For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ರಕ್ತಸ್ರಾವ ಉಂಟಾಗಲು ಕಾರಣವೇನು? ಮುನ್ನೆಚ್ಚರಿಕೆ ಏನು?

By Divya Panditth
|

ತನ್ನ ಮಡಿಲಲ್ಲಿ ಇನ್ನೊಂದು ಜೀವವನ್ನು ಇಟ್ಟುಕ್ಕೊಂಡು ಪೋಷಿಸುವುದು ಒಂದು ಅದ್ಭುತ ಅನುಭವ. 9 ತಿಂಗಳ ಕಾಲ ಶರೀರದಲ್ಲಿಯೇ ಇನ್ನೊಂದು ಜೀವ ಬೆರೆತಿರುವಾಗ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತದೆ. ಕೆಲವು ಹಿತಕರ ಅನುಭವವಾದರೆ ಇನ್ನೂ ಕೆಲವು ಅಹಿತಕರ ಅನುಭವವನ್ನು ನೀಡಬಹುದು. ಎಲ್ಲವನ್ನೂ ಸರಿ ಪ್ರಮಾಣದಲ್ಲಿ ಸ್ವೀಕರಿಸಿ, ತನ್ನ ಮತ್ತು ಮಗುವಿನ ಆರೋಗ್ಯದ ಕುರಿತು ಹೆಚ್ಚು ಕಾಳಜಿಯನ್ನು ವಹಿಸಬೇಕಾಗುವುದು.

ಗರ್ಭಾವಸ್ಥೆಯ ಆರಂಭದ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ ನಮ್ಮ ರುಚಿ ಹಾಗೂ ಬಯಕೆಗಳು ವಿಭಿನ್ನತೆಯನ್ನು ಪಡೆದುಕೊಳ್ಳುವುದು. ಈ ಕುರಿತು ಪ್ರತಿಯೊಬ್ಬ ಮಹಿಳೆಯು ಪೂರ್ವತಯಾರಿಯ ರೀತಿಯಲ್ಲಿ ಮಾನಸಿಕ ಸಿದ್ಧತೆಯನ್ನು ಮಾಡಿಕೊಂಡಿರಬೇಕು. ಇಲ್ಲವಾದರೆ ಮಾನಸಿಕವಾಗಿ ಕೆಲವು ಗೊಂದಲಗಳು ಉಂಟಾಗಬಹುದು.

During Pregnancy?

ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣವು ಬೆಳವಣಿಗೆ ಕಾಣುವ ಮೊದಲು ತನ್ನ ಇರುವಿಕೆಗೆ ಸೂಕ್ತವಾಗುವಂತೆ ತಾಯಿಯ ಜೀವದಲ್ಲಿ ಬೆರೆತುಕೊಳ್ಳಲು ಅನೇಕ ಮಾರ್ಪಾಡುಗಳಾಗುತ್ತವೆ. ಈ ಮಾರ್ಪಾಡುಗಳಿಂದ ತಾಯಿಯ ಆರೋಗ್ಯದ ಮೇಲೆ ಬದಲಾವಣೆ ಕಾಣಿಸಿಕೊಳ್ಳುವುದು. ಅದರಲ್ಲಿ ಮುಂಜಾನೆಯ ಅಸ್ವಸ್ಥತೆ, ವಾಂತಿ, ತಲೆ ಸುತ್ತು, ಆಯಾಸ ಹಾಗೂ ಕೆಲವರಿಗೆ ಕೊಂಚ ರಕ್ತ ಸ್ರಾವ ಉಂಟಾಗುವ ಸಾಧ್ಯತೆಗಳಿರುತ್ತವೆ. ರಕ್ತ ಸ್ರಾವ ಎನ್ನುವುದು ಸಾಮಾನ್ಯವಾದದ್ದಾದರೂ ಕೆಲವೊಮ್ಮೆ ಗಂಭೀರ ಸ್ಥಿತಿಯನ್ನು ಸೃಷ್ಟಿಸಬಹುದು. ಅದಕ್ಕಾಗಿ ಕೆಲವು ಆರೈಕೆ ಹಾಗೂ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಬೇಕಾಗುವುದು. ಗರ್ಭಾವಸ್ಥೆ ಎನ್ನುವ ಪ್ರಮುಖ ಘಟ್ಟದಲ್ಲಿ ಮಹಿಳೆ ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುವುದು? ರಕ್ತ ಸ್ರಾವ ಉಂಟಾದಾಗ ಯಾವ ಕಾಳಜಿ ಅಗತ್ಯವಿರುತ್ತದೆ? ಅದಕ್ಕೆ ಕಾರಣವೇನು? ಎನ್ನುವುದರ ಕುರಿತು ಇನ್ನಷ್ಟು ಮಾಹಿತಿಯನ್ನು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ.

ಸ್ಪಾಟಿಂಗ್ ಎಂದರೇನು?

ಸ್ಪಾಟಿಂಗ್ ಎಂದರೇನು?

ಗರ್ಭಾವಸ್ಥೆಯಲ್ಲಿ ಇರುವಾಗ ಯೋನಿಯಿಂದ ಅಲ್ಪ ಪ್ರಮಾಣದ ರಕ್ತಸ್ರಾವ ಉಂಟಾಗುತ್ತಿದ್ದರೆ ಅದನ್ನು ಸ್ಪಾಟಿಂಗ್ ಎಂದು ಕರೆಯುತ್ತಾರೆ. ಇದು ಆರೋಗ್ಯಕರ ಗರ್ಭಾವಸ್ಥೆಯ ಮುನ್ಸೂಚನೆ ಆಗಿದ್ದರೂ ಸಹ ಕೆಲವೊಮ್ಮೆ ಗಂಭೀರ ಪರಿಸ್ಥಿತಿಗೆ ಪರಿವರ್ತನೆಯನ್ನು ತರುವ ಸಾಧ್ಯತೆಗಳಿರುತ್ತವೆ.

ಗರ್ಭಾವಸ್ಥೆಯ ಸಾಮಾನ್ಯ ಚಿಹ್ನೆ

ಗರ್ಭಾವಸ್ಥೆಯ ಸಾಮಾನ್ಯ ಚಿಹ್ನೆ

ಸ್ಪಾಟಿಂಗ್ ಎನ್ನುವುದು ನೂರರಲ್ಲಿ ಶೇ. 20ರಷ್ಟು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಸ್ಪಾಟಿಂಗ್ ಅಲ್ಪ ಪ್ರಮಾಣದ ರಕ್ತ ಸ್ರಾವ ಹಾಗೂ ಒಂದೇ ಸ್ಥಳದಲ್ಲಿ ಉಂಟಾಗುತ್ತಿದ್ದರೆ ಅದನ್ನು ಸಾಮಾನ್ಯ ಸ್ಪಾಟಿಂಗ್ ಎಂದು ಕರೆಯುತ್ತಾರೆ. ಈ ರಕ್ತಸ್ರಾವವು ಸಾಮಾನ್ಯವಾಗಿ ಗುಲಾಬಿ ಹಾಗೂ ಕಂದು ಬಣ್ಣದಲ್ಲಿ ಇರುತ್ತದೆ. ಗಾಢವಾದ ಕೆಂಪು ಬಣ್ಣದಿಂದ ಕೂಡಿದ್ದರೆ ಮತ್ತು ಅಧಿಕ ರಕ್ತ ಸ್ರಾವ ಉಂಟಾಗುತ್ತಿದ್ದರೆ ಸ್ತ್ರೀರೋಗ ತಜ್ಞರಿಗೆ ತಕ್ಷಣ ತೋರಿಸಬೇಕು.

ಸ್ಪಾಟಿಂಗ್ ಉಂಟಾಗಲು ಕಾರಣಗಳು

ಸ್ಪಾಟಿಂಗ್ ಉಂಟಾಗಲು ಕಾರಣಗಳು

ಸ್ಪಾಟಿಂಗ್ ಎನ್ನುವುದು ಸಾಮಾನ್ಯವಾದ ಕುರುಹು ಆಗಿದ್ದರೂ ಆ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಈ ಸಮಸ್ಯೆ ಉಂಟಾಗಲು ಪ್ರಮುಖ ಕಾರಣಗಳೇನು? ಎನ್ನುವುದನ್ನು ನೀವು ತಿಳಿದುಕೊಳ್ಳಲು ಕುತೂಹಲರಾಗಿದ್ದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಸೂಕ್ತ ಜಾಗದಲ್ಲಿ ಇರುವಿಕೆ

ಸೂಕ್ತ ಜಾಗದಲ್ಲಿ ಇರುವಿಕೆ

ಗರ್ಭಾಶಯಕ್ಕೆ ಪ್ರವೇಶಿಸಿದ ಫಲವತ್ತಾದ ಮೊಟ್ಟೆಯು ಸೂಕ್ತ ಸ್ಥಳದಲ್ಲಿ ಭದ್ರತೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತದೆ. ಆ ಸಂದರ್ಭದಲ್ಲಿ ರಕ್ತ ಸ್ರಾವ ಉಂಟಾಗುವುದು. ಮೊಟ್ಟೆ ಗರ್ಭಾಶಯದ ಗೋಡೆಯ ಮೇಲೆ ತನ್ನನ್ನು ಲಗತ್ತಿಸಿಕೊಳ್ಳುವ ಪ್ರಕ್ರಿಯೆಯು ಆರೋಗ್ಯಕರ ಸೂಚನೆಯೇ ಆಗಿರುತ್ತದೆ.

ಅಪಸ್ಥಾನೀಯ ಗರ್ಭಧಾರಣೆ

ಅಪಸ್ಥಾನೀಯ ಗರ್ಭಧಾರಣೆ

ಅಪಸ್ಥಾನೀಯ ಗರ್ಭಧಾರಣೆ ಉಂಟಾದರೂ ಸ್ಪಾಟಿಂಗ್ ಉಂಟಾಗುವ ಸಾಧ್ಯತೆಗಳಿರುತ್ತವೆ. ಭ್ರೂಣವು ಗರ್ಭನಾಳದಲ್ಲಿ ಬೆಳವಣಿಗೆಯನ್ನು ಕಾಣುತ್ತಿದ್ದರೆ ಅದು ಅಪಸ್ಥಾನೀಯ ಗರ್ಭಾವಸ್ಥೆ ಎನಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ರಕ್ತಸ್ರಾವ ಉಂಟಾಗುವುದು ಮತ್ತು ಗರ್ಭಾವಸ್ಥೆ ವಿಫಲತೆ ಹೊಂದುವ ಸಾಧ್ಯತೆಗಳಿರುತ್ತವೆ.

ಗರ್ಭಕಂಠದಲ್ಲಿ ಕಿರಿಕಿರಿ

ಗರ್ಭಕಂಠದಲ್ಲಿ ಕಿರಿಕಿರಿ

ಗರ್ಭಾವಸ್ಥೆಯಲ್ಲಿ ತಾಯಿಯ ದೇಹ ಅನೇಕ ಬದಲಾವಣೆಯನ್ನು ಅನುಭವಿಸುತ್ತದೆ. ಅದರಲ್ಲಿ ಗರ್ಭಕಂಠದ ಕಿರಿಕಿರಿಯೂ ಒಂದು. ಗರ್ಭಕಂಠದಲ್ಲಿ ಉಂಟಾಗುವ ಕಿರಿಕಿರಿಯು ಗರ್ಭಾವಸ್ಥೆಯಲ್ಲಿ ರಕ್ತ ಸ್ರಾವ ಉಂಟಾಗುವಂತೆ ಮಾಡುತ್ತದೆ.

ಸಂಭೋಗ ಹೊಂದುವುದು

ಸಂಭೋಗ ಹೊಂದುವುದು

ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದರಿಂದಲೂ ಸ್ಪಾಟಿಂಗ್ ಉಂಟಾಗುವ ಸಾಧ್ಯತೆ ಇರುತ್ತದೆ. ಎರಡು ಮತ್ತು ಮೂರನೇ ತಿಂಗಳಲ್ಲಿ ಸಾಮಾನ್ಯವಾಗಿ ಸ್ಪಾಟಿಂಗ್ ಉಂಟಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಯಾವುದೇ ಬಗೆಯ ಭಯವನ್ನು ತೋರದೆ ಆದಷ್ಟು ಬೇಗ ವೈದ್ಯರನ್ನು ಬೇಟಿಯಾಗಿ ಸಲಹೆ ಹಾಗೂ ಚಿಕಿತ್ಸೆಯನ್ನು ಪಡೆದುಕೊಳ್ಳಿ.

English summary

Is It Normal To Bleed During Pregnancy?

Pregnancy is something that most women look forward to in their lives. But certainly not the problems that come with it. For most women, the most positive fact about pregnancy is freedom from periods for complete 9 months. For others, it's the fact that we are given extra attention to during those days and also all our cravings are fulfilled rather seriously, which otherwise are usually ignored.
X
Desktop Bottom Promotion