Latest Updates
-
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು! -
ಅನುಷ್ಕಾ ಶರ್ಮಾ ಫ್ಲೋರಲ್ ಲುಕ್: ಸ್ಟೇಡಿಯಂನಲ್ಲಿ ಮಿಂಚಲು ಹೀಗೆ ಮಾಡಿ -
ಬಿಸಿಲಿನಲ್ಲಿ ವ್ಯಾಯಾಮ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಹೈರಾಕ್ಸ್ ಬೆಂಗಳೂರು: ಗೆಲುವಿಗಾಗಿ ಬೆಳಗಿನ ತಯಾರಿ ಹೀಗಿರಲಿ -
ಡೇಟಿಂಗ್ ಆ್ಯಪ್ ಬಳಕೆದಾರರೇ ಎಚ್ಚರ: ಈ ಕೆಫೆಗಳೇ ನಿಮ್ಮ ಜೇಬಿಗೆ ಕತ್ತರಿ! -
ದೆಹಲಿ-ಎನ್ಸಿಆರ್ ಬಿರುಗಾಳಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಹೀಗೆ ಮಾಡಿ
ಗರ್ಭಿಣಿಯರು ಸೇವಿಸಲೇಬೇಕಾದ ಆಹಾರಗಳಿವು, ಮಿಸ್ ಮಾಡಬೇಡಿ
ಗರ್ಭಧಾರಣೆಯ ಸಮಯದಲ್ಲಿ ಹೆಚ್ಚಾಗಿ ಮಹಿಳೆಯರನ್ನು ಹಲವಾರು ಸಣ್ಣಪುಟ್ಟ ರೋಗಗಳು ಕಾಡುವ ಕಾರಣದಿಂದಾಗಿ ಇದರ ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ. ಹಾಗಾಗಿ ಕೆಲವೊಂದು ಅಮೋಘ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಕಾಯಿಯೊಳಗೊಂದು ಕಾಯಿ ಎನ್ನುವ ಮಾತಿದೆ. ಇದನ್ನು ಗರ್ಭಿಣಿಯರಿಗೆ ಹೇಳಲಾಗುತ್ತದೆ. ಯಾಕೆಂದರೆ ಗರ್ಭಿಣಿ ಮಹಿಳೆಯರು ತಮ್ಮ ಜೀವದೊಳಗೆ ಮತ್ತೊಂದು ಜೀವ ಹೊತ್ತುಕೊಂಡು ಅದನ್ನು ಭೂಮಿಗೆ ತರುವ ಜವಾಬ್ದಾರಿ ವಹಿಸಿಕೊಂಡಿರುತ್ತಾರೆ. ಇದರಿಂದ ಗರ್ಭಿಣಿ ಮಹಿಳೆಯರ ಆರೋಗ್ಯ ಕೂಡ ಅತೀ ಅಗತ್ಯವಾಗಿರುತ್ತದೆ. ಗರ್ಭಿಣಿಯರ ಆಹಾರ ಹೀಗಿದ್ದರೆ, ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ
ಗರ್ಭಿಣೆ ಮಹಿಳೆಯರು ಸಾಮಾನ್ಯಕ್ಕಿಂತ ಮುಕ್ಕಾಲು ಭಾಗದಷ್ಟು ಹೆಚ್ಚಿಗೆ ಆಹಾರ ಸೇವಿಸಬೇಕು. ಗರ್ಭಧಾರಣೆಯ ಸಮಯದಲ್ಲಿ ಅವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ವಿದ್ಯಾಭ್ಯಾಸ ಮತ್ತು ಕೆಲಸವನ್ನು ಬಿಟ್ಟು ತಮ್ಮ ಆರೋಗ್ಯದ ಕಡೆ ಗಮನಹರಿಸುತ್ತಾರೆ. ಗರ್ಭಿಣಿಯರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಟಾಪ್ ಫುಡ್
ಗರ್ಭಧಾರಣೆಯ ಸಮಯದಲ್ಲಿ ಹೆಚ್ಚಾಗಿ ಮಹಿಳೆಯರನ್ನು ಹಲವಾರು ಸಣ್ಣಪುಟ್ಟ ರೋಗಗಳು ಕಾಡುವ ಕಾರಣದಿಂದಾಗಿ ಇದರ ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಇದರಿಂದ ಹುಟ್ಟುವ ಮಗುವಿನ ಮೇಲೆ ಪರಿಣಾಮ ಬೀರುವುದು ಖಚಿತ. ಕೆಲವೊಂದು ಅಮೋಘ ಆಹಾರಗಳನ್ನು ಸೇವಿಸುವುದರಿಂದ ಗರ್ಭಿಣಿ ಮಹಿಳೆಯರು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಆಹಾರಗಳು ಯಾವುದು ಎಂದು ಈ ಮೂಲಕ ತಿಳಿದುಕೊಳ್ಳುವ.....

ಸೇಬು
ಸೆಣಬನ್ನು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ಮಗು ಒಳ್ಳೆಯ ರೀತಿಯಲ್ಲಿ ಬೆಳವಣಿಗೆ ಕಾಣುವುದು.ಸೇಬು ಹಣ್ಣಿನಲ್ಲಿರುವ ಅತ್ಯದ್ಭುತ ಪ್ರಯೋಜನಗಳು

ಮೊಟ್ಟೆ
ಗರ್ಭಿಣಿ ಮಹಿಳೆಯರು ಆರೋಗ್ಯವಾಗಿರಬೇಕೆಂದರೆ ಉಪಹಾರದಲ್ಲಿ ಮೊಟ್ಟೆಯನ್ನು ಸೇವನೆ ಮಾಡಬೇಕು. ಇದು ಆರೋಗ್ಯವನ್ನು ಕಾಪಾಡುವುದು.ದಿನಕ್ಕೊಂದು ಮೊಟ್ಟೆ ತುಂಬುವುದು, ಮಕ್ಕಳ ಹೊಟ್ಟೆ!

ಅವರೆ ಅಥವಾ ಬೇರೆ ಯಾವುದೇ ರೀತಿಯ ಕಾಳು
ಅವರೆ ಅಥವಾ ಬೇರೆ ಯಾವುದೇ ರೀತಿಯ ಕಾಳುಗಳು ಆಗಿರಬಹುದು. ಇದನ್ನು ಗರ್ಭಿಣಿ ಮಹಿಳೆಯರು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಇದು ಗರ್ಭಿಣಿ ಮಹಿಳೆಯರ ಆರೋಗ್ಯಕ್ಕೆ ತುಂಬಾ ಸಹಕಾರಿ.

ಚಿಯಾ ಬೀಜಗಳು
ಚಿಯಾ ಬೀಜಗಳನ್ನು ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯ ಕ್ರಮದಲ್ಲಿ ಸೇರಿಸಿಕೊಂಡರೆ ಅದು ದೈಹಿಕ ಹಾಗೂ ಮಾನಸಿಕವಾಗಿ ಅವರಿಗೆ ತುಂಬಾ ಒಳ್ಳೆಯದು.

ಬಾಳೆಹಣ್ಣು
ಬಾಳೆಹಣ್ಣನ್ನು ಪ್ರತಿಯೊಬ್ಬರು ಇಷ್ಟಪಡುತ್ತಾರೆ ಮತ್ತು ಇದು ಗರ್ಭಿಣಿ ಮಹಿಳೆಯರಿಗೆ ತುಂಬಾ ಒಳ್ಳೆಯದು.ಸಿಪ್ಪೆಯ ಮೇಲೆ ಚುಕ್ಕೆ ಬಿದ್ದ ಬಾಳೆಹಣ್ಣಿನ ಅದ್ಭುತ ಪವರ್....

ಒಣಗಿಸಿದ ಜರದಾಳು(ಆಪ್ರಿಕಾಟ್)
ಒಣಗಿಸಿದ ಜರದಾಳು ಹಣ್ಣುಗಳನ್ನು ಗರ್ಭಿಣಿ ಮಹಿಳೆಯರು ತಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಇದು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ ಮತ್ತು ರುಚಿಯಾಗಿಯೂ ಇದೆ.

ಕೋಸುಗಡ್ಡೆ
ಕೋಸುಗಡ್ಡೆಯಲ್ಲಿ ಹೆಚ್ಚಿನ ಮಟ್ಟದ ಪೋಷಕಾಂಶಗಳು ಇರುವ ಕಾರಣದಿಂದ ಇದು ಗರ್ಭಿಣಿ ಮಹಿಳೆಯರಿಗೆ ಹೇಳಿ ಮಾಡಿಸಿದಂತಹ ಆಹಾರವಾಗಿದೆ. ಇದನ್ನು ಗರ್ಭಿಣಿ ಮಹಿಳೆಯರು ಸೇವಿಸಲೇಬೇಕು.



Click it and Unblock the Notifications











