ಗರ್ಭಾವಸ್ಥೆಯಲ್ಲಿ ಮಸಾಜ್: ಹೆರಿಗೆ ಅವಧಿಯಲ್ಲಿ ತುಂಬಾ ಉಪಕಾರಿ!

By: Hemanth
Subscribe to Boldsky

ಆಧುನಿಕ ಮಹಿಳೆಯರು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಂದರಲ್ಲೂ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಹೀಗೀಗ ಪ್ರತಿಯೊಬ್ಬ ಮಹಿಳೆ ಕೂಡ ವೃತ್ತಿಯನ್ನು ಆಯ್ದುಕೊಳ್ಳುತ್ತಿರುವ ಕಾರಣದಿಂದಾಗಿ ಸಂಸಾರ ಹಾಗೂ ಕಚೇರಿಯನ್ನು ಸರಿದೂಗಿಸಿಕೊಂಡು ಹೋಗಬೇಕಾಗಿದೆ.   ಗರ್ಭಿಣಿಯರು ಸೇವಿಸಲೇಬೇಕಾದ ಆಹಾರಗಳಿವು, ಮಿಸ್ ಮಾಡಬೇಡಿ

ಅದರಲ್ಲೂ ಗರ್ಭಧಾರಣೆಯ ಸಮಯವೆನ್ನುವುದು ಮಹಿಳೆಗೆ ಅಗ್ನಿಪರೀಕ್ಷೆಯಾಗಿರುತ್ತದೆ. ಯಾಕೆಂದರೆ ಮನೆ ಹಾಗೂ ಆಫೀಸ್   ಕೆಲಸವನ್ನು ನೋಡಿಕೊಳ್ಳುವುದರ ಜತೆಗೆ ತನ್ನ ಆರೋಗ್ಯವನ್ನು ಸರಿಯಾಗಿಟ್ಟುಕೊಳ್ಳಬೇಕು. ಗರ್ಭಿಣಿ ಮಹಿಳೆಯರಿಗೆ ಆರೋಗ್ಯವು ತುಂಬಾ ಮುಖ್ಯವಾಗಿರುತ್ತದೆ. ಆರೋಗ್ಯವಂತ ಮಹಿಳೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದು.  

Pregnancy massage
 

ಇದರಿಂದಾಗಿ ಆಕೆ ತುಂಬಾ ಸುಸ್ತಾಗಿ ಬಿಡುತ್ತಾಳೆ, ಹಾಗಾಗಿ ಗರ್ಭಿಣಿ ಮಹಿಳೆಗೆ ಮಸಾಜ್ ಮಾಡುವುದು ಒಂದು ರೀತಿಯ ಪರಿಹಾರವಾಗಿದೆ. ಇದು ಸ್ನಾಯುಗಳು ಹಾಗೂ ಗಂಟಿನ ಕಾರ್ಯಚಟುವಟಿಕೆಯನ್ನು ಉತ್ತಮಗೊಳಿಸುತ್ತದೆ. ಇದರಿಂದ ದೈಹಿಕ ಹಾಗೂ ಮಾನಸಿಕ ನಿಶ್ಯಕ್ತಿಯು ಕಡಿಮೆಯಾಗುತ್ತದೆ. ಪ್ರಸವ ಪೂರ್ವ, ಹೆರಿಗೆ ವೇಳೆ ಮತ್ತು ಮಗು ಜನಿಸಿದ ಬಳಿಕ ಮಸಾಜ್ ಮಾಡಬಹುದು.

ಹರಿಗೆಪೂರ್ವ ಮಸಾಜ್‌ನಲ್ಲಿ ಗರ್ಭಧಾರಣೆ ವೇಳೆ ಉಂಟಾಗುವ ಕೆಲವೊಂದು ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಇದು ತಾಯಿ ಹಾಗೂ ಮಗುವಿನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಬೇಕು. ಮಸಾಜ್ ನಿಂದ ಕೆಲವೊಂದು ಸ್ನಾಯುಗಳು ಬಲಿಷ್ಠಗೊಂಡು ನೈಸರ್ಗಿಕ ಹೆರಿಗೆಯಾಗುವಂತೆ ಮಾಡುತ್ತದೆ.  ಅಪ್ಪಿತಪ್ಪಿಯೂ ಇಂತಹ 7 ವಿಷಯ ಗರ್ಭಿಣಿಯರಿಗೆ ಹೇಳಬೇಡಿ!

ಹೆಚ್ಚಿನ ಮಹಿಳೆಯರು ನೈಸರ್ಗಿಕವಾಗಿ ಹೆರಿಗೆಯಾಗಬೇಕೆಂದು ಬಯಸುತ್ತಾರೆ. ಹೆರಿಗೆ ವೇಳೆ ಮಾಡುವಂತಹ ಮಸಾಜ್ ನಿಂದ ಹೆರಿಗೆಯ ಸಮಯವು ಕಡಿಮೆಯಾಗಿ, ನೋವು ಹಾಗೂ ಆತಂಕವು ಕಡಿಮೆಯಾಗುತ್ತದೆ. ಹೆರಿಗೆ ಬಳಿಕ ಮಾಡುವಂತಹ ಮಸಾಜ್ ನಿಂದ ತಾಯಿಯ ದೇಹವನ್ನು ಹಿಂದಿನಸ್ಥಿತಿಗೆ ತರಲು, ದೇಹದಲ್ಲಿ ನೀರು ನಿಲ್ಲುವುದನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

pregnant women
 

ಇದು ತಾಯಿಯ ದೇಹಕ್ಕೆ ಪುರ್ನಚೇತನ ನೀಡುವುದು ಮಾತ್ರವಲ್ಲದೆ ಶಕ್ತಿಯನ್ನು ತುಂಬುವುದು. ಗರ್ಭಿಣಿ ಮಹಿಳೆಯು ತನ್ನ ವೈದ್ಯರನ್ನು ಭೇಟಿಯಾಗಿ ಮಸಾಜ್ ಮಾಡಿಕೊಳ್ಳಬಹುದೇ ಅಥವಾ ಬೇರೆ ಯಾವುದಾದರೂ ಔಷಧಿ ಸೇವಿಸಬಹುದೇ ಎಂದು ತಿಳಿದುಕೊಳ್ಳಬೇಕು. ಮಸಾಜ್ ದೈಹಿಕ ಹಾಗೂ ಮಾನಸಿಕ ನೆಮ್ಮದಿಯನ್ನು ನೀಡುವುದರೊಂದಿಗೆ ಪ್ರಸವವನ್ನು ಸುಲಭವಾಗಿ ಆಗುವಂತೆ ಮಾಡುವುದು. ಸುಸೂತ್ರ ಪ್ರಸವಕ್ಕಾಗಿ ಗರ್ಭಿಣಿಯರಿಗೆ 10 ಕಿವಿಮಾತುಗಳು

English summary

Is It Safe To Do A Massage During Pregnancy?

Pregnancy massage therapy is an example of this kind of an alternative approach. It adds a lot of therapeutic value, as it improves the functioning of the muscles and joints, enhancing blood circulation and relieving physical and emotional fatigue. Pregnancy massage may be prenatal, postnatal or throughout the labour process.
Please Wait while comments are loading...
Subscribe Newsletter