ಮಹಿಳೆಯರ ಪಾಲಿಗೆ 'ಗರ್ಭಾವಸ್ಥೆ' ನಿಜಕ್ಕೂ ಅಗ್ನಿ ಪರೀಕ್ಷೆ!

By: manu
Subscribe to Boldsky

ಮಹಿಳೆಯರಿಗೆ ಗರ್ಭಧರಿಸುವುದಕ್ಕಿಂತ ಸಂತಸದ ಕ್ಷಣ ಮತ್ತೊಂದಿಲ್ಲ. ಗರ್ಭ ಧರಿಸಿದ ಮಹಿಳೆಯರು ಹೆರಿಗೆಯ ತನಕ ಹಲವಾರು ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಯಾಕೆಂದರೆ ದೈಹಿಕವಾಗಿ ಗರ್ಭಿಣಿಯರಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತದೆ. ಮತ್ತೊಂದು ಜೀವವನ್ನು ತನ್ನೊಳಗೆ ಹೊತ್ತುಕೊಂಡು ಜೀವನ 9 ತಿಂಗಳು ಕಳೆಯಬೇಕಾಗುತ್ತದೆ.

ಈ ಅವಧಿಯಲ್ಲಿ ಪ್ರತೀ ಸಮಯವೂ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ದೈಹಿಕ ಹಾಗೂ ಮಾನಸಿಕವಾಗಿ ತಾಯಿಯ ಮೇಲೆ ಏನೇ ಆದರೂ ಅದು ನೇರವಾಗಿ ಮಗುವಿನ ಮೇಲೆ ಪರಿಣಾಮ ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ.  ಗರ್ಭಧಾರಣೆ ಪರೀಕ್ಷೆ: ನೀವು ತಿಳಿದುಕೊಳ್ಳಬೇಕಾದ ಮಾಹಿತಿಗಳು

ಇದೆಲ್ಲವನ್ನೂ ಕಡೆಗಣಿಸಿ ಮಹಿಳೆಯರು ಹೆರಿಗೆ ತನಕ ಪ್ರತಿಯೊಂದನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ಆದರೆ ಮಹಿಳೆಯರ ದೇಹದಲ್ಲಿ ಆಗುವಂತಹ ಕೆಲವೊಂದು ದೈಹಿಕ ಬದಲಾವಣೆಗಳು ಮೆದುಳಿನ ಮೇಲೂ ಪರಿಣಾಮ ಬೀರುವುದರಿಂದ ಮಾನಸಿಕವಾಗಿಯೂ ಕೆಲವೊಂದು ಸವಾಲುಗಳು ಕಾಣಿಸಿಕೊಳ್ಳುತ್ತದೆ.    ಗರ್ಭಿಣಿಯರ ಆಹಾರ ಹೀಗಿದ್ದರೆ, ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ

ಇದರಿಂದ ಗರ್ಭಿಣಿ ಮಹಿಳೆಯ ಸುತ್ತಮುತ್ತ ಇರುವಂತಹವರು ಇದನ್ನು ತಿಳಿದುಕೊಂಡು ಹೊಂದಾಣಿಕೆ ಮಾಡಿಕೊಳ್ಳಬೇಕು. ಗರ್ಭಿಣಿ ಮಹಿಳೆಯರ ಮೆದುಳಿನಲ್ಲಿ ಆಗುವಂತಹ ಕೆಲವೊಂದು ಬದಲಾವಣೆಗಳು ದೀರ್ಘಸಮಯದ ತನಕ ಉಳಿದುಕೊಳ್ಳುತ್ತದೆ ಎಂದು ಇತ್ತೀಚಿನ ಕೆಲವೊಂದು ಅಧ್ಯಯನಗಳು ಹೇಳಿವೆ. ಇದನ್ನು ತಿಳಿಯಿರಿ.....  

ಗರ್ಭಿಣಿ ಮಹಿಳೆಯರು ಮತ್ತು ನರವೈಜ್ಞಾನಿಕ ಬದಲಾವಣೆ

ಗರ್ಭಿಣಿ ಮಹಿಳೆಯರು ಮತ್ತು ನರವೈಜ್ಞಾನಿಕ ಬದಲಾವಣೆ

ಮಹಿಳೆ ಗರ್ಭಿಣಿಯಾದಾಗ ಹಲವಾರು ರೀತಿಯ ಹಾರ್ಮೋನು ಬದಲಾವಣೆಗಳು ದೇಹದಲ್ಲಿ ಉಂಟಾಗುತ್ತದೆ. 9 ತಿಂಗಳ ಕಾಲ ಮಗುವನ್ನು ಹೊತ್ತುಕೊಂಡು ಸಾಗಲು ದೇಹವು ಸಜ್ಜಾಗಬೇಕಾಗುತ್ತದೆ.

ಗರ್ಭಿಣಿ ಮಹಿಳೆಯರು ಮತ್ತು ನರವೈಜ್ಞಾನಿಕ ಬದಲಾವಣೆಯ ಕೊಂಡಿಗಳು

ಗರ್ಭಿಣಿ ಮಹಿಳೆಯರು ಮತ್ತು ನರವೈಜ್ಞಾನಿಕ ಬದಲಾವಣೆಯ ಕೊಂಡಿಗಳು

ಇದಕ್ಕೆ ಮೆದುಳಿನಲ್ಲಿ ಮೊದಲು ಹಾರ್ಮೋನು ಬಿಡುಗಡೆಗೊಂಡು ಬಳಿಕ ದೇಹದ ಬೇರೆ ಭಾಗಗಳಿಗೆ ಇದು ಹೋಗುತ್ತದೆ.

ಗರ್ಭಧಾರಣೆಯ ವೇಳೆ ಹಾರ್ಮೋನುಗಳ ಸವಾಲು...

ಗರ್ಭಧಾರಣೆಯ ವೇಳೆ ಹಾರ್ಮೋನುಗಳ ಸವಾಲು...

ಗರ್ಭಧಾರಣೆಯ ವೇಳೆ ಮೆದುಳು ಹಾರ್ಮೋನುಗಳನ್ನು ಬಿಡುಗಡೆ ಮಾಡಲು ತುಂಬಾ ದೀರ್ಘ ಸವಾಲನ್ನು ಎದುರಿಸಬೇಕಾಗುತ್ತದೆ. ಇದರಿಂದ ಗರ್ಭಿಣಿ ಮಹಿಳೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಅಥವಾ ಬೀರದೆ ಇರಲೂ ಬಹುದು.

ಗರ್ಭಧಾರಣೆಯ ವೇಳೆ ಹಾರ್ಮೋನುಗಳ ಸವಾಲು...

ಗರ್ಭಧಾರಣೆಯ ವೇಳೆ ಹಾರ್ಮೋನುಗಳ ಸವಾಲು...

ಮಹಿಳೆಯ ಮೆದುಳಿನಲ್ಲಿ ಆಗುವಂತಹ ಈ ಬದಲಾವಣೆಗಳು ಕೆಲವೊಂದು ಧನಾತ್ಮಕವಾದ ಬದಲಾವಣೆಗಳನ್ನು ಉಂಟು ಮಾಡುವ ಸಾಧ್ಯತೆಯಿದೆ.

ಮಾನಸಿಕವಾಗಿ ಬಲಿಷ್ಠ ಇಷ್ಟೇ ಸಾಕು!

ಮಾನಸಿಕವಾಗಿ ಬಲಿಷ್ಠ ಇಷ್ಟೇ ಸಾಕು!

ಇಂತಹ ಕೆಲವೊಂದು ಬದಲಾವಣೆಗಳಿಂದ ಮಹಿಳೆಯು ಮಾನಸಿಕವಾಗಿ ಬಲಿಷ್ಠವಾಗಿ ಮುಂದೆ ಮಗುವಿನ ಲಾಲನೆಪಾಲನೆಯನ್ನು ಸರಿಯಾದ ರೀತಿಯಲ್ಲಿ ಮಾಡಲು ಆಕೆಯನ್ನು ಸಜ್ಜಗೊಳಿಸುವುದು.

ಮಾನಸಿಕ ಬದಲಾವಣೆ...

ಮಾನಸಿಕ ಬದಲಾವಣೆ...

ಕೆಲವೊಮ್ಮೆ ಗರ್ಭಿಣಿ ಮಹಿಳೆಯರಲ್ಲಿ ಕೆಲವೊಂದು ಮಾನಸಿಕ ಬದಲಾವಣೆಗಳನ್ನು ಕಂಡುಬರಬಹುದು. ಗರ್ಭಿಣಿ ಮಹಿಳೆಯರ ಮನಸ್ಥಿತಿಯು ಆಗಾಗ ಬದಲಾಗಬಹುದು. ಈ ವೇಳೆ ಗರ್ಭಿಣಿ ಮಹಿಳೆಯು ಅಗ್ನಿಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.

 
English summary

Can Pregnancy Lead To Changes In The Mother's Brain?

If you are a woman who is going through pregnancy, you would be experiencing a lot of physical and emotional changes, right? However, is it possible for certain changes in the brain of the mother to occur during pregnancy? As we may have noticed, pregnant women go through a lot of physical changes, such as, weight gain, expansion of the hip and stomach regions, unwanted body hair development, swollen feet, etc.
Please Wait while comments are loading...
Subscribe Newsletter