ಹುಟ್ಟುವ ಮಗು 'ಬುದ್ಧಿವಂತ' ಆಗಬೇಕೇ? ಆಹಾರಕ್ರಮ ಹೀಗಿರಲಿ

By: Hemanth
Subscribe to Boldsky

ಮಕ್ಕಳು ತುಂಬಾ ಚುರುಕಾಗಿರಬೇಕು ಮತ್ತು ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆದುಕೊಂಡು ದೊಡ್ಡ ಹುದ್ದೆಯನ್ನು ಪಡೆಯಬೇಕು ಅಥವಾ ಸಾಧನೆ ಮಾಡಬೇಕೆಂಬ ಆಸೆ ಪ್ರತಿಯೊಬ್ಬ ತಾಯಿಗೂ ಇರುತ್ತದೆ. ಆದರೆ ಮಗು ತುಂಬಾ ಚುರುಕಾಗಿರಬೇಕು ಮತ್ತು ಬೇರೆಲ್ಲಾ ಮಕ್ಕಳಿಗಿಂತ ಹೆಚ್ಚು ಬುದ್ಧಿವಂತನಾಗಿರಬೇಕೆಂದು ತಾಯಿಯಂದಿರು ಬಯಸುವುದಾದರೆ ಗರ್ಭಧಾರಣೆ ವೇಳೆ ಸರಿಯಾದ ಆಹಾರ ಕ್ರಮವನ್ನು ಅನುಸರಿಸುವುದು ತುಂಬಾ ಮುಖ್ಯ. ಗರ್ಭಿಣಿಯರೇ ಹಣ್ಣು-ತರಕಾರಿಗಳೆಂದರೆ ಮುಖ ಸಿಂಡರಿಸಬೇಡಿ

ಫಾಲಿಕ್ ಆ್ಯಸಿಡ್, ವಿಟಮಿನ್ ಡಿ, ಕಬ್ಬಿನಾಂಶ ಮುಂತಾದವುಗಳನ್ನು ಸರಿಯಾಗಿ ಸೇವಿಸಿದರೆ ಹುಟ್ಟುವ ಮಗುವು ಮಾನಸಿಕವಾಗಿ ಬಲಿಷ್ಠವಾಗಿರುತ್ತದೆ.  ಗರ್ಭಿಣಿಯರ ಆಹಾರ ಹೀಗಿದ್ದರೆ, ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ

ಗರ್ಭದಲ್ಲಿ ಇರುವಾಗಲೇ ಮಗುವಿಗೆ ಸರಿಯಾದ ಪೋಷಕಾಂಶಗಳು ಸಿಕ್ಕಿದರೆ ಮಗುವಿನ ಮಗುವಿನ ಐಕ್ಯೂ ಹೆಚ್ಚಾಗುತ್ತದೆ. ಮಗು ಹೆಚ್ಚು ಬುದ್ಧಿವಂತರಾಗಲು ಗರ್ಭಿಣಿ ಮಹಿಳೆಯರು ಯಾವೆಲ್ಲಾ ಆಹಾರ ಸೇವಿಸಬೇಕು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. 

ಮೊಟ್ಟೆ ಮತ್ತು ಗಿಣ್ಣು

ಮೊಟ್ಟೆ ಮತ್ತು ಗಿಣ್ಣು

ವಿಟಮಿನ್ ಡಿ ಇರುವಂತಹ ಎಲ್ಲಾ ಆಹಾರಗಳನ್ನು ಸೇವಿಸಿ. ಇದು ಮಗುವಿನ ಮೆದುಳಿನ ಬೆಳವಣಿಗೆಗೆ ಅತ್ಯಗತ್ಯ. ಗರ್ಭಿಣಿ ಮಹಿಳೆಯರಲ್ಲಿ ವಿಟಮಿನ್ ಡಿ ಮಟ್ಟವು ಕಡಿಮೆಯಾಗಿದ್ದರೆ ಅಂತಹ ಮಹಿಳೆಯರ ಮಗುವಿನ ಬುದ್ಧಿಶಕ್ತಿಯು ಕಡಿಮೆಯಿರುತ್ತದೆ. ವಿಟಮಿನ್ ಡಿ ಮಾತ್ರೆಯೊಂದಿಗೆ ಸೂರ್ಯನ ಬೆಳಕಿಗೆ ಮೈಯೊಡ್ಡಬೇಕು. ಮೊಟ್ಟೆ, ಗಿಣ್ಣು, ಮಾಂಸ ಇತ್ಯಾದಿಯನ್ನು ತಿನ್ನಬೇಕು.

ಸಮುದ್ರದ ಮೀನು ಮತ್ತು ಸಿಂಪಿ

ಸಮುದ್ರದ ಮೀನು ಮತ್ತು ಸಿಂಪಿ

ಇವುಗಳು ಆಯೋಡಿನ್ ನಿಂದ ಸಮೃದ್ಧವಾಗಿವೆ. ಗರ್ಭಿಣಿ ಮಹಿಳೆಯರಲ್ಲಿ ಮೊದಲ 12 ವಾರಗಳಲ್ಲಿ ಆಯೋಡಿನ್ ಕೊರತೆ ಕಾಣಿಸಿಕೊಂಡರೆ ಮಗುವಿನ ಐಕ್ಯೂ ಕಡಿಮೆಯಾಗುತ್ತದೆ. ಆಯೋಡಿನ್ ಇರುವಂತಹ ಉಪ್ಪನ್ನು ಸೇವಿಸಬೇಕು. ಇದನ್ನು ಹೊರತುಪಡಿಸಿ ಮೀನು, ಸಿಂಪಿ, ಮೊಟ್ಟೆ, ಮೊಸರು ಇತ್ಯಾದಿ ಸೇವಿಸಬೇಕು.

ಕೊಬ್ಬಿನಾಂಶವಿರುವ ಮೀನು

ಕೊಬ್ಬಿನಾಂಶವಿರುವ ಮೀನು

ಸಾಲ್ಮನ್, ಟುನಾ ಮತ್ತು ಬಂಗುಡೆಯಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಅಧಿಕವಾಗಿರುತ್ತದೆ. ಇದು ಗರ್ಭದಲ್ಲಿ ಮಕ್ಕಳ ಮೆದುಳಿನ ಬೆಳವಣಿಗೆಗೆ ಸಹಕರಿಸುತ್ತದೆ. ವಾರದಲ್ಲಿ ಎರಡು ಸಲ ಮೀನು ತಿನ್ನುವ ತಾಯಂದಿರ ಮಕ್ಕಳಿಗಿಂತ ಮೀನು ತಿನ್ನದೆ ಇರುವ ಮಕ್ಕಳ ಐಕ್ಯೂ ತುಂಬಾ ಕಡಿಮೆ ಇರುತ್ತದೆ ಎಂದು ಹೇಳಲಾಗುತ್ತದೆ.

ಮೊಟ್ಟೆ

ಮೊಟ್ಟೆ

ಮೊಟ್ಟೆಯಲ್ಲಿ ಕೋಲೀನ್ ಎನ್ನುವ ಅಮಿನೋ ಆ್ಯಸಿಡ್ ಇದ್ದು, ಇದು ಮಕ್ಕಳ ಮೆದುಳಿನ ಬೆಳವಣಿಗೆ ಮಾಡುತ್ತದೆ. ಗರ್ಭಿಣಿ ಮಹಿಳೆಯರು ದಿನದಲ್ಲಿ ಎರಡು ಮೊಟ್ಟೆ ತಿಂದರೆ ಗರ್ಭಿಣಿ ಮಹಿಳೆಯರಿಗೆ ಅರ್ಧದಷ್ಟು ಕೋಲೀನ್ ಸಿಗುತ್ತದೆ. ಮೊಟ್ಟೆಯಲ್ಲಿ ಪ್ರೋಟೀನ್ ಮತ್ತು ಕಬ್ಬಿನಾಂಶವಿರುವ ಕಾರಣದಿಂದ ಇದು ಜನನದ ವೇಳೆ ಮಗುವಿನ ತೂಕವನ್ನು ಹೆಚ್ಚಿಸುವುದು. ತೂಕ ಕಡಿಮೆಯಿರುವ ಮಕ್ಕಳ ಐಕ್ಯೂ ಕೂಡ ಕಡಿಮೆ ಇರುತ್ತದೆ.

ಮೊಸರು

ಮೊಸರು

ಗರ್ಭದಲ್ಲಿರುವ ಮಗುವಿನ ನರಕೋಶಗಳನ್ನು ಉತ್ಪತ್ತಿ ಮಾಡಲು ಮಹಿಳೆಯರ ದೇಹವು ತುಂಬಾ ಕಠಿಣವಾಗಿ ಕೆಲಸ ಮಾಡುತ್ತದೆ. ಇದಕ್ಕಾಗಿ ನಿಮಗೆ ಹೆಚ್ಚುವರಿ ಪ್ರೋಟೀನ್ ಅಗತ್ಯವಿರುತ್ತದೆ. ಇದರಿಂದ ಪ್ರೋಟೀನ್ ಹೆಚ್ಚಿರುವ ಇತರ ಆಹಾರಗಳೊಂದಿಗೆ ಮೊಸರನ್ನು ಸೇವಿಸಬೇಕು. ಮೊಸರಿನಲ್ಲಿ ಕ್ಯಾಲ್ಸಿಯಂ ಕೂಡ ಇರುವ ಕಾರಣ ಇದು ಗರ್ಭಿಣಿಯರಿಗೆ ಒಳ್ಳೆಯದು.

ಬಸಲೆ, ಕೋಳಿ ಮತ್ತು ಕಾಳುಗಳು

ಬಸಲೆ, ಕೋಳಿ ಮತ್ತು ಕಾಳುಗಳು

ಇದರಲ್ಲಿ ಕಬ್ಬಿನಾಂಶವು ಹೆಚ್ಚಾಗಿದೆ ಮತ್ತು ನಿಮ್ಮ ಮಗುವನ್ನು ಬುದ್ಧಿವಂತನಾಗಿಸುವುದು. ಗರ್ಭಿಣಿ ಮಹಿಳೆಯರು ಅಗತ್ಯವಾಗಿ ಇದನ್ನು ಸೇವಿಸಲೇಬೇಕು. ಕಬ್ಬಿನಾಂಶವು ಗರ್ಭದಲ್ಲಿರುವ ಮಗುವಿನ ಮೆದುಳಿನ ಕೋಶಗಳಿಗೆ ಆಮ್ಲಜನಕವನ್ನು ಒದಗಿಸುವುದು. ಕಬ್ಬಿನಾಮಶದ ಮಾತ್ರೆಗಳನ್ನು ವೈದ್ಯರ ಸಲಹೆ ಮೇಲೆ ತೆಗೆದುಕೊಳ್ಳಬಹುದು.

ನೇರಳೆ ಹಣ್ಣು

ನೇರಳೆ ಹಣ್ಣು

ನೇರಳೆ ಹಣ್ಣು, ಪಲ್ಲೆಹೂ, ಟೊಮೆಟೋ ಮತ್ತು ಕೆಂಪುಬೀಜಗಳು ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿದೆ ಮತ್ತು ಗರ್ಭಿಣಿ ಮಹಿಳೆಯರು ಇದನ್ನು ಸೇವಿಸಬೇಕು. ಇದು ಗರ್ಭದಲ್ಲಿರುವ ಮಗುವಿನ ಮೆದುಳಿನ ಅಂಗಾಂಶಗಳನ್ನು ರಕ್ಷಿಸಿ ಅದರ ಬೆಳವಣಿಗೆಗೆ ನೆರವಾಗುತ್ತದೆ.

 
English summary

Foods To Eat For An Intelligent Baby

It is a dream of every mother to have smart and intelligent babies. All this depends on a mother's diet. If a mother is not taking proper supplements such as folic acid, vitamin D, iron etc, then there are chances that their deficiency may cause the baby to be born mentally weak with behavioral problems too. What women eat during pregnancy affects the physical and mental development of their child.
Subscribe Newsletter