ಗರ್ಭಾವಸ್ಥೆಯಲ್ಲಿ ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯ ಪ್ರಯೋಜನಗಳು

Posted By: Jaya subramanya
Subscribe to Boldsky

ಗರ್ಭಿಣಿ ಆಗುವುದು ಜೀವಮಾನದ ಆನಂದ ಕ್ಷಣಗಳಾಗಿರುತ್ತವೆ ಹೆಣ್ಣಿಗೆ, ಹಾಗೆಂದು ಇದು ಕೇವಲ ಆನಂದದ ಕ್ಷಣಗಳನ್ನೆ ಹೊಂದಿರ ಬೇಕು ಎಂದಾದಲ್ಲಿ ಗರ್ಭಿಣಿಯರು ಮೈಯೆಲ್ಲಾ ಕಣ್ಣಾಗಿ ತಮ್ಮನ್ನು ಮತ್ತು ತಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನು ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಇರುವ ಕೆಲವೊಂದು ನೀತಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದಕ್ಕಾಗಿಯೇ ಗರ್ಭಿಣಿಯರಿಗೆ ಕಂಡ ಕಂಡ ಆಹಾರ ಪದಾರ್ಥಗಳನ್ನು ತಿನ್ನಲು ಬಿಡುವುದಿಲ್ಲ ಮನೆಗಳಲ್ಲಿ. ಈ ಕುರಿತಾಗಿ ವೈದ್ಯರು ಮತ್ತು ಪೋಷಕರು ಮೊದಲೇ ಎಚ್ಚರಿಸಿರುತ್ತಾರೆ.

ಗರ್ಭಿಣಿಯರು ಅಪರೂಪವಾದ ಆಹಾರ ಸೇವಿಸುವ ಮೊದಲು ಯಾರಾದರು ತಿಳಿದವರನ್ನು ಕೇಳಿ ತಿನ್ನುವ ವಾಡಿಕೆ ತುಂಬಾ ಹಿಂದಿನಿಂದನಡೆದುಕೊಂಡು ಬಂದಿದೆ. ಏಕೆಂದರೆ ಗರ್ಭಿಣಿಯರು ತಾವು ತಿನ್ನುವ ಆಹಾರ ಪದಾರ್ಥಗಳಿಂದ ತಮ್ಮ ಹೊಟ್ಟೆಯಲ್ಲಿ ಬೆಳೆಯುವ ಮಗುವನ್ನು ಕಳೆದುಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ. ಇದು ಅವರ ಆರೋಗ್ಯವನ್ನು ಸಹ ಹಾಳು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. 

amla

ಸಾಮಾನ್ಯವಾಗಿ ಗರ್ಭಿಣಿಯರಿಗೆ ಊಟ ಮಾಡುವ ಆಸಕ್ತಿ ಸ್ವಲ್ಪ ಹೆಚ್ಚಿಗೆ ಇರುತ್ತದೆ. ಗರ್ಭಾವಧಿಯ ಹಂತವು ಮುಂದುವರೆದಂತೆಲ್ಲ ಇದು ಇನ್ನಷ್ಟು ಹೆಚ್ಚಾಗುತ್ತಾ ಇರುತ್ತದೆ. ಆಗ ಯಾವ ಆಹಾರ ಸೇವಿಸುವುದು ಮತ್ತು ಸೇವಿಸಬಾರದು ಎಂಬ ಜಿಜ್ಞಾಸೆ ಎಲ್ಲಾ ಗರ್ಭಿಣಿಯರಲ್ಲಿ ಹಲವಾರು ಬಾರಿ ಕಾಡುತ್ತದೆ. ಇದೇ ಮಾತು ಬೆಟ್ಟದ ನೆಲ್ಲಿಕಾಯಿ ಸೇವಿಸುವಾಗಲು ಸಹ ಗರ್ಭಿಣಿಯರ ಮನಸ್ಸಿನಲ್ಲಿ ಮೂಡುತ್ತದೆ. ಬೆಟ್ಟದ ನೆಲ್ಲಿಕಾಯಿಯು ಒಂದು ಅದ್ಭುತವಾದ ಆಹಾರ ಪದಾರ್ಥವಾಗಿದ್ದು, ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಆಮ್ಲಾ ಅಥವಾ ಬೆಟ್ಟದ ನೆಲ್ಲಿಕಾಯಿಯನ್ನು ಗರ್ಭಿಣಿಯರು ಸೇವಿಸಲು ಒಳ್ಳೆಯದು ಎಂದು ಸಲಹೆ ಮಾಡಲಾಗುತ್ತದೆ. ಇದು ಗರ್ಭದಲ್ಲಿರುವ ತೊಂದರೆಗಳನ್ನು ಸಹ ನಿವಾರಿಸುತ್ತದೆ.

ಬೆಟ್ಟದ ನೆಲ್ಲಿಕಾಯಿಯು ಗರ್ಭಿಣಿಯರಲ್ಲಿ ಕಂಡು ಬರುವ ಮೂಡ್ ಸ್ವಿಂಗ್ ಅಥವಾ ಬೇಸರವನ್ನು ಸಹ ನಿಯಂತ್ರಿಸುತ್ತದೆ. ನೆಲ್ಲಿಕಾಯಿಯನ್ನು ಪ್ರತಿದಿನ ಸೇವಿಸುವುದರಿಂದ ಅವಧಿ ಪೂರ್ವ ಪ್ರಸವದ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇದು ನಿಮ್ಮ ಮಗುವಿನ ನೆನಪಿನ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಇದರಲ್ಲಿರುವ ಯಥೇಚ್ಛ ಕಬ್ಬಿಣಾಂಶವು ಅನಿಮಿಯಾ ಬರದಂತೆ ತಡೆಯಲು ನೆರವಾಗುತ್ತವೆ. ಆದ್ದರಿಂದ ಬೆಟ್ಟದ ನೆಲ್ಲಿಕಾಯಿಯಿಂದ ಗರ್ಭಿಣಿಯರಿಗೆ ಹಲವಾರು ಪ್ರಯೋಜನಗಳು ದೊರೆಯುತ್ತವೆ. ಈ ಅಂಕಣದಲ್ಲಿ ಬೋಲ್ಡ್‌ಸ್ಕೈ ನಿಮ್ಮೊಂದಿಗೆ ಬೆಟ್ಟದ ನೆಲ್ಲಿಕಾಯಿಯಿಂದ ದೊರೆಯುವ ಪ್ರಯೋಜನಗಳ ಕುರಿತಾಗಿ ಮತ್ತಷ್ಟು ಮಾಹಿತಿಗಳನ್ನು ನೀಡುತ್ತಿದೆ....

amla

ಸುರಕ್ಷಿತ ಅಂಶ

ಗರ್ಭಾವಸ್ಥೆಯಲ್ಲಿ ತಾಯಿ ಹೆಚ್ಚಿನ ಕಾಳಜಿಯನ್ನು ತಾವು ಸೇವಿಸುವ ಆಹಾರದ ಮೇಲೆ ಇರಿಸಬೇಕಾಗುತ್ತದೆ. ಆದರೆ ನೆಲ್ಲಿಕಾಯಿಯನ್ನು ನೀವು ಕಣ್ಣುಮುಚ್ಚಿ ಸೇವಿಸಬಹುದು ಅಂದರೆ ಇದರ ಮೇಲೆ ಯಾವುದೇ ಸಂದೇಹವನ್ನು ನೀವು ಪಡಬೇಕಾಗಿಲ್ಲ. ಗರ್ಭಾವಸ್ಥೆಯ ಸಮಯದಲ್ಲಿ ಇದು ಹೆಚ್ಚು ಸುರಕ್ಷಿತವಾಗಿದೆ.

ರಕ್ತವನ್ನು ಶುದ್ಧೀಕರಿಸುತ್ತದೆ

ನೆಲ್ಲಿಕಾಯಿಯ ಸೇವನೆಯು ರಕ್ತವನ್ನು ಶುದ್ಧೀಕರಿಸುತ್ತದೆ. ಇದು ಬೆಳೆಯುತ್ತಿರುವ ಮಗುವಿಗೆ ಆಮ್ಲಜನಕ ಮತ್ತು ರಕ್ತದ ಪೂರೈಕೆಯನ್ನು ಮಾಡುತ್ತದೆ.

ಅನಿಮಿಯಾವನ್ನು ಪರಿಹರಿಸುತ್ತದೆ

ವಿಟಮಿನ್ ಸಿ ಮತ್ತು ಕಬ್ಬಿಣದ ಕೊರತೆಯಿಂದ ಗರ್ಭಿಣಿಯು ಅನಿಮಿಯಾದಿಂದ ಬಳಲುತ್ತಾರೆ. ನೆಲ್ಲಿಕಾಯಿಯು ಈ ಎರಡೂ ಅಂಶಗಳನ್ನು ಒಳಗೊಂಡಿರುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟಗಳನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ.

ಕೈಕಾಲುಗಳ ಬಾವನ್ನು ಕಡಿಮೆ ಮಾಡುತ್ತದೆ

ಕೈ ಮತ್ತು ಕಾಲುಗಳನ್ನು ಊತವನ್ನು ನೆಲ್ಲಿಕಾಯಿ ಕಡಿಮೆ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಿ ಅಂಶಗಳನ್ನು ಹೊಂದಿದ್ದು, ಅಧಿಕ

ತೂಕದಿಂದ ಉಂಟಾಗುವ ಕಾಲುಗಳ ಕೈಗಳ ಬಾವನ್ನು ಇದು ನಿವಾರಿಸುತ್ತದೆ.

ನೆಲ್ಲಿಕಾಯಿಯು ಫೈಬರ್ ಅಂಶವನ್ನು ಯಥೇಚ್ಛವಾಗಿ ಹೊಂದಿದೆ. ಮಲಬದ್ಧತೆ ಸಮಯದಲ್ಲಿ ಇದರ ಸೇವನೆ ಮಾಡುವುದರಿಂದ ಈ ಸಮಸ್ಯೆ ದೂರಾಗುತ್ತದೆ.

Amla

ರಕ್ತದೊತ್ತಡವನ್ನು ಮತ್ತು ಎದೆ ಉರಿಯನ್ನು ಕಡಿಮೆ ಮಾಡುತ್ತದೆ

ಬೆಟ್ಟದ ನೆಲ್ಲಿಕಾಯಿಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಸಿ ಇರುತ್ತದೆ. ಇದು ರಕ್ತ ನಾಳಗಳನ್ನು ಹಿಗ್ಗಿಸುವ ಮೂಲಕ ನಿಮ್ಮ ರಕ್ತದೊತ್ತಡವನ್ನು ಸುಸ್ಥಿತಿಯಲ್ಲಿಡುತ್ತದೆ. ಅಲ್ಲದೆ ತಾಜಾ ಬೆಟ್ಟದ ನೆಲ್ಲಿಕಾಯಿಗಳನ್ನು ಸೇವಿಸುವ ಮೂಲಕ ಗರ್ಭಿಣಿಯಾಗಿರುವಾಗ ಎದೆಯುರಿಯನ್ನು ಮತ್ತು ಅಸಿಡಿಟಿಯನ್ನು ಕಡಿಮೆ ಮಾಡಿಕೊಳ್ಳಬಹುದು. 

ಕ್ಯಾಲ್ಶಿಯಂ ಅಂಶವನ್ನು ಹೊಂದಿದೆ

ಮಗುವಿನ ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಯಲ್ಲಿ ಕ್ಯಾಲ್ಶಿಯಂ ಅತ್ಯವಶ್ಯಕವಾಗಿದೆ. ನೆಲ್ಲಿಕಾಯಿ ಈ ಕ್ಯಾಲ್ಶಿಯಂ ಅನ್ನು ಒದಗಿಸುತ್ತದೆ.

ಬೆಳಗ್ಗಿನ ವಾಕರಿಕೆ

ವಾಕರಿಗೆ, ತಲೆಸುತ್ತಿನಂತಹ ಸಮಸ್ಯೆಗಳನ್ನು ದೂರಮಾಡುವಲ್ಲಿ ನೆಲ್ಲಿಕಾಯಿ ಸಿದ್ಧಹಸ್ತನೆನಿಸಿದೆ. ಅಂತೆಯೇ ಬೆಳಗ್ಗಿನ ಸಮಯದಲ್ಲಿ ನಿಮಗೆ ಶಕ್ತಿಯನ್ನು ಒದಗಿಸುತ್ತದೆ. 

ನೆಲ್ಲಿಕಾಯಿ ಜ್ಯೂಸ್‌+ಮೆಂತೆ ಹುಡಿ-ಬರೋಬ್ಬರಿ 7 ಕಾಯಿಲೆಗೆ ರಾಮಬಾಣ!

ಮಲಬದ್ಧತೆಯನ್ನು ನಿವಾರಿಸುತ್ತದೆ

ಗರ್ಭಿಣಿಯಾಗಿರುವಾಗ ಹಲವಾರು ಮಹಿಳೆಯರಲ್ಲಿ ಮಲಬದ್ಧತೆಯ ಸಮಸ್ಯೆ ಕಂಡು ಬರುತ್ತದೆ. ಇದನ್ನು ವೈಜ್ಞಾನಿಕವಾಗಿ ಗ್ಯಾಸ್ಟ್ರೊ ಇಂಟೆಸ್ಟಿನಲ್ ಡಿಸಾರ್ಡರ್‌ಗಳು ಎಂದು ಕರೆಯುತ್ತಾರೆ. ಇದರಿಂದಾಗಿ ಮಲಬದ್ದತೆ ಮತ್ತು ಹೆಮರಾಯ್ಡ್‌ನಂತಹ ಸಮಸ್ಯೆಗಳು ಕಂಡು ಬರುತ್ತವೆ. ಬೆಟ್ಟದ ನೆಲ್ಲಿಕಾಯಿಯನ್ನು ನಿಮ್ಮ ಆಹಾರದಲ್ಲಿ ಸೇವಿಸುವುದರಿಂದಾಗಿ ಈ ಸಮಸ್ಯೆಯಿಂದ ನೀವು ಪಾರಾಗಬಹುದು. ಗರ್ಭಿಣಿಯಾಗಿರುವಾಗ ಹಲವಾರು ಮಹಿಳೆಯರಲ್ಲಿ ಮಲಬದ್ಧತೆಯ ಸಮಸ್ಯೆ ಕಂಡು ಬರುತ್ತದೆ. ಇದನ್ನು ವೈಜ್ಞಾನಿಕವಾಗಿ ಗ್ಯಾಸ್ಟ್ರೊಇಂಟೆಸ್ಟಿನಲ್ ಡಿಸಾರ್ಡರ್‌ಗಳು ಎಂದು ಕರೆಯುತ್ತಾರೆ. ಇದರಿಂದಾಗಿ ಮಲಬದ್ದತೆ ಮತ್ತು ಹೆಮರಾಯ್ಡ್‌ನಂತಹ ಸಮಸ್ಯೆಗಳು ಕಂಡು ಬರುತ್ತವೆ. ಬೆಟ್ಟದ ನೆಲ್ಲಿಕಾಯಿಯನ್ನು ನಿಮ್ಮ ಆಹಾರದಲ್ಲಿ ಸೇವಿಸುವುದರಿಂದಾಗಿ ಈ ಸಮಸ್ಯೆಯಿಂದ ನೀವು ಪಾರಾಗಬಹುದು.

ಜೀರ್ಣಾಂಗ ಕ್ರಿಯೆಯನ್ನು ಸಮರ್ಪಕಗೊಳಿಸುತ್ತದೆ

ಬೆಟ್ಟದ ನೆಲ್ಲಿಕಾಯಿಯು ಜೀರ್ಣಾಂಗ ಕ್ರಿಯೆಯನ್ನು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಬೆಟ್ಟದ ನೆಲ್ಲಿಕಾಯಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಜೀರ್ಣ ಕ್ರಿಯೆಯು ಸರಾಗವಾಗಿ ಸಾಗುತ್ತದೆ. ಇದರಿಂದ ತಾಯಿ ಮತ್ತು ಮಗು ಇಬ್ಬರಿಗು ಒಳ್ಳೆಯದಾಗುತ್ತದೆ.  ನೆಲ್ಲಿಕಾಯಿಯು ದೇಹದಲ್ಲಿ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಜ್ವರ ಹಾಗೂ ಮೂತ್ರಸೋಂಕಿನಂತಹ ಕಾಯಿಲೆಗಳನ್ನು ದೂರಮಾಡುತ್ತದೆ. ದಿನದಲ್ಲಿ ಎಷ್ಟು ಪ್ರಮಾಣದಲ್ಲಿ ನೆಲ್ಲಿಕಾಯಿಯ ಸೇವನೆಯನ್ನು ನೀವು ಮಾಡಬೇಕು ಎಂಬ ಲೆಕ್ಕಾಚಾರ ಕೂಡ ಮುಖ್ಯವಾಗಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ನೆಲ್ಲಿಕಾಯಿ ಸೇವಿಸುವುದು ನಿಮ್ಮ ದೇಹಕ್ಕೆ ಮಾರಕವಾಗಬಹುದು. ಆದ್ದರಿಂದ ಸೂಕ್ತ ಪ್ರಮಾಣದಲ್ಲಿ ನೆಲ್ಲಿಕಾಯಿ ಸೇವನೆಯನ್ನು ಮಾಡಿ. ದಿನಕ್ಕೆ ಒಂದು ನೆಲ್ಲಿಕಾಯಿ ಸೇವಿಸಿ ಇದು 500 ಎಮ್‌ಜಿ ಯಿಂದ 1800 ಎಮ್‌ಜಿಯಷ್ಟು ವಿಟಮಿನ್ ಸಿಯನ್ನು ಒಳಗೊಂಡಿರುತ್ತದೆ.

ಪೌಡರ್ ರೂಪದಲ್ಲಿ ಸೇವಿಸುವಾಗ ದಿನಕ್ಕೆ ಒಂದು ಚಮಚದಷ್ಟು ಮಾತ್ರ ಸೇವಿಸಿ. ಇದರ ಪ್ರಮಾಣ 4 ಗ್ರಾಮ್ ಆಗಿರುತ್ತದೆ.

ಅದೇ ರೀತಿ ನೆಲ್ಲಿಕಾಯಿಯನ್ನು ಬೇರೆ ಬೇರೆ ವಿಧಾನಗಳಲ್ಲಿ ಸೇವಿಸಬಹುದಾಗಿದೆ. ಅದು ಯಾವ ಯಾವ ವಿಧಾನಗಳಲ್ಲಿ ಎಂಬುದನ್ನು ಕೆಳಗೆ ನೋಡೋಣ...

ಉಪ್ಪಿನಕಾಯಿ: ಉಪ್ಪಿನಕಾಯಿ ರೂಪದಲ್ಲಿ ಅನ್ನ ಮತ್ತು ಪರೋಟಾದೊಂದಿಗೆ ಇದನ್ನು ಸೇವಿಸಬಹುದು. ಇದರಿಂದ ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. 

amla juice

ಜ್ಯೂಸ್

ನೆಲ್ಲಿಕಾಯಿಯನ್ನು ಜ್ಯೂಸ್ ರೂಪದಲ್ಲಿ ಕೂಡ ಸೇವಿಸಿ. ಇದರ ಜೊತೆಗೆ ಜೇನು ಮತ್ತು ಕಾಳುಮೆಣಸನ್ನು ಸೇರಿಸಿಕೊಳ್ಳಿ. ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ನೆಲ್ಲಿಕಾಯಿ ಜ್ಯೂಸ್ ಅತ್ಯವಶ್ಯಕವಾದುದಾಗಿದೆ. 

ಫಿಟ್ ಹಾಗೂ ಆರೋಗ್ಯವಾಗಿರಲು ನಿತ್ಯ ಸೇವಿಸಿ 'ನೆಲ್ಲಿಕಾಯಿ ಜ್ಯೂಸ್'

ಪೌಡರ್

ನೆಲ್ಲಿಕಾಯಿಯ ಒಗರು ನಿಮಗೆ ಇಷ್ಟವಿಲ್ಲದಿದ್ದರೆ ಇದನ್ನು ಒಣಗಿಸಿ ಹುಡಿಯ ರೂಪದಲ್ಲಿ ಕೂಡ ಇರಿಸಿಕೊಳ್ಳಬಹುದು. ನೆಲ್ಲಿಕಾಯಿಯನ್ನು ತೊಳೆದು ಅದನ್ನು ಕೆಲವು ದಿನ ಬಿಸಿಲಿನಲ್ಲಿ ಒಣಗಿಸಿ. ನಿಮ್ಮ ದೈನಂದಿನ ಅಡುಗೆಯಲ್ಲಿ ಈ ಹುಡಿಯನ್ನು ಬಳಸಬಹುದಾಗಿದೆ.

ಕ್ಯಾಂಡಿ

ಕ್ಯಾಂಡಿಯ ರೂಪದಲ್ಲಿ ಕೂಡ ನೆಲ್ಲಿಕಾಯಿಯನ್ನು ಗರ್ಭಿಣಿಯರು ಸೇವಿಸಬಹುದಾಗಿದೆ. ದಿನಕ್ಕೆ ಒಂದೆರಡು ತುಂಡು ನೆಲ್ಲಿಕಾಯಿ ಕ್ಯಾಂಡಿಯನ್ನು ಸವಿಯಿರಿ.

pregnancy women

ಮುರಬ್ಬ

ಸಕ್ಕರೆ ದ್ರಾವಣ ಜೇನಿನೊಂದಿಗೆ ಸೇರಿಸಿ ಮುರಬ್ಬವನ್ನು ತಯಾರಿಸಬಹುದು. ಹೀಗೆ ನೆಲ್ಲಿಕಾಯಿ ಒಂದು ಜಾದೂ ಹಣ್ಣಾಗಿದ್ದು, ಗರ್ಭಾವಸ್ಥೆಯ ಹೆಚ್ಚಿನ ನೋವುಗಳನ್ನು ಇದು ದೂರಮಾಡುತ್ತದೆ. ಮಲಬದ್ಧತೆ ಸಮಸ್ಯೆಯನ್ನು ದೂರಮಾಡಲು ಇದು ಸಹಕಾರಿಯಾಗಿದೆ. ಡಯೇರಿಯಾ, ನಿರ್ಜಲೀಕರಣ, ತ್ವಚೆ ಒಣಗುವಿಕೆ, ಹೈಪರ್ ಆಸಿಡಿಟಿ ಮೊದಲಾದ ಕಾಯಿಲೆಗಳನ್ನು ಇದು ದೂರಮಾಡುತ್ತದೆ. ಇದು ಚಳಿಗಾಲದ ಹಣ್ಣಾಗಿರುವುದರಿಂದ ಇದು ದೇಹಕ್ಕೆ ತಣ್ಣನೆಯ ಆಹ್ಲಾದವನ್ನುಂಟು ಮಾಡುತ್ತದೆ. ಇದನ್ನು ಸೇವಿಸಿದ ನಂತರ ಗರ್ಭಿಣಿಯರಿಗೆ ಶೀತ, ಗಂಟಲು ನೋವು ಮೊದಲಾದ ಸಮಸ್ಯೆಗಳು ಕಾಡಬಹುದು. ಡಯೇರಿಯಾ ಸಮಯದಲ್ಲಿ ನೆಲ್ಲಿಯ ಸೇವನೆಯನ್ನು ಮಾಡಬಾರದು. ಸೇವಿಸಿದಲ್ಲಿ ಪರಿಸ್ಥಿತಿ ಬಿಗಡಾಯಿಸಬಹುದು.

English summary

Benefits of consuming amla during pregnancy

Amla is known for the benefits it provides for hair growth. It is extremely beneficial in pregnancy too, as it is a powerhouse of Vitamin C. Adequate amount of Vitamin C is necessary for the body to be able to absorb iron and iron is needed to maintain the haemoglobin level, which usually reduces during the second trimester for many. Amla is a very good superfood to get the Vitamin C and in addition, it has other benefits for pregnancy too, which are discussed further below.