ಗರ್ಭಾವಸ್ಥೆಯಲ್ಲಿ ಮಲಗುವ ಭಂಗಿ, ಆದಷ್ಟು ಜಾಗೃತೆವಹಿಸಬೇಕು

Posted By: Lekhaka
Subscribe to Boldsky

ಗರ್ಭಿಣಿ ಮಹಿಳೆಯರು ತಿನ್ನುವ ಆಹಾರದಿಂದ ಹಿಡಿದು ಮಾಡುವಂತಹ ಪ್ರತಿಯೊಂದು ಚಟುವಟಿಕೆಗಳ ಬಗ್ಗೆ ನಿಗಾ ಇಡಬೇಕಾಗುತ್ತದೆ. ಮತ್ತೊಂದು ಜೀವವನ್ನು ತಮ್ಮಲ್ಲಿ ಹೊತ್ತುಕೊಂಡಿರುವ ಕಾರಣ ಗರ್ಭಿಣಿಯರ ಎಲ್ಲಾ ಚಟುವಟಿಕೆ ಹಾಗೂ ಆಹಾರ ಸೇವನೆಯು ಮಗುವಿನ ಮೇಲೆ ಪರಿಣಾಮ ಬೀರುವುದು. ತಿನ್ನುವಂತಹ ಆಹಾರದ ಬಗ್ಗೆ ಸುತ್ತಮುತ್ತಲು ಇರುವವರು ಸಲಹೆಗಳನ್ನು ನೀಡುತ್ತಾ ಇರುವರು.

ಆದರೆ ಗರ್ಭಿಣಿ ಮಹಿಳೆಯು ಯಾವ ರೀತಿ ಮಲಗಬೇಕು ಎಂಬ ಬಗ್ಗೆ ಇನ್ನು ಹಲವಾರು ರೀತಿಯ ಗೊಂದಲಗಳು ಇವೆ. ಇದಕ್ಕೆ ಸರಿಯಾದ ಉತ್ತರ ಯಾರಿಂದಲೂ ಇದುವರೆಗೆ ಬಂದಿಲ್ಲ. ಗರ್ಭಿಣಿ ಮಹಿಳೆಯರು ಹೊಟ್ಟೆಯಲ್ಲಿ ಮಲಗಬಹುದೇ ಎನ್ನುವ ಪ್ರಶ್ನೆಯಿದೆ. ಹೊಟ್ಟೆ ಕೆಳಗೆ ಮಾಡಿಕೊಂಡು ಗರ್ಭಿಣಿ ಮಲಗಿದರೆ ಅದರಿಂದ ಗರ್ಭದ ಮೇಲೆ ಒತ್ತಡ ಬೀಳುವುದು. ಗರ್ಭಿಣಿ ಮಹಿಳೆಯರು ಯಾವ ರೀತಿ ಮಲಗಬಹುದು ಎಂದು ಬೋಲ್ಡ್ ಸ್ಕೈ ನಿಮಗಿಂದು ತಿಳಿಸಿಕೊಡಲಿದೆ..... 

ಹೊಟ್ಟೆಯಲ್ಲಿ ಮಲಗುವುದು ಅಪಾಯಕಾರಿಯೇ?

ಹೊಟ್ಟೆಯಲ್ಲಿ ಮಲಗುವುದು ಅಪಾಯಕಾರಿಯೇ?

ಗರ್ಭಿಣಿಯರು ಆರಂಭದಲ್ಲಿ ಹೊಟ್ಟೆ ಮೇಲೆ ಮಲಗಿಕೊಂಡರೆ ಯಾವುದೇ ಸಮಸ್ಯೆಯಿಲ್ಲ. ಆದರೆ ಹೊಟ್ಟೆ ದೊಡ್ಡದಾಗುತ್ತಾ ಇರುವಂತೆ ಹೊಟ್ಟೆ ಕೆಳಗೆ ಹಾಕಿಕೊಂಡು ಮಲಗಬಾರದು. ಇದರಿಂದ ತುಂಬಾ ಅನಾನುಕೂಲವಾಗುವುದು.

ಯಾವುದೇ ಹಾನಿಯಿದೆಯಾ?

ಯಾವುದೇ ಹಾನಿಯಿದೆಯಾ?

ದೀರ್ಘ ಕಾಲದ ತನಕ ಹೊಟ್ಟೆ ಕೆಳಗೆ ಹಾಕಿಕೊಂಡು ಮಲಗುವುದರಿಂದ ಹೆಚ್ಚಿನ ಸಮಸ್ಯೆಯಾಗುವುದು. ಕೆಲವು ಆರೋಗ್ಯ ತಜ್ಞರ ಪ್ರಕಾರ ಗರ್ಭಿಣಿಯರು ತಮ್ಮ ಸ್ಥಿತಿ ಬದಲಾಯಿಸಿಕೊಂಡು ಮಲಗುವುದರಿಂದ ಯಾವುದೇ ಸಮಸ್ಯೆಯಾಗದು. ಗರ್ಭಧಾರಣೆ ವೇಳೆ ಕೆಲವೊಂದು ಭಂಗಿಯಲ್ಲಿ ಮಲಗಲು ನಿಮಗೆ ಸಾಧ್ಯವಾಗದು.

ಬೆನ್ನಿನ ಮೇಲೆ ಮಲಗುವುದು ಸರಿಯೇ?

ಬೆನ್ನಿನ ಮೇಲೆ ಮಲಗುವುದು ಸರಿಯೇ?

ಗರ್ಭಿಣಿಯರು ಬೆನ್ನಿನ ಮೇಲೆ ಮಲಗುವುದು ತುಂಬಾ ಆರೋಗ್ಯಕಾರಿಯೇ ಎಂದು ಕೇಳಿದರೆ ಖಂಡಿತವಾಗಿಯೂ ಇಲ್ಲ. ಇದರಿಂದ ಗರ್ಭದಲ್ಲಿರುವ ಶಿಶುವಿಗೆ ರಕ್ತಸಂಚಾರ ಕಡಿಮೆಯಾಗಬಹುದು.

ಯಾವುದಾದರೂ ಸುರಕ್ಷಿತ ಭಂಗಿಯಿದೆಯಾ?

ಯಾವುದಾದರೂ ಸುರಕ್ಷಿತ ಭಂಗಿಯಿದೆಯಾ?

ಗರ್ಭಿಣಿಯರಿಗೆ ಮಲಗಲು ತುಂಬಾ ಹಿತಕಾರಿಯಾದ ಭಂಗಿ ಯಾವುದು ಎಂದು ನೀವು ಕೇಳಬಹುದು. ಒಂದು ಬದಿಗೆ ಮಲಗುವುದು ತುಂಬಾ ಹಿತಕಾರಿ ಎಂದು ಹೆಚ್ಚಿನ ಮಹಿಳೆಯರು ಭಾವಿಸುತ್ತಾರೆ. ಎಡದ ಬದಿಗೆ ಮಲಗಿದರೆ ಅದರಿಂದ ಗರ್ಭದಲ್ಲಿರುವ ಶಿಶುವಿಗೆ ಪೋಷಕಾಂಶಗಳು ಸಿಗುವುದು.

ಅನುಕೂಲಕರವಾಗಿ ಮಲಗಲು ಸುಲಭ ಸಲಹೆ

ಅನುಕೂಲಕರವಾಗಿ ಮಲಗಲು ಸುಲಭ ಸಲಹೆ

ಎಡ ಬದಿಗೆ ಮಲಗಿರುವಾಗ ಮಡಚಿರುವ ಕಾಲುಗಳ ಮಧ್ಯೆ ತಲೆದಿಂಬು ಇಟ್ಟುಕೊಂಡು ಮಲಗಿದರೆ ನಿಮಗೆ ಆರಾಮವಾಗುವುದು.

ಗರ್ಭಿಣಿಯರಲ್ಲಿ ಕಾಣಿಸುವ ನಿದ್ರಾಹೀನತೆ

ಗರ್ಭಿಣಿಯರಲ್ಲಿ ಕಾಣಿಸುವ ನಿದ್ರಾಹೀನತೆ

ಶೇ.78ರಷ್ಟು ಮಹಿಳೆಯರು ಗರ್ಭಧಾರಣೆಯ ಸಂದರ್ಭದಲ್ಲಿ ಗರ್ಭಧಾರಣೆಯ ನಿದ್ರಾಹೀನತೆ ಸಮಸ್ಯೆಯಿಂದ ಬಳಲುವರು. ವ್ಯಾಯಾಮ, ವಿಶ್ರಾಂತಿ ಮತ್ತು ಸರಿಯಾದ ಕ್ರಮದಲ್ಲಿ ಮಲಗುವುದರಿಂದ ನಿಮಗೆ ನೆರವಾಗುವುದು.

English summary

Can You Sleep On Your Stomach When Pregnant?

Can you sleep on your stomach when pregnant? When you are pregnant, the people around you may tell you a lot about what to eat and what not to eat. But there are some uncommon questions or doubts that you may get for which you may not get the right answer from anyone. One such question is sleeping position. Can you sleep on your stomach when pregnant?
Subscribe Newsletter