ಅಪ್ಪಿತಪ್ಪಿಯೂ ಇಂತಹ 7 ವಿಷಯ ಗರ್ಭಿಣಿಯರಿಗೆ ಹೇಳಬೇಡಿ!

By: jaya subramanya
Subscribe to Boldsky

ಸ್ತ್ರೀಗೆ ಪ್ರಕೃತಿಯು ನೀಡಿದ ವಿಶೇಷ ವರದಾನವೆಂದರೆ ಅದು ತಾಯ್ತನವಾಗಿದೆ. ಗರ್ಭಿಣಿಯಾಗುವಂತಹ ಅನುಭವ ಮತ್ತು ಪುಟ್ಟ ಕಂದಮ್ಮ ಒಂಭತ್ತು ತಿಂಗಳ ನಂತರ ತಾಯಿಯ ಉದರದಿಂದ ಹೊರಜಗತ್ತಿಗೆ ಆಗಮಿಸುವ ಆ ಕ್ಷಣದ ಅನುಭೂತಿಯನ್ನು ತಾಯಿ ಮಾತ್ರವೇ ಅನುಭವಿಸಿ ಆಸ್ವಾದಿಸುತ್ತಾಳೆ.

ಹೆಣ್ಣು ಗರ್ಭಿಣಿಯಾಗುವ ಸಂದರ್ಭದಲ್ಲಿ ಆಕೆಗೆ ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳುವಂತೆ ಮತ್ತು ಹೆಚ್ಚಿನ ಆರೈಕೆಯನ್ನು ಮಾಡಿಕೊಳ್ಳುವಂತೆ ತಿಳಿಸಲಾಗುತ್ತದೆ. ಈ ಸಮಯದಲ್ಲಿ ಆಕೆಯನ್ನು ಚೆನ್ನಾಗಿ ಉಪಚರಿಸುವುದರ ಜೊತೆಗೆ ಆಕೆಗೆ ಆಕೆಯನ್ನು ನಿರಾಳವಾಗಿಸಬೇಕು.  ಮಹಿಳೆಯರ ಪಾಲಿಗೆ 'ಗರ್ಭಾವಸ್ಥೆ' ನಿಜಕ್ಕೂ ಅಗ್ನಿ ಪರೀಕ್ಷೆ!

ಆಕೆಗೆ ಈ ಸಮಯದಲ್ಲಿ ಹೆಚ್ಚಿನ ಒತ್ತಡ, ಕೋಪ, ಹತಾಶೆ, ಕಾಯಿಲೆಗಳು ಆಗಾಗ್ಗೆ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಆಕೆಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸ್ಥೈರ್ಯವನ್ನು ತುಂಬಬೇಕು. ಹಾಗಿದ್ದರೆ ಆಕೆಯನ್ನು ಕುಗ್ಗಿಸದೆ ಆಕೆಯನ್ನು ಪ್ರೋತ್ಸಾಹಿಸುವಂತಹ ಮಾತುಗಳನ್ನು ನೀವು ಆಕೆಗೆ ಹೇಳಬೇಕಾಗುತ್ತದೆ. ಗರ್ಭಧಾರಣೆ ಪರೀಕ್ಷೆ: ನೀವು ತಿಳಿದುಕೊಳ್ಳಬೇಕಾದ ಮಾಹಿತಿಗಳು

ಇದರಿಂದ ಆಕೆ ಹೆರಿಗೆ ಸಮಯದಲ್ಲಿ ಮಾನಸಿಕವಾಗಿ ಕುಗ್ಗದೆ ಸ್ಥೈರ್ಯದಿಂದ ಇರಲು ಸಾಧ್ಯವಾಗುತ್ತದೆ ಜೊತೆಗೆ ತಾಯಿ ಮಗು ಕೂಡ ಆರೋಗ್ಯದಿಂದ ಇರುತ್ತಾರೆ. ಇಂದಿನ ಲೇಖನದಲ್ಲಿ ನೀವು ಗರ್ಭಿಣಿಯರಿಗೆ ಹೇಳಲೇಬಾರದ ಕೆಲವೊಂದು ಅಂಶಗಳೇನು ಮತ್ತು ಅವರನ್ನು ಸ್ಥೈರ್ಯದಿಂದ ಇರುವಂತೆ ನೋಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ....

ಬಿಡುವಿದ್ದಾಗ ಆನಂದಿಸಿ

ಬಿಡುವಿದ್ದಾಗ ಆನಂದಿಸಿ

ಈ ರೀತಿಯ ಮಾತುಗಳನ್ನು ಗರ್ಭಿಣಿಯರಿಗೆ ಹೇಳುವಾಗ ಹೆಚ್ಚು ಜಾಗರೂಕತೆಯಿಂದ ಇರಬೇಕಾಗುತ್ತದೆ. ತನಗೆ ಮಗು ಹುಟ್ಟಿದ ನಂತರ ಮುಂದೆ ಇರುವಂತಹ ಹೆಚ್ಚಿನ ಜವಬ್ದಾರಿಗಳನ್ನು ನೆನೆದೇ ಆಕೆ ಕಂಗೆಟ್ಟಿರುತ್ತಾಳೆ. ಇದರ ಜೊತೆಗೆ ಆಕೆಗೆ ಬಿಡುವೇ ಇರುವುದಿಲ್ಲ ಎಂಬುದಾಗಿ ನೀವು ಹೇಳಿದರೆ ಆಕೆ ಇನ್ನಷ್ಟು ಕಂಗೆಡುತ್ತಾಳೆ.

ನೀವು ಹೆಚ್ಚು ಊದಿಕೊಂಡಿದ್ದೀರಾ

ನೀವು ಹೆಚ್ಚು ಊದಿಕೊಂಡಿದ್ದೀರಾ

ಗರ್ಭಿಣಿಯ ತೂಕ ಹೆಚ್ಚಾಗುವುದು ಸರ್ವೇ ಸಾಮಾನ್ಯವಾಗಿದ್ದು ಆಕೆಯ ತೂಕ ವಿಪರೀತವಾಗಿದ್ದರೆ ಆಕೆಯನ್ನು ಮೂದಲಿಸದಿರಿ.

ಗರ್ಭಧಾರಣೆ ಚಿಕಿತ್ಸೆ ತೆಗೆದುಕೊಂಡಿದ್ದೀರಾ?

ಗರ್ಭಧಾರಣೆ ಚಿಕಿತ್ಸೆ ತೆಗೆದುಕೊಂಡಿದ್ದೀರಾ?

ಗರ್ಭಿಣಿಯರಿಗೆ ಈ ರೀತಿಯ ಪ್ರಶ್ನೆಗಳನ್ನು ಎಂದಿಗೂ ಕೇಳದಿರಿ. ಗರ್ಭಪಾತ ಉಂಟಾಗಿ ಮತ್ತೊಮ್ಮೆ ಸ್ತ್ರೀಯು ಗರ್ಭಿಣಿಯಾಗುತ್ತಿದ್ದಾರೆ ಎಂದಾಗ ಈ ರೀತಿಯ ಪ್ರಶ್ನೆಗಳನ್ನು ಕೇಳಿ ಅವರಿಗೆ ನೋವುಂಟು ಮಾಡದಿರಿ.

ನಿಮ್ಮ ಹೊಟ್ಟೆಯನ್ನು ಸ್ಪರ್ಶಿಸಬಹುದೇ?

ನಿಮ್ಮ ಹೊಟ್ಟೆಯನ್ನು ಸ್ಪರ್ಶಿಸಬಹುದೇ?

ನೀವು ಗರ್ಭಿಣಿ ಸ್ತ್ರೀಯ ನಿಕಟ ಸ್ನೇಹಿತೆ ಅಥವಾ ಬಂಧುಗಳು ಅಲ್ಲದೇ ಇದ್ದರೆ, ಗರ್ಭಿಣಿಯರಿಗೆ ಇದು ಇರುಸು ಮುರುಸನ್ನು ಉಂಟುಮಾಡಿಬಿಡಬಹುದು.

ಹೆರಿಗೆಯ ನೋವು

ಹೆರಿಗೆಯ ನೋವು

ಹೆರಿಗೆ ಸಮಯದಲ್ಲಿ ಹಾಗಾಗುತ್ತದೆ ಹೀಗಾಗುತ್ತದೆ ಎಂಬುದಾಗಿ ಅವರನ್ನು ಹೆದರಿಸಿದಿರಿ. ಇದರ ಬದಲಿಗೆ ಪ್ರೀತಿಯಿಂದ ಅವರನ್ನು ನೋಡಿಕೊಳ್ಳಿ. ಅವರಿಗೆ ಧೈರ್ಯ ತುಂಬಿ...ಹೆರಿಗೆಯ ದಿನಗಳು ಹತ್ತಿರ ಬರುತ್ತಿದ್ದಂತೆ ಕಂಡು ಬರುವ ಲಕ್ಷಣಗಳು....

ಇದನ್ನು ತಿನ್ನಬೇಡಿ

ಇದನ್ನು ತಿನ್ನಬೇಡಿ

ಇದು ತಿನ್ನಬಹುದು ಇದು ತಿನ್ನಬಾರದು ಎಂಬುದಾಗಿ ಅವರನ್ನು ಕಂಗೆಡಿಸದಿರಿ. ಹಾಯಾಗಿ ಅವರನ್ನು ಇರಲು ಬಿಡಿ... ಗರ್ಭಿಣಿಯರು ಸೇವಿಸಲೇಬೇಕಾದ ಆಹಾರಗಳಿವು, ಮಿಸ್ ಮಾಡಬೇಡಿ

ಮಗುವಿನ ಬಗ್ಗೆ ನಿರೀಕ್ಷೆ

ಮಗುವಿನ ಬಗ್ಗೆ ನಿರೀಕ್ಷೆ

ನಿಮಗೆ ಹುಟ್ಟು ಮಗು ಗಂಡೋ ಹೆಣ್ಣೋ ಎಂಬುದಾಗಿ ತೀರಾ ಸೂಕ್ಷ್ಮ ಪ್ರಶ್ನೆಗಳನ್ನು ಆಕೆಗೆ ಕೇಳದಿರಿ. ಏಕೆಂದರೆ ತನ್ನ ತಾಯಿಗೆ ತನ್ನ ಮಗು ಸಂಪತ್ತಾಗಿರುತ್ತದೆ.

 
English summary

Never Say These 7 Things To A Pregnant Woman, Ever!

Here are a few things you must never say to a pregnant woman, to avoid offending her in any way! So, while you are around a pregnant woman, it is important to understand that she could be under a lot of stress and so, you must try to be sensitive to her feelings.Here are a few things you must never say to a pregnant woman, to avoid offending her in any way!
Please Wait while comments are loading...
Subscribe Newsletter