸ್ಯೆಗಳಾಗಿ ಕಾಡುತ್ತವೆ. ಹಾಗಾಗಿ ಈ ಸಂದರ್ಭದಲ್ಲಿ ಗರ್ಭಿಣಿಯರಿಗೆ ನಾರಿನ ಅಂಶ ಹೊಂದಿದ ಆಹಾರಗಳು ಸಾಕಷ್ಟು ಅಗತ್ಯವಾಗಿರುತ್ತವೆ. ಎಳನೀರು ಇದಕ್ಕೆ ಒಂದು ಉದಾಹರಣೆ ಆಗಬಲ್ಲದು. ಎಳನೀರಿನಲ್ಲಿ ಒಬ್ಬ ವ್ಯಕ್ತಿಯ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಿ ಸಮಯಕ್ಕೆ ಸರಿಯಾಗಿ ಆತ ಸೇವಿಸಿದ ಆಹಾರವನ್ನು ಜೀರ್ಣ ಮಾಡಿ ದೇಹದಲ್ಲಿ ಪಿ ಹೆಚ್ ಮಟ್ಟವನ್ನು ಸಮತೋಲನಗೊಳಿಸಿ ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ.

ಆಯುರ್ವೇದ ಪದ್ಧತಿಯಲ್ಲಿ ಸಹಾ ಇದು ಸಾಬೀತಾಗಿದೆ. ಹಾಗಾಗಿ ಗರ್ಭಿಣಿಯರ ದೇಹದಲ್ಲಿ ಜೀರ್ಣಾಂಗಕ್ಕೆ ಸಂಬಂಧ ಪಟ್ಟ ಮೆಟಬಾಲಿಸಂ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಮಾತ್ರವಲ್ಲದೆ, ಮೊದಲಿನ ವಿಷಕಾರಿ ತ್ಯಾಜ್ಯ ಗಳನ್ನು ಮೂತ್ರ ವಿಸರ್ಜನೆ ಮತ್ತು ಮಲ ವಿಸರ್ಜನೆಯ ಮೂಲಕ ಹೊರ ಹಾಕುತ್ತದೆ. ಗರ್ಭಿಣಿಯರ ದೇಹದಲ್ಲಿ ನೈಸರ್ಗಿಕವಾಗಿ ಆಮ್ಲದ ಪ್ರಮಾಣವನ್ನು ತಗ್ಗಿಸಿ ಎದೆಯುರಿ ಮತ್ತು ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

4 ಎಳನೀರು ಒಂದು ಸೋಂಕು ನಿವಾರಕ

4 ಎಳನೀರು ಒಂದು ಸೋಂಕು ನಿವಾರಕ

ಎಳನೀರಿನಲ್ಲಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೇಕಾದಂತಹ ಅಗತ್ಯ ಪ್ರಮಾಣದ ವಿಟಮಿನ್ ಅಂಶಗಳು, ಖನಿಜಾಂಶಗಳು ಮತ್ತು ಆಂಟಿ - ಆಕ್ಸಿಡೆಂಟ್ ಅಂಶಗಳು ಸಾಕಷ್ಟಿವೆ. ಈಗಿನ ಪರಿಸ್ಥಿತಿ ನೋಡಿಕೊಂಡರೆ ನಾವು ಎಲ್ಲದಕ್ಕಿಂತ ಮುಖ್ಯವಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ನಮಗೆ ಸಿಗುವ ಎಲ್ಲಾ ಮೂಲಗಳಿಂದ ರಕ್ಷಿಸಿಕೊಳ್ಳಲು ಮತ್ತು ವೃದ್ಧಿಸಿಕೊಳ್ಳಲು ಪ್ರಯತ್ನಿಸಬೇಕು. ಹಾಗಾಗಿ ನಮ್ಮ ಈ ಪ್ರಯತ್ನಕ್ಕೆ ಎಳನೀರು ಪುಷ್ಟಿ ಕೊಡಬಲ್ಲದು. ಮಹಿಳೆಯರಿಗೆ ತಮ್ಮ ಗರ್ಭಾವಸ್ಥೆಯಲ್ಲಿ ಮುಖ್ಯವಾಗಿ ಬೇಕಾಗಿರುವ ಲಾರಿಕ್ ಆಸಿಡ್ ಎಂಬ ಮೀಡಿಯಂ ಚೈನ್ ಫ್ಯಾಟಿ ಆಸಿಡ್ ಎಳನೀರಿನಿಂದ ಸಿಗುತ್ತದೆ.

5 ಹೃದಯದ ಆರೋಗ್ಯವನ್ನು ನಿರ್ವಹಣೆ ಮಾಡಲು ಸಹಾಯವಾಗುತ್ತದೆ

5 ಹೃದಯದ ಆರೋಗ್ಯವನ್ನು ನಿರ್ವಹಣೆ ಮಾಡಲು ಸಹಾಯವಾಗುತ್ತದೆ

ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಹೆಚ್ಚಾಗಿ ಎಲೆಕ್ಟ್ರೋಲೈಟ್ ಗಳು ತಮ್ಮ ಪ್ರಮಾಣದಲ್ಲಿ ಇಳಿತಗೊಂಡು ರಕ್ತದ ಒತ್ತಡವನ್ನು ಏರುಪೇರು ಮಾಡುತ್ತವೆ. ಮೊದಲೇ ಹೇಳಿದಂತೆ ಎಳನೀರಿನಲ್ಲಿ ನಮ್ಮ ರಕ್ತದ ಒತ್ತಡವನ್ನು ಸರಿಯಾಗಿ ನಿರ್ವಹಣೆ ಮಾಡುವಂತಹ ಮತ್ತು ಹೆಚ್ಚಾದ ರಕ್ತದ ಒತ್ತಡವನ್ನು ಸಹಜ ಸ್ಥಿತಿಗೆ ಮರಳಿಸುವ ಎಲೆಕ್ಟ್ರೋಲೈಟ್ ಗಳಾದ ಪೊಟ್ಯಾಶಿಯಂ, ಮೆಗ್ನೀಷಿಯಂ ಮತ್ತು ಲಾರಿಕ್ ಆಸಿಡ್ ಪ್ರಮಾಣ ಅಗತ್ಯ ರೀತಿಯಲ್ಲಿ ಇರುವುದರಿಂದ ಗರ್ಭಿಣಿ ಮಹಿಳೆಯರಿಗೆ ತಮ್ಮ ದೇಹದಲ್ಲಿ ಕೆಟ್ಟ ಕೊಬ್ಬಿನ ಅಂಶ ಮತ್ತು ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗಿ ಹೃದಯ ಆರೋಗ್ಯದಿಂದ ಕೂಡಿರುತ್ತದೆ.

ಗರ್ಭಿಣಿಯರಿಗೆ ತಮ್ಮ ಗರ್ಭಾವಸ್ಥೆಯ ಕೊನೆಯ ಮೂರು ತಿಂಗಳ ಅವಧಿಯಲ್ಲಿ ಹೆರಿಗೆ ನೋವಿನ ಅನುಭವ ಉಂಟಾಗುವುದರಿಂದ ಸಹಜವಾಗಿ ದೇಹದಲ್ಲಿ ರಕ್ತದ ಒತ್ತಡ ಏರುಪೇರಾಗಿ ಹೆಚ್ಚಾಗುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಎಳನೀರಿನ ಸೇವನೆ ಅತ್ಯಗತ್ಯ ಎಂದು ಹೇಳಬಹುದು.

6 ಆರೋಗ್ಯಕರ ತೂಕ ನಿರ್ವಹಣೆಯಾಗುತ್ತದೆ

6 ಆರೋಗ್ಯಕರ ತೂಕ ನಿರ್ವಹಣೆಯಾಗುತ್ತದೆ

ಗರ್ಭಿಣಿ ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ತಮ್ಮ ದೇಹದ ತೂಕದ ಬಗ್ಗೆ ಹೆಚ್ಚು ಗಮನವಿರಬೇಕು. ಏಕೆಂದರೆ ಸ್ತ್ರೀರೋಗ ತಜ್ಞರು ಹೇಳುವ ಹಾಗೆ ದೇಹದ ತೂಕ ಹೆಚ್ಚಾದರೂ ಅಥವಾ ಕಡಿಮೆಯಾದರೂ ಗರ್ಭದಲ್ಲಿರುವ ಭ್ರೂಣದ ಬೆಳವಣಿಗೆಗೆ ಅದರ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಗರ್ಭಿಣಿಯರು ತಾವು ಸೇವಿಸುವ ಆಹಾರದ ಬಗ್ಗೆ ಅಷ್ಟೇ ಕಾಳಜಿ ವಹಿಸಿ ಯಾವುದೇ ಕಾರಣಕ್ಕೂ ಕ್ಯಾಲೋರಿಗಳ ಸೇವನೆಯಲ್ಲಿ ನಿರ್ವಹಣೆ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಅತಿಯಾದ ಸಕ್ಕರೆ ಪ್ರಮಾಣ ಹೊಂದಿರುವ ಆಹಾರ ಮತ್ತು ಪಾನೀಯವನ್ನು ಸೇವನೆ ಮಾಡಬಾರದು. ಎಳನೀರು ನೈಸರ್ಗಿಕವಾಗಿ ಅತ್ಯಂತ ಕಡಿಮೆ ಸಕ್ಕರೆ ಪ್ರಮಾಣ ಹೊಂದಿದ್ದು, ಇದು ಆರೋಗ್ಯದಲ್ಲಿ ಯಾವುದೇ ಏರು - ಪೇರು ಉಂಟು ಮಾಡುವಂತಹ ಆಹಾರ ಪದಾರ್ಥವಲ್ಲ ಎಂದು ಸಾಬೀತಾಗಿದೆ. ಹೊಟ್ಟೆ ಹಸಿವಿನ ನಿರ್ವಹಣೆ ಕೂಡ ಎಳನೀರಿನಿಂದ ಆಗುತ್ತದೆ.

7 ಎಳನೀರು ಒಂದು ನೈಸರ್ಗಿಕ ಪಾನೀಯ

7 ಎಳನೀರು ಒಂದು ನೈಸರ್ಗಿಕ ಪಾನೀಯ

ಇತ್ತೀಚೆಗಂತೂ ಎಲ್ಲಾ ಕಡೆ ಕೇವಲ ರಾಸಾಯನಿಕ ಅಂಶಗಳನ್ನು ಒಳಗೊಂಡ ಪಾನೀಯಗಳದ್ದೇ ಕಾರುಬಾರು. ಇವುಗಳಿಂದ ಮಕ್ಕಳು, ವಯಸ್ಕರು, ವೃದ್ಧರು, ಗರ್ಭಿಣಿಯರು ಎಲ್ಲರಿಗೂ ತೊಂದರೆಯೇ. ಮಹಿಳೆಯರು ಇಂತಹ ಅಭ್ಯಾಸವನ್ನು ತಮ್ಮ ಗರ್ಭಾವಸ್ಥೆಯ ಸಮಯದಲ್ಲಿ ಸಂಪೂರ್ಣವಾಗಿ ಕೈಬಿಟ್ಟು ಬಿಡಬೇಕು. ಅದರಲ್ಲೂ ಗರ್ಭಾವಸ್ಥೆಯ ಸಮಯದಲ್ಲಿ ಗರ್ಭಿಣಿಯರಿಗೆ ವಿಪರೀತ ಬೆವರು ಕಂಡುಬರುವುದರಿಂದ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಎದುರಾಗುತ್ತದೆ. ವಿಪರೀತ ಬಾಯಾರಿಕೆ ಕೂಡ ಉಂಟಾಗುವುದರಿಂದ ಎಲ್ಲಾ ಬಾರಿಯೂ ಕೇವಲ ನೀರನ್ನೇ ಕುಡಿಯಲು ಸಾಧ್ಯವಿಲ್ಲ. ಹಾಗಾಗಿ ನೀರಿನ ಬದಲು ಎಳನೀರಿನ ಸೇವನೆ ಮಾಡಬಹುದು.

 8 ಜಿಮ್ ನ ನಂತರದ ಅಗತ್ಯ ಪಾನೀಯ

8 ಜಿಮ್ ನ ನಂತರದ ಅಗತ್ಯ ಪಾನೀಯ

ಜಿಮ್ ಮಾಡಿದ ನಂತರ ಯಾವುದೇ ವ್ಯಕ್ತಿಗೆ ದೇಹದಲ್ಲಿ ಶಕ್ತಿ ಮತ್ತು ಸದೃಢತೆ ಬೇಕಾಗಿರುತ್ತದೆ. ಗರ್ಭಿಣಿಯರ ವಿಷಯ ತೆಗೆದುಕೊಂಡರೆ ದುಪ್ಪಟ್ಟು ಪ್ರಮಾಣದಲ್ಲಿ ದೇಹಕ್ಕೆ ಶಕ್ತಿಯ ಅವಶ್ಯಕತೆ ಇರುತ್ತದೆ. ವ್ಯಾಯಾಮ ಮಾಡಿದ ನಂತರ ಕಂಡುಬರುವ ವಿಪರೀತ ಆಯಾಸ ಮತ್ತು ಸುಸ್ತನ್ನು ನೈಸರ್ಗಿಕವಾದ ಎಳನೀರಿನ ಸೇವನೆಯಿಂದ ಬಹಳ ಬೇಗನೆ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಕಡಿಮೆ ಮಾಡಿಕೊಳ್ಳಬಹುದು ಎಳನೀರಿನಲ್ಲಿ ದೇಹಕ್ಕೆ ನೀರಿನ ಅಂಶವನ್ನು ತಕ್ಷಣ ಒದಗಿಸುವ ಗುಣ ಲಕ್ಷಣ ಇರುವುದರಿಂದ ಗರ್ಭಾವಸ್ಥೆಯ ಸಮಯದಲ್ಲಿ ಉಂಟಾಗುವ ಚರ್ಮದ ಮೇಲಿನ ಸುಕ್ಕುಗಳು ಮತ್ತು ಗೆರೆಗಳು ಕೂಡ ಇಲ್ಲವಾಗುತ್ತವೆ. ಇದು ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳುವಲ್ಲಿ ನೆರವಾಗುತ್ತದೆ.

9 ಅತ್ಯಂತ ಕಡಿಮೆ ಸಕ್ಕರೆ ಅಂಶದ ಪಾನೀಯ

9 ಅತ್ಯಂತ ಕಡಿಮೆ ಸಕ್ಕರೆ ಅಂಶದ ಪಾನೀಯ

ಗರ್ಭಾವಸ್ಥೆಯ ಸಮಯದಲ್ಲಿ ಗರ್ಭಿಣಿಯರಿಗೆ ಮಧುಮೇಹ ಮತ್ತು ರಕ್ತದ ಒತ್ತಡ ತಮ್ಮ ಆರೋಗ್ಯಕ್ಕೆ ಶತ್ರುಗಳು ಎಂದು ಹೇಳಬಹುದು. ಏಕೆಂದರೆ ಸೇವಿಸುವ ಆಹಾರದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ ತಪ್ಪುತ್ತದೆ. ಇದರಿಂದ ಮಧುಮೇಹ ಇಲ್ಲದವರಿಗೂ ಸಹ ಮಧುಮೇಹ ಬರುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಮೊದಲ ಮಧುಮೇಹದಿಂದ ಬಳಲುತ್ತಿರುವ ಗರ್ಭಿಣಿ ಮಹಿಳೆಯರಿಗೆ ಇದ್ದಕ್ಕಿದ್ದಂತೆ ದೇಹದ ತೂಕ ವಿಪರೀತಗೊಂಡು ಯಾವುದೇ ಬಗೆಯ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.

10 ಗರ್ಭದಲ್ಲಿನ ಭ್ರೂಣದ ಅಭಿವೃದ್ಧಿಯಲ್ಲಿ ಸಹಾಯಕ

10 ಗರ್ಭದಲ್ಲಿನ ಭ್ರೂಣದ ಅಭಿವೃದ್ಧಿಯಲ್ಲಿ ಸಹಾಯಕ

ಎಳನೀರು ಕೇವಲ ಗರ್ಭಿಣಿಯರ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ ಗರ್ಭದಲ್ಲಿ ಬೆಳವಣಿಗೆ ಹೊಂದುತ್ತಿರುವ ಪುಟ್ಟ ಮಗುವಿಗೆ ಬೇಕಾದ ಅಗತ್ಯ ಪ್ರಮಾಣದ ಸಾಕಷ್ಟು ಪೌಷ್ಟಿಕ ಸತ್ವಗಳನ್ನು ಒದಗಿಸುತ್ತದೆ. ಗರ್ಭಿಣಿ ಮಹಿಳೆಯ ಸೇವಿಸುವ ಇತರ ಆಹಾರಗಳಲ್ಲಿ ಸಿಗುವ ಪೌಷ್ಟಿಕಾಂಶಗಳಿಗಿಂತ ದುಪ್ಪಟ್ಟು ಪ್ರಮಾಣದ ಅಗತ್ಯ ಅಂಶಗಳು ಮಗುವಿಗೆ ಎಳನೀರಿನಿಂದ ಸಿಗುತ್ತದೆ.

11 ಆಮ್ನಿಯೋಟಿಕ್ ಫ್ಲೂಯಿಡ್ ಮಟ್ಟಗಳ ಅಭಿವೃದ್ಧಿ

11 ಆಮ್ನಿಯೋಟಿಕ್ ಫ್ಲೂಯಿಡ್ ಮಟ್ಟಗಳ ಅಭಿವೃದ್ಧಿ

ಗರ್ಭಿಣಿ ಮಹಿಳೆಯರಿಗೆ ತಾವು ತಮ್ಮ ಮೂರನೇ ಅಂದರೆ ಕೊನೆಯ ಮೂರು ತಿಂಗಳಿನಲ್ಲಿ ಸೇವಿಸುವ ಎಳನೀರು ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚು ಮಾಡಿ ರಕ್ತ ಸಂಚಾರಕ್ಕೆ ಸಾಕಷ್ಟು ನೆರವಾಗುತ್ತದೆ. ಇದರ ಜೊತೆಗೆ ದೇಹದಲ್ಲಿ ಆಮ್ನಿಯೋಟಿಕ್ ಫ್ಲೂಯಿಡ್ ಮಟ್ಟ ಕೂಡ ಉತ್ತೇಜನಗೊಳ್ಳುತ್ತದೆ.

12 ಸಂಪೂರ್ಣ ಆರೋಗ್ಯ ರಕ್ಷಣೆಯ ಖಾತರಿ

12 ಸಂಪೂರ್ಣ ಆರೋಗ್ಯ ರಕ್ಷಣೆಯ ಖಾತರಿ

ಗರ್ಭಿಣಿಯರು ಯಾವುದೇ ಆಹಾರವನ್ನು ಸೇವನೆ ಮಾಡಬೇಕಾದರೆ ಮೊದಲು ವೈದ್ಯರಿಂದ ತಮ್ಮ ದೇಹಕ್ಕೆ ಇಂತಹ ಆಹಾರ ಸೂಕ್ತವಾಗುತ್ತದೆಯೇ ಎಂದು ಕೇಳಿ ತಿಳಿದುಕೊಂಡು ನಂತರ ಸೇವನೆ ಮಾಡಲು ಮುಂದಾಗಬೇಕು. ಆದರೆ ಎಳನೀರಿನ ವಿಷಯದಲ್ಲಿ ಹಾಗೇನಿಲ್ಲ. ಯಾವುದೇ ಅನುಮಾನವಿಲ್ಲದೆ ಎಳನೀರಿನ ಸೇವನೆ ಮಾಡಬಹುದು. ಏಕೆಂದರೆ ಇದೊಂದು ನೈಸರ್ಗಿಕವಾದ ಪಾನೀಯ ಆಗಿರುವುದರಿಂದ ಮತ್ತು ಪೌಷ್ಟಿಕಾಂಶಗಳು ಇದರಲ್ಲಿ ಸಾಕಷ್ಟು ಇರುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೆ ದೇಹದ ಸಂಪೂರ್ಣ ಆರೋಗ್ಯ ರಕ್ಷಣೆಯಲ್ಲಿ ಭರವಸೆ ಒದಗಿಸುತ್ತದೆ.

English summary

Benefits Of Drinking Coconut Water In Pregnancy

Here we are discussing about Benefits Of Drinking Coconut Water In Pregnancy. Coconut water is rich in minerals, such as potassium, and its overconsumption could lead to too much potassium in the blood. Read more.
X
Desktop Bottom Promotion