Latest Updates
-
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು
ಸದ್ಯಕ್ಕೆ ನಮಗೀಗ ಮಕ್ಕಳು ಬೇಡ! ಇದು ಇತ್ತೀಚಿನ ಟ್ರೆಂಡ್!
ಮಕ್ಕಳಿರಲವ್ವ ಮನೆತುಂಬಾ ಎಂಬ ಹಿರಿಯರ ಗಾದೆ ಮಾತಿಗೆ ಅಪವಾದವಾಗಿ ಇಂದಿನ ಯುವ ಜೋಡಿಗಳು ತಮ್ಮದೇ ಕೆಲವೊಂದು ನಿರ್ಧಾರಗಳಿಗೆ ಅನುಸಾರವಾಗಿ ಮಕ್ಕಳನ್ನು ಹೊಂದದೇ ಇರುವ ತೀರ್ಮಾನಕ್ಕೆ ಬಂದಿರುತ್ತಾರೆ.
ಮದುವೆ ನಂತರ ಸಂಸಾರ, ಕುಟುಂಬ ಹೀಗೆ ಮಾನವನ ಜೀವನ ಪಥ ಬದಲಾವಣೆಯಾಗುತ್ತಲೇ ಹೋಗುತ್ತದೆ ಮತ್ತು ಅರ್ಥ ಪೂರ್ಣವಾಗುತ್ತದೆ. ಒಂದು ಅಂದದ ಕುಟುಂಬದಲ್ಲಿ ಪ್ರೀತಿ, ಸಾಮರಸ್ಯ, ಬಂಧನ ಅತಿ ಮುಖ್ಯವಾಗಿರುತ್ತದೆ. ಈ ಬಂಧನದಲ್ಲಿ ಮಕ್ಕಳು ಹೆಚ್ಚಿನ ಪಾತ್ರವನ್ನು ವಹಿಸುತ್ತಾರೆ. ಆದರೆ ಇಂದಿನ ಲೈಫ್ ಸ್ಟೈಲ್ ಜನರು ವಿವಾಹವಾದ ಮೇಲೂ ಮಕ್ಕಳನ್ನು ಪಡೆದುಕೊಳ್ಳಲು ಸ್ವಲ್ಪ ಸಮಯಾವಕಾಶವನ್ನು ತೆಗೆದುಕೊಳ್ಳುತ್ತಾರೆ.
ಆದರೆ ಇನ್ನು ಕೆಲವರು ಮಕ್ಕಳು ಹೊಂದುವುದೇ ಬೇಡವೆಂಬ ನಿರ್ಧಾರವನ್ನು ತೆಗೆದುಕೊಂಡಿರುವವರಿದ್ದಾರೆ. ಮಕ್ಕಳಿರಲವ್ವ ಮನೆತುಂಬಾ ಎಂಬ ಹಿರಿಯರ ಗಾದೆ ಮಾತಿಗೆ ಅಪವಾದವಾಗಿ ಇಂದಿನ ಯುವ ಜೋಡಿಗಳು ತಮ್ಮದೇ ಕೆಲವೊಂದು ನಿರ್ಧಾರಗಳಿಗೆ ಅನುಸಾರವಾಗಿ ಮಕ್ಕಳನ್ನು ಹೊಂದದೇ ಇರುವ ತೀರ್ಮಾನಕ್ಕೆ ಬಂದಿರುತ್ತಾರೆ. ಇವರು ಕೆಲವೊಂದು ನಿರ್ಧಾರಗಳಿಗಾಗಿ ತಮಗೆ ಮಕ್ಕಳು ಬೇಡ ಎಂಬ ತತ್ವಕ್ಕೆ ಬದ್ಧರಾಗಿದ್ದು ಇಂದಿಲ್ಲಿ ಅದೇನು ಎಂಬುದನ್ನು ಅರಿತುಕೊಳ್ಳಲಿದ್ದೇವೆ.

ಕಾರಣ #1
ತಮ್ಮ ವೃತ್ತಿ ಬದುಕಿಗೆ ಪ್ರಾಮುಖ್ಯತೆಯನ್ನು ನೀಡುವವರು ಮಕ್ಕಳು ಬೇಡ ಎಂಬ ನಿರ್ಧಾರಕ್ಕೆ ಬಂದಿರುತ್ತಾರೆ. ತಮ್ಮ ವೃತ್ತಿ ಬದುಕಿನಲ್ಲಿ ಇನ್ನಷ್ಟು ಮೇಲಕ್ಕೆ ಏರಬೇಕು ಎಂದು ಬಯಸುವವರು ಮಕ್ಕಳು ತಡೆ ಎಂಬುದಾಗಿ ಭಾವಿಸುತ್ತಾರೆ. ಅದಕ್ಕಾಗಿ ಅವರು ಮಕ್ಕಳು ಬೇಡ ಎಂಬ ನಿರ್ಧಾರಕ್ಕೆ ಬಂದಿರುತ್ತಾರೆ.

ಕಾರಣ #2
ಆರ್ಥಿಕ ಕಾರಣಗಳನ್ನು ನೀಡಿ ಮಕ್ಕಳನ್ನು ಹೊಂದಲು ಕೆಲವರು ಇಚ್ಛಿಸುವುದಿಲ್ಲ, ಮಕ್ಕಳನ್ನು ಹೊಂದುವುದರಿಂದ ಖರ್ಚು ವೆಚ್ಚಗಳು ಇನ್ನಷ್ಟು ಅಧಿಕಗೊಳ್ಳಬಹುದು ಎಂಬುದು ಅವರ ಭಾವನೆಯಾಗಿರುತ್ತದೆ.

ಕಾರಣ #3
ಹೆತ್ತವರಿಂದ ಮಕ್ಕಳಿಗೆ ಹರಡುವ ರೋಗಗಳನ್ನು ಅರಿತು ಅದರಿಂದ ಭಯಗೊಂಡು ಕೆಲವರು ಮಕ್ಕಳನ್ನು ಪಡೆದುಕೊಳ್ಳುವಲ್ಲಿ ಆಸಕ್ತಿಯನ್ನು ಹೊಂದಿರುವುದಿಲ್ಲ. ಹೃದಯ ರೋಗಗಳು, ಹೇಮೊಫೀಲಿಯಾ, ಒತ್ತಡ, ಖಿನ್ನತೆ ಮೊದಲಾದವುಗಳಾಗಿವೆ.

ಕಾರಣ #4
ಜಗತ್ತಿನಲ್ಲಿ ಜನಸಂಖ್ಯೆಯನ್ನು ಹತೋಟಿಯಲ್ಲಿಡಲು ಮಕ್ಕಳನ್ನು ಹೊಂದದೇ ಇರುವುದು ಉತ್ತಮ ಎಂಬುದು ಕೆಲವರ ಭಾವನೆಯಾಗಿದೆ. ವಿಶ್ವದ ಉತ್ತಮತೆಗಾಗಿ ಮಕ್ಕಳನ್ನು ಪಡೆದುಕೊಳ್ಳದೇ ಇರುವುದು ಲೇಸು ಎಂಬುದು ಕೆಲವು ಜೋಡಿಗಳ ಒಮ್ಮತದ ನಿರ್ಧಾರವಾಗಿದೆ.

ಕಾರಣ #5
ಗರ್ಭವಸ್ಥೆಯ ದೋಷಗಳಿಂದ ಕೆಲವರು ಭಯಗೊಂಡು ಮಕ್ಕಳನ್ನು ಪಡೆಯುವಲ್ಲಿ ಹಿಂಜರಿಯುತ್ತಾರೆ. ಆರೋಗ್ಯ ಸಮಸ್ಯೆಗಳು, ಹೆರಿಗೆ ಗಾಯಗಳು, ತೂಕ ಏರಿಕೆ, ಹೀಗೆ ಮುಂತಾದ ಕಾರಣಗಳನ್ನು ನೀಡಿ ಅವರುಗಳು ಹಿಂದೇಟು ಹಾಕುತ್ತಾರೆ.

ಕಾರಣ #6
ಕೆಲವು ಮಹಿಳೆಯರಿಗೆ ಮಕ್ಕಳ ಕೆಲಸಗಳನ್ನು ಮಾಡುವುದು ಎಂದರೆ ಹೇಸಿಗೆಯಾಗಿದೆ. ಅವರಿಗೆ ಉಣ್ಣಿಸುವುದು, ಮಲ ಮೂತ್ರಗಳನ್ನು ಸ್ವಚ್ಛಮಾಡುವುದು ಮೊದಲಾದ ಕೆಲಸಗಳನ್ನು ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಮಕ್ಕಳು ಬೇಡವೆಂಬ ನಿರ್ಧಾರವನ್ನು ಅವರುಗಳು ತಳಿದಿರುತ್ತಾರೆ.

ಕಾರಣ #7
ಕೆಲವರು ತಮ್ಮದೇ ಜೀವನ ಗುರಿಗಳನ್ನು ಹೊಂದಿರುತ್ತಾರೆ ಇದರಲ್ಲಿ ವಿಶ್ವ ಪ್ರಯಾಣ, ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸುವುದು, ಮೊದಲಾದ ಗುರಿಗಳನ್ನು ಈಡೇರಿಸಿಕೊಳ್ಳಲು ಮಕ್ಕಳು ತೊಡಕಾಗುತ್ತಾರೆ ಎಂಬುದು ಅವರ ಭಾವನೆಯಾಗಿದೆ.



Click it and Unblock the Notifications