ಗರ್ಭಿಣಿ ಮಹಿಳೆಯರೇ ಗ್ಲೂಕೋಸ್ ಪರೀಕ್ಷೆ ಮಾಡಿಸಿಕೊಳ್ಳಿ!

By: Hemanth
Subscribe to Boldsky

ನೀವು ಯಾವತ್ತಾದರೂ ಗ್ಲೂಕೋಸ್ ಚಾಲೆಂಜ್ ಪರೀಕ್ಷೆ ಮಾಡಿಸಿಕೊಂಡಿದ್ದೀರಾ? ಇಲ್ಲ ತಾನೇ? ಇದರ ಬಗ್ಗೆ ಯಾವತ್ತೂ ಕೇಳಿರಲಿಕ್ಕಿಲ್ಲ. ನಿಶ್ಯಕ್ತಿ ಸಂಭವಿಸಿದರೆ ಗ್ಲೂಕೋಸ್ ಕೊಡುತ್ತಾರೆ. ಆದರೆ ಗ್ಲೂಕೋಸ್ ಪರೀಕ್ಷೆ ಏನೆಂದು ಹೆಚ್ಚಿನವರಿಗೆ ತಿಳಿದಿಲ್ಲ. ಏನಾಪ್ಪಾ ಈ ಪರೀಕ್ಷೆ ಎಂದು ಅಚ್ಚರಿ ಕೂಡ ಪಡಬಹುದು. ಮಹಿಳೆಯರು ಗರ್ಭಿಣಿಯಾಗುವ ವೇಳೆ ಗ್ಲೂಕೋಸ್ ಚಾಲೆಂಜ್ ಪರೀಕ್ಷೆ ಮಾಡಲಾಗುತ್ತದೆ.

ಗರ್ಭಾವಸ್ಥೆಯಲ್ಲಿ ಇಂತಹ ಆಹಾರಗಳು, ತಾಯಿ-ಮಗುವಿಗೆ ಬಲು ಉಪಕಾರಿ

ಗರ್ಭಧಾರಣೆಯ 25ನೇ ಮತ್ತು 28ನೇ ವಾರದ ಮಧ್ಯೆ ಗ್ಲೂಕೋಸ್ ಪರೀಕ್ಷೆ ಮಾಡಿಕೊಳ್ಳಬೇಕು. ಗರ್ಭಧಾರಣೆಯ ಸಂದರ್ಭದಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಹೆಚ್ಚಾಗುವುದು. ಶೇಕಡಾ 3-5ರಷ್ಟು ಗರ್ಭಿಣಿ ಮಹಿಳೆಯರಿಗೆ ಇಂತಹ ಪರಿಸ್ಥಿತಿ ಉಂಟಾಗುತ್ತದೆ. ಹಾರ್ಮೋನುಗಳಲ್ಲಿನ ಬದಲಾವಣೆ ಮತ್ತು ಅನಾರೋಗ್ಯಕರ ಆಹಾರ ಸೇವನೆಯಿಂದಾಗಿ ಗರ್ಭಧಾರಣೆ ವೇಳೆ ಮಧುಮೇಹ ಉಂಟಾಗುವುದು. ಇದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಿ..... 

ನಿಯಮಿತ ಮೂತ್ರ ಪರೀಕ್ಷೆ

ನಿಯಮಿತ ಮೂತ್ರ ಪರೀಕ್ಷೆ

ಗರ್ಭಧಾರಣೆಯ ಆರಂಭಿಕ ಹಂತದಲ್ಲೇ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಿದೆ ಎಂದು ಮೂತ್ರ ಪರೀಕ್ಷೆಯಿಂದ ತಿಳಿದುಬಂದರೆ 24ನೇ ವಾರಕ್ಕೆ ಮೊದಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಮಧುಮೇಹವಿದ್ದರೆ ಏನಾಗುತ್ತದೆ?

ಮಧುಮೇಹವಿದ್ದರೆ ಏನಾಗುತ್ತದೆ?

ಗರ್ಭಧಾರಣೆ ಮೊದಲು ಮಹಿಳೆಗೆ ಮಧುಮೇಹವಿದ್ದರೆ ಅಂತಹ ಮಹಿಳೆಯರು ಗ್ಲೂಕೋಸ್ ಚಾಲೆಂಜ್ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಗರ್ಭಧಾರಣೆ ಮೊದಲು ಕೆಲವೊಂದು ಮುನ್ನೆಚ್ಚರಿಕೆ ತೆಗೆದುಕೊಂಡರೆ ಸುರಕ್ಷಿತವಾಗಿರಬಹುದು.

ಪರೀಕ್ಷೆ ಹೇಗೆ ಮಾಡಲಾಗುತ್ತದೆ?

ಪರೀಕ್ಷೆ ಹೇಗೆ ಮಾಡಲಾಗುತ್ತದೆ?

ಸಕ್ಕರೆಯ ಪಾನೀಯವನ್ನು ಮೊದಲಿಗೆ ನೀಡಲಾಗುವುದು. ಇದರಲ್ಲಿ ಸುಮಾರು 50 ಗ್ರಾಂನಷ್ಟು ಸಕ್ಕರೆಯಿರುತ್ತದೆ. ಗರ್ಭಿಣಿ ಮಹಿಳೆಯು ಇದನ್ನು ಸೇವಿಸಿದ ಬಳಿಕ ಸುಮಾರು ಒಂದು ಗಂಟೆ ಕಾಲ ಹಾಗೆ ಇರಬೇಕು ಮತ್ತು ಬಳಿಕ ಗ್ಲೂಕೋಸ್ ಚಾಲೆಂಜ್ ಟೆಸ್ಟ್ ಗೆ ಒಳಪಡಬೇಕು. ಈ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷೆ ನಡೆಸಲಾಗುವುದು.

ಪರೀಕ್ಷೆ ಅಗತ್ಯವೇ?

ಪರೀಕ್ಷೆ ಅಗತ್ಯವೇ?

ಗರ್ಭಧಾರಣೆಯ ಮಧುಮೇಹವನ್ನು ತಡೆಯುವ ಸಲುವಾಗಿ ಇಂದಿನ ದಿನಗಳಲ್ಲಿ ಹೆಚ್ಚಿನ ಗರ್ಭಿಣಿ ಮಹಿಳೆಯರು ಈ ಪರೀಕ್ಷೆ ಮಾಡಿಕೊಳ್ಳುವರು.

ಈ ಪರೀಕ್ಷೆ ಯಾರಿಗೆ ಅನಿವಾರ್ಯ

ಈ ಪರೀಕ್ಷೆ ಯಾರಿಗೆ ಅನಿವಾರ್ಯ

ಬಿಎಂಐ ಅತಿಯಾಗಿರುವ ಮಹಿಳೆಯರು, 35ರ ಬಳಿಕ ಗರ್ಭಿಣಿಯಾಗಿರುವ ಮಹಿಳೆಯರು ಮತ್ತು ಕುಟುಂಬದಲ್ಲಿ ಯಾರಿಗಾದರೂ ಮಧುಮೇಹ ಇರುವಂತಹ ಮಹಿಳೆಯರು ಗ್ಲೂಕೋಸ್ ಪರೀಕ್ಷೆ ನಡೆಸುವುದು ತುಂಬಾ ಅನಿವಾರ್ಯ.

ಗರ್ಭಧಾರಣೆ ಮಧುಮೇಹ ಪತ್ತೆಹಚ್ಚುವುದು ಹೇಗೆ?

ಗರ್ಭಧಾರಣೆ ಮಧುಮೇಹ ಪತ್ತೆಹಚ್ಚುವುದು ಹೇಗೆ?

ಗರ್ಭಧಾರಣೆ ವೇಳೆ ಮಧುಮೇಹ ಇದ್ದರೆ ಅದರಿಂದ ಪ್ರಸವ ವೇಳೆ ಭಾರೀ ಅಪಾಯ, ಹುಟ್ಟುವ ಮಗುವಿನಲ್ಲಿ ವೈಕಲ್ಯ ಮತ್ತು ಇತರ ಕೆಲವು ಸಮಸ್ಯೆ ಉಂಟು ಮಾಡಬಹುದು. ಗರ್ಭಧಾರಣೆ ತುಂಬಾ ಸುರಕ್ಷಿತವಾಗಿರಲು ಸಮಸ್ಯೆಯನ್ನು ಮೊದಲೇ ತಿಳಿದುಕೊಳ್ಳುವುದು ಅತೀ ಅಗತ್ಯ.

English summary

Why Pregnant Women Need To Take The Glucose Challenge Test?

The main objective of the test is to check whether the pregnant woman is suffering from gestational diabetes which is a condition that raises blood glucose levels. Almost 3-5% of pregnant women tend to develop this condition. Generally, certain hormonal changes and eating unhealthy foods can raise the risk of gestational diabetes. Here are some facts.
Subscribe Newsletter