ಶ್!! ಅದನ್ನು ಬಳಸದೇ ಕೂಡ ಗರ್ಭಧಾರಣೆಯನ್ನು ತಡೆಯಬಹುದಂತೆ!!

Posted By: Lekhaka
Subscribe to Boldsky

ಕೆಲವು ದಂಪತಿ ಮಕ್ಕಳು ಬೇಗನೆ ಬೇಡ ಎಂದು ನಿರ್ಧರಿಸುತ್ತಾರೆ. ಇದಕ್ಕಾಗಿ ಹಲವಾರು ರೀತಿಯ ವಿಧಾನಗಳನ್ನು ಅನುಸರಿಸುವರು. ಆದರೆ ಅಂತಿಮವಾಗಿ ಗರ್ಭಿಣಿಯಾದಾಗ ಅವರಿಗೆ ಅಚ್ಚರಿಯಾಗಿರುವುದು. ಹೆಚ್ಚಿನ ದಂಪತಿ ಕ್ಲೈಮ್ಯಾಕ್ಸ್ ವೇಳೆ ಹೊರತೆಗೆಯುವಂತ ತಂತ್ರವನ್ನು ಅನುಸರಿಸುವರು. ಆದರೆ ಇದರಲ್ಲಿ ಸಫಲತೆ ಸಿಗುವುದು ತುಂಬಾ ಕಡಿಮೆ. ಯಾಕೆಂದರೆ ಜೀವಸೃಷ್ಟಿಗೆ ಬೇಕಾಗಿರುವ ವೀರ್ಯವು ಅದಾಗಲೇ ತನ್ನ ಗಮ್ಯ ತಲುಪಿರುವುದು.

ಸದ್ಯಕ್ಕೆ ನಮಗೀಗ ಮಕ್ಕಳು ಬೇಡ! ಇದು ಇತ್ತೀಚಿನ ಟ್ರೆಂಡ್

ಕಾಂಡೋಮ್ ಇಲ್ಲದೆ ನೈಸರ್ಗಿಕ ರೀತಿಯಲ್ಲಿ ಗರ್ಭಿಣಿಯಾಗುವುದನ್ನು ತಡೆಯಬೇಕಾದರೆ ಮಹಿಳೆಯರು ಕಾಪರ್ ಟೀ ಹಾಕಿಸಿಕೊಳ್ಳಬೇಕು. ದೀರ್ಘ ಕಾಲ ತನಕ ಮಗು ಬೇಡ ಎಂದು ನಿರ್ಧರಿಸಿರುವವರಿಗೆ ಇದು ಒಳ್ಳೆಯ ವಿಧಾನ. ಕೆಲವು ಸಲ ಇದರಲ್ಲೂ ಗರ್ಭಿಣಿಯರಾಗುವ ಸಂಭವವಿದೆ. ಕಾಂಡೋಮ್ ಇಲ್ಲದೆ ಗರ್ಭ ತಡೆಯಲು ಮತ್ತೊಂದು ಒಳ್ಳೆಯ ವಿಧಾನವೆಂದೆ ಮಹಿಳೆಯರು ಮಾತ್ರೆ ಸೇವನೆ ಮಾಡುವುದು. ಆದರೆ ಇದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಇದ್ದೇ ಇದೆ. ಗರ್ಭಧಾರಣೆ ತಡೆಯಲು ಕೆಲವೊಂದು ರೀತಿಯ ವಿಧಾನಗಳು ಇವೆ. ಇದನ್ನು ನೀವು ಪಾಲಿಸಿಕೊಂಡು ಹೋಗಬಹುದು...

ಸುರಕ್ಷಿತ ವಾರ

ಸುರಕ್ಷಿತ ವಾರ

ಕಾಂಡೋಮ್ ಇಲ್ಲದೆ ಗರ್ಭ ತಡೆಯಲು ಒಳ್ಳೆಯ ವಿಧಾನ ಸುರಕ್ಷಿತ ವಾರ. ಮಹಿಳೆಯ ಋತುಚಕ್ರದ 8ನೇ ದಿನದಿಂದ 20ನೇ ದಿನದ ತನಕ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು. ಮುಟ್ಟಿನ ಮೊದಲ ದಿನವನ್ನು ಋತುಚಕ್ರದ ಮೊದಲ ದಿನವೆಂದು ಪರಿಗಣಿಸಲಾಗುವುದು.

ಹೊರಗೆಳೆಯುವುದು

ಹೊರಗೆಳೆಯುವುದು

ಈ ವಿಧಾನವನ್ನು ಹೆಚ್ಚಿನ ದಂಪತಿ ಪಾಲಿಸುವರು. ಆದರೆ ಇದು ಸಂಪೂರ್ಣವಾಗಿ ಸುರಕ್ಷಿತವಲ್ಲ. ಆದರೆ ಈ ವಿಧಾನವು ಸುಮಾರು 83 ಶೇ.ಕ್ಕಿಂತ ಪರಿಣಾಮಕಾರಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಾಂಡೋಮ್ ಕೂಡ ಶೇ.84ರಷ್ಟು ಪರಿಣಾಮಕಾರಿಯೆಂದು ಪರಿಗಣಿಸಲಾಗಿದೆ.

ಪರಿಣಾಮಕಾರಿ ಕಾಪರ್ ಟಿ

ಪರಿಣಾಮಕಾರಿ ಕಾಪರ್ ಟಿ

ಕಾಪರ ಟಿಯನ್ನು ತಜ್ಞ ವೈದ್ಯರು ಅಳವಡಿಸುತ್ತಾರೆ ಮತ್ತು ದಂಪತಿಗೆ ಮಕ್ಕಳು ಬೇಕೆಂದು ಅನಿಸಿದಾಗ ಇದನ್ನು ತೆಗೆಯಬಹುದು. ಗರ್ಭ ಧರಿಸುವುದನ್ನು ಮುಂದೂಡಲು ಹೆಚ್ಚಿನ ಮಹಿಳೆಯರು ಈ ವಿಧಾನ ಅಳವಡಿಸಿಕೊಳ್ಳುವರು.

ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ

ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ

ಏನೇ ಆದರೂ ಪ್ರತಿನಿತ್ಯ ಮಾತ್ರೆ ಸೇವನೆ ಮಾಡುವುದು. ನೀವು ಮಾತ್ರೆ ತೆಗೆದುಕೊಳ್ಳದೆ ಇದ್ದರೆ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ಏನು ಮಾಡಬೇಕೆಂದು ಸಲಹೆ ಪಡೆಯಿರಿ. ಕಾಂಡೋಮ್ ಇಲ್ಲದೆ ಗರ್ಭ ತಡೆಯಲು ಇದು ಒಳ್ಳೆಯ ವಿಧಾನ.

ಮೊದಲು ಆಟವಾಡಿ!

ಮೊದಲು ಆಟವಾಡಿ!

ಸಂಪೂರ್ಣವಾಗಿ ಲೈಂಗಿಕ ಕ್ರಿಯೆಗೆ ತೊಡಗಿಕೊಳ್ಳುವ ಮೊದಲು ನೀವು ಆಟವಾಡಿ. ಇದರಿಂದ ಉದ್ರೇಕವು ಹೆಚ್ಚಾಗುವುದು ಮತ್ತು ಗರ್ಭ ಧರಿಸುವ ಸಾಧ್ಯತೆ ಸ್ವಲ್ಪ ಕಡಿಮೆ. ನೀವು ಹಾಗೂ ನಿಮ್ಮ ಸಂಗಾತಿಗೆ ಈಗ ಮಗು ಬೇಡವೆಂದಿದ್ದರೆ ಈ ವಿಧಾನ ಅನುಸರಿಸಬಹುದು. ವೀರ್ಯವನ್ನು ಹೊರ ಚೆಲ್ಲುವ ಪ್ರಕ್ರಿಯೆಯನ್ನು ಕಲಿಯುವುದರ ಜೊತೆಗೆ, ಸ್ತ್ರೀಯರ ಕಾಂಡೋಮ್ ಮತ್ತು ಗರ್ಭ ನಿರೋಧಕ ಗುಳಿಗೆಗಳನ್ನು ಸೇವಿಸುವವರೆಗೆ ಗರ್ಭವನ್ನು ತಡೆಯಲು ಹಲವಾರು ಮಾರ್ಗಗಳು ಚಾಲ್ತಿಯಲ್ಲಿವೆ. ಇವುಗಳಲ್ಲಿ ಕೆಲವೊಂದು ನೂರಕ್ಕೆ ನೂರು ಸುರಕ್ಷಿತವಾಗಿದ್ದರೆ, ಇನ್ನೂ ಕೆಲವು ಸ್ತ್ರೀಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತವೆ.

ವೀರ್ಯವನ್ನು ಹೊರಚೆಲ್ಲುವ ವಿಧಾನ

ವೀರ್ಯವನ್ನು ಹೊರಚೆಲ್ಲುವ ವಿಧಾನ

ಒಂದು ಹೊಸ ಅಧ್ಯಯನದ ಪ್ರಕಾರ 3,276 ಅಮೆರಿಕಾದ ಮಹಿಳೆಯರು ತಮಗೆ ಬೇಡದ ಗರ್ಭವನ್ನು ವೀರ್ಯ ಹೊರಚೆಲ್ಲುವ ವಿಧಾನದಿಂದ ತಡೆಯುತ್ತಾರಂತೆ. ವೀರ್ಯ ಸ್ಖಲನವಾಗುವ ಸಂದರ್ಭದಲ್ಲಿ ಅದನ್ನು ಹೊರಗೆ ಚೆಲ್ಲುವ ಮೂಲಕ ಇದನ್ನು ಇವರು ಸಾಧಿಸುತ್ತಾರೆ. ಇದು ಸ್ವಲ್ಪ ಅಪಾಯಕಾರಿಯಾದರು, ಸುರಕ್ಷಿತವಾದ ವಿಧಾನ, ಇದರ ಒಂದೇ ಒಂದು ಅಡ್ಡಪರಿಣಾಮ ಅಪ್ಪಿ-ತಪ್ಪಿದರೆ ಗರ್ಭಧರಿಸಬಹುದು ಅಷ್ಟೇ!

ಸ್ತ್ರೀಯರ ಕಾಂಡೋಮ್‌ಗಳು

ಸ್ತ್ರೀಯರ ಕಾಂಡೋಮ್‌ಗಳು

ಹಲವರಿಗೆ ಸ್ತ್ರೀಯರ ಕಾಂಡೋಮ್ ಇದೆ ಎಂಬುದೇ ತಿಳಿದಿಲ್ಲ. ಗಂಡಸರು ಮಿಲನದಲ್ಲಿ ಪಾಲ್ಗೊಂಡಾಗ ಇದನ್ನು ಧರಿಸಿದರೆ, ಹೆಂಗಸರು ಇದನ್ನು ಮಿಲನಕ್ಕೆ ಮೊದಲೆ ಎಂಟುಗಂಟೆಗಳ ಮೊದಲೆ ಬೇಕಾದರೂ ಧರಿಸಬಹುದು. ಇದು ಔಷಧಿ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಇದು ಹೆಂಗಸರಿಗೆ ಹೇಳಿ ಮಾಡಿಸಿದ ಕಾಂಡೋಮ್ ಆಗಿರುತ್ತದೆ. ಗರ್ಭನಿರೋಧಕ ಮಾತ್ರೆಗಳು ಹೆಂಗಸರಿಗೆ ಗರ್ಭವನ್ನು ತಡೆಯಲು ಇರುವ ಮಾರ್ಗಗಳಲ್ಲಿ ಒಂದಾಗಿದೆ. ಕೆಲವೊಂದು ಮಾತ್ರೆಗಳು, ಸ್ತ್ರೀಯರು ಅಪ್ಪಿ-ತಪ್ಪಿ ಮಿಲನದಲ್ಲಿ ಪಾಲ್ಗೊಂಡ ನಂತರ ಸಹ ಸೇವಿಸಬಹುದು. ಆದರೆ ಇದು ಅವರ ಆರೋಗ್ಯಕ್ಕೆ ಪೂರಕವಲ್ಲ. ಅವರಿಗೆ ಇದನ್ನು ಸೇವಿಸುವುದರಿಂದ ತಲೆನೋವು, ಋತು ಚಕ್ರದ ಏರು-ಪೇರು, ನಾಸಿಯಾ, ಸ್ತನ ಊದಿಕೊಳ್ಳುವಿಕೆ, ಅಧಿಕ ತೂಕ, ಮೂಡ್ ಬದಲಾವಣೆ, ಕಾಮಾಸಕ್ತಿಯ ಕೊರತೆ, ಯೋನಿ ಸ್ರಾವ ಇತ್ಯಾದಿ ಕಾಣಿಸಿಕೊಳ್ಳುತ್ತದೆ.

ಲ್ಯೂಬ್ರಿಕೆಂಟ್ ಸಹ ಗರ್ಭಧಾರಣೆಯನ್ನು ತಡೆಯುತ್ತವೆ

ಲ್ಯೂಬ್ರಿಕೆಂಟ್ ಸಹ ಗರ್ಭಧಾರಣೆಯನ್ನು ತಡೆಯುತ್ತವೆ

ಒಂದು ವೇಳೆ ನೀವು ವಾಟರ್-ಬೇಸ್‌ಡ್ ಲೂಬ್ರಿಕೆಂಟ್ ಬಳಸುತ್ತಿದ್ದಲ್ಲಿ, ಅದರಿಂದ ಸಹ ಗರ್ಭಧಾರಣೆಯನ್ನು ತಡೆಯಬಹುದು. ಇವುಗಳಲ್ಲಿರುವ ರಾಸಾಯನಿಕಗಳು ವೀರ್ಯವನ್ನು ತತ್‌ಕ್ಷಣದಲ್ಲಿ ಕೊಲ್ಲುತ್ತವೆ. ಇದನ್ನು ಸಹ ಮಹಿಳೆಯರು ಗರ್ಭನಿರೋಧಕ ಮಾರ್ಗವಾಗಿ ಬಳಸಬಹುದು.

ಸುರಕ್ಷಿತ ಅವಧಿ

ಸುರಕ್ಷಿತ ಅವಧಿ

ಸಾಮಾನ್ಯವಾಗಿ ಆರೋಗ್ಯಕರವಾಗಿರುವ ಮತ್ತು ಸರಿಯಾದ ಋತುಚಕ್ರದ ಅವಧಿಯನ್ನು ಹೊಂದಿರುವ ಮಹಿಳೆಯರು ಒಂದು ತಿಂಗಳಿನಲ್ಲಿ ಆರು ದಿನಗಳ ಸುರಕ್ಷಿತವಾದ ಅವಧಿಯನ್ನು ಹೊಂದಿರುತ್ತಾರೆ. ಈ ಅವಧಿಯಲ್ಲಿ ಮಿಲನ ಮಾಡುವುದರಿಂದ ಅಥವಾ ಆ ಅವಧಿಯಲ್ಲಿ ಗರ್ಭ ನಿರೋಧಕಗಳನ್ನು ಬಳಸದೆ ಮಿಲನ ಮಾಡುವುದರಿಂದ, ಗರ್ಭಧರಿಸುವ ಅಪಾಯ ಇರುವುದಿಲ್ಲ. ಆದರೂ ಇದು ಅಷ್ಟೊಂದು ಸುರಕ್ಷಿತವಲ್ಲ ಎಂಬುದು ಹಲವರ ಅಭಿಪ್ರಾಯ.

ಐಯುಡಿ

ಐಯುಡಿ

ಅಸುರಕ್ಷಿತ ಮಿಲನ ನಡೆಸಿದ ಐದು ದಿನಗಳ ಒಳಗೆ ಐಯುಡಿಯನ್ನು ಅಳವಡಿಸಿಕೊಳ್ಳುವುದರಿಂದ ಗರ್ಭಧಾರಣೆಯನ್ನು ತಡೆಯಬಹುದು. ಈ ಐಯುಡಿಯು ಐದರಿಂದ ಹತ್ತು ದಿನಗಳವರೆಗೆ ಇರುತ್ತದೆ. ಈ ವಿಧಾನವು ಮಹಿಳೆಯರಿಗೆ ಸುರಕ್ಷಿತ ಮತ್ತು ಅನುಕೂಲಕರವಾಗಿರುವುದರಿಂದಾಗಿ, ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.

English summary

Prevent A Pregnancy Without Condoms: Tips

To prevent pregnancy naturally without a condom, one thing you can do is to get a copper T. Women who want to prolong motherhood and enjoy their sex lives can turn to this method. However, there are possible chances that you will not be able to conceive. The other possible way to prevent pregnancy without a condom is to for the woman to consume the pill. Here again, the side effects are in number and one should consume the pill often.
Subscribe Newsletter