ಹುಟ್ಟುವ ಮಗು ಆರೋಗ್ಯವಾಗಿರಬೇಕೇ? ಆಹಾರಕ್ರಮ ಹೀಗಿರಲಿ....

By: Arshad
Subscribe to Boldsky

ತಾಯಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಕನಸಾಗಿದ್ದು ಇದು ನನಸಾಗುವ ಘಳಿಗೆ ಹತ್ತಿರ ಬರುತ್ತಿದ್ದಂತೆಯೇ ಸಂತೋಷ ದುಗುಡ ಆತಂಕ ಎಲ್ಲವೂ ಒಟ್ಟಿಗೇ ಉಂಟಾಗಿ ಜೀವಮಾನವಿಡೀ ನೆನಪಿರುತ್ತದೆ. ಆದರೆ ಈ ಸಂತೋಷದ ಭರದಲ್ಲಿ ಗರ್ಭಿಣಿ ತನ್ನ ಆಹಾರಕ್ರಮದ ಬಗ್ಗೆ ಕಾಳಜಿ ವಹಿಸುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು.

ಗರ್ಭಾವಸ್ಥೆಯಲ್ಲಿ ಗರ್ಭಿಣಿ ತಾನು ನಿರ್ವಹಿಸುವ ಎಲ್ಲಾ ಕೆಲಸಗಳಲ್ಲಿ ಹಾಗೂ ಸೇವಿಸುವ ಅಹಾರಗಳಲ್ಲಿ ಮತ್ತು ದೈನಂದಿನ ಕೆಲಸಗಳಲ್ಲಿ ಅತಿ ಹೆಚ್ಚಿನ ಜಾಗರೂಕತೆ ವಹಿಸಬೇಕು. ಏಕೆಂದರೆ ಯಾವುದೇ ಏರುಪೇರಾದರೂ ಆಕೆಯ ಹಾಗೂ ಮಗುವಿನ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ಗರ್ಭಿಣಿಯರೇ, ಚೈನೀಸ್ ಆಹಾರದ ಕಡೆ ಕಣ್ಣೆತ್ತಿಯೂ ನೋಡಬೇಡಿ!

ಒಂದು ಚಿಕ್ಕ ತಪ್ಪು ಸಹಾ ಆಕೆಯ ಆರೋಗ್ಯವನ್ನೇ ಪಣಕ್ಕಿಡಬಹುದು, ಹಾಗೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಗುವಿನ ಆರೋಗ್ಯವನ್ನೂ ಕೆಡಿಸಬಹುದು. ಆರೋಗ್ಯಕರ ಮಗುವನ್ನು ಯಾವುದೇ ತೊಂದರೆ ಇಲ್ಲದೇ ಜನ್ಮ ನೀಡುವಲ್ಲಿ ಗರ್ಭಿಣಿ ಸೇವಿಸುವ ಆಹಾರ ಮಹತ್ತರ ಪಾತ್ರ ವಹಿಸುತ್ತದೆ. ಹುಟ್ಟುವ ಮಗು 'ಬುದ್ಧಿವಂತ' ಆಗಬೇಕೇ? ಆಹಾರಕ್ರಮ ಹೀಗಿರಲಿ

ಒಂದು ವೇಳೆ ಗರ್ಭಿಣಿ ಸರಿಯಾದ ಪ್ರಮಾಣದ ಪೌಷ್ಟಿಕ ಆಹಾರವನ್ನು ಸೇವಿಸದೇ ಇದ್ದರೆ ಆಕೆಯ ಹಾಗೂ ಮಗುವಿನ ಆರೋಗ್ಯಕ್ಕೆ ಸೂಕ್ತ ಪ್ರಮಾಣದ ಪೋಷಕಾಂಶಗಳು ದೊರಕದೇ ಹೋಗಬಹುದು. ವ್ಯತಿರಿಕ್ತವಾಗಿ ಗರ್ಭಿಣಿ ಸೇವಿಸಬಾರದ ಆಹಾರಗಳನ್ನು ಅರಿವಿಲ್ಲದೆ ತಿಂದರೂ ಇದರ ಪರಿಣಾಮ ಭೀಕರವಾಗಬಹುದು.

ಗರ್ಭ ನಿಂತಿದೆ ಎಂದು ಕಂಡುಕೊಂಡ ಬಳಿಕ ಪಪ್ಪಾಯಿಯನ್ನು ಸರ್ವಥಾ ಸೇವಿಸಬಾರದು. ಏಕೆಂದರೆ ಇದು ಗರ್ಭಪಾತಕ್ಕೆ ಕಾರಣವಾಗುತ್ತದೆ. ಗರ್ಭಿಣಿಯರು ಸೇವಿಸಲು ಅತ್ಯುತ್ತಮವಾದ ಆಹಾರಗಳು ಯಾವುದು ಎಂಬ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ಈ ಆಹಾರಗಳನ್ನೇ ಹೆಚ್ಚು ಹೆಚ್ಚಾಗಿ ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದು.... 

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಯಲ್ಲಿ ಉತ್ತಮ ಪ್ರಮಾಣದ ಪ್ರೋಟೀನು ಇದ್ದು ಬೆಳೆಯುತ್ತಿರುವ ಮಗುವಿನ ಸ್ನಾಯುಗಳು ಮತ್ತು ಮೂಳೆಗಳ ಬೆಳವಣಿಗೆಗೆ ಸಹಕರಿಸುತ್ತದೆ.

ಮೀನು

ಮೀನು

ಗರ್ಭಿಣಿಯರು ಸೇವಿಸಬೇಕಾದ ಆಹಾರದಲ್ಲಿ ವಿಟಮಿನ್ ಇ ಪ್ರಮುಖವಾಗಿದ್ದು ಈ ಪೋಷಕಾಂಶ ಉತ್ತಮ ಪ್ರಮಾಣದಲ್ಲಿರುವ ಕಾರಣ ಮೀನು ಸಹಾ ಪ್ರಮುಖ ಸ್ಥಾನ ಪಡೆದಿದೆ. ಈ ಪೋಷಕಾಂಶ ಮಗುವಿನ ನರವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತದೆ.

ಸೇಬು

ಸೇಬು

ಸೇಬಿನಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಹಾಗೂ ಕರಗದ ನಾರು ಇದ್ದು ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಕಾಡುವ ಮಲಬದ್ದತೆಯ ತೊಂದರೆಯಿಂದ ಕಾಪಾಡುತ್ತದೆ.

ಸಿಹಿಗೆಣಸು

ಸಿಹಿಗೆಣಸು

ಗರ್ಭಾವಸ್ಥೆಯಲ್ಲಿ ಗೆಣಸು ಸಹಾ ಸೇವಿಸಲು ಉತ್ತಮ ಆಹಾರವಾಗಿದ್ದು ಇದರಲ್ಲಿರುವ ವಿಟಮಿನ್ ಸಿ ಹಾಗೂ ಫೋಲೇಟ್ ಗಳು ಮಗುವಿನ ಬೆಳವಣಿಗೆ ಹಾಗೂ ರೋಗ ನಿರೋಧಕ ವ್ಯವಸ್ಥೆ ಉತ್ತಮಗೊಳ್ಳಲು ನೆರವಾಗುತ್ತವೆ.

ಹಾಲು

ಹಾಲು

ಪ್ರೋಟೀನು ಮತ್ತು ವಿಟಮಿನ್ನುಗಳು ಹಾಲಿನಲ್ಲಿ ಹೇರಳವಾಗಿದ್ದು ಗರ್ಭಾವಸ್ಥೆಯಲ್ಲಿ ನಿತ್ಯವೂ ಸೇವಿಸಬೇಕಾದ ಆಹಾರವಾಗಿದೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಪಾಲಕ್ ಹಾಗೂ ಬಸಲೆ ಸೊಪ್ಪುಗಳಲ್ಲಿ ಉತ್ತಮ ಪ್ರಮಾಣದ ಕಬ್ಬಿಣವಿದ್ದು ಇದು ಗರ್ಭಿಣಿ ಹಾಗೂ ಮಗುವಿನ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಕಣಗಳನ್ನು ಸೃಷ್ಟಿಸಲು ನೆರವಾಗುತ್ತದೆ.

 
English summary

Foods to Eat When You're Pregnant For A Healthy Baby!

If the pregnant mother is not taking in enough nutrients, then her body will not be able to nourish her unborn baby. So, when you are pregnant, it is important to watch what you eat. Here is a list of foods that can help you give birth to a hale and healthy baby....
Please Wait while comments are loading...
Subscribe Newsletter